ಜೆಇಇ ಮೇನ್‌ ಫಲಿತಾಂಶ ಪ್ರಕಟ : ಕರ್ನಾಟಕದ ಒಬ್ಬ ಸೇರಿ 24 ವಿದ್ಯಾರ್ಥಿಗಳಿಗೆ 100ಕ್ಕೆ ನೂರು ಅಂಕ ; ಪಟ್ಟಿ ಇಲ್ಲಿದೆ…

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ಪೋರ್ಟಲ್ jeemain.nta.nic.in ನಲ್ಲಿ ಜೆಇಇ (ಮುಖ್ಯ) 2025 ಸೆಷನ್ 2 ರ ಪೇಪರ್ 1 (B.E./B.Tech.) ಫಲಿತಾಂಶಗಳನ್ನು ಅಧಿಕೃತವಾಗಿ ಘೋಷಿಸಿದೆ.
ಏಪ್ರಿಲ್‌ನಲ್ಲಿ 15 ಅಂತಾರಾಷ್ಟ್ರೀಯ ಸ್ಥಳಗಳು ಸೇರಿದಂತೆ 300 ನಗರಗಳ 531 ಕೇಂದ್ರಗಳಲ್ಲಿ ಒಂಬತ್ತು ಶಿಫ್ಟ್‌ಗಳಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. ಈ ವರ್ಷದ ಪರೀಕ್ಷೆಯಲ್ಲಿ ಎರಡೂ ಸೆಷನ್‌ಗಳಲ್ಲಿ ಒಟ್ಟು 14.75 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.
ಜನವರಿ ಮತ್ತು ಏಪ್ರಿಲ್ ಎರಡೂ ಪ್ರಯತ್ನಗಳಲ್ಲಿ ಹಾಜರಾದ ಅಭ್ಯರ್ಥಿಗಳಿಗೆ ಎರಡೂ ಸೆಷನ್‌ಗಳಲ್ಲಿ ಪಡೆದ ಅತ್ಯುತ್ತಮ ಎನ್‌ಟಿಎ (NTA)ಸ್ಕೋರ್ ಅನ್ನು ಪರಿಗಣಿಸಲಾಗಿದೆ. ಒಟ್ಟು 24 ಅಭ್ಯರ್ಥಿಗಳು ಪರಿಪೂರ್ಣ 100ಕ್ಕೆ ನೂರು ಎನ್‌ಟಿಎ (NTA) ಸ್ಕೋರ್ ಅನ್ನು ಸಾಧಿಸಿದ್ದಾರೆ, ಇದು ಈ ರಾಷ್ಟ್ರೀಯ ಮಟ್ಟದ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಹೆಚ್ಚು ಸ್ಪರ್ಧಾತ್ಮಕ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ.

ಒಟ್ಟು 24 ಅಭ್ಯರ್ಥಿಗಳು ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ರಾಜಸ್ಥಾನದ ವಿದ್ಯಾರ್ಥಿಗಳು ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ, ನಂತರ ಮಹಾರಾಷ್ಟ್ರ (ಮೂರು), ತೆಲಂಗಾಣ (ಮೂರು), ಉತ್ತರ ಪ್ರದೇಶ (ಮೂರು) ಮತ್ತು ಪಶ್ಚಿಮ ಬಂಗಾಳ (ಇಬ್ಬರು) ಕರ್ನಾಟಕದಿಂದ ಒಬ್ಬರು 100ಕ್ಕೆ ನೂರು ಪ್ರತಿಶತ ಅಂಕ ಗಳಿಸಿದ್ದಾರೆ. ಇವರಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳಾದ ಪಶ್ಚಿಮ ಬಂಗಾಳದ ದೇವದತ್ತಾ ಮಾಝಿ ಮತ್ತು ಆಂಧ್ರಪ್ರದೇಶದ ಸಾಯಿ ಮನೋಗ್ನಾ ಗುತ್ತಿಕೊಂಡ ಸಹ ಸೇರಿದ್ದಾರೆ.
ಟಾಪರ್‌ ಆದವರು
ಎಂ.ಡಿ. ಅನಸ್ -ರಾಜಸ್ಥಾನ
ಆಯುಷ್ ಸಿಂಘಾಲ್ -ರಾಜಸ್ಥಾನ
ಆರ್ಚಿಶ್ಮಾನ್‌ ನಂದಿ -ಪಶ್ಚಿಮ ಬಂಗಾಳದ
ದೇವದತ್ತಾ ಮಾಝಿ -ಪಶ್ಚಿಮ ಬಂಗಾಳದ
ಆಯುಷ್ ರವಿ ಚೌಧರಿ-ಮಹಾರಾಷ್ಟ್ರ
ಲಕ್ಷ್ಯ ಶರ್ಮಾ -ರಾಜಸ್ಥಾನ
ಕುಶಾಗ್ರ ಗುಪ್ತಾ- ಕರ್ನಾಟಕ
ಹರ್ಷ ಎ. ಗುಪ್ತಾ -ತೆಲಂಗಾಣ
ಅದಿತ್ ಪ್ರಕಾಶ ಭಾಗಡೆ- ಗುಜರಾತ್
ದಕ್ಷ -ದೆಹಲಿ
ಹರ್ಷ ಝಾ -ದೆಹಲಿ
ರಜಿತ್ ಗುಪ್ತಾ-ರಾಜಸ್ಥಾನ
ಶ್ರೇಯಸ್ ಲೋಹಿಯಾ-ಉತ್ತರ ಪ್ರದೇಶ
ಸಕ್ಷಮ ಜಿಂದಾಲ್-ರಾಜಸ್ಥಾನ
ಸೌರವ -ಉತ್ತರ ಪ್ರದೇಶ
ವಂಗಲ ಅಜಯ ರೆಡ್ಡಿ- ತೆಲಂಗಾಣ
ಸಾನಿಧ್ಯ ಸರಾಫ್-ಮಹಾರಾಷ್ಟ್ರ
ವಿಶಾದ ಜೈನ್-ಮಹಾರಾಷ್ಟ್ರ
ಅರ್ನವ್ ಸಿಂಗ್ -ರಾಜಸ್ಥಾನ
ಶಿವೇನ್ ವಿಕಾಸ ತೋಷ್ನಿವಾಲ್-ಗುಜರಾತ್
ಕುಶಾಗ್ರ ಬೈಂಗಹ -ಉತ್ತರ ಪ್ರದೇಶ
ಸಾಯಿ ಮನೋಜ್ಞಾ ಗುತ್ತಿಕೊಂಡ-ಆಂಧ್ರಪ್ರದೇಶದ
ಓಂ ಪ್ರಕಾಶ್ ಬೆಹೆರಾ-ರಾಜಸ್ಥಾನ ಪುರುಷ
ಬನಿಬ್ರತಾ ಮಜೀ -ತೆಲಂಗಾಣ

ಪ್ರಮುಖ ಸುದ್ದಿ :-   ಕರ್ನಲ್ ಸೋಫಿಯಾ ಬಗ್ಗೆ ಸಚಿವ ವಿಜಯ ಶಾ ಹೇಳಿಕೆ | ಎಸ್ಐಟಿ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ ; ಬಂಧನಕ್ಕೆ ತಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement