ಭಾನುವಾರ ಬೆಂಗಳೂರಿನಲ್ಲಿ ಮೋದಿ ಎರಡನೇ ರೋಡ್‌ ಶೋ : ಈ 23 ರಸ್ತೆಗಳು ಸಂಚಾರಕ್ಕೆ ಬಂದ್

ಬೆಂಗಳೂರು : ಭಾನುವಾರ ಮೇ 7ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಎರಡನೇ ರೋಡ್​ ಶೋ ನಡೆಸಲಿದ್ದಾರೆ. ನೀಟ್​ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ನಾಳೆ ಬೆಳಗ್ಗೆ 10 ರಿಂದ 11:30ರ ವರೆಗೆ ರೋಡ್​ ಶೋ ನಡೆಯಲಿದೆ. ನಗರದ 23 ರಸ್ತೆಗಳಲ್ಲಿ ಮೋದಿ ಸಂಚರಿಸಲಿದ್ದಾರೆ.
ಭಾನುವಾರ ಪ್ರಧಾನಿ ಮೋದಿ ಸಂಚರಿಸಲಿರುವ ರಸ್ತೆಗಳಿಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಸಾರ್ವಜನಿಕ ಈ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಇರಲಿದೆ.
ಭಾನುವಾರ ನಿರ್ಬಂಧ ಇರುವ ರಸ್ತೆಗಳ ಹೆಸರುಗಳು ಹೀಗಿವೆ:
ರಾಜಭವನ ರಸ್ತೆ, ಮೇಖ್ರಿ ಸರ್ಕಲ್, ರೇಸ್​​ಕೋರ್ಸ್ ರಸ್ತೆ, ಟಿ.ಚೌಡಯ್ಯ ರಸ್ತೆ, ರಮಣಮಹರ್ಷಿ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಸುರಂಜನ​ದಾಸ ರಸ್ತೆ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ರೇಸ್​​ಕೋರ್ಸ್ ರಸ್ತೆ, ಟಿ.ಚೌಡಯ್ಯ ರಸ್ತೆ, ರಮಣ ಮಹರ್ಷಿ ರಸ್ತೆ, ಜಗದೀಶ ನಗರ ಕ್ರಾಸ್ ರಸ್ತೆ, ಜೆ.ಬಿ. ನಗರ ಮುಖ್ಯ ರಸ್ತೆ, ಬಿಇಎಂಎಲ್ ಜಂಕ್ಷನ್, ನ್ಯೂ ತಿಪ್ಪಸಂದ್ರ ಮಾರ್ಕೆಟ್ ರಸ್ತೆ, 80 ಅಡಿ ರಸ್ತೆ ಇಂದಿರಾನಗರ
ನ್ಯೂ ತಿಪ್ಪಸಂದ್ರ ರಸ್ತೆ, 12ನೇ ಮುಖ್ಯ ರಸ್ತೆ 100 ಅಡಿ ರಸ್ತೆ, ಇಂದಿರಾ ನಗರ, ಕಾವೇರಿ ಸ್ಕೂಲ್, ಸಿಎಂಎಚ್ ರಸ್ತೆ, 17ನೇ ಕ್ರಾಸ್ ಆದರ್ಶ ಜಂಕ್ಷನ್, ಹಲಸೂರು ಮೆಟ್ರೋ ಸ್ಟೇಷನ್ ಟ್ರಿನಿಟಿ ಜಂಕ್ಷನ್​ ಇಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಮೋದಿ ಅವರ ರೋಡ್​ ಶೋ ಭಾನುವಾರ ಮಹದೇವಪುರ, ಕೆಆರ್​ ಪುರಂ, ಸಿವಿ ರಾಮನ್ ನಗರ, ಶಿವಾಜಿನಗರ ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಹಾದುಹೋಗಲಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣಗೆ ನಾವು ಅನುಮತಿ ನೀಡಿಲ್ಲ ; ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ತೆರಳಿದ್ದಾರೆ : ವಿದೇಶಾಂಗ ಸಚಿವಾಲಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement