ʼಹುಬ್ಬಳ್ಳಿ-ಜೋಧಪುರʼ ನೇರ ರೈಲು ಸಂಚಾರಕ್ಕೆ ಸಮ್ಮತಿ

ನವದೆಹಲಿ: ಕೇಂದ್ರ ಸರ್ಕಾರ ಗಣೇಶ ಹಬ್ಬದ ವೇಳೆ ʼಹುಬ್ಬಳ್ಳಿ-ಜೋಧಪುರʼ ನೇರ ರೈಲು ಸಂಚಾರಕ್ಕೆ ಅಸ್ತು ಎಂದು ಹೇಳಿದೆ. ʼಹುಬ್ಬಳ್ಳಿ-ಜೋಧಪುರʼ ವಿಶೇಷ ರೈಲು ಸೆಪ್ಟೆಂಬರ್‌ ತಿಂಗಳಿನಿಂದಲೇ ಸಂಚಾರ ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಪ್ರಸ್ತುತ ವಿಶೇಷ ರೈಲಾಗಿರುವ ಇದನ್ನು ಮುಂದಿನ ದಿನಗಳಲ್ಲಿ ನಿಯತಕಾಲಿಕವಾಗಿ ಪರಿವರ್ತನೆಗೊಳಿಸುವ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭರವಸೆ ನೀಡಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಹುಬ್ಬಳ್ಳಿ-ಜೋಧಪುರ ನೂತನ ರೈಲು (ಸಂಖ್ಯೆ: 07359) ಹುಬ್ಬಳ್ಳಿಯಿಂದ 7:30ಕ್ಕೆ ತೆರಳಿ ಭಗತ ಕಿ ಕೋಟಿ( BGKT)ಗೆ ಬೆಳಗ್ಗೆ 5:30ಕ್ಕೆ ತಲುಪಲಿದೆ. ಸದ್ಯ ಪ್ರತಿ ರವಿವಾರ ಈ ರೈಲು ಸಂಚಾರವಿರಲಿದ್ದು, ಸೆಪ್ಟೆಂಬರ್‌ 28ರಿಂದ ಸಂಚಾರ ಆರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಟಿಕೆಟ್‌ ಬುಕಿಂಗ್‌ ಶುರು
ನೂತನವಾಗಿ ಸಂಚಾರ ಆರಂಭವಾಗುವ ಹುಬ್ಬಳ್ಳಿ-ಜೋಧಪುರ ರೈಲ್ವೆ ಸಂಚಾರಕ್ಕೆ ಪ್ರಯಾಣಿಕರಿಂದ ಆಗಲೇ ಟಿಕೆಟ್‌ ಬುಕಿಂಗ್‌ ಸಹ ಶುರುವಾಗಿದೆ. ರೈಲ್ವೆ ಇಲಾಖೆ ಸೆಪ್ಟೆಂಬರ್‌ 28, ಅಕ್ಟೋಬರ್‌ 5, ಅಕ್ಟೋಬರ್‌ 12, ಅಕ್ಟೋಬರ್‌ 1̧9 ಅಕ್ಟೋಬರ್‌ 2ರಂದು ಪ್ರಯಾಣಕ್ಕೆ ಮುಂಗಡ ಟಿಕೆಟ್‌ ಬುಕಿಂಗ್‌ ಆರಂಭಿಸಿದೆ.
ಹುಬ್ಬಳ್ಳಿ-ಜೋಧಪುರ ನೇರ ರೈಲು ಸಂಚಾರಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಉತ್ತರ ಕರ್ನಾಟಕ ಭಾಗದವರಿಂದ ಅನೇಕ ದಿನಗಳಿಂದಲೂ ಬಹು ಬೇಡಿಕೆಯಿತ್ತು. ಕೇಂದ್ರ ಸಚಿವ ಪ್ರಹ್ಲಾದದ ಜೋಶಿ ಅವರ ಈ ಬಗ್ಗೆ ಸತತವಾಗಿ ಪ್ರಯತ್ನ ನಡೆಸಿದ್ದು, ಈಗ ಸಾಕಾರಗೊಂಡಿದೆ.

ಪ್ರಮುಖ ಸುದ್ದಿ :-   ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದು ಬೆಳ್ಳಿ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement