ಭಾರತದಲ್ಲಿ ಮತ್ತೆ ಸಾವಿರದ ಸನಿಹ ಬಂದ ದೈನಂದಿನ ಕೊರೊನಾ ಪ್ರಕರಣಗಳು: 4 ಸಾವು ದಾಖಲು
ನವದೆಹಲಿ: ಸೋಮವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಒಂದೇ ದಿನದಲ್ಲಿ 918 ಹೊಸ ಕೊರೊನಾ ವೈರಸ್ ಪ್ರಕರಣಗಳು ಏರಿಕೆಯಾಗಿದೆ ಹಾಗೂ ನಾಲ್ಕು ಸಾವುಗಳು ಸಂಭವಿಸಿವೆ. ಹಾಗೂ ದೇಶದ ಸಕ್ರಿಯ ಪ್ರಕರಣಗಳು 6,350 ಕ್ಕೆ ಏರಿದೆ. ನಾಲ್ಕು ಸಾವುಗಳಲ್ಲಿ ಎರಡು ರಾಜಸ್ಥಾನದಿಂದ ವರದಿಯಾಗಿದೆ, ಒಂದು ಕರ್ನಾಟಕದಿಂದ ಮತ್ತು ಒಂದು ಸಾವು ಕೇರಳದಿಂದ ವರದಿಯಾಗಿದೆ. … Continued