ಬೆಳಗಾವಿ | ಮಕ್ಕಳ ಮಾರಾಟ ಜಾಲ ಪತ್ತೆ ; 4.50 ಲಕ್ಷ ರೂ.ಗಳಿಗೆ ಮಾರಾಟವಾಗಿದ್ದ ಮಗುವಿನ ರಕ್ಷಣೆ

ಬೆಳಗಾವಿ: ಬೆಳಗಾವಿಯಲ್ಲಿ ಸುಮಾರು ಒಂದು ವರ್ಷ 10 ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಸಾಂಗ್ಲಿ ಮೂಲದ ದಂಪತಿ ಗೋವಾ ಮೂಲದ ವ್ಯಕ್ತಿಗೆ ಮಗುವನ್ನು ಸುಮಾರು 4.50 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು ಎಂದು  ಹೇಳಲಾಗಿದ್ದು, ಬೆಳಗಾವಿಯ ಮಕ್ಕಳ ರಕ್ಷಣಾ ಸಹಾಯವಾಣಿಗೆ ಬಂದ ಕರೆ ಬಂದ ನಂತರ ಪ್ರಕರಣ ಬೆಳಕಿಗೆ … Continued

ಗೂಗಲ್ ಮ್ಯಾಪ್ ನಂಬಿ ದಾರಿತಪ್ಪಿ ಖಾನಾಪುರ ಕಾಡಿನಲ್ಲಿ ರಾತ್ರಿ ಕಳೆದ ಕುಟುಂಬ…!

ಬೆಳಗಾವಿ : ಗೂಗಲ್ ಮ್ಯಾಪ್ ಆಗಾಗ ಪ್ರಯಾಣಿಕರ ಹಾದಿಯನ್ನು ತಪ್ಪಿಸಿ ಅನಾಹುತ ನಡೆಯುವ ಘಟನೆ ವರದಿಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲೂ ಗೂಗಲ್ ಪ್ರಯಾಣಿಕರ ಹಾದಿ ತಪ್ಪಿಸಿ ಅವರು ರಾತ್ರಿಯಿಡೀ ಕಾಡಿನಲ್ಲೇ ಕಳೆದ ಘಟನೆ ಬೆಳಕಿಗೆ ಬಂದಿದೆ. ಗೂಗಲ್ ಮ್ಯಾಪ್ ನಂಬಿದ್ದ ಹಾದಿ ತಪ್ಪಿ ಕುಟುಂಬವೊಂದು ಕಾಡಿನಲ್ಲೇ ರಾತ್ರಿ ಕಳೆದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ. ಬಿಹಾರದ … Continued

ಐರನ್‌ ಮ್ಯಾನ್‌ ಸ್ಪರ್ಧೆ ಪೂರ್ಣಗೊಳಿಸಿದ ತೇಜಸ್ವಿ ಸೂರ್ಯ: ಕಠಿಣ ಸವಾಲು ಜಯಿಸಿದ ಮೊದಲ ಸಂಸದ

ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಎಂಡ್ಯೂರೆನ್ಸ್ ರೇಸ್‌ ಅನ್ನು ಪೂರ್ಣಗೊಳಿಸಿದ ಮೊದಲ ಜನಪ್ರತಿನಿಧಿಯಾಗಿ ಹೊರಹೊಮ್ಮಿದ್ದಾರೆ. ಸ್ಫರ್ಧೆಯು 1.9 ಕಿಮೀ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21.1 ಕಿ.ಮೀ ಓಟ ಹೀಗೆ 3 ವಿಭಾಗಗಳಲ್ಲಿ ನಡೆಯಿತು. ಇಡೀ ಈವೆಂಟ್‌ನಲ್ಲಿ ಭಾಗವಹಿಸುವವರು 113 ಕಿಲೋಮೀಟರ್ (ಅಥವಾ 70.3 … Continued

ಮಂಗಳೂರು-ಮಡಗಾಂವ ಜಂಕ್ಷನ್ ನಡುವೆ ವಿಶೇಷ ರೈಲು

ಮಂಗಳೂರು: ಮಂಗಳೂರು-ಮಡಗಾಂವ ಜಂಕ್ಷನ್ ನಡುವೆ ಟಿಕೆಟ್ ಕಾಯ್ದಿರಿಸುವಿಕೆಗೆ ಅವಕಾಶ ಇಲ್ಲದ ವಿಶೇಷ ಮೆಮು ರೈಲ್ವೆ ಸೇವೆಯನ್ನು ಇದೀಗ ಕೊಂಕಣ ರೈಲ್ವೆಯು ಮೂರು ದಿನಗಳ ಕಾಲ ಒದಗಿಸಲಿದೆ. ಈ ವಿಶೇಷ ರೈಲು ಜುಲೈ 20, 21 ಮತ್ತು 22ರಂದು ಈ ಎರಡು ಜಂಕ್ಷನ್‌ಗಳ ನಡುವೆ ಸಂಚರಿಸಲಿದೆ. ಬೆಳಗ್ಗೆ 6ಕ್ಕೆ ಮಡಗಾಂವ ಜಂಕ್ಷನ್ ನಿಂದ ಹೊರಡುವ ರೈಲು ಮಧ್ಯಾಹ್ನ … Continued

ಮಹದಾಯಿ: ಮಳೆಯ ನಡುವೆ ಚೋರ್ಲಾ ಘಾಟ್ ಪ್ರದೇಶಕ್ಕೆ ಭೇಟಿ ನೀಡಿದ ಕೇಂದ್ರ ಪ್ರವಾಹ ತಂಡ

ಬೆಳಗಾವಿ : ಭಾರಿ ಮಳೆಯ ನಡುವೆ ಮಹದಾಯಿ ಜಲಾನಯನ ಪ್ರದೇಶಕ್ಕೆ ಇಂದು, ಭಾನುವಾರ (ಜುಲೈ 7) ಕೇಂದ್ರದ ಪ್ರವಾಹ ತಂಡದ ಸದಸ್ಯರು ಭೇಟಿ ನೀಡಿದ್ದಾರೆ. ಕರ್ನಾಟಕ ಮತ್ತು ಗೋವಾ ಗಡಿಯ ಚೋರ್ಲಾ ಘಾಟ್ ಪ್ರದೇಶ ಹಾಗೂ ಹರತಾಳ ನಾಲೆ ಬಳಿ ಮಳೆಯಲ್ಲಿ ತಂಡದ ಸದಸ್ಯರು ವೀಕ್ಷಣೆ ನಡೆಸಿದರು. ಕೇಂದ್ರದ ಪ್ರವಾಹ ತಂಡದ ಸದಸ್ಯರಿಗೆ ನೀರಾವರಿ ಇಲಾಖೆಯ … Continued

ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

1961 ರಲ್ಲಿ ಪೋರ್ಚುಗೀಸ್ ಆಳ್ವಿಕೆಯಿಂದ ವಿಮೋಚನೆಗೊಂಡ ನಂತರ ಗೋವಾ ಮೇಲೆ ಭಾರತೀಯ ಸಂವಿಧಾನವನ್ನು “ಬಲವಂತವಾಗಿ” ಹೇರಲಾಗಿದೆ ಎಂದು ಕಾಂಗ್ರೆಸ್‌ನ ದಕ್ಷಿಣ ಗೋವಾದ ಅಭ್ಯರ್ಥಿ ವಿರಿಯಾಟೊ ಫೆರ್ನಾಂಡಿಸ್ ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. 2019 ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜೊತೆಗಿನ ಸಂಭಾಷಣೆಯನ್ನು ಉಲ್ಲೇಖಿಸಿ ಫೆರ್ನಾಂಡಿಸ್ ಹೇಳಿಕೆಗಳನ್ನು ನೀಡಿದ್ದಾರೆ. “ನಾವು (ಗಾಂಧಿಯವರೊಂದಿಗಿನ ಸಭೆಯ … Continued

ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ… : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

ಪಣಜಿ: ಲೋಕಸಭೆ ಚುನಾವಣೆ 2024 ಏಪ್ರಿಲ್ 19 ರಂದು ಪ್ರಾರಂಭವಾಗಲಿದ್ದು, ಮೊದಲ ಹಂತದಲ್ಲಿ 102 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಲೋಕಸಭೆ ಅಭ್ಯರ್ಥಿಗಳು ನಾಮಪತ್ರದಲ್ಲಿ ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ದಕ್ಷಿಣ ಗೋವಾ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಪಲ್ಲವಿ ಡೆಂಪೋ ಸುಮಾರು 1400 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ತನ್ನ 119 ಪುಟಗಳ ಅಫಿಡವಿಟ್‌ನಲ್ಲಿ, ಡೆಂಪೊ ತನ್ನ ಪತಿ … Continued

ಗೋವಾದ ಸರ್ವಿಸ್ ಅಪಾರ್ಟಮೆಂಟ್ ನಲ್ಲಿ ಮಗುವಿನ ಮೃತದೇಹದ ಜೊತೆ 19 ಗಂಟೆ ಕಳೆದಿದ್ದ ಸಿಇಒ ಸುಚನಾ ಸೇಠ್‌

ಪಣಜಿ: ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿದ ಆರೋಪಿ, ಬೆಂಗಳೂರಿನ ಸ್ಟಾರ್ಟ್‌ ಕಂಪನಿಯ ಸಿಇಒ ಸುಚನಾ ಸೇಠ್ ಘಟನೆ ನಡೆಯುವ ಮೂರು ದಿನಗಳ ಮೊದಲು ಗೋವಾಕ್ಕೆ ತೆರಳಿದ್ದಳು. ಪೊಲೀಸ್ ಮೂಲಗಳ ಪ್ರಕಾರ, ಸುಚನಾ ಸೇಠ್ ದಕ್ಷಿಣ ಗೋವಾದಲ್ಲಿ – ಡಿಸೆಂಬರ್ 31 ರಿಂದ ಜನವರಿ 4ರ ವರೆಗೆ ಸರ್ವೀಸ್ ಅಪಾರ್ಟ್ಮೆಂಟ್‌ನಲ್ಲಿ ಐದು … Continued

ಸಿಇಒನಿಂದ ಮಗನ ಕೊಲೆ ಪ್ರಕರಣ : ಐದು ವಾರಗಳಿಂದ ಮಗನ ಭೇಟಿಗೆ ಸುಚನಾ ಸೇಠ್‌ ಅವಕಾಶ ನೀಡಿರಲಿಲ್ಲ ; ಪತಿ ಹೇಳಿಕೆ

ಪಣಜಿ: ನಾಲ್ಕು ವರ್ಷದ ಮಗುವನ್ನು ಕೊಂದ ಆರೋಪ ಹೊತ್ತಿರುವ ಬೆಂಗಳೂರಿನ ಎಐ ಸ್ಟಾರ್ಟ್‌ಅಪ್ ಸಿಇಒ ಸುಚನಾ ಸೇಠ್ ಅವರಿಂದ ಬೇರ್ಪಟ್ಟ ಪತಿ ಕಳೆದ ಐದು ಭಾನುವಾರಗಳಿಂದ ತಮ್ಮ ಮಗುವನ್ನು ಭೇಟಿಯಾಗಲು ಅವಕಾಶ ನೀಡಿರಲಿಲ್ಲ ಎಂದು ಶನಿವಾರ ಗೋವಾ ಪೊಲೀಸರಿಗೆ ಹೇಳಿದ್ದಾರೆ. ವೆಂಕಟ ರಾಮನ್ ಅವರು ವಿಚಾರಣೆಯ ಭಾಗವಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಬೆಂಗಳೂರಿನಿಂದ ಮಧ್ಯಾಹ್ನ ಗೋವಾದ … Continued

ವೀಡಿಯೊ…| ಪ್ರಧಾನಿ ಮೋದಿಯಿಂದ ಅಟಲ್ ಸೇತು ಉದ್ಘಾಟನೆ : ಭಾರತದ ಅತಿ ಉದ್ದದ ಸಮುದ್ರ ಸೇತುವೆಯ ಬಗ್ಗೆ ತಿಳಿದುಕೊಳ್ಳಬೇಕಾದದ್ದು….

ಮುಂಬೈ: ಭಾರತದ ಅತಿ ಉದ್ದದ ಸಮುದ್ರ ಸೇತುವೆ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಅಥವಾ ಅಟಲ್ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ. ಈ ಸೇತುವೆಗೆ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲಾಗಿದೆ. 21.8 ಕಿಮೀ ಉದ್ದ ಮತ್ತು ಆರು ಲೇನ್‌ಗಳನ್ನು ಹೊಂದಿರುವ ಈ ಸೇತುವೆಯನ್ನು … Continued