ಉಚಿತ ಪ್ರಯಾಣದ ಬಸ್‌ ಗಳಿಗೆ ಸ್ಟಿಕ್ಕರ್ ಅಂಟಿಸುವ ನಿರ್ಧಾರ: ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು : ಉಚಿತ ಪ್ರಯಾಣದ ಬಸ್ ಗಳಿಗೆ ಸ್ಟಿಕ್ಕರ್ ಅಂಟಿಸುವುದಾಗಿ ಹೇಳಿರುವ ರಾಜ್ಯ ಸರ್ಕಾರದ ಮತ್ತೊಂದು ಷರತ್ತಿನ ಬಗ್ಗೆ ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಉಚಿತ ಪ್ರಯಾಣದ ಬಸ್‌ಗಳಿಗೆ ಸ್ಟಿಕ್ಕರ್ ಅಂಟಿಸುವ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಸಿದ‍್ಧರಾಮಯ್ಯನವರೇ, ಬಸ್ ಹತ್ತುವ ಮಹಿಳೆಯರು ಬಸ್ ನಂಬರ್ ನೋಡಬೇಕೋ ಅಥವಾ ನೀವು ಮೆತ್ತಿರುವ ಸ್ಟಿಕ್ಕರ್ ಗಮನಿಸಬೇಕೋ ಎಂದು ಪ್ರಶ್ನಿಸಿದೆ.
ಲಕ್ಸುರಿ ಅಲ್ಲದ ಎಲ್ಲಾ ಸಾಮಾನ್ಯ ಬಸ್‌ಗಳಲ್ಲಿ ಫ್ರೀ, ಫ್ರೀ, ಫ್ರೀ ಎಂದು ಹೇಳಿದ್ದು ನೀವೇ ಅಲ್ಲವೇ ಎಂದು ಪ್ರಶ್ನಿಸಿರುವ ಬಿಜೆಪಿ ಹಾಗಾದ್ದ ಮೇಲೆ ಈಗ ಈ ಸ್ಟಿಕ್ಕರ್ ಅಂಟಿಸುವುದು ಯಾಕೆ ಎಂದು ಕೇಳಿದೆ. ಸಾಮಾನ್ಯ ಬಸ್‌ಗಳಲ್ಲಿಯೂ ಕೆಲವೇ ಕೆಲವಕ್ಕೆ ಸ್ಟಿಕ್ಕರ್ ಅಂಟಿಸಿ ನಾಡಿನ ಹೆಣ್ಣು ಮಕ್ಕಳ ಕಿವಿಗೆ ಚೆಂಡು ಹೂವು ಮುಡಿಸುವ ‘ಗ್ಯಾರಂಟಿ ಪ್ರೋಗ್ರಾಂ’ ಇದು! ಇದು ನಿಮಗೆ ‘ಉಚಿತ’ವಲ್ಲ ಎಂದು ಟೀಕಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement