ಹಿಜಾಬ್ ವಿವಾದ; ಉಡುಪಿ ಶಾಸಕರಿಗೆ ವಿದೇಶಗಳಿಂದ ಜೀವ ಬೆದರಿಕೆ ಕರೆಗಳು

ಉಡುಪಿ: ಸ್ಥಳೀಯ ಕೆಲ ನಂಬರ್‌ಗಳಿಂದ ಹಾಗೂ ವಿದೇಶಗಳಿಂದ ನಿರಂತರವಾಗಿ ಇಂಟರ್ನೆಟ್ ಕಾಲ್ ಮಾಡಿ ಕೊಲೆ ಬೆದರಿಕೆ ಹಾಕಲಾಗುತ್ತಿದೆ.ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಈ ಕುರಿತು ಗೃಹಸಚಿವರಿಗೆ ಮೌಖಿಕವಾಗಿ ಮಾಹಿತಿ ನೀಡಿರುವ ರಘುಪತಿ ಭಟ್, ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ. ನಿನ್ನನ್ನು ಹೇಗೆ ನಿಯಂತ್ರಿಸಬೇಕು ಗೊತ್ತಿದೆ ಎಂದು ವಿದೇಶ ಸ್ಥಳೀಯ ಕೆಲ ನಂಬರ್ ಗಳಿಂದ ನಿರಂತರ ಫೋನ್ ಕರೆ ಮಾಡಿ ಕೊಲೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಮುಸಲ್ಮಾನರ ಒಬ್ಬರಿಂದಲೂ ಪ್ರತಿರೋಧ ಬಂದಿಲ್ಲ. ಉಡುಪಿ ಹಾಗೂ ಬೆಂಗಳೂರಿನ ಮುಸಲ್ಮಾನರು ನನ್ನ ಬೆಂಬಲಕ್ಕಿದ್ದಾರೆ. ನನಗೆ ದೇವರಿದ್ದಾರೆ ಅವರೇ ನನ್ನ ಭದ್ರತೆ. ಉಡುಪಿ ಕ್ಷೇತ್ರದ ಜನರೇ ನನಗೆ ಸೆಕ್ಯುರಿಟಿ ಗಾರ್ಡ್ ಎಂದರು.
ಹೈದರಾಬಾದ್ ನಿಂದ ಫೋನ್ ಕರೆ ಮಾಡಿ ಒಬ್ಬ ಬೆದರಿಸಿದ್ದಾನೆ. ಅವನಿಗೆ ಇಪ್ಪತ್ತು ನಿಮಿಷಗಳ ಕಾಲ ಉತ್ತರ ಕೊಟ್ಟಿದ್ದೇನೆ. ಮುಸ್ಲಿಮರಿಗೆ ನಾನು ಸಮವಸ್ತ್ರ ವಿಚಾರ ಬಿಟ್ಟು ಬೇರೆ ಯಾವ ವಿಚಾರವನ್ನೂ ಚರ್ಚೆ ಮಾಡಿಲ್ಲ ಎಂದು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement