ಅಣ್ವಸ್ತ್ರ ಪರಿಶೀಲನೆ: ವಿಶ್ವಸಂಸ್ಥೆ ಕ್ರಮಕ್ಕೆ ಇರಾನ್‌‌ ನಿರ್ಬಂಧ

ದೇಶ ಹೊಂದಿರುವ ಅಣ್ವಸ್ತ್ರಗಳನ್ನು ಪರಿಶೀಲನೆ ನಡೆಸಲು ಮುಂದಾದ ವಿಶ್ವಸಂಸ್ಥೆಯ ಕ್ರಮಕ್ಕೆ ಇರಾನ್‌ ಕೆಲ ನಿರ್ಬಂಧಗಳನ್ನು ಹೇರಿದೆ. ಅಮೆರಿಕ ಹಾಗೂ ಕೆಲವು ಯುರೋಪ್‌ ದೇಶಗಳು ತನ್ನ ವಿರುದ್ಧ ಜಾರಿಗೊಳಿಸಿರುವ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಒತ್ತಡ ಹೇರುವ ಉದ್ದೇಶದಿಂದ ನಿರ್ಬಂಧ ಹೇರಿದೆ. ಅಣ್ವಸ್ತ್ರಗಳ ಪರಿಶೀಲನೆಗೆ ಬರುವ ಇಂಟರ್‌ನ್ಯಾಷನಲ್‌ ಅಟೋಮಿಕ್‌ ಎನರ್ಜಿ ಏಜೆನ್ಸಿಗೆ (ಐಎಇಎ) ಸೀಮಿತ ಅನುಮತಿ ನೀಡುವುದಾಗಿ ತಿಳಿಸಿದೆ. … Continued