ತುರ್ತು ಚಿಕಿತ್ಸೆಗೆ ಏರ್‌ಲಿಫ್ಟ್‌ ಮಾಡಲು ಭಾರತೀಯ ವಿಮಾನಕ್ಕೆ ಮಾಲ್ಡೀವ್ಸ್ ಅಧ್ಯಕ್ಷರಿಂದ ಅನುಮತಿ ನಿರಾಕರಣೆ : ಬಾಲಕ ಸಾವು- ವರದಿ

ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡ ನಂತರ ಮಾಲ್ಡೀವ್ಸ್ ಅಧ್ಯಕ್ಷರ ಹಠಮಾರಿತನಕ್ಕೆ 14 ವರ್ಷದ ಬಾಲಕ ಜೀವತೆತ್ತ ಘಟನೆ ವರದಿಯಾಗಿದೆ.
ಜೀವವನ್ನು ಸಮರ್ಥವಾಗಿ ಉಳಿಸಬಹುದಾಗಿದ್ದ ಭಾರತೀಯ ಡೋರ್ನಿಯರ್ ವಿಮಾನದ ಬಳಕೆಗೆ ಅಧ್ಯಕ್ಷ ಮೊಹಮ್ಮದ್ ಮುಯಿಝು ಅನುಮತಿ ನಿರಾಕರಿಸಿದ ನಂತರ 14 ವರ್ಷದ ಮಾಲ್ಡೀವ್ಸ್ ಬಾಲಕ ಶನಿವಾರ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿರ್ಮಿಸಿದ ಮತ್ತು ಭಾರತದಿಂದ ಒದಗಿಸಲಾದ ಡಾರ್ನಿಯರ್ ವಿಮಾನವನ್ನು ಮಾನವೀಯ ಉದ್ದೇಶಗಳಿಗಾಗಿ ಮಾಲ್ಡೀವ್ಸ್‌ನಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಬ್ರೈನ್ ಟ್ಯೂಮರ್ ಮತ್ತು ಪಾರ್ಶ್ವವಾಯುವಿಗೆ ತುತ್ತಾಗಿದ್ದ ಬಾಲಕನಿಗೆ ಕ್ಷಿಪ್ರವಾಗಿ ಉನ್ನತ ಚಿಕಿತ್ಸೆಯ ಅನಿವಾರ್ಯತೆ ಉಂಟಾಗಿದೆ. ಆತನನ್ನು ಗಾಫ್ ಅಲಿಫ್ ವಿಲ್ಲಿಂಗಿಲಿಯಲ್ಲಿರುವ ವಿಲ್ಮಿಂಗ್ಟನ್ ದ್ವೀಪದಿಂದ ಮಾಲ್ಡೀವ್‌ನ ರಾಜಧಾನಿ ಮಾಲೆಗೆ ಏರ್‌ ಲಿಫ್ಟ್‌ ಮಾಡಬೇಕಿತ್ತು. ಆತನು ಬ್ರೇನ್‌ ಟ್ಯೂಮರ್‌ನಿಂದ ಬಳಲುತ್ತಿರುವ ಕಾರಣ ಆಗ ಆತನ ಪೋಷಕರು ಬುಧವಾರ ಮಾಲ್ಡೀವ್ಸ್‌ ರಾಜಧಾನಿ ಮಾಲೆಯಲ್ಲಿರುವ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲು ಮುಂದಾಗಿದ್ದಾರೆ. ಅವರು ಭಾರತದ ವಿಮಾನದಲ್ಲಿ ಏರ್‌ಲಿಫ್ಟ್‌ ಮಾಡಲು ತೀರ್ಮಾನಿಸಿದ್ದು, ಇದಕ್ಕಾಗಿ ಮಾಲ್ಡೀವ್ಸ್‌ ಸರ್ಕಾರದ ಅನುಮತಿ ಕೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

ಆದರೆ ಚೀನಾ ಪರ ನಿಲುವು ಹೊಂದಿರುವ, ಮೊಹಮ್ಮದ್‌ ಮುಯಿಜು ನೇತೃತ್ವದ ಸರ್ಕಾರವು ಭಾರತದ ವಿಮಾನದಲ್ಲಿ ಏರ್‌ಲಿಫ್ಟ್‌ ಮಾಡಲು ಅನುಮತಿ ನೀಡಿಲ್ಲ. ಅನುಮತಿ ನೀಡುವಂತೆ ಮನವಿ ಸಲ್ಲಿಸಿದ 16 ಗಂಟೆಯಾದರೂ ಮಾಲ್ಡೀವ್ಸ್‌ ಸರ್ಕಾರವು ಮಾನವೀಯತೆ ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿಲ್ಲ. ಚಿಕಿತ್ಸೆ ವಿಳಂಬವಾಗಿ 13 ವರ್ಷದ ಬಾಲಕನು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮಾಲ್ಡೀವ್ಸ್‌ ಸರ್ಕಾರದ ಧೋರಣೆಯನ್ನು ಬಾಲಕನ ಕುಟುಂಬಸ್ಥರು ತೀವ್ರವಾಗಿ ಖಂಡಿಸಿದ್ದಾರೆ. ಇದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ತುರ್ತು ಸಂದರ್ಭದಲ್ಲಿ ಅನುಮತಿ ಕೇಳಿದ ನಂತರ 16 ನಿರ್ಣಾಯಕ ಗಂಟೆಗಳ ವಿಳಂಬವು ಗಾಫ್ ಅಲಿಫ್ ವಿಲ್ಲಿಂಗಿಲಿಯ ಆಸ್ಪತ್ರೆಯ ಬಳಿ ಪ್ರತಿಭಟನೆಗೆ ಕಾರಣವಾಯಿತು. ಸಮುದಾಯವು ವಿಳಂಬದ ಬಗ್ಗೆ ತಮ್ಮ ಕೋಪವನ್ನು ವ್ಯಕ್ತಪಡಿಸಿತು.
ದುಃಖಿತ ತಂದೆ, ಸ್ಥಳೀಯ ಮಾಧ್ಯಮ ಔಟ್‌ಲೆಟ್ ಅಧಾಹು ಜೊತೆ ಮಾತನಾಡಿ, ತ್ವರಿತ ಪ್ರತಿಕ್ರಿಯೆಯ ನೀಡದ ಬಗ್ಗೆ ವಿಷಾದಿಸಿದರು, “ಸ್ಟ್ರೋಕ್ ಆದ ತಕ್ಷಣ ಬಾಲಕನನ್ನು ಮಾಲೆಗೆ ಕರೆದೊಯ್ಯಲು ನಾವು ಐಲ್ಯಾಂಡ್ ಏವಿಯೇಷನ್‌ಗೆ ತಿಳಿಸಿದ್ದೇವೆ. ಆದರೆ ಅವರು ನಮ್ಮ ಕರೆಗಳಿಗೆ ತಕ್ಷಣ ಉತ್ತರಿಸಲಿಲ್ಲ. ಅವರು ಫೋನ್‌ಗೆ ಉತ್ತರಿಸಿದಾಗ ಗುರುವಾರ ಬೆಳಗ್ಗೆ 8:30 ಆಗಿತ್ತು. ಇಂತಹ ಪ್ರಕರಣಗಳಿಗೆ ಏರ್ ಆಂಬ್ಯುಲೆನ್ಸ್ ಇರುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
“ಭಾರತದ ವಿರುದ್ಧ ಅಧ್ಯಕ್ಷರ ದ್ವೇಷಕ್ಕೆ ಜನರು ತಮ್ಮ ಪ್ರಾಣವನ್ನು ತೆರಬೇಕಾಗಿಲ್ಲ” ಎಂದು ಮಾಲ್ಡೀವ್ಸ್ ಸಂಸದ ಮೀಕೈಲ್ ನಸೀಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement