ಅತ್ಯುತ್ತಮ ವಿದ್ಯಾರ್ಥಿಗಳೇ ಶಿಕ್ಷಕರ ಜೀವಾಳ: ಡಾ. ನ.ವಜ್ರಕುಮಾರ

ಧಾರವಾಡ: ಅತ್ಯುತ್ತಮ ಶಿಕ್ಷಕರಿಗೆ ವಿದ್ಯಾರ್ಥಿಗಳೇ ಆಸ್ತಿ. ಶಿಕ್ಷಕ-ವಿದ್ಯಾರ್ಥಿ ಬಾಂಧವ್ಯ ವರ್ಣಿಸಲು ಅಸಾಧ್ಯ. ನಮ್ಮನ್ನು ಗುರುತಿಸಿ ಮಾತನಾಡಿಸಿದಾಗ ಆಗುವ ಆತ್ಮತೃಪ್ತಿ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ ಎಂದು ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಹೇಳಿದರು.
ಶಿಕ್ಷಕ ದಿನಾಚರಣೆ ನಿಮಿತ್ತ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನಾವು ಹಣ-ಆಸ್ತಿ ಗಳಿಸಬಹುದು ಆದರೆ, ವಿದ್ಯಾರ್ಥಿಗಳ ಪ್ರೀತಿ ಗಳಿಸುವುದು ಒಬ್ಬ ಅತ್ಯುತ್ತಮ ಶಿಕ್ಷಕನಿಗೆ ಮಾತ್ರ ಸಾಧ್ಯ ಶಿಕ್ಷಕರಲ್ಲಿ ಬದ್ಧತೆ, ಕ್ಷಮತೆ, ಪ್ರಾಮಾಣಿಕತೆ ಇದ್ದರೆ ಮಾತ್ರ ಶಿಕ್ಷಣ ಸಂಸ್ಥೆಗಳು ಒಳ್ಳೆಯ ಹೆಸರು ಪಡೆಯಲು ಸಾಧ್ಯ ಎಂದು ಹೇಳಿದರು.
ಜೆಎಸ್ಎಸ್ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ್ ಮಾತನಾಡಿ, ಶಿಕ್ಷಕ ಭ್ರಷ್ಟನಾದರೆ ಇಡೀ ವ್ಯವಸ್ಥೆಯೇ ಭ್ರಷ್ಟವಾಗುತ್ತದೆ. ಶಿಕ್ಷಕ ವೃತ್ತಿ ಅತ್ಯಂತ ಗೌರವಯುತವಾದ ವೃತ್ತಿ. ತಮ್ಮ ವೃತ್ತಿಯನ್ನು ಪ್ರೀತಿಸಬೇಕು. ಈಗಿನ ಪರಿಸ್ಥಿತಿಯಲ್ಲಿ ಶಿಕ್ಷಕ-ವಿದ್ಯಾರ್ಥಿ ಸಂಬಂಧ ಅಷ್ಟೊಂದು ಉತ್ತಮವಾಗಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಕ ಸಮುದಾಯ ಆಲೋಚನೆ ಮಾಡಬೇಕಾಗಿದೆ ಎಂದು ಹೇಳಿದರು.
ಉತ್ತಮ ಪರಿಸರ ಉತ್ತಮ ಶಿಕ್ಷಕ ಒಬ್ಬ ಉತ್ತಮ ನಾಗರಿಕನನ್ನು ತಯಾರು ಮಾಡಬಲ್ಲರು ಎಂದು ಹೇಳಿದರು.
ಜೆ.ಎಸ್.ಎಸ್ ನ ಎಲ್ಲ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು. ಈ ಸಂದರ್ಭದಲ್ಲಿ ಡಾ. ನ. ವಜ್ರಕುಮಾರ ಹಾಗೂ ಅಜಿತ ಪ್ರಸಾದರವರನ್ನು ಸನ್ಮಾನಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement