ಚುನಾವಣೆಯಿಂದ ಹಿಂದೆ ಸರಿಯುವಂತೆ ಹೈಕಮಾಂಡಿನಿಂದ ಕರೆ ಬಂದಿದ್ದು ನಿಜ…ವರಿಷ್ಠರ ಮಾತಿನಿಂದ ನೋವಾಗಿದೆ: ಜಗದೀಶ ಶೆಟ್ಟರ

ಹುಬ್ಬಳ್ಳಿ: ಇಂದು, ಮಂಗಳವಾರ ಬೆಳಿಗ್ಗೆ ಬಿಜೆಪಿ ಹೈಕಮಾಂಡ್ ನಾಯಕರಿಂದ ಕರೆ ಬಂದಿದ್ದು ನಿಜ. ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ವರಿಷ್ಠರು ಹೇಳಿದರು. ಹೈಕಮಾಂಡ್ ನಾಯಕರ ಮಾತು ಕೇಳಿ ನನಗೆ ನೋವಾಯಿತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಬಾರಿ ಬಿಜೆಪಿಯಿಂದ ನನಗೆ ಟಿಕೆಟ್‌ ಸಿಗುವುದು ಅನುಮಾನ ಎಂದು ಪರೋಕ್ಷ ಸೂಚನೆ ನೀಡಿದ್ದಾರೆ. ಹಾಗೂ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್‌ ನಿಲುವಿನ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಾನು ಸೆಂಟ್ರಲ್‌ ಕ್ಷೇತ್ರದಿಂದ ಸ್ಪರ್ಧಿಸಿ ಮತ್ತೊಂದು ಬಾರಿ ದೊಡ್ಡ ಅಂತರದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿ ಹೈಕಮಾಂಡ್‌ಗೆ ಪರೋಕ್ಷವಾಗಿ ಸೆಡ್ಡು ಹೊಡೆಯುವ ಮಾತನ್ನಾಡಿದ್ದಾರೆ.
ಹೊಸಬರಿಗೆ ಅವಕಾಶ ಮಾಡಿಕೊಡಲು ಒಪ್ಪುತ್ತೀರಾ ಎಂದು ಕೇಳಿದರು ಆದರೆ ನಾನು ಚುನಾವಣೆ ಪ್ರಚಾರ ಆರಂಭಿಸಿದ್ದೇನೆ, ಇದೊಂದು ಬಾರಿ ಅವಕಾಶ ನೀಡಿ ಎಂದಿದ್ದೇನೆ. ಪಕ್ಷದ ವೇದಿಕೆಯಲ್ಲಿ ಚರ್ಚಿಸೋಣ ಎಂದಿದ್ದಾರೆ ನಾನು ಕಳೆದ 30 ವರ್ಷಗಳಿಂದ ನಾನು ಪಕ್ಷ ಸಂಘಟಿಸಿದ್ದೇನೆ. ಉತ್ತರ ಕರ್ನಾಟಕದಲ್ಲಿ ಪಕ್ಷ ಕಟ್ಟಿದ್ದೇನೆ. ಶಾಸಕನಾಗಿ 6 ಬಾರಿ ಆಯ್ಕೆಯಾಗಿದ್ದೇನೆ. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ 7ನೇ ಬಾರಿ ಆಯ್ಕೆಯಾಗುವ ವಿಶ್ವಾಸವೂ ಇದೆ. ನನ್ನ ಮೇಲೆ ಒಂದು ಒಂದು ಆರೋಪವಿಲ್ಲ, ಕಪ್ಪು ಚುಕ್ಕೆ ಇಲ್ಲ. ಆದರೂ ಹೈಕಮಾಂಡ್‌ನಿಂದ ಈ ರೀತಿ ಫೋನ್‌ ಬಂದಿದ್ದು ನನಗೆ ಮನಸ್ಸಿಗೆ ಬೇಸರವಾಯಿತು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬೆಳಗಾವಿ| ಕಬ್ಬು ದರ ನಿಗದಿ ; ಸಿಎಂ ಸಭೆಗೂ ಮುನ್ನ ಕೈಕೈ ಮಿಲಾಯಿಸಿದ ಇಬ್ಬರು ರೈತ ನಾಯಕರ ಬೆಂಬಲಿಗರು

ನಾನು ಗೆದ್ದಿದ್ದೆಲ್ಲವೂ ಹೆಚ್ಚಿನ ಮತಗಳ ಅಂತರದಿಂದಲೇ. ಹಲವರಿಗೆ ಟಿಕೆಟ್‌ ಕೊಡಿಸುವ ಕೆಲಸ ಮಾಡಿದ್ದೇನೆ. ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಪಕ್ಷ ನಡೆಸಿದ ಸಮೀಕ್ಷೆಯಲ್ಲಿಯೂ ಶೇ.70ರಷ್ಟು ಮತ್ತೆ ಆಯ್ಕೆಯಾಗುವ ಸಂಭವವಿದೆ ಎಂದು ಬಂದಿದೆ. ಆದರೂ ನಿಲ್ಲಬೇಡಿ ಎಂಬುದರ ಬಗ್ಗೆ ಕಾರಣವನ್ನು ಅವರ ಬಳಿ ಕೇಳಿದ್ದೇನೆ ಎಂದು ಹೇಳಿದರು.
ಹಿರಿಯ ನಾಯಕರಿಗೆ ಗೌರವ ಕೊಡುವ‌ ಕೆಲಸ ಆಗಬೇಕಿದೆ. ಪಕ್ಷದ ವರಿಷ್ಠರಿಗೆ ನೀವು ಹೇಳಿರುವುದು ನನಗೆ ಒಪ್ಪಿಗೆ ಇಲ್ಲ ಎಂದು ಹೇಳಿದೆ.ಪಕ್ಷದ ವರಿಷ್ಠರ ಬಗ್ಗೆ ವಿಶ್ವಾಸವಿದೆ ನಾಳೆವರೆಗೂ ಕಾಯ್ದು ನೋಡುತ್ತೇನೆ. ನಂತರ ನನ್ನ ನಿರ್ಧಾರ ತಿಳಿಸುತ್ತೇನೆ. ನಾನು ಕಣದಲ್ಲಿ ಇರುತ್ತೇನೆ. ನನ್ನ ಸ್ಪರ್ಧೆ ಬೇಡ ಎನ್ನುವುದಾದರೆ 2-3 ತಿಂಗಳು ಮೊದಲೆ ಹೇಳಿದ್ದರೆ ನನಗೂ ಗೌರವ ಇರುತ್ತಿತ್ತು. ನಾಮಪತ್ರ ಸಲ್ಲಿಸುವ ದಿನ ಹತ್ತಿರ ಇರುವಾಗ ಈ ರೀತಿ ಹೇಳಿದರೆ ಹೇಗೆ ಎಂದರು.ಆದರೆ, ಇವತ್ತು ನನಗೆ ಹೇಳುತ್ತಾರೆ ಎಂಬುದು ಬಹಳ ಬೇಸರ ಉಂಟುಮಾಡಿತು. 30 ವರ್ಷ ಪಕ್ಷ ಕಟ್ಟಿದವರಿಗೆ ಹೀಗೆ ಹೇಳಿದ್ದು ಬೇಸರ ಉಂಟುಮಾಡಿತು ಎಂದು ಹೇಳಿದ್ದಾರೆ. ನಿಮ್ಮ ಸಮೀಕ್ಷೆ ಪಾಸಿಟಿವ್ ಇದೆ ಎಂದುಅವರು ಸಹ ಒಪ್ಪಿಕೊಂಡಿದ್ದಾರೆ. ಪಕ್ಷ ನಿಷ್ಠೆ ತೋರಿದವರಿಗೆ ಗೌರವ ಇಲ್ಲ ಎಂದು ಬೇಕಾರಾಯಿತು. ವರಿಷ್ಠರು ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. ವರಿಷ್ಠರು ನನಗೆ ಮತ್ತೊಂದು ಅವಕಾಶ ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.

ಪ್ರಮುಖ ಸುದ್ದಿ :-   ದಾರಿತಪ್ಪಿ ಮಹಾರಾಷ್ಟ್ರ ತಲುಪಿದ್ದ ಹಾವೇರಿ ಜಿಲ್ಲೆಯ ವೃದ್ಧೆ ; ಗೂಗಲ್‌ ಸರ್ಚ್‌, ಚಾಟ್‌ಜಿಪಿಟಿ ನೆರವಿನಿಂದ ಮರಳಿ ಮನೆಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement