ಹಾಸನ ಶಾಲಾ ಶಿಕ್ಷಕಿ ಕಿಡ್ನಾಪ್ ಪ್ರಕರಣ ಸುಖಾಂತ್ಯ: ನೆಲ್ಯಾಡಿ ಬಳಿ ಅಪಹರಣಕಾರರ ಬಂಧನ

ಹಾಸನ : ಹಾಸನದ ಬಿಟ್ಟಗೌಡನಹಳ್ಳಿ ಬಳಿ ನಡೆದಿದ್ದ ಶಾಲಾ ಶಿಕ್ಷಕಿ ಕಿಡ್ನಾಪ್ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಅಪಹರಣಕಾರರನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡದ ನೆಲ್ಯಾಡಿ ಬಳಿ ಅಪಹರಣಕಾರರನ್ನು ಪತ್ತೆ ಹಚ್ಚಿದ ಹಾಸನ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಕಿಡ್ನಾಪ್ ಆಗಿದ್ದ ಶಾಲಾ ಶಿಕ್ಷಕಿಯನ್ನು ರಕ್ಷಿಸಿದ್ದಾರೆ. ಪೊಲೀಸರು ಸಂಜೆ ಐದು ಗಂಟೆ ಸುಮಾರಿಗೆ ದಕ್ಷಿಣ ಕನ್ನಡದ ನೆಲ್ಯಾಡಿ ಬಳಿ ಆರೋಪಿ ರಾಮುನನ್ನು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ: 
ನವೆಂಬರ್‌ 30 ರಂದು ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ಸಿನಿಮೀಯ ರೀತಿಯಲ್ಲಿ ಇನ್ನೋವಾ ಕಾರಿನಲ್ಲಿ ಅಪಹರಿಸಲಾಗಿತ್ತು. ಅಪಹರಣದ ದೃಶ್ಯಗಳು ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ಸೆರೆಯಾಗಿತ್ತು ಸುಮಾರು 15 ದಿನಗಳ ಹಿಂದೆ ಶಿಕ್ಷಕಿಯನ್ನು ಮದುವೆ ಮಾಡಿಕೊಳ್ಳುವ ಪ್ರಸ್ತಾಪದೊಂದಿಗೆ ಮನೆಗೆ, ಅವರ ಸಂಬಂಧಿ ರಾಮು ಮತ್ತು ಪೋಷಕರು ಬಂದಿದ್ದರು. ಆದರೆ, ಈ ಮದುವೆ ಪ್ರಸ್ತಾಪಕ್ಕೆ ಶಿಕ್ಷಕಿ ಅರ್ಪಿತಾ ಒಪ್ಪದ ಕಾರಣ ಪೋಷಕರು ಒಪ್ಪಿರಲಿಲ್ಲ. ಮದುವೆ ಒಪ್ಪದ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನು ಸಂಬಂಧಿ ರಾಮು ಎಂಬಾತ ಅಪಹರಿಸಿದ್ದ ಎಂದು ಶಿಕ್ಷಕಿ ತಾಯಿ ಆರೋಪ ಮಾಡಿದ್ದರು.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹಾಸನ ಎಸ್​ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆರೋಪಿ ಪತ್ತೆಗಾಗಿ ಮೂರು ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿದ್ದರು. ಮೋಬೈಲ್ ನೆಟ್ ವರ್ಕ್ ಆಧಾರಿಸಿ ಆರೋಪಿ ರಾಮು ಹಾಗೂ ಆತನ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement