ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆದಾಯ 123 ಕೋಟಿ ರೂ.ಗಳು

ಮಂಗಳೂರು : ರಾಜ್ಯದ ಮುಜುರಾಯಿ ವ್ಯಾಪ್ತಿಯ ದೇವಸ್ಥಾನಗಳ ಇತಿಹಾಸದಲ್ಲೇ ಅತೀ ಹೆಚ್ಚು ಅದಾಯ ಈ ಬಾರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದ್ದು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವಾರ್ಷಿಕ ಆದಾಯ 123 ಕೋಟಿ ರೂ. ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ 2022-23ನೇ ಆರ್ಥಿಕ ವರ್ಷದಲ್ಲಿ 123 ಕೋಟಿ ರೂ. ಆದಾಯ ಬಂದಿದೆ.
2022ರ ಎಪ್ರಿಲ್‌ನಿಂದ 2023 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ 123,64,49,480.47 ರೂ. ಆದಾಯ ಗಳಿಸಿರುವ ಕ್ಷೇತ್ರವಾಗಿದೆ.
ಈ ಬಾರಿಯೂ ರಾಜ್ಯದಲ್ಲಿ ಮೊದಲ ಸ್ಥಾನಿಯಾಗುವ ನಿರೀಕ್ಷೆ ಇದೆ. ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತಿದೆ.
2021-22ನೇ ಆರ್ಥಿಕ ವರ್ಷದಲ್ಲಿ ದೇವಳವು 72,73,23,758.07 ರೂ. ಆದಾಯ ಗಳಿಸಿತ್ತು. ಕೊರೊನಾ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶ ನಿರ್ಭಂಧವಿದ್ದ ಕಾರಣ 2019ರಿಂದ 22ರವರೆಗೆ ಆದಾಯ ಇಳಿಮುಖವಾಗಿತ್ತು. 2019-20ರಲ್ಲಿ 98,92,24,193.34 ರೂ., 2020-21ರಲ್ಲಿ-68,94,88,039.17 ರೂ., 2021-22ರಲ್ಲಿ 72,73,758,07 ಆದಾಯ ಗಳಿಸಿತ್ತು.
2006-07ನೇ ಸಾಲಿನಲ್ಲಿ ದೇವಸ್ಥಾನದ ಆದಾಯ 19,76 ಕೋಟಿ ರೂ. ಆಗಿತ್ತು. 2007- 08ರಲ್ಲಿ 24.44 ಕೋಟಿ ರೂ. ಗಳಿಗೆ ಏರಿತ್ತು. 2008-09ರಲ್ಲಿ 31 ಕೋಟಿ ರೂ., 2009-10ರಲ್ಲಿ 38.51 ಕೋಟಿ, 2011-12ರಲ್ಲಿ 56.24 ಕೋಟಿ, 2012-13ರಲ್ಲಿ 66.76 ಕೋಟಿ, 2013-14ರಲ್ಲಿ 68 ಕೋಟಿ, 2014-15ರಲ್ಲಿ 77 ಕೋ, 2015-16ರಲ್ಲಿ 88 ಕೋಟಿ, 2016-17ರಲ್ಲಿ 91.69 ಕೋಟಿ, 2017-18ರಲ್ಲಿ 95.92 ಕೋಟಿ, 2018-19ರಲ್ಲಿ 92.09 ಕೋಟಿ, 2019-20ರಲ್ಲಿ 98.92 ಕೋಟಿ, 2020-21ರಲ್ಲಿ 68.94 ಕೋಟಿ, 2021-22ರಲ್ಲಿ 12.73 ಕೋಟಿ ಆದಾಯದ ಮೂಲಕ ಸತತ ರಾಜ್ಯದ ನಂಬರ್ ವನ್ ಆದಾಯ ಗಳಿಕೆಯ ದೇವಸ್ಥಾನವಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುವ ಸ್ಥಾನ ಪಡೆದಿದೆ.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement