ನ್ಯಾಯಾಧೀಶರ ಶಿಫಾರಸುಗಳನ್ನು ತಡೆಹಿಡಿಯುತ್ತಿರುವ ಕೇಂದ್ರದ ಬಗ್ಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಕಳವಳ

ನವದೆಹಲಿ : ನ್ಯಾಯಮೂರ್ತಿಗಳ ಹೆಸರನ್ನು ತಡೆಹಿಡಿಯುವುದು ಅಭ್ಯರ್ಥಿಗಳ ಹಿರಿತನಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಕೊಲಿಜಿಯಂ, ಬಾಕಿ ಉಳಿದಿರುವ ನ್ಯಾಯಮೂರ್ತಿಗಳ ನೇಮಕಾತಿಗಳನ್ನು ತ್ವರಿತಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಕೊಲಿಜಿಯಂ, ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ನಾಲ್ಕು ಜಿಲ್ಲಾ ನ್ಯಾಯಾಧೀಶರ ಹೆಸರನ್ನು ಶಿಫಾರಸು ಮಾಡಿದೆ. ಆರ್. ಶಕ್ತಿವೇಲ್, ಪಿ ಧನಬಾಲ್, ಚಿನ್ನಸಾಮಿ ಕುಮಾರಪ್ಪನ್ ಮತ್ತು ಕೆ.ರಾಜಶೇಖರ ಅವರ ಹೆಸರನ್ನು ಶಿಫಾರಸು ಮಾಡಿದೆ.
ಪುನರುಚ್ಚರಿಸಿದ ಹೆಸರುಗಳನ್ನು ತಡೆಹಿಡಿಯುವುದು ಅಥವಾ ಕಡೆಗಣಿಸುವುದು ನ್ಯಾಯಾಧೀಶರ ಹಿರಿತನಕ್ಕೆ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಗಮನಿಸಿದೆ. ಬಾಕಿ ಇರುವ ನೇಮಕಾತಿಗಳನ್ನು ಶೀಘ್ರವೇ ಕ್ಲಿಯರ್‌ ಮಾಡುವಂತೆ ಕೇಂದ್ರಕ್ಕೆ ಸೂಚಿಸಿದೆ.
ವಕೀಲರಾದ ಹರ್ಪ್ರೀರ್ ಬ್ರಾರ್ ಅವರನ್ನು ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸಲು ಸುಪ್ರೀಂ ಕೋರ್ಟ್ ತನ್ನ ಶಿಫಾರಸನ್ನು ಪುನರುಚ್ಚರಿಸಿದೆ. ಬ್ರಾರ್ ಅವರನ್ನು ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸಲು ಜುಲೈ 25, 2022 ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ತನ್ನ ಶಿಫಾರಸನ್ನು ಪುನರುಚ್ಚರಿಸಿದೆ.
ಕಾಲಿಜಿಯಂ ವರ್ಸಸ್‌ ಸೆಂಟರ್
ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಹೊಸ ವ್ಯವಸ್ಥೆ ಮತ್ತು ಸುಧಾರಣೆಗಾಗಿ ಸರ್ಕಾರ ಬ್ಯಾಟಿಂಗ್ ಮಾಡುತ್ತಿರುವಾಗ, ಸುಪ್ರೀಂ ಕೋರ್ಟ್ ಕೊಲಿಜಿಯಂ ವ್ಯವಸ್ಥೆಯನ್ನು ಮುಂದುವರಿಸಲು ಬಯಸಿದೆ.
ಅಂತಹ ಒಂದು ನಿದರ್ಶನವೆಂದರೆ ಬಹಿರಂಗವಾಗಿ ಸಲಿಂಗಕಾಮಿಯಾಗಿರುವ ವಕೀಲ ಸೌರಭ್ ಕಿರ್ಪಾಲ್ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸುವಲ್ಲಿ ವಿಳಂಬವಾಗಿದೆ. ಸೌರಭ್ ಕಿರ್ಪಾಲ್ ಅವರು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಎನ್. ಕಿರ್ಪಾಲ್ ಅವರ ಪುತ್ರರು.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement