ಮಾಲ್ಡೀವ್ಸ್‌ನಲ್ಲಿ ಸ್ಪೀಡ್‌ ಬೋಟ್ ಮಗುಚಿ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾಗೆ ಗಾಯ

ನವದೆಹಲಿ:ಮಾಲ್ಡೀವ್ಸ್‌ನಲ್ಲಿ ಶುಕ್ರವಾರ ನಡೆದ ವೇಗದ ದೋಣಿ (Speedboat) ಅಪಘಾತದಲ್ಲಿ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಅವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅವರು ಪ್ರಯಾಣಿಸುತ್ತಿದ್ದ ದೋಣಿ ಸಮುದ್ರದಲ್ಲಿ ಪಲ್ಟಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಅವರು ಮುಂಬೈಗೆ ಮರಳಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ. “ದುರದೃಷ್ಟವಶಾತ್ ನಡೆದ … Continued

ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ ಆಹ್ವಾನಿಸಿದ ಮಾಲ್ಡೀವ್ಸ್ ಅಧ್ಯಕ್ಷ…: ಚೀನಾ ಪರವಿದ್ದ ಮುಯಿಝು ಏಕಾಏಕಿ ಬದಲಾಗಿದ್ದು ಏಕೆ..?

ನವದೆಹಲಿ: ಜುಲೈ 25 ಮತ್ತು 26 ರಂದು ನಡೆಯಲಿರುವ ಮಾಲ್ಡೀವ್ಸ್ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಇದು ಪ್ರಧಾನಿಯವರ ದ್ವೀಪಕ್ಕೆ ಮೂರನೇ ಭೇಟಿಯಾಗಿದೆ. ಆದರೆ ಮೊಹಮ್ಮದ್ ಮುಯಿಝು ಮಾಲ್ಡೀವ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಮೊದಲ ಭೇಟಿಯಾಗಿದೆ. ಜುಲೈ 23 ಮತ್ತು 24 … Continued

ಮಾಲ್ಡೀವ್ಸ್‌ ಗೆ ಭೇಟಿ | ಮುಯಿಝು ಆಹ್ವಾನ ಸ್ವೀಕರಿಸಿದ ಪ್ರಧಾನಿ ಮೋದಿ : ರುಪೇ ಕಾರ್ಡ್‌ ಬಿಡುಗಡೆಗೆ ಒಪ್ಪಿಗೆ, ಬೃಹತ್ ಕರೆನ್ಸಿ ಸ್ವಾಪ್ ಒಪ್ಪಂದ

ನವದೆಹಲಿ : ಮಾಲ್ಡೀವ್ಸ್‌ಗೆ ಭೇಟಿ ನೀಡುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ತಿಳಿಸಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾತನಾಡಿ, ಪ್ರಧಾನಿ ಮೋದಿ ಅವರು ಮಾಲ್ಡೀವ್ಸ್‌ ಅಧ್ಯಕ್ಷರಿಂದ ಆಹ್ವಾನವನ್ನು ಸ್ವೀಕರಿಸಿದ ನಂತರ ದ್ವೀಪಸಮೂಹ ರಾಷ್ಟ್ರಕ್ಕೆ ಭೇಟಿ ನೀಡುವ ಆಹ್ವಾನ … Continued

ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮಾಲ್ದೀವ್ಸ್‌ ಅಧ್ಯಕ್ಷರಿಗೂ ಆಹ್ವಾನ

ನವದೆಹಲಿ: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಸಮಾರಂಭಕ್ಕೆ ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರಿಗೂ ಆಮಂತ್ರಣ ನೀಡಲಾಗಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ವು ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದ ನಂತರ ಮೋದಿಯನ್ನು ಅಭಿನಂದಿಸಿದ ಒಂದು ದಿನದ ನಂತರ ಮುಯಿಜ್ಜು ಅವರನ್ನು ಆಹ್ವಾನಿಸಲಾಯಿತು. ಇದೇ … Continued

ಭಾರತ ನೀಡಿದ ವಿಮಾನ ಹಾರಿಸಲು ನಮ್ಮ ಪೈಲಟ್‌ಗಳಿಗೆ ಬರುವುದಿಲ್ಲ ಎಂದು ಒಪ್ಪಿಕೊಂಡ ಮಾಲ್ಡೀವ್ಸ್ ರಕ್ಷಣಾ ಸಚಿವ…!

ಮಾಲೆ: ಭಾರತದ ಎಲ್ಲ ರಕ್ಷಣಾ ಸಿಬ್ಬಂದಿ ದ್ವೀಪ ರಾಷ್ಟ್ರ ತೊರೆದ ಕೆಲವು ದಿನಗಳ ನಂತರ ಮಾಲ್ಡೀವ್ಸ್‌ನ ರಕ್ಷಣಾ ಸಚಿವ ಘಾಸನ್ ಮೌಮೂನ್ ಅವರು ತಮ್ಮ ಸೇನೆಯಲ್ಲಿ ಭಾರತ ನೀಡಿದ ಮೂರು ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಪೈಲಟ್‌ಗಳ ಕೊರತೆಯಿದೆ ಎಂದು ಒಪ್ಪಿಕೊಂಡಿದ್ದಾರೆ. ಭಾನುವಾರ ಮಾಲೆಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಸಚಿವ ಘಾಸನ್ ಮೌಮೂನ್, “ವಿಮಾನವನ್ನು ಹಾರಿಸಲು … Continued

‘ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ’ : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

ಮಾಲೆ : ಭಾರತ ಮತ್ತು ಮಾಲ್ಡೀವ್ಸ್‌ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ. ಹೀಗಾಗಿ ಮಾಲ್ಡೀವ್ಸ್ ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಕುಸಿದಿದೆ. ಹೀಗಾಗಿ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಮಾಲ್ಡೀವ್ಸ್‌ಗೆ ಆರ್ಥಿಕವಾಗಿ ಹಿನ್ನಡೆಯಾಗಿದ್ದು, ಈಗ ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್ ಅವರು ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ಆರ್ಥಿಕತೆಯನ್ನು ಬೆಂಬಲಿಸಿ ಎಂದು ಭಾರತೀಯರಿಗೆ ಮನವಿ ಮಾಡಿದ್ದಾರೆ. … Continued

ಭಾರತೀಯ ಧ್ವಜ ಬಳಸಿದ ಪೋಸ್ಟ್ ಆಕ್ರೋಶಕ್ಕೆ ಕಾರಣವಾದ ನಂತರ ಕ್ಷಮೆಯಾಚಿಸಿದ ಅಮಾನತುಗೊಂಡ ಮಾಲ್ಡೀವ್ಸ್ ಸಚಿವೆ

ನವದೆಹಲಿ : ಅಮಾನತುಗೊಂಡಿರುವ ಮಾಲ್ಡೀವ್ಸ್ ಸಚಿವೆ ಮರಿಯಮ್ ಶಿಯುನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಕ್ಷಮೆಯಾಚಿಸಿದ್ದಾರೆ, ಅದರಲ್ಲಿ ಅವರು ಭಾರತೀಯ ರಾಷ್ಟ್ರಧ್ವಜವನ್ನು ಅಗೌರವಗೊಳಿಸಿದ್ದಾರೆ ಎಂದು ಆರೋಪಿಸಲಾದ ಚಿತ್ರವನ್ನು ಹಂಚಿಕೊಂಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ವಿವಾದದ ನಂತರ ಈಗ ಅಳಿಸಲಾದ ಪೋಸ್ಟ್, ಮಾಲ್ಡೀವ್ಸ್‌ನ ಸಂಸತ್ತಿನ ಚುನಾವಣೆಗೆ ಮುಂಚಿತವಾಗಿ ವಿರೋಧ ಪಕ್ಷದ ಪ್ರಚಾರದ ಪೋಸ್ಟರ್ ಅನ್ನು ಆ … Continued

ಭಾರತದ ವಿರುದ್ಧ ಗುಟುರು ಹಾಕಿ ಈಗ ಮೆತ್ತಗಾದ ಮಾಲ್ಡೀವ್ಸ್ ಅಧ್ಯಕ್ಷ : ಸಾಲ ತೀರಿಸಲು ವಿನಾಯಿತಿ ನೀಡಿ ಎಂದು ಅಂಗಲಾಚಿದ ಮುಯಿಝ್ಝು

ಮಾಲೆ: ಚೀನಾ ಜೊತೆ ಸ್ನೇಹ ಬೆಳೆಸಲು ಭಾರತ ವಿರೋಧಿ ಧೋರಣೆಗಳನ್ನು ಬಲವಾಗಿ ಪ್ರತಿಪಾದಿಸುವ ಮೂಲಕ ಸುದ್ದಿಯಲ್ಲಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝ್ಝು ಈಗ ಮೆತ್ತಗಾದಂತೆ ತೋರುತ್ತಿದೆ. ಭಾರತವು ತನ್ನ ದೇಶದ ‘ಅತಿ ಆಪ್ತ ಮಿತ್ರದೇಶ’ವಾಗಿ ಉಳಿಯಲಿದೆ ಎಂದು ಹೇಳಿರುವ ಮುಯಿಝ್ಝು, ಭಾರತವು ನೀಡಿದ್ದ ಸಾಲದ ಮೇಲೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ವರ್ಷದ … Continued

ಮಾಲ್ಡೀವ್ಸ್-ಚೀನಾಕ್ಕೆ ತಿರುಗೇಟು: ಮಾಲ್ಡೀವ್ಸ್ ಸಮೀಪವೇ ಇರುವ ಲಕ್ಷದ್ವೀಪದಲ್ಲಿ ಹೊಸ ನೌಕಾ ನೆಲೆ ಕಾರ್ಯಾರಂಭ

ನವದೆಹಲಿ: ಮಾಲ್ಡೀವ್ಸ್‌ಗೆ ಸಮೀಪವಿರುವ ಹಿಂದೂ ಮಹಾಸಾಗರದಲ್ಲಿರುವ ತನ್ನ ಲಕ್ಷ ದ್ವೀಪದಲ್ಲಿ ಭಾರತವು ಬುಧವಾರ ಹೊಸ ನೌಕಾ ನೆಲೆಯನ್ನು ಉದ್ಘಾಟಿಸಿದೆ. ಮಾಲ್ಡೀವ್ಸ್‌ ಜೊತೆಗಿನ ಸಂಬಂಧಗಳು ಹಳಸಿದ ನಂತರ ಹಾಗೂ ಚೀನಾ ಮಾಲ್ಡೀವ್ಸ್‌ಗೆ ಹತ್ತಿರವಾದ ನಂತರ ಭಾರತದಿಂದ ಈ ಕ್ರಮವು ಬಂದಿದೆ. ಭಾರತದ ಲಕ್ಷದ್ವೀಪ ದ್ವೀಪಸಮೂಹದಲ್ಲಿರುವ ಮಿನಿಕಾಯ್ ದ್ವೀಪದ ಹೊಸ ನೆಲೆಯಾದ INS ಜಟಾಯು ವರ್ಷಗಳ ಕಾಲ ನಿರ್ಮಾಣ … Continued

ಚೀನಾ ಪರ ಅಧ್ಯಕ್ಷ ಮೊಹಮ್ಮದ್ ಮುಯಿಝು ವಿರುದ್ಧ ಮಹಾಭಿಯೋಗಕ್ಕೆ ಮುಂದಾದ ಮಾಲ್ಡೀವ್ಸ್ ವಿಪಕ್ಷಗಳು

ನವದೆಹಲಿ : ಮಾಲ್ಡೀವ್ಸ್‌ನ ಪ್ರಮುಖ ವಿರೋಧ ಪಕ್ಷವು ತನ್ನ ಚೀನಾ ಪರ ಅಧ್ಯಕ್ಷ ಮೊಹಮ್ಮದ್ ಮುಯಿಝು ವಿರುದ್ಧ ಮಹಾಭಿಯೋಗ ಪ್ರಕ್ರಿಯೆ (impeachment proceedings)ಆರಂಭಿಸಲು ಸಜ್ಜಾಗಿದೆ. ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷ( MDP)ವು ಸಂಸತ್ತಿನಲ್ಲಿ ಬಹುಮತ ಹೊಂದಿದೆ ಮತ್ತು ದೋಷಾರೋಪಣೆ ಸಲ್ಲಿಕೆಯನ್ನು ಪ್ರಾರಂಭಿಸಲು ಸಹಿಗಳ ಸಂಗ್ರಹವು ಈಗಾಗಲೇ ಪ್ರಾರಂಭವಾಗಿದೆ. ಚೀನಾದ ಬೇಹುಗಾರಿಕಾ ಹಡಗಿಗೆ ಮಾಲೆಯಲ್ಲಿ … Continued