ಮಾಜಿ‌ ಸಚಿವ ಎಸ್​.ಆರ್​​.ಪಾಟೀಲರಿಗೆ ಅತ್ಯುತ್ತಮ ‌ಶಾಸಕ ಪ್ರಶಸ್ತಿ

ಬೆಂಗಳೂರು : ಹಿರಿಯ ರಾಜಕಾರಣಿ ಹಾಗೂ ಮಾಜಿ‌ ಸಚಿವ ಶಿವನಗೌಡ ರುದ್ರಗೌಡ ಪಾಟೀಲ್ (ಎಸ್​.ಆರ್​​.ಪಾಟೀಲ್) ಅವರಿಗೆ 2021ನೇ ಸಾಲಿನ ಅತ್ಯುತ್ತಮ ವಿಧಾನ ‌ಪರಿಷತ್ ಶಾಸಕ ಪ್ರಶಸ್ತಿ ಘೋಷಣೆಯಾಗಿದೆ.
ಎಸ್​.ಆರ್​​.ಪಾಟೀಲ್ ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್​ ಪಕ್ಷದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದಾರೆ. 24 ವರ್ಷ ವಿಧಾನ ಪರಿಷತ್‌ ಸದಸ್ಯರಾಗಿ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರಾಗಿ, ಸಭಾ ನಾಯಕರಾಗಿ ಹಾಗೂ ಮೂರು ವರ್ಷ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜುಲೈ 18ರಂದು ಸಂಜೆ 6 ಗಂಟೆಗೆ ವಿಧಾನಸೌಧದ 3ನೇ ಮಹಡಿಯಲ್ಲಿನ ಸಭಾಂಗಣದಲ್ಲಿ ನೆರವೇರಲಿದೆ. ಪ್ರಶಸ್ತಿ ಸ್ವೀಕರಿಸಲು ಆಹ್ವಾನ ‌ನೀಡಿ ಎಸ್​.ಆರ್​. ಪಾಟೀಲ್​ ಅವರಿಗೆ ವಿಧಾನಪರಿಷತ್ ಕಾರ್ಯದರ್ಶಿ ಮೀನಾ ನಾಯಕ ಅವರು ಪತ್ರ ಬರೆದಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಗೋಕರ್ಣ ಮಹಾಗಣಪತಿ ದೇವರ ಸ್ಪರ್ಶ ದರ್ಶನಕ್ಕೆ ನಿರ್ಬಂಧ

ನಿಮ್ಮ ಕಾಮೆಂಟ್ ಬರೆಯಿರಿ

advertisement