ನಾನು ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ: ಆನ್‌ಲೈನ್ ಟ್ರೋಲಿಂಗ್‌ಗೆ ಪ್ರತಿಕ್ರಿಯಿಸಿದ ಕಾಶ್ಮೀರದ 12ನೇ ತರಗತಿ ಟಾಪರ್

ನವದೆಹಲಿ: ವಿಜ್ಞಾನ ವಿಭಾಗದಲ್ಲಿ 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆದ ಶ್ರೀನಗರ ನಿವಾಸಿ ಅರೂಸಾ ಪರ್ವೈಜ್ ಅವರು ‘ಹಿಜಾಬ್’ ಧರಿಸದ ಕಾರಣಕ್ಕಾಗಿ ಆನ್‌ಲೈನ್ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ಈ ಟ್ರೋಲ್‌ಗಳಿಗೆ ಉತ್ತರಿಸಿರುವ ಅರೂಸಾ ಪರ್ವೈಜ್, ತಾನು ಇಸ್ಲಾಮಿಕ್ ತತ್ವಗಳನ್ನು ಅನುಸರಿಸುತ್ತೇನೆ ಮತ್ತು ಆದರೆ ತಾನು ಉತ್ತಮ ಮುಸಲ್ಮಾನ ಎಂದು ಸಾಬೀತುಪಡಿಸಲು ಹಿಜಾಬ್ ಧರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಅರೂಸಾ ಪರ್ವೈಜ್, “ನಾನು ಅಲ್ಲಾನಲ್ಲಿ ನಂಬಿಕೆ ಹೊಂದಿದ್ದೇನೆ ಮತ್ತು ಇಸ್ಲಾಮಿಕ್ ತತ್ವಗಳನ್ನು ಅನುಸರಿಸುತ್ತೇನೆ. ನಾನು ಉತ್ತಮ ಮುಸ್ಲಿಂ ಎಂದು ಸಾಬೀತುಪಡಿಸಲು ನಾನು ಹಿಜಾಬ್ ಧರಿಸುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
ಹಿಜಾಬ್‌ ಧರಿಸದ ಬಗ್ಗೆ ಆನ್‌ಲೈನ್ ಟ್ರೋಲಿಂಗ್‌ ಕುರಿತು ನಾನು ತೀವ್ರ ಅಸಮಾಧಾನಗೊಂಡಿದ್ದೇನೆ. ಇದಕ್ಕೆ ನಾನು ತಲೆಕೆಡಿಸಿಕೊಂಡಿಲ್ಲ ಆದರೆ ಸಾಮಾಜಿಕ ಮಾಧ್ಯಮದಲ್ಲಿ ಬಂದ ಕಾಮೆಂಟ್‌ಗಳ ನಂತರ ನನ್ನ ಪೋಷಕರು ತುಂಬಾ ಚಿಂತಿತರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಪ್ರಕಟವಾದ 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ಅರೋಸಾ ಪರ್ವೈಜ್ ಅವರನ್ನು ಶುಕ್ರವಾರ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಎಲ್ಲಹಿಬಾಗ್ ಪ್ರದೇಶದ ಅರೂಸಾ ಪರ್ವೈಜ್ ಅವರು ವಿಜ್ಞಾನ ವಿಭಾಗದಲ್ಲಿ 500 (ಶೇ 99.80) ಅಂಕಗಳಿಗೆ 499 ಅಂಕಗಳನ್ನು ಗಳಿಸಿದ್ದಾರೆ. ಶ್ರೀನಗರದ ಡೆಪ್ಯೂಟಿ ಕಮಿಷನರ್ ಮೊಹಮ್ಮದ್ ಐಜಾಜ್ ಅಸದ್ ಅವರು ತಮ್ಮ ಕಚೇರಿಯ ಕೊಠಡಿಯಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿದ್ದಾರೆ. ಅರೂಸಾ ಪರ್ವೈಜ್ ಅವರ ಯಶಸ್ಸಿಗೆ ಪ್ರೋತ್ಸಾಹದ ಸಂಕೇತವಾಗಿ ಶ್ರೇಷ್ಠತೆಯ ಪ್ರಮಾಣಪತ್ರ, ಟ್ರೋಫಿ ಮತ್ತು 10,000 ರೂ.ಗಳ ಚೆಕ್ ಅನ್ನು ನೀಡಿ ಗೌರವಿಸಲಾಯಿತು.
ಆದಾಗ್ಯೂ, ಶನಿವಾರ ಬೆಳಿಗ್ಗೆ, ಸಾಮಾಜಿಕ ಮಾಧ್ಯಮದಲ್ಲಿ ಅರೋಸಾ ಪರ್ವೈಜ್ ವಿರುದ್ಧ ಹಿಜಾಬ್‌ ಧರಿಸಿಲ್ಲ ಎಂಬ ಕಾರಣಕ್ಕೆ ಕೆಟ್ಟದಾಗಿ ಟ್ರೋಲಿಂಗ್ ಪ್ರಾರಂಭಿಸಲಾಯಿತು. ಒಂದೆಡೆ ಸೋಷಿಯಲ್ ಮೀಡಿಯಾ ಬಳಕೆದಾರರು ಆಕೆಯ ಸಾಧನೆಗೆ ಅಭಿನಂದಿಸುತ್ತಿದ್ದರೆ, ಮತ್ತೊಂದೆಡೆ ಕೆಲವರು ಹಿಜಾಬ್ ಧರಿಸಿಲ್ಲ ಎಂದು ಅವಳನ್ನು ಟೀಕಿಸುತ್ತಿದ್ದಾರೆ.
ಕೆಲವು ಬಳಕೆದಾರರು ಹಿಜಾಬ್‌ಗಾಗಿ ಹೋರಾಡುತ್ತಿರುವ ಕರ್ನಾಟಕದ ಶಾಲಾ ಹುಡುಗಿಯರೊಂದಿಗೆ ಹೋಲಿಸಿ ಹಿಜಾಬ್‌ ಧರಿಸದ ಕಾರಣಕ್ಕೆ ಕೆಟ್ಟದಾಗಿ ಟ್ರೋಲ್‌ ಮಾಡಿದರೆ ಮತ್ತು “ಕಾಶ್ಮೀರದಲ್ಲಿನ ಹುಡುಗಿಯರಿಗೆ ರೋಲ್ ಮಾಡೆಲ್” ಆಗಲು ಅವರಿಂದ ಕೆಲವು ಪಾಠಗಳನ್ನು ತೆಗೆದುಕೊಳ್ಳುವಂತೆ ಹೇಳಿದ್ದಾರೆ.

ಪ್ರಮುಖ ಸುದ್ದಿ :-   'ಪುರಿ ಜಗನ್ನಾಥ ಪ್ರಧಾನಿ ಮೋದಿ ಭಕ್ತ' ಹೇಳಿಕೆ: ಬಾಯಿತಪ್ಪಿನ ಹೇಳಿಕೆಗೆ 3 ದಿನ ಉಪವಾಸ ಕೈಗೊಂಡ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement