ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು 2022-23ನೇ ಶೈಕ್ಷಣಿಕ ಸಾಲಿನ (ಜುಲೈ ಆವೃತ್ತಿ) ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಕಾಲಾವಧಿಯನ್ನು ಅಕ್ಟೋಬರ್‌ 31ರ ವರೆಗೆ ವಿಸ್ತರಿಸಿದೆ.
ಮಲ್ಲೇಶ್ವರದ ಕರಾಮುವಿ ಪ್ರಾದೇಶಿಕ ಕೇಂದ್ರದಲ್ಲಿ ಅರ್ಹ ಅಭ್ಯರ್ಥಿಗಳು ಪ್ರವೇಶ ಪಡೆಯಬಹುದು ಎಂದು ತಿಳಿಸಿದೆ. ಪದವಿ ವಿಭಾಗದಲ್ಲಿ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ, ಸ್ನಾತಕೋತ್ತರ ವಿಭಾಗದಲ್ಲಿ ಎಂಎ, ಎಂಸಿಜೆ, ಎಂಕಾಂ, ಬಿಎಲ್​ಐಎಸ್ಸಿ, ಎಂಎಲ್​ಐಎಸ್ಸಿ, ಎಂಎಸ್ಸಿ, ಎಂಬಿಎ, ಪಿಜಿ, ಸರ್ಟಿಫಿಕೇಟ್​ ಪ್ರೋಗ್ರಾಮ್ಸ್​, ಡಿಪ್ಲೊಮಾ ಪ್ರೋಗ್ರಾಮ್ಸ್​, ಸರ್ಟಿಫಿಕೇಟ್​ ಪ್ರೋಗ್ರಾಮ್​ಗಳಿಗೆ ಪ್ರವೇಶ ಲಭ್ಯವಿದೆ. ಆಸಕ್ತರು ವಿವಿಯ ವೆಬ್​ಸೈಟ್​ www.ksoumysuru.ac.in ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಬೆಂಗಳೂರಿನ ಪ್ರಾದೇಶಿಕ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ಶುಲ್ಕ ಪಾವತಿಸಿ ಪ್ರವೇಶ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ 080-23448811 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement