ಪುಸ್ತಕಗಳನ್ನು ಓದುವ ಆತ್ಮ ತೃಪ್ತಿ, ಮೊಬೈಲ್- ಕಂಪ್ಯೂಟರ್‌ಗಳಿಂದ ದೊರೆಯಲ್ಲ: ಡಾ. ಅಜಿತ ಪ್ರಸಾದ

ಧಾರವಾಡ: ಇಂದಿನ ಆಧುನಿಕ ಕಾಲದಲ್ಲೂ ಗ್ರಂಥಾಲಯಗಳು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿವೆ ಎಂದರೆ ಅದಕ್ಕೆ ಇರುವ ಅಡಿಪಾಯವೇ ಕಾರಣ ಎಂದು ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಗ್ರಂಥಾಲಯ ಪಿತಾಮಹ ಡಾ. ಎಸ್. ಆರ್ ರಂಗನಾಥನ್‌ ಅವರ ೧೨೯ನೇ ಜನ್ಮದಿನದ ಅಂಗವಾಗಿ ನಡೆದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದ ಮಾತನಾಡಿದರು.
ಬೆರಳ ತುದಿಯಲ್ಲಿ ಎಲ್ಲವನ್ನು ಪಡೆಯುವ ಈ ಕಾಲದಲ್ಲಿ ಗ್ರಂಥಾಲಯಗಳಲ್ಲಿ ಕುಳಿತು ಅಧ್ಯಯನ ಮಾಡುವ ಪ್ರವೃತ್ತಿ ಕ್ಷೀಣಿಸುತ್ತಿದೆ ಆದರೆ ಪುಸ್ತಕಗಳನ್ನು ಓದುವ ಆತ್ಮ ಸಂತೋಷ, ತೃಪ್ತಿ, ಮೊಬೈಲ್ ಕಂಪ್ಯೂಟರ್‌ಗಳಿಂದ ದೊರೆಯುವುದಿಲ್ಲ ಎಂದು ಡಾ. ಎಸ್. ಆರ್. ರಂಗನಾಥ್ ಅವರು ಗ್ರಂಥಾಲಯಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೋಲೋನ್ ವರ್ಗೀಕರಣ ಮಹತ್ವದ್ದಾಗಿದೆ. ಅವರು ಬರೆದ ಹಲವಾರು ಗ್ರಂಥಗಳು ಗ್ರಂಥಾಲಯವನ್ನು ಹೇಗೆ ಸ್ಥಾಪಿಸಬೇಕು. ಅವುಗಳಲ್ಲಿ ದಾಖಲೆಗಳನ್ನು ಯಾವ ರೀತಿ ನಿರ್ವಹಿಸಬೇಕು ಎಂಬ ಮಾಹಿತಿ ದೊರೆಯುತ್ತದೆ. ಅಮೆರಿಕದ ಮಾರ್ಗರೇಟ್ ಮಾನ್ ಪಾರಿತೋಷಕ ಗೌರವ ಪಡೆದ ಮೊದಲ ಭಾರತೀಯರು. ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ರಂಗನಾಥನ್‌ ಅವರು ಆಧುನಿಕ ಗ್ರಂಥಾಲಯ ವ್ಯವಸ್ಥೆಯನ್ನು ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಮಹಾವೀರ ಉಪಾಧ್ಯೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜೆ.ಎಸ್.ಎಸ್ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಇಂದು ಪಂಡಿತ್, ಗ್ರಂಥಪಾಲಕರಾದ ವಿಜಯಕುಮಾರ್, ಶಾಂತಿನಾಥ, ಜಿನೇಂದ್ರ ಕುಂದಗೋಳ ಹಾಗೂ ಗ್ರಂಥಾಲಯ ಸಿಬ್ಬಂದಿ ಉಪಸ್ಥಿತರಿದ್ದರು.

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement