ಮನೆ ಮುಂದೆಯೇ ಗುಂಡು ಹಾರಿಸಿ ಬಿಜೆಪಿ ನಾಯಕ-ಖ್ಯಾತ ಉದ್ಯಮಿ ಗೋಪಾಲ ಖೇಮ್ಕಾ ಹತ್ಯೆ

ಪಾಟ್ನಾ : ಬಿಹಾರದ ಪಾಟ್ನಾದಲ್ಲಿರುವ ಅವರ ನಿವಾಸದ ಹೊರಗೆ ಬಿಜೆಪಿ ನಾಯಕ ಮತ್ತು ಉದ್ಯಮಿ ಗೋಪಾಲ ಖೇಮ್ಕಾ ಅವರನ್ನು ಶುಕ್ರವಾರ ರಾತ್ರಿ ಗುಂಡಿಕ್ಕಿ ಕೊಲ್ಲಲಾಗಿದೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ಪಣಾಚೆ ಹೋಟೆಲ್ ಪಕ್ಕದಲ್ಲಿರುವ ತಮ್ಮ ಮನೆಗೆ ಅವರು ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ಟ್ವಿನ್ … Continued

ಮೈ ಜುಂ ಎನ್ನುವ ವೀಡಿಯೊ : ಒಮ್ಮೆಗೇ ಧುಮ್ಮಿಕ್ಕಿದ ನೀರಿನ ಝರಿಯಲ್ಲಿ ಜಾರಿಬಿದ್ದ 6 ಮಹಿಳೆಯರು ಸ್ವಲ್ಪದರಲ್ಲೇ ಪಾರು…!

ಗಯಾ: ಬಿಹಾರದ ಗಯಾ ಜಿಲ್ಲೆಯ ಲಂಗುರಿಯಾ ಬೆಟ್ಟದ  ದೊಡ್ಡ ಝರಿಯಲ್ಲಿ ಹಠಾತ್‌ ಹೆಚ್ಚಾದ ನೀರಿನ ರಭಸಕ್ಕೆ ಜಾರಿದ ಆರು ಮಹಿಳೆಯರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ನಡೆದ ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಜಲಮೂಲಗಳ ಬಳಿ ಮಳೆಗಾಲದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಜ್ಞಾಪನೆಯೂ ಆಗಿದೆ. ಸುಮಾರು ಎರಡು … Continued

ವರದಕ್ಷಿಣೆಯಾಗಿ ಕಿಡ್ನಿಯನ್ನೇ ನೀಡು ಎಂದು ಸೊಸೆಗೆ ಹೇಳಿದ ಅತ್ತೆ-ಮಾವ…!

ಪಾಟ್ನಾ:  ಬಿಹಾರದ ಮಹಿಳೆಯೊಬ್ಬರಿಗೆ ಬೈಕ್, ನಗದು ಮತ್ತು ಆಭರಣಗಳನ್ನು ವರದಕ್ಷಿಣೆಯಾಗಿ ತರಲು ಸಾಧ್ಯವಾಗದಿದ್ದರೆ ಅವರ ಪತಿಗೆ ಮೂತ್ರಪಿಂಡ ದಾನ ಮಾಡುವಂತೆ ಅವರ ಅತ್ತೆ-ಮಾವಂದಿರು ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ. ಉತ್ತರ ಬಿಹಾರದ ಮುಜಫರಪುರದಲ್ಲಿ ತಮ್ಮ ಮಗನಿಗೆ ವರದಕ್ಷಿಣೆಯಾಗಿ ಮೂತ್ರಪಿಂಡವನ್ನು ಬೇಡಿಕೆಯಿಟ್ಟ ವಿಚಿತ್ರ ಘಟನೆ ವರದಿಯಾಗಿದೆ. ಈ ಸಂಬಂಧ ಮುಜಫರಪುರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. … Continued

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ; ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಘೋಷಣೆ ; ಬದಲಾಗಲಿದೆಯೇ ಬಿಹಾರ ರಾಜಕೀಯ ಚಿತ್ರಣ..?

ನವದೆಹಲಿ: ಲೋಕ ಜನಶಕ್ತಿ ಪಕ್ಷದ (ರಾಮ ವಿಲಾಸ್) ಮುಖ್ಯಸ್ಥ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಭಾನುವಾರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ “ಜನರು ತಮಗಾಗಿ ನಿರ್ಧರಿಸುವ” ಸ್ಥಾನದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದು ಅವರು ರಾಜ್ಯ ರಾಜಕೀಯಕ್ಕೆ ಮರಳುವ ಬಗ್ಗೆ ವಾರಗಳ ಊಹಾಪೋಹಗಳಿಗೆ ಕೊನೆ ಹಾಡಿದೆ. “ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಯೇ ಎಂದು ಎಲ್ಲರೂ ತಿಳಿದುಕೊಳ್ಳಲು ಬಯಸುತ್ತಾರೆ. … Continued

ಕೊಲೆಯಾದ ವ್ಯಕ್ತಿ ಜೀವಂತವಾಗಿ ಪತ್ತೆ…! 3 ವರ್ಷದಿಂದ ಜೈಲಿನಲ್ಲಿದ್ದ ಕೊಲೆ ಆರೋಪಿ ಬಿಡುಗಡೆ…!!

ಬರೇಲಿ : ರೈಲಿನಲ್ಲಿ ಮೊಬೈಲ್ ಕಳ್ಳತನದ ವಿಚಾರಕ್ಕೆ ನಡೆದ ಜಗಳದಲ್ಲಿ ಕೊಲೆಯಾಗಿದ್ದಾರೆ ಎಂದು ಭಾವಿಸಲಾದ ವ್ಯಕ್ತಿಯೊಬ್ಬರು ಇತ್ತೀಚೆಗೆ ಬಿಹಾರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ….! ಈ ಪ್ರಕರಣದಲ್ಲಿ ಕೊಲೆ ಆಪಾದನೆ ಹೊತ್ತು ಜೈಲು ಸೇರಿದ್ದ ಅಯೋಧ್ಯೆಯ ನಿವಾಸಿಯನ್ನು ಮೂರು ವರ್ಷಗಳ ನಂತರ ಬಿಡುಗಡೆ ಮಾಡಲಾಗಿದೆ. ಅಯೋಧ್ಯೆಯ ಖೇಮಸರಾಯ್ ಗ್ರಾಮದ ಮೂಲದ ನರೇಂದ್ರ ದುಬೆ, ಹತ್ತಿರದ ಶಹಜಹಾನ್‌ಪುರ ಜಿಲ್ಲೆಯ ವ್ಯಾಪ್ತಿಯಲ್ಲಿ … Continued

ವೀಡಿಯೊ..| ಸ್ವಾಗತಿಸಲು ಬಂದ ಐಎಎಸ್‌ ಅಧಿಕಾರಿ ತಲೆ ಮೇಲೆ ಹೂ ಕುಂಡ ಇಟ್ಟು ವಿಚಿತ್ರವಾಗಿ ವರ್ತಿಸಿ ಮತ್ತೊಮ್ಮೆ ಸುದ್ದಿಯಾದ ಬಿಹಾರ ಸಿಎಂ..!

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ತಮ್ಮ ವಿಚಿತ್ರ ವರ್ತನೆಯಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪಾಟ್ನಾದ ಕೃಷಿ ಭವನದಲ್ಲಿ ನಡೆದ ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ಅವರು ವೇದಿಕೆಯನ್ನು ತಲುಪಿದ ತಕ್ಷಣ, ಬಿಹಾರ ಸರ್ಕಾರದ ಕ್ಯಾಬಿನೆಟ್ ತಲೆ ಮೇಲೆ ಹೂ ಕುಂಡ ಇಟ್ಟಿರುವ ಘಟನೆಯ ವೀಡಿಯೊ ಈಗ ಸಾಕಷ್ಟು ಚರೆಗೆ ಗ್ರಾಸವಾಗಿದೆ. ಅವರು ವೇದಿಕೆಗೆ ಬರುತ್ತಿದ್ದಂತೆಯೇ ಹೆಚ್ಚುವರಿ … Continued

ಮದುಮಗನನ್ನು ಮದುವೆ ಮಂಟಪದಿಂದಲೇ ಅಪಹರಿಸಿದ ನೃತ್ಯಗಾರರ ತಂಡ…!

ಮದುವೆಯೊಂದರಲ್ಲಿ ಸಾಂಪ್ರದಾಯಿಕ ಸಂಭ್ರಮಾಚರಣೆಗೆಂದು ಕರೆಸಿದ್ದ ನೃತ್ಯ ತಂಡವು ವರನನ್ನು ಮಂಟಪದಿಂದಲೇ ಅಪಹರಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಈ ಘಟನೆ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸ್ಥಳದಲ್ಲಿದ್ದ ಜನರ ಪ್ರಕಾರ, “ಲೌಂಡಾ ನಾಚ್ ಪಾರ್ಟಿ” – ಸಾಮಾನ್ಯವಾಗಿ ಮದುವೆಗಳಿಗೆ ನೇಮಿಸಿಕೊಳ್ಳುವ ಸಾಂಪ್ರದಾಯಿಕ ನೃತ್ಯ ತಂಡವಾಗಿದ್ದು, ಈ ನೃತ್ಯ … Continued

ಲಾಲು ಕುಟುಂಬದಲ್ಲಿ ಬಿರುಗಾಳಿ ; ಹಿರಿಯ ಮಗನನ್ನು ಆರ್‌ ಜೆಡಿ ಪಕ್ಷ, ಕುಟುಂಬದಿಂದ ಹೊರಹಾಕಿದ ಲಾಲು ಪ್ರಸಾದ ಯಾದವ್‌…!

ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸ್ಥಾಪಕ ಹಾಗೂ ವರಿಷ್ಠ ನೇತಾರ ಲಾಲು ಪ್ರಸಾದ ಯಾದವ್ ಭಾನುವಾರ ತಮ್ಮ ಹಿರಿಯ ಪುತ್ರ ತೇಜಪ್ರತಾಪ ಯಾದವ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದ್ದಾರೆ. ಅಲ್ಲದೆ, ತೇಜಪ್ರತಾಪ ಅವರನ್ನು ಕುಟುಂಬದಿಂದಲೂ ಹೊರಹಾಕಿದ್ದಾರೆ. ತೇಜಪ್ರತಾಪ ಅವರ “ಬೇಜವಾಬ್ದಾರಿಯುತ ನಡವಳಿಕೆ” ಮತ್ತು ಅವರು ಕುಟುಂಬದ ಮೌಲ್ಯಗಳು ಮತ್ತು ಸಾರ್ವಜನಿಕ ಸಭ್ಯತೆಯಿಂದ … Continued

ವೀಡಿಯೊ..| ಭಯೋತ್ಪಾದಕರಿಗೆ, ಹಿಂದಿದ್ದವರಿಗೆ ಭಾರತದ ಖಡಕ್‌ ವಾರ್ನಿಂಗ್‌ ಜಗತ್ತಿಗೆ ಗೊತ್ತಾಗಲೆಂದು ಇಂಗ್ಲಿಷಿಗೆ ಭಾಷಣ ಬದಲಾಯಿಸಿದ ಪ್ರಧಾನಿ ಮೋದಿ

ನವದೆಹಲಿ: ಪಹಲ್ಗಾಮ್ ದಾಳಿಕೋರರಿಗೆ ಪ್ರಧಾನಿ ಮೋದಿ ಖಡಕ್‌ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಬಿಹಾರದ ಮಧುಬನಿಯಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟದ ಬಲವಾದ ಸಂದೇಶವನ್ನು ಸಾರ್ವಜನಿಕ ವೇದಿಕೆಯಿಂದ ಇಡೀ ಜಗತ್ತಿಗೆ ರವಾನಿಸಲು ಹಿಂದಿಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಇಂಗ್ಲಿಷ್‌ಗೆ ಬದಲಾಯಿಸಿಕೊಂಡರು. “ಬಿಹಾರದ ಮಣ್ಣಿನಿಂದ, ನಾನು … Continued

ಎನ್‌ಡಿಎ ಮೈತ್ರಿಕೂಟದಿಂದ ಹೊರನಡೆದ ಪಶುಪತಿ ಪರಾಸ್ ಆರ್‌ ಎಲ್‌ ಜೆ ಪಿ ; ಬಿಹಾರದಲ್ಲಿ ಬಿಜೆಪಿಗೆ ಕಡಿಮೆಯಾದ ಒಂದು ಮಿತ್ರಪಕ್ಷ

ನವದೆಹಲಿ: ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ (ಆರ್‌ಎಲ್‌ಜೆಪಿ) ಮುಖ್ಯಸ್ಥ ಪಶುಪತಿ ಪರಾಸ್ ಸೋಮವಾರ ತಮ್ಮ ಪಕ್ಷವು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ಗುಡ್‌ ಬೈ ಹೇಳುತ್ತಿದೆ ಎಂದು ಪ್ರಕಟಿಸಿದ್ದಾರೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಅವರ ಘೋಷಣೆ ಬಂದಿದೆ. ಇದು ಅವರು ಲಾಲು ಪ್ರಸಾದ ಅವರು ರಾಷ್ಟ್ರೀಯ ಜನತಾ ದಳದ ನೇತೃತ್ವದ ಮಹಾಘಟಬಂಧನ ಸೇರುತ್ತಾರೋ … Continued