ವಿಡಿಯೋ | 443 ಮೀಟರ್ ಎತ್ತರದ ಎಂಪೈರ್ ಸ್ಟೇಟ್ ಕಟ್ಟಡದ ತುತ್ತತುದಿಯ ಆ್ಯಂಟೆನಾ ಏರಿ ಪ್ರೇಮ ನಿವೇದನೆ ; ಬಂಧನ

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಗರದ ಪ್ರಸಿದ್ಧ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ ಅತ್ಯುನ್ನತ ಟವರ್‌ ಏರಿ, ಅಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿರುವಂತೆ ಕಾಣಿಸಿಕೊಂಡ ರಷ್ಯಾ ಮೂಲದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. 32 ವರ್ಷದ ಇವಾನ್ ಬೀರ್ಕಸ್ ಅವರು 33 ವರ್ಷದ ಆಂಜೆಲಾ ನಿಕೊಲಾವ್ ಅವರಿಗೆ ಮೊಣಕಾಲೂರಿ ಉಂಗುರ ನೀಡಿ ವಿವಾಹ ಪ್ರಸ್ತಾಪ ಮಾಡಿದ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ … Continued

ವಿಡಿಯೊಗಳು | ಬಿಕಾನೇರ್‌ನಲ್ಲಿ ಪ್ರಳಯಸದೃಶ ಧೂಳಿನ ಬಿರುಗಾಳಿ ; ನೋಡನೋಡುತ್ತಿದ್ದಂತೆ ಹಗಲು ಕತ್ತಲಾಗಿ ಪರಿವರ್ತನೆ…!

ಬಿಕಾನೇರ್: ರಾಜಸ್ಥಾನದ ಬಿಕಾನೇರ್ ನಗರದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ಧೂಳಿನ ಬಿರುಗಾಳಿಯು ಇಡೀ ನಗರವನ್ನೇ ನಡುಗಿಸಿದೆ. ದಟ್ಟವಾದ ಧೂಳಿನ ಮೋಡಗಳು ಇಡೀ ಆಕಾಶವನ್ನು ಆವರಿಸಿದ್ದರಿಂದ, ನೋಡನೋಡುತ್ತಿದ್ದಂತೆಯೇ ಹಗಲು ರಾತ್ರಿಯಂತೆ ಕಂಡುಬಂದಿದೆ. ಬೃಹತ್ ಗಾತ್ರದ ಹಳದಿ ಬಣ್ಣದ ಧೂಳಿನ ಗೋಡೆಯೊಂದು ನಗರದತ್ತ ನುಗ್ಗಿ ಬರುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಳಯಸದೃಶ ವಾತಾವರಣವನ್ನು ನೆನಪಿಸುವಂತಿದ್ದವು. … Continued

ವಿಡಿಯೋ | ಭೀಕರ ಬೇಸಿಗೆಗೆ ತತ್ತರಿಸಿದ ವನ್ಯಜೀವಿಗಳು : ನೀರಿಗಾಗಿ ಸಾರಿಗೆ ಬಸ್ಸನ್ನೇ ತಡೆದು ನಿಲ್ಲಿಸಿದ ಕೋತಿಗಳ ಹಿಂಡು !

ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ನಡೆದ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು, ತೀವ್ರ ಬೇಸಿಗೆಯ ಶಾಖವು ವನ್ಯಜೀವಿಗಳ ಮೇಲೆ ಬೀರುತ್ತಿರುವ ಭೀಕರ ಪರಿಣಾಮವನ್ನು ಕಣ್ಣಿಗೆ ಕಟ್ಟುವಂತೆ ಮಾಡಿದೆ. ಯವತ್ಮಾಲ್ ಜಿಲ್ಲೆಯ ಪುಸಾದ್ ಬಳಿಯ ಖಂಡಾಲಾ ಘಾಟ್‌ನಲ್ಲಿ, ಬಾಯಾರಿಕೆಯಿಂದ ತತ್ತರಿಸಿದ್ದ ಮಂಗಗಳು ನೀರಿಗಾಗಿ ಚಲಿಸುತ್ತಿದ್ದ ರಾಜ್ಯ ಸಾರಿಗೆ ಬಸ್ಸನ್ನು ತಡೆದು ನಿಲ್ಲಿಸಿದ ಘಟನೆ ಪ್ರಯಾಣಿಕರನ್ನು ಭಾವುಕರನ್ನಾಗಿಸಿದೆ. ಬುಧವಾರ ಮಧ್ಯಾಹ್ನ ಸುಮಾರು … Continued

ವೀಡಿಯೊ | ಚನ್ನಪಟ್ಟಣ : ಬೈಕ್‌ ಸವಾರನ ಮೇಲೆ ಕರಡಿ ದಾಳಿ

ರಾಮನಗರ: ರಾಮನಗರ (ಬೆಂಗಳೂರು ಗ್ರಾಮಾಂತರ) ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಕಾಡು ಕರಡಿಯೊಂದು ಜನವಸತಿ ಪ್ರದೇಶಕ್ಕೆ ನುಗ್ಗಿ, ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಘಟನೆ ನಡೆದ ಕೆಲವು ಗಂಟೆಗಳ ನಂತರ, ಗ್ರಾಮಸ್ಥರ ಗುಂಪೊಂದು ಕರಡಿಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದೆ. ಗ್ರಾಮಸ್ಥರು … Continued

ವೀಡಿಯೊ..| ಪೊಲೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕನ ಅಪಹರಣ, ಡ್ರಗ್ಸ್‌ ನೀಡಿ ಬಲವಂತದ ಮದುವೆ…!

ಸಮಷ್ಟಿಪುರ: ಬಿಹಾರದ ಪೊಲೀಸ್ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕನೊಬ್ಬನನ್ನು ಅಪಹರಿಸಿ, ಮಾದಕ ದ್ರವ್ಯ ನೀಡಿ ಆತನ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪಹರಿಸಲ್ಪಟ್ಟ ನಿತೀಶಕುಮಾರ ಸಂಪೂರ್ಣ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿರುವುದು ಕಂಡುಬಂದಿದೆ. “ವರಮಾಲೆ” ಕಾರ್ಯಕ್ರಮದ ಸಮಯದಲ್ಲಿ … Continued

ಬೆಂಗಳೂರು | ಹಾಡಹಗಲೇ ಯುವಕನನ್ನು ಅಡ್ಡಗಟ್ಟಿ 31 ಲಕ್ಷ ರೂ. ದರೋಡೆ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಹಾಡಹಾಗಲೇ ಸಿನಿಮೀಯ ರೀತಿಯಲ್ಲಿ ವ್ಯಕ್ತಿಯೊಬ್ಬರಿಂದ 31 ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ದೋಚಲಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಲ್ಲಿ ಭಾನುವಾರ (ಫೆಬ್ರವರಿ 1) ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗ್ಯಾಂಗ್, ಬರೋಬ್ಬರಿ … Continued

ವೀಡಿಯೊ | ಬೆಂಗಳೂರು : ಆಭರಣ ಅಂಗಡಿಗೆ ನುಗ್ಗಿ ಗನ್ ತೋರಿಸಿ ಚಿನ್ನಾಭರಣ ಲೂಟಿ

ಬೆಂಗಳೂರು: ಬೆಂಗಳೂರಿನ ಹೊರವಲಯದ ನೆಲಮಂಗಲದಲ್ಲಿರುವ ಆಭರಣ ಅಂಗಡಿಯಲ್ಲಿ ಮಂಗಳವಾರ ಶಸ್ತ್ರಸಜ್ಜಿತ ದರೋಡೆಕೋರರು ಹಗಲು ಹೊತ್ತಿನಲ್ಲಿ ದರೋಡೆ ನಡೆಸಿದ್ದಾರೆ ಎಂದು ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಬಳಿಯ ದಾಸನಪುರದಲ್ಲಿರುವ ರಾಮದೇವ ಜ್ಯುವೆಲ್ಲರಿಯಲ್ಲಿ ಸಂಜೆ ಸುಮಾರು 5:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಅಂಗಡಿಗೆ ಬರುತ್ತಿರುವುದು … Continued

ಫಾರ್ಮಾಸಿಸ್ಟ್ ಆತ್ಮಹತ್ಯೆ ಪ್ರಕರಣ: ವೀಡಿಯೊ ವೈರಲ್ ಮಾಡಿದ ಮೂವರ ಬಂಧನ

ಕಾರವಾರ:  ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ನಡೆದ ಫಾರ್ಮಾಸಿಸ್ಟ್ ರಾಜೀವ ಪಿಕ್ಳೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಮಾಡಿದ ಆರೋಪದ ಮೇಲೆ ಅಂಕೋಲಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆಎಂದು ವರದಿಯಾಗಿದೆ. ಕಾರವಾರ ತಾಲೂಕಿನ ವೈಲವಾಡ ಗ್ರಾಮದ ಸುಭಾಷ, ಹರಿಶ್ಚಂದ್ರ ಮತ್ತು ಅನಿಲ ಎಂಬವರು ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಕಾರವಾರದ … Continued

ವೀಡಿಯೊ | ಈ ಹಸುವಿನ ಜಾಣ್ಮೆ ನೋಡಿ..: ಸಾಧನ ಬಳಸಿ ತನ್ನ ಮೈ ತುರಿಸಿಕೊಳ್ಳುವ ವಿಶ್ವದ ಮೊದಲ ಗೋವು-ವೀಕ್ಷಿಸಿ

ವಿಯೆನ್ನಾ: ಪ್ರಾಣಿ ಸಾಮ್ರಾಜ್ಯದಲ್ಲಿ ಮನುಷ್ಯನಿಗೆ ಅತ್ಯಂತ ಹತ್ತಿರವಾದ ಮತ್ತು ಸಾಧು ಪ್ರಾಣಿಯೆಂದು ಕರೆಸಿಕೊಳ್ಳುವ ಹಸುಗಳು, ಕೇವಲ ಹಾಲು ನೀಡುವುದಕ್ಕಷ್ಟೇ ಸೀಮಿತವಲ್ಲ, ಅವುಗಳ ಬುದ್ಧಿವಂತಿಕೆ ಅಸಾಧಾರಣವಾದುದು ಎಂಬುದನ್ನು ಆಸ್ಟ್ರಿಯಾದ ‘ವೆರೋನಿಕಾ’ ಎಂಬ ಹಸು ಸಾಬೀತುಪಡಿಸಿದೆ. ಕಡ್ಡಿ, ಕುಂಟೆ ಮತ್ತು ಪೊರಕೆಗಳನ್ನು ಬಳಸಿ ತನ್ನ ಮೈ ತಾನೇ ತುರುಸಿಕೊಳ್ಳುವ ಅಥವಾ ಪರಚಿಕೊಳ್ಳುವ ವೆರೋನಿಕಾ ಹಸುವಿನ ವಿಡಿಯೋ ಈಗ ಸಾಮಾಜಿಕ … Continued

ಅಸಭ್ಯ ವೀಡಿಯೊ ವೈರಲ್ ಬೆನ್ನಲ್ಲೇ ಡಿಜಿಪಿ ರಾಮಚಂದ್ರ ರಾವ್ ಅಮಾನತು

ಬೆಂಗಳೂರು: ಕಚೇರಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯರ ಜೊತೆಗಿನ ಅಸಭ್ಯ ವೀಡಿಯೊ ವೈರಲ್ ಆದ ನಂತರರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ (Ramachandra rao) ಅವರನ್ನು ತಕ್ಷಣವೇ ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಸೋಮವಾರ ಮಧ್ಯಾಹ್ನದ (ಜನವರಿ 19) ಹೊತ್ತಿಗೆ 10 ದಿನಗಳ ಕಡ್ಡಾಯ ರಜೆ ಮೇಲೆ … Continued