ಶಿವಮೊಗ್ಗ: ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

ಶಿವಮೊಗ್ಗ: ತಾಯಿಯೇ ಮಗಳನ್ನು ಕೊಂದ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ನರ್ಸ್ ಕ್ವಾರ್ಟಸ್​ನಲ್ಲಿ ನಡೆದಿದೆ ಎಂದು ಶುಕ್ರವಾರ ವರದಿಯಾಗಿದೆ.
ಮೆಗ್ಗಾನ್ ಆಸ್ಪತ್ರೆಯ ಲ್ಯಾಬ್​ನ ಟೆಕ್ನಿಷಿಯನ್ ಆಗಿರುವ ರಾಮಣ್ಣ ಎಂಬವರ ಪತ್ನಿ ಶೃತಿ(38) ತನ್ನ 11 ವರ್ಷದ ಮಗಳ ತಲೆಗೆ ಹೊಡೆದು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮೃತ ಮಹಿಳೆಯ ಪತಿ ರಾಮಣ್ಣ ಕಳೆದ ರಾತ್ರಿ ರಾತ್ರಿ ಪಾಳಿಗೆಂದು ಆಸ್ಪತ್ರೆ ಹೋಗಿದ್ದರು. ಅವರು ಡ್ಯೂಟಿ ಮುಗಿಸಿಕೊಂಡು ಬಂದಾಗ ಮನೆಯ ಬಾಗಿಲು ತೆಗೆಯದೇ ಇದ್ದುದರಿಂದ ಹಿಂಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮಗಳು ಪೂರ್ವಿಕಾ ತಲೆಗೆ ಹರಿತ ಆಯುಧದಿಂದ ಹೊಡೆದಿದ್ದು, ಬಾಲಕಿ ಮಲಗಿದ್ದ ವೇಳೆ ಶೃತಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ‌‌. ಮಗಳನ್ನು ಕೊಂದ ನಂತರ ತನ್ನ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

ರಾಮಣ್ಣ ದಾವಣಗೆರೆ ಜಿಲ್ಲೆ ಮಾಯಕೊಂಡ ತಾಲೂಕಿನ ನರಗನಹಳ್ಳಿಯವರು ಎನ್ನಲಾಗಿದೆ. ಅವರು ತನ್ನ ಸ್ವಂತ ಅಕ್ಕನ‌ ಮಗಳನ್ನೇ ಮದುವೆಯಾಗಿದ್ದರು. ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಆಗಮಿಸಿ, ಪರಿಶೀಲಿಸಿದ್ದಾರೆ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಶೃತಿ:
ಶೃತಿ ಮಾನಸಿಕ ಖಿನ್ನತೆ ಬಳಲುತ್ತಿದ್ದರಂತೆ. ಅವರನ್ನು ಇಂದು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ರಾಮಣ್ಣ ನೈಟ್​ ಡ್ಯೂಟಿ ಮುಗಿಸಿಕೊಂಡು ಬರುಷ್ಟರಲ್ಲೇ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಶೃತಿ ವೈದ್ಯಕೀಯ ಚಿಕಿತ್ಸೆಯಲ್ಲಿದ್ದರು ಎಂದು ರಾಮಣ್ಣ ತಿಳಿಸಿದ್ದಾರೆ. ತನಿಖೆಯಲ್ಲಿ ಶೃತಿ ಯಾವ ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದು ಪರಿಶೀಲನೆ ನಡೆಸಿ, ವೈದ್ಯರ ಸಲಹೆಯನ್ನು ಪಡೆದುಕೊಳ್ಳುತ್ತೇವೆ, ತನಿಖೆ ನಂತರ ಇನ್ನಷ್ಟು ಮಾಹಿತಿ ತಿಳಿಯಲಿದೆ. ಬಾಲಕಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ  ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಆದಿತ್ಯ ಎಲ್‌1, ಪ್ರೋಬಾ-3 ಉಪಗ್ರಹಗಳ ನೆರವಿನಿಂದ ಸೌರ ಸ್ಫೋಟಗಳ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement