120 ಕಿಮೀ ವೇಗದ ಯಶಸ್ವಿ ಪರೀಕ್ಷೆ ನಡೆಸಿದ ಭಾರತದ ಮೊದಲ ಹೈಡ್ರೋಜನ್ ರೈಲು

ನವದೆಹಲಿ : ಭಾರತದ ರೈಲ್ವೆಯು ತನ್ನ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲು ತನ್ನ ಅಂತಿಮ ಹೈ-ಸ್ಪೀಡ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಶುಕ್ರವಾರ (ಜೂನ್ 26), ಹರಿಯಾಣದ ಜಿಂದ್–ಸೋನಿಪತ್ ಮಾರ್ಗದಲ್ಲಿ ನಡೆದ ಪರೀಕ್ಷೆಯಲ್ಲಿ ರೈಲು ಗಂಟೆಗೆ 120 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಸಂಚರಿಸಿ ಯಶಸ್ಸು ಸಾಧಿಸಿದೆ. ಈ ಯಶಸ್ವಿ ಪರೀಕ್ಷೆಯು … Continued

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ

ಫಿರೋಜಾಬಾದ್ (ಉತ್ತರ ಪ್ರದೇಶ): ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ ಭಾಗವತ್ ಅವರು ಪ್ರಯಾಣಿಸುತ್ತಿದ್ದ ದೆಹಲಿ ಮುಖಿ ‘ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್’ ರೈಲಿನ ಮೇಲೆ ಗುರುವಾರ ಸಂಜೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಚಲಿಸುತ್ತಿದ್ದ ರೈಲಿನ ಕೋಚ್ ಒಂದರ ಕಿಟಕಿ ಗಾಜು ಜಖಂಗೊಂಡಿದೆ. ಆದರೆ, ಘಟನೆಯಲ್ಲಿ ಮೋಹನ ಭಾಗವತ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಉತ್ತರ … Continued

ವೀಡಿಯೊ ವೀಕ್ಷಿಸಿ | ವಿಶ್ವದಾಖಲೆ ಬರೆದ ಈ 181 ಅಡಿ ಉದ್ದದ ಚಾಕೊಲೇಟ್ ರೈಲು ; ಇದು ಒಲಿಂಪಿಕ್ ಈಜುಕೊಳಕ್ಕಿಂತ ಉದ್ದವಿದೆ…!

ನಾವು ಸಾಮಾನ್ಯವಾಗಿ ಚಾಕೊಲೇಟ್ ಎಂದರೆ ಪುಟ್ಟ ಬಾರ್‌ಗಳು, ಟ್ರಫಲ್ಸ್ ಅಥವಾ ಸುಂದರವಾದ ಕೇಕ್‌ಗಳನ್ನು ಕಲ್ಪಿಸಿಕೊಳ್ಳುತ್ತೇವೆ. ಆದರೆ, ಇಟಲಿಯ ಮಿಲನ್‌ನಲ್ಲಿ ಚಾಕೊಲೇಟ್ ಕೇವಲ ತಿನ್ನುವ ವಸ್ತುವಾಗಿ ಉಳಿಯದೆ, ಒಂದು ಬೃಹತ್ ಕಲಾಕೃತಿಯಾಗಿ ರೂಪಾಂತರಗೊಂಡಿದೆ. ಹೌದು, ಬರೋಬ್ಬರಿ 55.27 ಮೀಟರ್ (181 ಅಡಿ 3 ಇಂಚು) ಉದ್ದದ ಚಾಕೊಲೇಟ್ ರೈಲು ಈಗ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ! ಗಿನ್ನೆಸ್ … Continued

ಇದು ಭಾರತದ ಅತಿ ನಿಧಾನ ಓಡುವ ರೈಲು ; ಸೈಕಲ್ಲಿಗಿಂತ ನಿಧಾನ ಚಲಿಸುತ್ತದೆ…! 46 ಕಿಮೀ ಕ್ರಮಿಸಲು 5 ತಾಸು ಬೇಕು…! ಯಾವುದು ಗೊತ್ತೆ..?

ಭಾರತವು ಪರ್ವತಗಳಿಂದ ಹಿಡಿದು ಮರುಭೂಮಿ, ದಟ್ಟವಾದ ಕಾಡುಗಳಿಂದ ಹಿಡಿದು ಸಮುದ್ರದ ಮೇಲೆಯೂ ವರೆಗೂ ವಿಸ್ತರಿಸಿರುವ ಬೃಹತ್ ರೈಲ್ವೆ ಜಾಲವನ್ನು ಹೊಂದಿದೆ. ಕೆಲವು ರೈಲುಗಳು ತಮ್ಮ ವೇಗಕ್ಕೆ ಹೆಸರುವಾಸಿಯಾಗಿದ್ದರೆ, ಮತ್ತೆ ಕೆಲವು ಅತಿ ನಿಧಾನವಾಗಿ ಚಲಿಸುವುದಕ್ಕಾಗಿಯೇ ಖ್ಯಾತಿ ಪಡೆದಿವೆ. ಬುಲೆಟ್ ರೈಲುಗಳು ಮತ್ತು ಹೈಪರ್‌ ಲೂಪ್ ರೈಲುಗಳನ್ನು ಪರಿಚಯಿಸುವ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೂ, ಆಮೆ ವೇಗದಲ್ಲಿ … Continued

ಮೊಂತಾ ಚಂಡಮಾರುತ : 72 ರೈಲುಗಳ ಸಂಚಾರ ರದ್ದು, ಹಲವು ವಿಮಾನಗಳ ಸಂಚಾರ ಸ್ಥಗಿತ

ವಿಶಾಖಪಟ್ಟಣಂ: ‘ಮೊಂತಾ’ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಯನ್ನು ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ, ರೈಲ್ವೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ72ಕ್ಕೂ ಹೆಚ್ಚು ಪ್ಯಾಸೆಂಜರ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದಾರೆ. ಈ ರದ್ದತಿಯು ಅಕ್ಟೋಬರ್ 28 ಮತ್ತು 29ರ ಮಧ್ಯೆ ಜಾರಿಯಲ್ಲಿರಲಿದ್ದು, ವಿಜಯವಾಡ, ರಾಜಮಂಡ್ರಿ, ಕಾಕಿನಾಡ, ವಿಶಾಖಪಟ್ಟಣಂ ಮತ್ತು ಭೀಮಾವರಂ ಮಾರ್ಗಗಳ ಪ್ರಮುಖ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಹವಾಮಾನ … Continued

ರೈಲಿಗೆ ತಲೆಕೊಟ್ಟು ಕಾರ್ಕಳ ಮಾಜಿ ಶಾಸಕರ ಪುತ್ರ ಆತ್ಮಹತ್ಯೆ

ಉಡುಪಿ : ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ದಿ.ಗೋಪಾಲ ಭಂಡಾರಿ ಪುತ್ರ ಸುದೀಪ ಭಂಡಾರಿ ಪುತ್ರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸುದೀಪ ಭಂಡಾರಿ ಅವರು ಹೆಬ್ರಿಯಲ್ಲಿ ವೈನ್ ಶಾಪ್ ನಿರ್ವಹಿಸುತ್ತಿದ್ದದ್ದರು ಎನ್ನಲಾಗಿದೆ. ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಕುಟುಂಬವು … Continued

ʼಹುಬ್ಬಳ್ಳಿ-ಜೋಧಪುರʼ ನೇರ ರೈಲು ಸಂಚಾರಕ್ಕೆ ಸಮ್ಮತಿ

ನವದೆಹಲಿ: ಕೇಂದ್ರ ಸರ್ಕಾರ ಗಣೇಶ ಹಬ್ಬದ ವೇಳೆ ʼಹುಬ್ಬಳ್ಳಿ-ಜೋಧಪುರʼ ನೇರ ರೈಲು ಸಂಚಾರಕ್ಕೆ ಅಸ್ತು ಎಂದು ಹೇಳಿದೆ. ʼಹುಬ್ಬಳ್ಳಿ-ಜೋಧಪುರʼ ವಿಶೇಷ ರೈಲು ಸೆಪ್ಟೆಂಬರ್‌ ತಿಂಗಳಿನಿಂದಲೇ ಸಂಚಾರ ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಪ್ರಸ್ತುತ ವಿಶೇಷ ರೈಲಾಗಿರುವ ಇದನ್ನು ಮುಂದಿನ ದಿನಗಳಲ್ಲಿ ನಿಯತಕಾಲಿಕವಾಗಿ ಪರಿವರ್ತನೆಗೊಳಿಸುವ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ … Continued

ವೀಡಿಯೊ..| ರೈಲಿನ ಹವಾನಿಯಂತ್ರಣದ ಬಗ್ಗೆ ದೂರು ನೀಡಿದ್ರೆ ತಪಾಸಣೆ ವೇಳೆ ಎಸಿ ಡಕ್ಟ್‌ನಲ್ಲಿ ಮದ್ಯದ ಬಾಟಲಿಗಳು ಪತ್ತೆ…!

ನವದೆಹಲಿ: ಲಕ್ನೋ-ಬರೌನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹವಾನಿಯಂತ್ರಣ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ದಿನನಿತ್ಯದ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆಗೆ ಹೋದಾಗ ಎಸಿ-2 ಟೈರ್ ಕೋಚ್‌ನ ಎಸಿ ಡಕ್ಟ್‌ನಲ್ಲಿ ಅಡಗಿಸಿಟ್ಟಿದ್ದ ನೂರಾರು ವಿಸ್ಕಿ ಬಾಟಲಿಗಳು ಪತ್ತೆಯಾಗಿವೆ. ಪ್ರಯಾಣಿಕರು ಕೂಲಿಂಗ್ ವ್ಯವಸ್ಥೆಯಲ್ಲಿನ ತೊಂದರೆ ಇರುವ ವರದಿ ಮಾಡಿದಾಗ ಇದು ಬೆಳಕಿಗೆ ಬಂದಿದೆ. ದೂರಿನ ನಂತರ ತಾಂತ್ರಿಕ ತಪಾಸಣೆ ನಡೆಸಿದಾಗ 32 … Continued

ಕಾರವಾರ | ರೈಲು ಡಿಕ್ಕಿ ಹೊಡೆದು ಚಿರತೆ ಸಾವು

ಕಾರವಾರ: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಚಿರತೆ ಸಾವಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿ ಜಡಿಗದ್ದಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶುಕ್ರವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ರೈಲಿಗೆ ಡಿಕ್ಕಿಯಾಗಿ ಚಿರತೆ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ. ಸುಮಾರು 8 ವರ್ಷದ ಗಂಡು ಚಿರತೆ ಹಲವು ದಿನಗಳಿಂದ ತೋಡೂರು … Continued

ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ…: ಹಬ್ಬದ ಸೀಸನ್‌ ನಲ್ಲಿ ರಿಟರ್ನ್ ಟಿಕೆಟ್‌ ಮೇಲೆ ಭಾರಿ ರಿಯಾಯಿತಿ ಘೋಷಿಸಿದ ರೈಲ್ವೆ

ನವದೆಹಲಿ : ಹಬ್ಬದ ಋತುವಿನ ಜನದಟ್ಟಣೆ ಕಡಿಮೆ ಮಾಡಲು ಮತ್ತು ರೈಲುಗಳ ಗರಿಷ್ಠ ಬಳಕೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ರೈಲ್ವೆಯು ನೂತನವಾದ ‘ರೌಂಡ್ ಟ್ರಿಪ್ ಪ್ಯಾಕೇಜ್ ಯೋಜನೆ’ಯನ್ನು ಪರಿಚಯಿಸಿದೆ, ಇದು ರಿಟರ್ನ್ ಟಿಕೆಟ್‌ಗಳ ಮೇಲೆ 20%ರ ವರೆಗೆ ರಿಯಾಯಿತಿ ನೀಡುತ್ತದೆ. ಈ ಯೋಜನೆಯನ್ನು ಪ್ರಸ್ತುತ ಪ್ರಾಯೋಗಿಕ ಆಧಾರದ ಮೇಲೆ ಜಾರಿಗೆ ತರಲಾಗುತ್ತಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, … Continued