ಅಮೆರಿಕ ಸೈನಿಕನನ್ನು ಕೊಂದ್ರೆ ಅಥವಾ ಸೆರೆ ಹಿಡಿದ್ರೆ 30 ಸಾವಿರ ಡಾಲರ್ ಬಹುಮಾನ : ಮಹಿಳೆಯರಿಗೆ ದುಪ್ಪಟ್ಟು ಹಣ; ಇರಾನ್‌ ಘೋಷಣೆ

ತೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ, ಅಮೆರಿಕದ ಸೈನಿಕನನ್ನು ಕೊಲ್ಲುವ ಅಥವಾ ಸೆರೆ ಹಿಡಿದು ಇರಾನ್ ಸೇನೆಗೆ ಒಪ್ಪಿಸುವವರಿಗೆ 30,000 ಅಮೆರಿಕನ್ ಡಾಲರ್‌ಗಳ ಬಹುಮಾನ ನೀಡುವುದಾಗಿ ಇರಾನ್ ಘೋಷಿಸಿದೆ. ಈ ಕಾರ್ಯವನ್ನು ಇರಾನಿನ ಮಹಿಳೆಯರು ಕೈಗೊಂಡರೆ ಬಹುಮಾನವನ್ನು ದುಪ್ಪಟ್ಟು ನೀಡಲಾಗುವುದು ಎಂದು ಇರಾನ್ ಸೇನಾ ಮುಖ್ಯಸ್ಥ ಅಮೀರ್ ಹತಾಮಿ ಘೋಷಿಸಿದ್ದಾರೆ. ರಾಜ್ಯ … Continued

ಬ್ರಿಕ್ಸ್‌ ಶೃಂಗಸಭೆಗಾಗಿ ಇರಾನ್ ಅಧ್ಯಕ್ಷರು ಭಾರತಕ್ಕೆ : ಯುದ್ಧದ ನಡುವೆ ಪೆಝೆಶ್ಕಿಯನ್ ಭೇಟಿ ಯಾಕೆ ಮಹತ್ವದ್ದು ?

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆ ಮುಂದುವರಿದಿರುವ ಸಮಯದಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯನ್ ಅವರು ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ 18ನೇ ಬ್ರಿಕ್ಸ್‌ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಅವರು ದೆಹಲಿಗೆ ಆಗಮಿಸಲಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಪೆಝೆಶ್ಕಿಯನ್ ಅವರ ಭಾರತ ಭೇಟಿ … Continued

ಹಾರ್ಮುಜ್ ಜಲಸಂಧಿಯಲ್ಲಿ 20ಕ್ಕೂ ಹೆಚ್ಚು ಯುದ್ಧನೌಕೆ ನಿಯೋಜಿಸಿದ ಅಮೆರಿಕ ; ಇರಾನ್‌ ವಿರುದ್ಧ ನೌಕಾ ದಿಗ್ಬಂಧನ ಮತ್ತಷ್ಟು ಬಿಗಿ

ವಾಷಿಂಗ್ಟನ್: ಇರಾನ್ ವಿರುದ್ಧದ ತನ್ನ ನೌಕಾ ದಿಗ್ಬಂಧನವನ್ನು ಮತ್ತಷ್ಟು ಬಿಗಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಮೆರಿಕವು ಮಧ್ಯಪ್ರಾಚ್ಯಕ್ಕೆ 20ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ. ಈ ಬೆಳವಣಿಗೆಯಿಂದ ಹಾರ್ಮುಜ್ ಜಲಸಂಧಿಯ ಸುತ್ತಮುತ್ತಲಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಅಮೆರಿಕದ ನೌಕಾಪಡೆಯ ವಿನಾಶಕಾರಿ ಯುದ್ಧನೌಕೆ ʼಯುಎಸ್‌ಎಸ್ ರಾಸ್ (USS Ross)ʼನಲ್ಲಿರುವ ನಾವಿಕರೂ ಈ … Continued

ಇರಾನ್‌ ಸುಪ್ರೀಂ ಲೀಡರ್‌ ಮೊಜ್ತಬಾ ಖಮೇನಿ ಸ್ಥಿತಿ ಗಂಭೀರ ; ಆಸ್ಪತ್ರೆಗೆ ದಾಖಲು : ಇಸ್ರೇಲಿ ಮಾಧ್ಯಮ ವರದಿ

ಟೆಲ್ ಅವೀವ್: ಇರಾನ್‌ನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವರದಿಗಳು ಇಸ್ರೇಲಿ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇರಾನ್‌ ಒಳಗಿನ ಮೂಲಗಳನ್ನು ಉಲ್ಲೇಖಿಸಿರುವ ಇಸ್ರೇಲಿ ಮಾಧ್ಯಮ ಚಾನೆಲ್ 14 (C14) ಈ ಕುರಿತು ವರದಿ ಮಾಡಿದೆ. ಈ ಹಿಂದೆ ಜೆರುಸಲೇಮ್ ಪೋಸ್ಟ್, ಇರಾನ್ ಅಧ್ಯಕ್ಷ ಮಸೂದ್ … Continued

ಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಇರಾನ್‌ನಲ್ಲಿ ಇಲ್ವಂತೆ?; ಇಸ್ರೇಲಿ ಮೂಲ ಉಲ್ಲೇಖಿಸಿ ಸೌದಿ ಮಾಧ್ಯಮದ ವರದಿ

ಇರಾನ್‌ನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರು ಪ್ರಸ್ತುತ ಇರಾನ್‌ನಲ್ಲಿಲ್ಲ ಎಂದು ಇಸ್ರೇಲ್‌ನ ಭದ್ರತಾ ಮೂಲವೊಂದು ಹೇಳಿದೆ ಎಂದು ಸೌದಿ ಅರೇಬಿಯಾದ ಅಲ್-ಹದಾಥ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಅವರು ಈಗ ಎಲ್ಲಿದ್ದಾರೆ ಎಂಬುದರ ಕುರಿತು ಯಾವುದೇ ಮಾಹಿತಿ ನೀಡಲಾಗಿಲ್ಲ. ಅಲ್ಲದೆ, ಈ ಹೇಳಿಕೆಯನ್ನು ಸಮರ್ಥಿಸುವಂತಹ ಯಾವುದೇ ಸಾಕ್ಷ್ಯ ಅಥವಾ ಅಧಿಕೃತ ದೃಢೀಕರಣವೂ ಲಭ್ಯವಾಗಿಲ್ಲ. … Continued

ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಬಾಗ್ದಾದ್/ವಾಷಿಂಗ್ಟನ್ :  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವವರಿಗೆ 10 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹96.6 ಕೋಟಿ) ಬಹುಮಾನ ನೀಡುವುದಾಗಿ ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರ ಸಂಘಟನೆಗಳ ಒಕ್ಕೂಟವಾದ ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್ (Islamic Resistance in Iraq–IRI) ಘೋಷಿಸಿದೆ. 2020ರಲ್ಲಿ ನಡೆದ ಅಮೆರಿಕದ ಡ್ರೋನ್ ದಾಳಿಯಲ್ಲಿ ಇರಾನ್‌ನ ಹಿರಿಯ … Continued

ವಿಡಿಯೊ | ಇದೇ ಮೊದಲ ಬಾರಿಗೆ ಸಮುದ್ರ ಡ್ರೋನ್‌ಗಳ ಮೂಲಕ ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕ ದಾಳಿ

ವಾಷಿಂಗ್ಟನ್: ಇರಾನ್‌ನಲ್ಲಿರುವ ಜಲಾಂತರ್ಗಾಮಿ ನೌಕೆ ಹಾಗೂ ಹಡಗುಗಳ ನಿರ್ವಹಣಾ ಕೇಂದ್ರದ ಮೇಲೆ ಅಮೆರಿಕದ ಸೇನೆ ದಾಳಿ ನಡೆಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸೋಮವಾರ ತಿಳಿಸಿದೆ. ಭಾನುವಾರ ಬಹುಸಂಖ್ಯೆಯ ಸಮುದ್ರ ಡ್ರೋನ್‌ಗಳನ್ನು (One-way Attack Surface Drones) ಬಳಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೆಂಟ್ಕಾಮ್ ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. “ನಿನ್ನೆ … Continued

ಹಾರ್ಮುಜ್ ಜಲಸಂಧಿ ಈಗ ಅಮೆರಿಕ ನಿಯಂತ್ರಣದಲ್ಲಿ : ಭದ್ರತೆಗಾಗಿ ವಾಣಿಜ್ಯ ಹಡಗುಗಳಿಂದ 20% ಶುಲ್ಕ ವಸೂಲಿ; ಟ್ರಂಪ್‌ ಘೋಷಣೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಮಹತ್ವದ ಘೋಷಣೆ ಮಾಡಿದ್ದು, ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಾಗುವ ಎಲ್ಲ ಸರಕು ಸಾಗಣೆಯ ಮೇಲೆ ಅಮೆರಿಕವು ಇನ್ನು ಮುಂದೆ 20 ಪ್ರತಿಶತ ಶುಲ್ಕ ವಿಧಿಸಲಿದೆ ಎಂದು ಪ್ರಕಟಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್ (Truth Social) ನಲ್ಲಿ ಈ ಕುರಿತು ಪ್ರಕಟಣೆ … Continued

ವಿಡಿಯೋ | ಮೊದಲ ಬಾರಿಗೆ ಅಮೆರಿಕ–ಇಸ್ರೇಲ್ ದಾಳಿಗೆ ಧ್ವಂಸಗೊಂಡ ಖಮೆನಿ ನಿವಾಸದ ಮೊದಲ ವಿಡಿಯೋ ಬಿಡುಗಡೆ ಮಾಡಿದ ಇರಾನ್‌

ತೆಹ್ರಾನ್ : ಅಮೆರಿಕಾ–ಇಸ್ರೇಲ್ ಜಂಟಿಯಾಗಿ 2025ರ ಫೆಬ್ರವರಿ 28ರಂದು ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮೆನಿಯ ನಿವಾಸಕ್ಕೆ ಉಂಟಾದ ಭಾರೀ ಹಾನಿಯ ದೃಶ್ಯಗಳನ್ನು ಇರಾನ್‌ನ ಸರ್ಕಾರಿ ಮಾಧ್ಯಮವು ಮೊದಲ ಬಾರಿಗೆ ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. 35 ಸೆಕೆಂಡುಗಳ ಈ ವಿಡಿಯೊವನ್ನು ಇರಾನ್‌ನ ಸರ್ಕಾರಿ ದೂರದರ್ಶನ ಪ್ರಸಾರ ಮಾಡಿದ್ದು, … Continued

ಇರಾನ್‌ ಜೊತೆಗಿನ ಒಪ್ಪಂದ ಮುಗಿದ ಅಧ್ಯಾಯ ಎಂದು ಟ್ರಂಪ್‌ ಘೋಷಣೆ ; ಕಚ್ಚಾ ತೈಲ ಬೆಲೆ ದಿಢೀರ್‌ ಏರಿಕೆ

ಅಂಕಾರಾ (ಟರ್ಕಿ): ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತೀವ್ರಗೊಂಡಿದ್ದು, ಪರಸ್ಪರ ದಾಳಿಗಳ ಬಳಿಕ ಇರಾನ್‌ ಜೊತೆಗಿನ ಮಧ್ಯಂತರ ಕದನ ವಿರಾಮ (Ceasefire) ‘ಅಂತ್ಯಗೊಂಡಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಜುಲೈ 8) ಘೋಷಿಸಿದ್ದಾರೆ. ಇರಾನ್‌ನ ನಾಯಕತ್ವವನ್ನು “ಅನಾರೋಗ್ಯಪೀಡಿತರು” ಎಂದು ಟೀಕಿಸಿದ ಅವರು, “ಅವರ ಜೊತೆ ಮಾತುಕತೆ ನಡೆಸುವುದೇ ಸಮಯ ವ್ಯರ್ಥ” … Continued