ನವ ದೆಹಲಿ: ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಸಹಾಯ ಮಾಡುವ ಉದ್ದೇಶದಿಂದ, ವರ್ಗಾವಣೆ ಮಾಡಲಾಗದ ಎಲೆಕ್ಟ್ರಾನಿಕ್ ವೋಚರ್‌ಗಳನ್ನು ಪ್ರಾರಂಭಿಸಲು ಕೇಂದ್ರವು ಯೋಜಿಸುತ್ತಿದೆ.
ಪ್ರಸ್ತುತ ರಾಜ್ಯಗಳಿಗೆ ನಿಯೋಜಿಸಲಾಗಿರುವ ಶೇಕಡಾ 25 ರಷ್ಟು ಲಸಿಕೆಗಳನ್ನು ಸಂಗ್ರಹಿಸುವುದಾಗಿ ಹಾಗೂ 18ವರ್ಷದಿಂದ ಮೇಲ್ಪಟ್ಟ ಎಲ್ಲರಿಗೂ ಎಚಿತವಾಗಿ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ವ್ಯವಸ್ಥೆಯು ಜೂನ್ 21 ರಿಂದ ಅಂತರರಾಷ್ಟ್ರೀಯ ಯೋಗ ದಿನದಿಂದ ಜಾರಿಗೆ ಬರಲಿದೆ ಎನ್ನಲಾಗಿದೆ.
ಆರೋಗ್ಯ ಸಚಿವಾಲಯದ ಹೇಳಿಕೆಯು,ಲೋಕ ಕಲ್ಯಾಣದ ಉತ್ಸಾಹವನ್ನು ಉತ್ತೇಜಿಸಲು, ಖಾಸಗಿ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಪುನಃ ಪಡೆದುಕೊಳ್ಳಬಹುದಾದ ವರ್ಗಾವಣೆ ಮಾಡಲಾಗದ ಎಲೆಕ್ಟ್ರಾನಿಕ್ ಚೀಟಿಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಇದು ಆರ್ಥಿಕವಾಗಿ ದುರ್ಬಲರಾದವರಿಗೆ ಖಾಸಗಿ ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಲಸಿಕೆಯನ್ನು ಆರ್ಥಿಕವಾಗಿ ಬೆಂಬಲಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ.
ಏತನ್ಮಧ್ಯೆ, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗಳ ಬೆಲೆಯನ್ನು ಕೇಂದ್ರವು ಪ್ರಕಟಿಸಿದೆ. ಕೋವಿಶೀಲ್ಡ್ ಬೆಲೆ ಪ್ರತಿ ಡೋಸ್‌ಗೆ 780 ರೂ. ಕೊವಾಕ್ಸಿನ್ ಮತ್ತು ಸ್ಪುಟ್ನಿಕ್ ವಿಷಯದಲ್ಲಿ, ಬೆಲೆಗಳನ್ನು ಕ್ರಮವಾಗಿ 1,410 ರೂ ಮತ್ತು 1,145 ರೂ. ಎಂದು ನಿಗದಿ ಪಡಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ