ಭದ್ರಾವತಿ ಸೇರಿ ರಾಜ್ಯದ 4 ನಗರಗಳಲ್ಲಿ ಟ್ರೂ 5ಜಿ ಸೇವೆ ಆರಂಭಿಸಿದ ರಿಲಯನ್ಸ್ ಜಿಯೋ

ಬೆಂಗಳೂರು: ರಿಲಯನ್ಸ್ ಜಿಯೋ ಬುಧವಾರ (ಮಾರ್ಚ್ 8) ರಾಮನಗರ, ಭದ್ರಾವತಿ, ದೊಡ್ಡಬಳ್ಳಾಪುರ, ಚಿಂತಾಮಣಿ ಸೇರಿದಂತೆ ದೇಶಾದ್ಯಂತ 27 ನಗರಗಳಲ್ಲಿ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸುತ್ತಿರುವುದಾಗಿ ಪ್ರಕಟಿಸಿದೆ. ಇದರೊಂದಿಗೆ ಜಿಯೋ ರಾಮನಗರ, ರಾಮನಗರ, ಭದ್ರಾವತಿ, ದೊಡ್ಡಬಳ್ಳಾಪುರ, ಚಿಂತಾಮಣಿಯಲ್ಲಿ ಮುಂದಿನ ಪೀಳಿಗೆಯ ಟ್ರೂ 5ಜಿ ತಂತ್ರಜ್ಞಾನವನ್ನು ಪರಿಚಯಿಸಿದ ಮೊದಲ ಟೆಲಿಕಾಂ ಆಪರೇಟರ್ ಆಗಿದೆ.
ಜಿಯೋ ಟ್ರೂ 5ಜಿ 1 ಜಿಬಿಪಿಎಸ್ ವರೆಗೆ ವೇಗದ ಇಂಟರ್ನೆಟ್ ನೀಡುತ್ತದೆ. ಇದರ ಜತೆಗೆ ಹೈ-ಡೆಫಿನಿಷನ್ ಕಂಟೆಂಟ್ ತಡೆರಹಿತ ಸ್ಟ್ರೀಮಿಂಗ್, ಲೋ ಲೇಟೆನ್ಸಿ ಮತ್ತು ಸಂವಾದಾತ್ಮಕ ವೀಕ್ಷಣೆ ಹಾಗೂ ಕ್ಲೌಡ್ ಗೇಮಿಂಗ್ ಅನ್ನು ಸಕ್ರಿಯಗೊಳಿಸುತ್ತದೆ.
ತಂತ್ರಜ್ಞಾನವು ಇಂಟರ್ನೆಟ್ ಆಫ್ ಥಿಂಗ್ಸ್ (IoT), ಆಗುಮೆಂಟೆಡ್ ರಿಯಾಲಿಟಿ (AR), ಮತ್ತು ವರ್ಚುವಲ್ ರಿಯಾಲಿಟಿ (VR) ನಂತಹ ಉದಯೋನ್ಮುಖ ತಂತ್ರಜ್ಞಾನಗಳ ಸಾಮರ್ಥ್ಯಗಳನ್ನು ಹೆಚ್ಚಿಸಲು ಭರವಸೆ ನೀಡುತ್ತದೆ, ಇದು ಆರೋಗ್ಯ ರಕ್ಷಣೆ, ಕೃಷಿ, ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣ ಕ್ಷೇತ್ರಗಳಲ್ಲಿ ನವೀನ ಅಪ್ಲಿಕೇಷನ್‌ಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಕಂಪನಿ ಹೇಳಿದೆ.
ಈ ಆರಂಭದ ಕುರಿತು ಮಾತನಾಡಿದ ಜಿಯೋ ವಕ್ತಾರರು, “ಹೋಳಿ ಹಬ್ಬದ ಸಂದರ್ಭದಲ್ಲಿ, 13 ರಾಜ್ಯಗಳಾದ್ಯಂತ 27 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ. ಇದರೊಂದಿಗೆ ದೇಶದಲ್ಲಿ 331 ನಗರಗಳಿಗೆ ಜಿಯೋ ಟ್ರೂ 5ಜಿ ಸೇವೆಗಳ ಪ್ರಯೋಜನಗಳನ್ನು ಪಡೆಯಲಿದೆ. 2023ರ ಡಿಸೆಂಬರ್ ವೇಳೆಗೆ ಜಿಯೋ ಟ್ರೂ 5ಜಿ ದೇಶದ ಪ್ರತಿಯೊಂದು ಪಟ್ಟಣ/ನಗರವನ್ನು ತಲುಪಲಿದೆ. ಭಾರತವನ್ನು ಡಿಜಿಟಲ್ ಸಮುದಾಯವನ್ನಾಗಿ ಪರಿವರ್ತಿಸುವ ಜಿಯೋ ಬದ್ಧತೆಗೆ ಇದು ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement