ವಿಡಿಯೊ | ನೇಪಾಳ ದುರಂತ : 9 ದಿನಗಳ ಬಳಿಕ ಸುರಂಗದಿಂದ ಇಬ್ಬರ ಜೀವಂತ ರಕ್ಷಣೆ; ಒಳಗಿನಿಂದ ಕೇಳಿಬಂದ ಧ್ವನಿಗಳು

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದ ಒಂಬತ್ತು ದಿನಗಳ ಬಳಿಕ, ಅವಶೇಷಗಳಡಿ ಹೂತುಹೋಗಿದ್ದ ಜಲವಿದ್ಯುತ್ ಯೋಜನೆಯ ಸುರಂಗದಿಂದ ಇಬ್ಬರು ಕಾರ್ಮಿಕರನ್ನು ಜೀವಂತವಾಗಿ ಹೊರತೆಗೆದಿದ್ದು, ಇನ್ನೂ ಹಲವರು ಸುರಂಗಗಳಲ್ಲಿ ಸಿಲುಕಿರುವ ಸಾಧ್ಯತೆಯ ನಡುವೆ ಹೊಸ ಆಶಾಕಿರಣ ಮೂಡಿಸಿದೆ. ತ್ರಿಶೂಲಿ-3ಎ ಸುರಂಗದೊಳಗಿಂದ ಇನ್ನೂ ಕೆಲವರ ಧ್ವನಿಗಳು ಕೇಳಿಬಂದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ತ್ರಿಶೂಲಿ ಪ್ರದೇಶದಲ್ಲಿರುವ … Continued

ನೇಪಾಳ ಪ್ರವಾಹ ದುರಂತ : ಮೃತರ ಸಂಖ್ಯೆ 1259ಕ್ಕೆ ಏರಿಕೆ, 5083 ಮಂದಿ ಇನ್ನೂ ನಾಪತ್ತೆ

ಕಠ್ಮಂಡು: ನೇಪಾಳದಲ್ಲಿ ಭೋಟೆ ಕೋಶಿ (Bhote Koshi) ನದಿಯಲ್ಲಿ ಉಂಟಾದ ಭೀಕರ ಪ್ರವಾಹ ಮತ್ತು ಭೂಕುಸಿತ ದುರಂತದ ಬಳಿಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ಗುರುವಾರ ಸಂಜೆ ವೇಳೆಗೆ 1,259 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. 5,083 ಮಂದಿ ನಾಪತ್ತೆಯಾಗಿರುವುದರಿಂದ ಪರಿಸ್ಥಿತಿ ಆತಂಕಕಾರಿಯಾಗಿದೆ. ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ತಗ್ಗಿಸುವಿಕೆ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) … Continued

ಹಲ್ಲುಗಳ ನಡುವಿನ ಕೊಳೆ ತಾನೇ ಪತ್ತೆಹಚ್ಚಿ ಸ್ವಚ್ಛಗೊಳಿಸುವ ಎಐ(AI) ಕ್ಯಾಮೆರಾ-ಜೆಟ್ ತಂತ್ರಜ್ಞಾನದ ಟೂತ್‌ಬ್ರಶ್‌ ಈಗ ಲಭ್ಯ

ಹಲ್ಲುಗಳನ್ನು ಆರೋಗ್ಯಕರವಾಗಿಡಲು ಸಾಮಾನ್ಯವಾಗಿ ಬ್ರಷ್ ಮಾಡುವುದು, ಹಲ್ಲುಗಳ ನಡುವಿನ ಭಾಗವನ್ನು ಫ್ಲಾಸ್‌ನಿಂದ ಸ್ವಚ್ಛಗೊಳಿಸುವುದು ಮತ್ತು ಮೌತ್‌ರಿನ್ಸ್ ಬಳಸುವುದು ಅಗತ್ಯ. ಆದರೆ ಈ ಮೂರು ಕೆಲಸಗಳನ್ನು ಒಂದೇ ಸಾಧನದ ಮೂಲಕ ಸುಲಭಗೊಳಿಸುವ ಉದ್ದೇಶದಿಂದ ಡೈಸನ್ (Dyson) ಸಂಸ್ಥೆ ಹೊಸ ‘ಕ್ಯಾಮೆರಾಜೆಟ್’ (CameraJet) ಸ್ಮಾರ್ಟ್ ಟೂತ್‌ಬ್ರಶ್ ಅನ್ನು ಬಿಡುಗಡೆ ಮಾಡಿದೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಯಾಮೆರಾವನ್ನು ಹೊಂದಿರುವ … Continued

‘ನೀವು ಕೆಲಸ ಮುಂದುವರಿಸಿ, ನಾನು ನೋಡ್ತೇನೆ’: ನೇಪಾಳ ಪ್ರವಾಹದ ವೇಳೆ 265 ಕಾರ್ಮಿಕರನ್ನು ಸುರಂಗದಲ್ಲೇ ಬಿಟ್ಟುಹೋದ ಚೀನಿ ಮೇಲ್ವಿಚಾರಕ !

ಕಠ್ಮಂಡು: ನೇಪಾಳದಲ್ಲಿ ಆಗಸ್ಟ್‌ 26ರಂದು ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದ ವೇಳೆ ತ್ರಿಶೂಲಿ-3ಎ ಜಲವಿದ್ಯುತ್‌ ಯೋಜನೆಯ ಸುರಂಗದಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಕಾರ್ಮಿಕರನ್ನು ಅಲ್ಲೇ ಬಿಟ್ಟು ಚೀನಿ ಮೇಲ್ವಿಚಾರಕನೊಬ್ಬ ತಾನೊಬ್ಬನೇ ಅಲ್ಲಿಂದ ಹೊರಗೆ ತೆರಳಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸುರಂಗ ಸಂಖ್ಯೆ 3ರಿಂದ ಪ್ರಾಣಾಪಾಯದಿಂದ ಪಾರಾದ ಕಾರ್ಮಿಕ ರಾಜ್‌ ಛೇತ್ರಿ ಅವರು ದುರಂತದ … Continued

ಪಾಕಿಸ್ತಾನದಲ್ಲಿ 100 ವರ್ಷಗಳಿಗೂ ಹಳೆಯ ಹಿಂದೂ ದೇವಾಲಯ ಧ್ವಂಸ : ವರದಿ

ಇಸ್ಲಾಮಾಬಾದ್: ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ಸುಮಾರು 100ರಿಂದ 125 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಂಘಟನೆಗಳು, ಸ್ಥಳೀಯ ನಿವಾಸಿಗಳು ಹಾಗೂ ರಾಜಕೀಯ ಪಕ್ಷಗಳು ತನಿಖೆಗೆ ಆಗ್ರಹಿಸಿವೆ. ಅಲ್ಲದೆ ದೇವಾಲಯವನ್ನು ಮೂಲ ಸ್ವರೂಪದಲ್ಲಿ ಪುನರ್‌ನಿರ್ಮಿಸಿ, ಅದರ ಭೂಮಿಯ ಮೇಲಿನ  ಅತಿಕ್ರಮಣಗಳನ್ನು ತೆರವುಗೊಳಿಸುವಂತೆ ಶೆಹಬಾಜ್ ಶರೀಫ್ ನೇತೃತ್ವದ  ಸರ್ಕಾರವನ್ನು ಒತ್ತಾಯಿಸಿವೆ. … Continued

ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ ಲಿಯೊನೆಲ್ ಮೆಸ್ಸಿ

ಬ್ಯೂನಸ್ ಐರಿಸ್ : ಅರ್ಜೆಂಟಿನಾದ ಫುಟ್ಬಾಲ್ ದಂತಕಥೆ , ಎಂಟು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತ ಹಾಗೂ ತಂಡದ ನಾಯಕ ಲಿಯೊನೆಲ್ ಮೆಸ್ಸಿ (39) ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಅರ್ಜೆಂಟಿನಾ ರಾಷ್ಟ್ರೀಯ ಫುಟ್ಬಾಲ್‌ ತಂಡದೊಂದಿಗೆ ಅವರ 20 ವರ್ಷಗಳ ಅದ್ಭುತ ಪಯಣ ಅಂತ್ಯಗೊಂಡಿದೆ.  ಇನ್‌ಸ್ಟಾಗ್ರಾಂನಲ್ಲಿ ಸ್ಪ್ಯಾನಿಷ್ ಭಾಷೆಯಲ್ಲಿ ಕೈಬರಹದ ಪತ್ರವನ್ನು ಹಂಚಿಕೊಂಡು … Continued

ವಿಡಿಯೋ | ನೇಪಾಳ ಮಹಾವಿನಾಶಕ್ಕೆ ಕಾರಣವಾದ ಪರ್ವತದಿಂದ ಹಿಮನದಿ ಕುಸಿದ ಕ್ಷಣದ ದೃಶ್ಯ ಡ್ರೋನ್‌ನಲ್ಲಿ ಸೆರೆ

ನವದೆಹಲಿ: ಕಳೆದ ವಾರ ನೇಪಾಳ ಮತ್ತು ಟಿಬೆಟ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತಕ್ಕೆ ಕಾರಣವಾದ ಹಿಮನದಿ ಕುಸಿತದ ಕ್ಷಣಗಳು ಆಕಸ್ಮಿಕವಾಗಿ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ದುರಂತದಲ್ಲಿ ನೂರಾರು ಜನರು ಮೃತಪಟ್ಟಿದ್ದು, ಸಾವಿರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಚೀನಾದ ಛಾಯಾಗ್ರಾಹಕರೊಬ್ಬರು ಸೆರೆಹಿಡಿದಿರುವ ಈ ದೃಶ್ಯಗಳಲ್ಲಿ, ಸಮುದ್ರಮಟ್ಟದಿಂದ 7,200 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿರುವ ಲಾಂಗ್‌ಟಾಂಗ್ ಲಿರುಂಗ್ (Langtang … Continued

ವಿಡಿಯೋ | ನೇಪಾಳ ಪ್ರವಾಹ : ಬೆಕ್ಕು ಎಂದುಕೊಂಡು ಮಣ್ಣು ತೆಗೆದಾಗ ಅವಶೇಷಗಳಡಿ ಜೀವಂತವಾಗಿ ಸಿಕ್ಕಳು 5 ವರ್ಷದ ಬಾಲಕಿ !

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹದಿಂದ ಉಂಟಾದ ದುರಂತದ ನಡುವೆ ಆಶಾಕಿರಣವಾಗಿ ಮೂಡಿಬಂದ ಘಟನೆಯಲ್ಲಿ, ಮೂರು ದಿನಗಳ ಕಾಲ ಮಣ್ಣು ಮತ್ತು ಅವಶೇಷಗಳಡಿ ಸಿಲುಕಿದ್ದರೂ ಐದು ವರ್ಷದ ಬಾಲಕಿ ಜೀವಂತವಾಗಿ ಪತ್ತೆಯಾಗಿದ್ದಾಳೆ. ಶುಕ್ರವಾರ ರಸುವಾ ಜಿಲ್ಲೆಯ ಸ್ಯಾಬ್ರುಬೆಸಿ ಸಮೀಪದಲ್ಲಿ ರಕ್ಷಣಾ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದು, ಬಳಿಕ ಕಠ್ಮಂಡುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆ ಆರೋಗ್ಯ … Continued

ನೇಪಾಳದ ಭೀಕರ ಪ್ರವಾಹ : ಆ ಒಂದು ಕರೆ….1643 ಮಕ್ಕಳ ಜೀವ ಉಳಿಸಿದ ಶಿಕ್ಷಕನ ಆ ಕ್ಷಣದ ನಿರ್ಧಾರ….

ಕಠ್ಮಂಡು: “ಗ್ರಾಮವೇ ಕೊಚ್ಚಿಹೋಗಿದೆ… ನದಿಯು ಎಲ್ಲವನ್ನೂ ನುಂಗಿದೆ… ಮಕ್ಕಳನ್ನು ಕರೆದುಕೊಂಡು ಓಡಿ ಹೋಗಿ!” ಬುಧವಾರ ಬೆಳಿಗ್ಗೆ 9:20ಕ್ಕೆ ಬಂದ ಈ ದೂರವಾಣಿ ಕರೆ ನೇಪಾಳದ ತ್ರಿಶೂಲಿ ಕಣಿವೆಯಲ್ಲಿರುವ ತ್ರಿಭುವನ್ ತ್ರಿಶೂಲಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಜೇಂದ್ರ ದವಾಡಿ ಅವರ ಬದುಕಿನ ಅತ್ಯಂತ ನಿರ್ಣಾಯಕ ಕ್ಷಣವಾಗಿ ಪರಿಣಮಿಸಿತು. ಆ ಕ್ಷಣದಲ್ಲಿ ಅವರು ತೆಗೆದುಕೊಂಡ ಒಂದು ತ್ವರಿತ ನಿರ್ಧಾರ 1,643 … Continued

ನೇಪಾಳ : ಪ್ರವಾಹದಲ್ಲಿ ಕೊಚ್ಚಿಹೋದ ಬ್ಯಾಂಕ್ ಲಾಕರ್ ; ಹಣಕ್ಕಾಗಿ ಮುಗಿಬಿದ್ದು ಲಾಕರ್‌ ಒಡೆದು 58 ಲಕ್ಷ ರೂ. ದೋಚಿದ ಜನ !

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ದುರಂತದಲ್ಲಿ 600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 2500 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 537 ವಿದೇಶಿ ಪ್ರಜೆಗಳಿದ್ದು, ಅವರಲ್ಲಿ 320 ಮಂದಿ ಭಾರತೀಯರು ಸೇರಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿದ್ದು, ಮತ್ತಷ್ಟು ಅಪಾಯದ ಸಾಧ್ಯತೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ತುರ್ತು ಕ್ರಮಗಳನ್ನು … Continued