ಬುರ್ಖಾಧಾರಿ ಯುವಕನಿಂದ ಆಲಮಟ್ಟಿ ಡ್ಯಾಂ ಆವರಣದಲ್ಲಿ ಆತಂಕ: ಠಾಣೆಯಲ್ಲಿ ವಿಚಾರಣೆ ವೇಳೆ ಗೊತ್ತಾಯ್ತು ಆತನ ನೋವಿನ ಕತೆ

ವಿಜಯಪುರ: ಅಣೆಕಟ್ಟು ಪ್ರವೇಶ ದ್ವಾರದಲ್ಲಿ ಬುರ್ಖಾಧಾರಿ ಆತಂಕ ಮೂಡಿಸಿದ ಘಟನೆ ವಿಜಯಪುರ ಜಿಲ್ಲೆ ಆಲಮಟ್ಟಿ ಡ್ಯಾಂ ಬಳಿ ನಡೆದಿದೆ.
ಸೋಮವಾರ ಬೆಳಗಿನ ಜಾವ ಬುರ್ಖಾ ಧರಿಸಿ ಆಲಮಟ್ಟಿ ಅಣೆಕಟ್ಟು ಆವರಣಕ್ಕೆ ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳದಲ್ಲಿದ್ದ ಪೊಲೀಸರು ಸೇರಿದಂತೆ ಹಲವರು ನೋಡಿದ್ದಾರೆ. ಇಷ್ಟು ಬೇಗ ಅಣೆಕಟ್ಟೆ ಒಳಗೆ ಪ್ರವೇಶ ನೀಡುವುದಿಲ್ಲ ಎಂದು ಪ್ರವೇಶ ದ್ವಾರದ ಬಳಿ ತಪಾಸಣೆ ಮಾಡುವಾಗ ಪೊಲೀಸರು ಹೇಳಿದ್ದಾರೆ.

ಈ ವೇಳೆ ಪೊಲೀಸರಿಗೆ ಸಂಶಯ ವ್ಯಕ್ತವಾಗಿದೆ. ಬುರ್ಖಾಧಾರಿಯ ಧ್ವನಿಯಿಂದ ಸಂಶಯಗೊಂಡ ಪೊಲೀಸರು ಬುರ್ಖಾಧಾರಿ ಮೇಲೆ ನಿಗಾ ಇಟ್ಟರು. ಸ್ವಲ್ಪ ಸಮಯದ ನಂತರ ಬುರ್ಖಾಧಾರಿ ಮುಳ್ಳು ಕಂಟಿಗಳಾಚೆ ಹೋಗಿ ಬುರ್ಖಾ ತೆಗೆದು ಆಚೆ ಬಂದಿದ್ದಾನೆ.
ಆಗ ಬುರ್ಖಾಧಾರಿ ಮಹಿಳೆಯಲ್ಲ ಪುರುಷ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಆ ವ್ಯಕ್ತಿ ತಾನು ಹಾಸನ ಜಿಲ್ಲೆಯ ಸಕಲೇಶಪುರ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ನನ್ನ ಹೆಸರು ಕಿಶೋರ್ ಮಲ್ಲಿಕಾರ್ಜುನ್ ಸ್ವಾಮಿ. ನನ್ನಲ್ಲಿ ಹೆಣ್ತನ ಬೆಳೆಯುತ್ತಿದೆ. ನಾನು ಮದುವೆಯಾಗುವುದಿಲ್ಲ ಎಂದರೂ ಮನೆಯಲ್ಲಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಮನೆ ಬಿಟ್ಟು ಬಂದಿದ್ದಾಗಿ ಹೇಳಿದ್ದಾನೆ. ಅಲ್ಲದೆ, ಬೆಂಗಳೂರಿನ ಬೇಕರಿ ಒಂದರಲ್ಲಿ ಕೆಲಸ ಮಾಡುತ್ತಿವುದಾಗಿ ತಿಳಿಸಿದ್ದಾನೆ.
ಸದ್ಯ ಪೊಲೀಸರ ವಿಚಾರಣೆ ಮುಂದುವರೆದಿದ್ದು ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ದಾರಿತಪ್ಪಿ ಮಹಾರಾಷ್ಟ್ರ ತಲುಪಿದ್ದ ಹಾವೇರಿ ಜಿಲ್ಲೆಯ ವೃದ್ಧೆ ; ಗೂಗಲ್‌ ಸರ್ಚ್‌, ಚಾಟ್‌ಜಿಪಿಟಿ ನೆರವಿನಿಂದ ಮರಳಿ ಮನೆಗೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement