ಮ್ಯಾನ್ಮಾರ್‌ನಿಂದ ಮಣಿಪುರ ಪ್ರವೇಶಿಸಿದ ಶಸ್ತ್ರಸಜ್ಜಿತ 900 ಕುಕಿ ಉಗ್ರಗಾಮಿಗಳು ; ಮಣಿಪುರ ಸರ್ಕಾರದ ಎಚ್ಚರಿಕೆ

ಇಂಫಾಲ್ : ಮ್ಯಾನ್ಮಾರ್‌ನಿಂದ ತರಬೇತಿ ಪಡೆದ 900 ಶಸ್ತ್ರಸಜ್ಜಿತ ಉಗ್ರಗಾಮಿಗಳು ಮಣಿಪುರದಲ್ಲಿ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ವರದಿಯನ್ನು ಭದ್ರತಾ ಮುಖ್ಯಸ್ಥರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲ್ದೀಪ್ ಸಿಂಗ್ ಹೇಳಿದ್ದಾರೆ. ಗಡಿ ಪ್ರದೇಶಗಳು ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ರಾಜ್ಯ ಮತ್ತು ಕೇಂದ್ರ ಭದ್ರತಾ ಏಜೆನ್ಸಿಗಳ ಸಂಯೋಜಿತ ಪಡೆಗಳನ್ನು ಎಚ್ಚರಿಸಲಾಗಿದೆ ಎಂದು … Continued

2025ರಿಂದ ಪ್ರಪಂಚದ ವಿನಾಶ ಆರಂಭ, ಸಮುದ್ರಮಟ್ಟದಲ್ಲಿ ಹೆಚ್ಚಳ, ತೀವ್ರ ಬರಗಾಲ…. ; ಬಾಬಾ ವಂಗಾ ಆಘಾತಕಾರಿ ಭವಿಷ್ಯ..!

9/11 ದಾಳಿಗಳು, ಚೆರ್ನೊಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು, ಸೋವಿಯತ್ ಒಕ್ಕೂಟದ ಪತನ ಮತ್ತು ಬ್ರೆಕ್ಸಿಟ್‌ನಂತಹ ಪ್ರಮುಖ ಜಾಗತಿಕ ಘಟನೆಗಳ ಬಗ್ಗೆ ನಿಖರವಾಗಿ ಭವಿಷ್ಯ ನುಡಿದಿದ್ದಾರೆ ಎಂದು ನಂಬಲಾದ ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದು ಕರೆಯಲ್ಪಡುವ ಬಲ್ಗೇರಿಯಾದ ಕುರುಡ ಅನುಭಾವಿ ಬಾಬಾ ವಂಗಾ ಅವರ 2025 ಹಾಗೂ ನಂತರದ ಭವಿಷ್ಯವಾಣಿಗಳು ಅವರ ಅನುಯಾಯಿಗಳು ಮತ್ತು ಸಾರ್ವಜನಿಕರಲ್ಲಿ ಕಳವಳವನ್ನುಂಟುಮಾಡಿದೆ. … Continued

27 ದೇಶಗಳಿಗೆ ಹರಡಿದ ಕೋವಿಡ್ ವೈರಸ್‌ ಹೊಸ ರೂಪಾಂತರಿ….!

XEC ಎಂಬ ಕೋವಿಡ್ ವೈರಸ್‌ನ ಹೊಸ ರೂಪಾಂತರವು ಯುರೋಪ್‌ನಲ್ಲಿ ಕ್ಷಿಪ್ರವಾಗಿ ಹರಡುತ್ತಿದೆ. ಇದನ್ನು ಮೊದಲು ಜೂನ್‌ನಲ್ಲಿ ಜರ್ಮನಿಯಲ್ಲಿ ಗುರುತಿಸಲಾಯಿತು ಮತ್ತು ಇದುವರೆಗೆ ಇದು ಯುರೋಪಿನ 13 ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡಿದೆ. ಇದು KS.1.1 ಮತ್ತು KP.3.3. ಎಂಬ ಒಮಿಕ್ರಾನ್ ಉಪವಿಭಾಗಗಳ ಸಂಯೋಜನೆಯಾಗಿದೆ. KS.1.1 ಪ್ರಪಂಚದಾದ್ಯಂತ ವಿವಿಧ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕೊಡುಗೆ ನೀಡುವ … Continued

ತಿರುಪತಿ ಲಡ್ಡು ತಯಾರಿಸಲು ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢ ಎಂದ ಟಿಡಿಪಿ…!

ಅಮರಾವತಿ : ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡುವ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂದು ಲ್ಯಾಬ್ ವರದಿ ದೃಢಪಡಿಸಿದೆ. ಹಿಂದಿನ ವೈಎಸ್‌ಆರ್ ಕಾಂಗ್ರೆಸ್ (ವೈಎಸ್‌ಆರ್‌ಸಿಪಿ) ಸರ್ಕಾರ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ್ದರು. … Continued

ಮುಡಾ ವಿಚಾರದಲ್ಲೇ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ…: ಸರ್ಕಾರದಿಂದ ವಿವರ ಕೇಳಿದ ರಾಜ್ಯಪಾಲರು

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ವಿಚಾರದಲ್ಲಿಯೇ ಮತ್ತೊಂದು ಸಂಕಷ್ಟ ಎದುರಾಗಿದೆ. ಮುಡಾ ವಿಚಾರದಲ್ಲಿ ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದ್ದು, ಈ ಸಂಬಂಧ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ವರದಿ ಕೇಳಿದ್ದಾರೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಈ ಸಂಬಂಧ ಪತ್ರ ಬರೆದು ವರದಿ … Continued

ಬಿಜೆಪಿ ಶಾಸಕ ಮುನಿರತ್ನ ಸೇರಿ 7 ಜನರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಬೆಂಗಳೂರು : ಗುತ್ತಿಗೆದಾರನಿಗೆ ಜೀವ ಬೆದರಿಕೆ ಮತ್ತು ಜಾತಿನಿಂದನೆ ಮಾಡಿರುವ ಪ್ರಕರಣದ ನಂತರ ಬಿಜೆಪಿ ಶಾಸಕ ಮುನಿರತ್ನಗೆ ಈಗ ಮತ್ತೊಂದು ಕಂಟಕ ಎದುರಾಗಿದೆ. ಬೆಂಗಳೂರು ಮೂಲದ ಮಹಿಳೆಯೊಬ್ಬರು ಶಾಸಕ ಮುನಿರತ್ನ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿ ಶಾಸಕ … Continued

ಹಿಜ್ಬೊಲ್ಲಾ ಗುಂಪು ಬಳಸುತ್ತಿದ್ದ ನೂರಾರು ವಾಕಿ-ಟಾಕೀ, ಪೇಜರ್‌ಗಳು ಸ್ಫೋಟ ; 32 ಜನರು ಸಾವು, 3,250 ಕ್ಕೂ ಹೆಚ್ಚು ಮಂದಿಗೆ ಗಾಯ

ಬೈರುತ್‌ : ಕಳೆದ ಎರಡು ದಿನಗಳಲ್ಲಿ ಲೆಬನಾನ್‌ನಾದ್ಯಂತ ಹಿಜ್ಬೊಲ್ಲಾ ಸದಸ್ಯರು ಬಳಸಿದ ವಾಕಿ-ಟಾಕಿಗಳು ಮತ್ತು ಪೇಜರ್‌ಗಳನ್ನು ಸ್ಫೋಟಿಸಿದ್ದರಿಂದ ಕನಿಷ್ಠ 32 ಜನರು ಸಾವಿಗೀಡಾಗಿದ್ದಾರೆ ಮತ್ತು 3,250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ಇಸ್ರೇಲ್‌ನೊಂದಿಗೆ ಸಂಪೂರ್ಣ ಯುದ್ಧ ನಡೆಯುವ ಆತಂಕಕ್ಕೆ ಕಾರಣವಾಗಿದೆ. ಇರಾನ್ ಬೆಂಬಲಿತ ಹಿಜ್ಬೊಲ್ಲಾ ಗುಂಪು ಬಳಸುತ್ತಿದ್ದ ವಾಕಿ-ಟಾಕಿಗಳು ಬುಧವಾರ ಅದರ ಬೈರುತ್ ಭದ್ರಕೋಟೆಯಲ್ಲಿ … Continued

ʼಒಂದು ರಾಷ್ಟ್ರ ಒಂದು ಚುನಾವಣೆʼ ; ರಾಮನಾಥ ಕೋವಿಂದ ಸಮಿತಿ ವರದಿಗೆ ಮೋದಿ ಸಂಪುಟ ಅನುಮೋದನೆ

ನವದೆಹಲಿ :‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಮೂಲಗಳ ಪ್ರಕಾರ, ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಬುಧವಾರ ಕೇಂದ್ರ ಸಚಿವ ಸಂಪುಟದ ಮುಂದೆ … Continued

ಜನರ ಹಸಿವು ನೀಗಿಸಲು 200 ಆನೆಗಳ ಹತ್ಯೆಗೆ ಮುಂದಾದ ಜಿಂಬಾಬ್ವೆ…!

ನಾಲ್ಕು ದಶಕಗಳ ನಂತರ ಕಾಣಿಸಿಕೊಂಡ ಭೀಕರ ಬರಗಾಲದ ನಂತರ ತೀವ್ರ ಹಸಿವಿನಿಂದ ಬಳಲುತ್ತಿರುವ ಸಮುದಾಯಗಳಿಗೆ ಆಹಾರವನ್ನು ನೀಡಲು ಜಿಂಬಾಬ್ವೆ ತನ್ನ ದೇಶದ 200 ಆನೆಗಳನ್ನು ಸಾಯಿಸಲು ಯೋಜಿಸಿದೆ ಎಂದು ವನ್ಯಜೀವಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಎಲ್ ನಿನೊ-ಪ್ರೇರಿತ ಭೀಕರ ಬರಗಾಲವು ಆಫ್ರಿಕಾದ ದಕ್ಷಿಣದ ದೇಶಗಳ ಬೆಳೆಗಳನ್ನು ಸಂಪೂರ್ಣವಾಗಿ ಹಾನಿಗೊಳಿಸಿದೆ ಮತ್ತು ಈ ಪ್ರದೇಶದಾದ್ಯಂತ ಆಹಾರದ ಕೊರತೆಯನ್ನು … Continued

ವೀಡಿಯೊ..| ಲೆಬನಾನಿನಾದ್ಯಂತ ಪೇಜರ್‌ಗಳು ಸ್ಫೋಟ; 8 ಮಂದಿ ಸಾವು, 2,750 ಮಂದಿಗೆ ಗಾಯ : ಇಸ್ರೇಲ್‌ ಕಾರಣ ಎಂದು ಹಿಜ್ಬೊಲ್ಲಾ ಆರೋಪ

ಬೈರುತ್: ಅಮೆರಿಕ-ಗೊತ್ತುಪಡಿಸಿದ ಭಯೋತ್ಪಾದಕ ಗುಂಪು ಹಿಜ್ಬೊಲ್ಲಾವನ್ನು ಗುರಿಯಾಗಿಸಿಕೊಂಡು ಪೇಜರ್‌ಗಳ ಸಿಂಕ್ರೊನೈಸ್ ಸ್ಫೋಟನದಲ್ಲಿ ಲೆಬನಾನ್‌ನಲ್ಲಿ ಎಂಟು ಜನರು ಸಾವಿಗೀಡಾಗಿದ್ದಾರೆ ಮತ್ತು 2,750 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಘಟನೆಯಲ್ಲಿ ಲೆಬನಾನ್‌ನ ತನ್ನ ರಾಯಭಾರಿ ಮೊಜ್ತಾಬಾ ಅಮಾನಿ ಕೂಡ ಗಾಯಗೊಂಡಿದ್ದಾರೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಲೆಬನಾನ್‌ನಲ್ಲಿ ಸ್ಥಳೀಯ ಸಮಯ … Continued