ಇಂದಿನಿಂದ ಗೋಕರ್ಣ ಪರ್ತಗಾಳಿ ಮಠದಲ್ಲಿ ಸಾರ್ಧ ಪಂಚಶತಮಾನೋತ್ಸವ ಕಾರ್ಯಕ್ರಮ ; ನ.28ರಂದು ಪ್ರಧಾನಿಯಿಂದ 77 ಅಡಿ ಎತ್ತರದ ಭಗವಾನ್‌ ಶ್ರೀರಾಮನ ಪ್ರತಿಮೆ ಅನಾವರಣ

ಕಾರವಾರ: ಗೋವಾದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷಾಚರಣೆ ಅಂಗವಾಗಿ ಶ್ರೀಮಠದಲ್ಲಿ ನವೆಂಬರ್ 27ರಿಂದ ಡಿಸೆಂಬರ್ 7ರವರೆಗೆ ನಡೆಯಲಿರುವ 11 ದಿನಗಳ ಸಾರ್ಧ ಪಂಚಶತಮಾನೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. 11 ದಿನಗಳ … Continued

ವೀಡಿಯೊ…| ಕಾರಿನೊಳಗಿದ್ದ ಇಲಿ ಹಿಡಿಯಲು ಕಾರಿನ ಬಂಪರ್ ಅನ್ನೇ ಕಚ್ಚಿ ಎಳೆದು ಕಿತ್ತು ಹಾಕಿದ ನಾಯಿ ; ಮುಂದಾಗಿದ್ದು..

ಉತ್ತರ ಗೋವಾದ ಒಂದು ಸಣ್ಣ ಘಟನೆ ಇದೀಗ ಆನ್‌ಲೈನ್‌ನಲ್ಲಿ ಎಲ್ಲರ ಚರ್ಚಾ ವಿಷಯವಾಗಿದೆ. ಬೀದಿ ನಾಯಿಯೊಂದು (Stray Dog) ಅನಿರೀಕ್ಷಿತವಾದ ಕೆಲಸವನ್ನು ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಕಾರಿನೊಳಗಿದ್ದ ಇಲಿಯನ್ನು ಹಿಡಿಯಲು ಅದರ ಪಟ್ಟು ಹಿಡಿದ ಪ್ರಯತ್ನದಿಂದಾಗಿ ಇಡೀ ಕಾರಿನ ಬಂಪರ್ ಕಿತ್ತುಬಂದಿದ್ದು, ಈ ವೀಡಿಯೊ ವೈರಲ್‌ ಆಗಿದೆ. ನಾಯಿಯ ಈ ಭಾರಿ ಏಕಾಗ್ರತೆ ಹಾಗೂ ಪಟ್ಟು … Continued

ಹೃದಯ ಸ್ತಂಭನ ; ಗೋವಾ ಕೃಷಿ ಸಚಿವ, ಮಾಜಿ ಸಿಎಂ ರವಿ ನಾಯ್ಕ ನಿಧನ

ಪಣಜಿ: ಗೋವಾದ ಕೃಷಿ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ಹಿರಿಯ ರಾಜಕಾರಣಿ ರವಿ ನಾಯ್ಕ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಕುಟುಂಬ ಮೂಲಗಳು ಪಿಟಿಐಗೆ ನೀಡಿರುವ ಮಾಹಿತಿಯ ಪ್ರಕಾರ, ಬುಧವಾರ ಮುಂಜಾನೆ ಪಣಜಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ತಮ್ಮ ಸ್ವಗ್ರಾಮದಲ್ಲಿ ಅವರಿಗೆ ಹೃದಯಾಘಾತವಾಯಿತು. ತಕ್ಷಣವೇ ಅವರನ್ನು ಪೊಂಡಾದಲ್ಲಿರುವ ಖಾಸಗಿ ಆಸ್ಪತ್ರೆಗೆ … Continued

ಮದುವೆಯಾಗಲು ಗೋವಾಕ್ಕೆ ಹೋಗಿದ್ದ ಬೆಂಗಳೂರಿನ ಜೋಡಿ ; ಆದ್ರೆ ಕನಸಿನ ಪ್ರವಾಸ ಪ್ರೇಯಸಿ ಕೊಲೆಯಲ್ಲಿ ಅಂತ್ಯ

ಪಣಜಿ : ಮನಕಲಕುವ ಘಟನೆಯೊಂದರಲ್ಲಿ, ಮದುವೆಯಲ್ಲಿ ಕೊನೆಗೊಳ್ಳಬೇಕಿದ್ದ ಗೋವಾ ಪ್ರವಾಸವು ಪ್ರೇಯಸಿಯ ಕೊಲೆಯಲ್ಲಿ ಅಂತ್ಯ ಕಂಡಿದೆ. ತನ್ನ ಪ್ರೇಯಸಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ 22 ವರ್ಷದ ಯುವಕನನ್ನು ಬಂಧಿಸಲಾಗಿದೆ. ದಕ್ಷಿಣ ಗೋವಾದ ಅರಣ್ಯ ಪ್ರದೇಶದಲ್ಲಿ ಯುವತಿಯ ಶವ ಪತ್ತೆಯಾಗಿದ್ದು ಗೋವಾಕ್ಕೆ ಮದುವೆಯಾಗಬೇಕೆಂದು ಬಂದಿದ್ದ ಯುವತಿಯ ಬದುಕು ದುರಂತದಲ್ಲಿ ಕೊನೆಗೊಂಡಿತು. ಉತ್ತರ ಬೆಂಗಳೂರಿನ ನಿವಾಸಿ … Continued

ಅಪರೂಪದ ಫುಟ್ಬಾಲ್‌ ಪಂದ್ಯ | ಪರಿಣತರಂತೆ ಹುಡುಗನೊಂದಿಗೆ ಫುಟ್ಬಾಲ್ ಆಡುವ ಕಾಗೆ ; ಬೆರಗಾದ ಇಂಟರ್ನೆಟ್‌-ವೀಡಿಯೊ ವೀಕ್ಷಿಸಿ

ಕಾಗೆಯೊಂದು, ತನ್ನ ಕೊಕ್ಕನ್ನು ಬಳಸಿ ಚೆಂಡನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಕಳುಹಿಸುತ್ತಾ ಹುಡುಗನೊಟ್ಟಿಗೆ ಫುಟ್ಬಾಲ್ ಆಡುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಂಚಲನ ಮೂಡಿಸಿದೆ.ದಕ್ಷಿಣ ಗೋವಾದಲ್ಲಿ ಕಾಗೆಯು ಹುಡುಗನ ಜೊತೆ ಸಣ್ಣ ಚೆಂಡಿನಲ್ಲಿ ಫುಟ್ಬಾಲ್ ಆಡುವ ಹೃದಯಸ್ಪರ್ಶಿ ವೀಡಿಯೊ ಪ್ರಸ್ತುತ ಇಂಟರ್ನೆಟ್‌ ಅನ್ನು ಬೆರಗಾಗಿಸಿದೆ. ಈ ಪಂದ್ಯವನ್ನು ಅತ್ಯಂತ ಮುದ್ದಾದ ಪಂದ್ಯ ಹಾಗೂ ಅಪರೂಪದಲ್ಲಿ ಅಪರೂಪದ ಪಂದ್ಯ ಎಂದು … Continued

ಉತ್ತರ ಗೋವಾದ ಲೈರೈ ದೇವಿ ಜಾತ್ರೆಯಲ್ಲಿ ಕಾಲ್ತುಳಿತ : 7 ಸಾವು, 50 ಕ್ಕೂ ಹೆಚ್ಚು ಜನರಿಗೆ ಗಾಯ

ಪಣಜಿ : ಉತ್ತರ ಗೋವಾದ ಶಿರ್ಗಾಂವ್ ಗ್ರಾಮದಲ್ಲಿ ಲೈರೈ ದೇವಿ ವಾರ್ಷಿಕ ಜಾತ್ರೆಯ ವೇಳೆ ಶನಿವಾರ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ದೇವಾಲಯದಲ್ಲಿ ಶತಮಾನಗಳಷ್ಟು ಹಳೆಯದಾದ ಆಚರಣೆಯನ್ನು ವೀಕ್ಷಿಸಲು ಮತ್ತು ಅದರಲ್ಲಿ ಭಾಗವಹಿಸಲು ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದಾಗ ನೂಕುನುಗ್ಗಲು … Continued

ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕ ಪಂಡಿತ ಪ್ರಭಾಕರ ಕಾರೇಕರ ನಿಧನ

ಮುಂಬೈ : ಖ್ಯಾತ ಹಿಂದೂಸ್ತಾನಿ ಸಂಗೀತದ ಗಾಯಕ ಪಂಡಿತ ಪ್ರಭಾಕರ ಕಾರೇಕರ ಎಂದು ಅವರ ಕುಟುಂಬ ತಿಳಿಸಿದೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಪಂಡಿತ ಕಾರೇಕರ ಅವರು ಮುಂಬೈನ ಶಿವಾಜಿ ಪಾರ್ಕ್ ಪ್ರದೇಶದ ತಮ್ಮ ನಿವಾಸದಲ್ಲಿ ಬುಧವಾರ ಕೊನೆಯುಸಿರೆಳೆದರು. ಕಾರೇಕರ್ ಅವರು ಮೂವರು ಪುತ್ರರನ್ನು ಅಗಲಿದ್ದಾರೆ. ಪಂಡಿತ ಕಾರೇಕರ ಅವರ ನಿಧನವು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ … Continued

ಬೆಳಗಾವಿ | ಮಕ್ಕಳ ಮಾರಾಟ ಜಾಲ ಪತ್ತೆ ; 4.50 ಲಕ್ಷ ರೂ.ಗಳಿಗೆ ಮಾರಾಟವಾಗಿದ್ದ ಮಗುವಿನ ರಕ್ಷಣೆ

ಬೆಳಗಾವಿ: ಬೆಳಗಾವಿಯಲ್ಲಿ ಸುಮಾರು ಒಂದು ವರ್ಷ 10 ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಸಾಂಗ್ಲಿ ಮೂಲದ ದಂಪತಿ ಗೋವಾ ಮೂಲದ ವ್ಯಕ್ತಿಗೆ ಮಗುವನ್ನು ಸುಮಾರು 4.50 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿತ್ತು ಎಂದು  ಹೇಳಲಾಗಿದ್ದು, ಬೆಳಗಾವಿಯ ಮಕ್ಕಳ ರಕ್ಷಣಾ ಸಹಾಯವಾಣಿಗೆ ಬಂದ ಕರೆ ಬಂದ ನಂತರ ಪ್ರಕರಣ ಬೆಳಕಿಗೆ … Continued

ಗೂಗಲ್ ಮ್ಯಾಪ್ ನಂಬಿ ದಾರಿತಪ್ಪಿ ಖಾನಾಪುರ ಕಾಡಿನಲ್ಲಿ ರಾತ್ರಿ ಕಳೆದ ಕುಟುಂಬ…!

ಬೆಳಗಾವಿ : ಗೂಗಲ್ ಮ್ಯಾಪ್ ಆಗಾಗ ಪ್ರಯಾಣಿಕರ ಹಾದಿಯನ್ನು ತಪ್ಪಿಸಿ ಅನಾಹುತ ನಡೆಯುವ ಘಟನೆ ವರದಿಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲೂ ಗೂಗಲ್ ಪ್ರಯಾಣಿಕರ ಹಾದಿ ತಪ್ಪಿಸಿ ಅವರು ರಾತ್ರಿಯಿಡೀ ಕಾಡಿನಲ್ಲೇ ಕಳೆದ ಘಟನೆ ಬೆಳಕಿಗೆ ಬಂದಿದೆ. ಗೂಗಲ್ ಮ್ಯಾಪ್ ನಂಬಿದ್ದ ಹಾದಿ ತಪ್ಪಿ ಕುಟುಂಬವೊಂದು ಕಾಡಿನಲ್ಲೇ ರಾತ್ರಿ ಕಳೆದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದಿದೆ. ಬಿಹಾರದ … Continued

ಐರನ್‌ ಮ್ಯಾನ್‌ ಸ್ಪರ್ಧೆ ಪೂರ್ಣಗೊಳಿಸಿದ ತೇಜಸ್ವಿ ಸೂರ್ಯ: ಕಠಿಣ ಸವಾಲು ಜಯಿಸಿದ ಮೊದಲ ಸಂಸದ

ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಎಂಡ್ಯೂರೆನ್ಸ್ ರೇಸ್‌ ಅನ್ನು ಪೂರ್ಣಗೊಳಿಸಿದ ಮೊದಲ ಜನಪ್ರತಿನಿಧಿಯಾಗಿ ಹೊರಹೊಮ್ಮಿದ್ದಾರೆ. ಸ್ಫರ್ಧೆಯು 1.9 ಕಿಮೀ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21.1 ಕಿ.ಮೀ ಓಟ ಹೀಗೆ 3 ವಿಭಾಗಗಳಲ್ಲಿ ನಡೆಯಿತು. ಇಡೀ ಈವೆಂಟ್‌ನಲ್ಲಿ ಭಾಗವಹಿಸುವವರು 113 ಕಿಲೋಮೀಟರ್ (ಅಥವಾ 70.3 … Continued