ಅಮೆರಿಕ-ಇಸ್ರೇಲ್ ದಾಳಿಯ ಬಳಿಕ ಆಸ್ಪತ್ರೆ ಅವಶೇಷಗಳ ಅಡಿಯಿಂದ ಹೊರತೆಗೆದು ಮೊಜ್ತಬಾ ಖಮೇನಿ ರಕ್ಷಣೆ : ವರದಿ

ತೆಹ್ರಾನ್‌: ಇರಾನ್‌ನ ಪರಮೋಚ್ಚ ನಾಯಕನಾಗಿ ಆಯ್ಕೆಯಾಗಿರುವ ಮೊಜ್ತಬಾ ಖಮೇನಿ ಅವರಿರುವ ಸ್ಥಳದ ಕುರಿತು ಇನ್ನೂ ನಿಗೂಢತೆ ಮುಂದುವರಿದಿರುವ ನಡುವೆಯೇ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ದಾಖಲಾಗಿದ್ದ ಆಸ್ಪತ್ರೆಯ ಅವಶೇಷಗಳಡಿಯಿಂದ ರಕ್ಷಿಸಲಾಗಿತ್ತು ಎಂಬ ಹೊಸ ಮಾಹಿತಿ ಬಹಿರಂಗವಾಗಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಟಿಸಿರುವ ವರದಿಯ ಪ್ರಕಾರ, ಫೆಬ್ರವರಿ 28ರಂದು ಅಮೆರಿಕ ಮತ್ತು … Continued

ಹಾರ್ಮುಜ್‌ನಲ್ಲಿ ಅಮೆರಿಕದ ಮಾನವರಹಿತ ಜಲಾಂತರ್ಗಾಮಿ ವಶಕ್ಕೆ ಪಡೆದ ಇರಾನ್‌; ಅದು ಹಾಳಾಗಿತ್ತು ಎಂದ ಅಮೆರಿಕ

ತೆಹ್ರಾನ್: ಹಾರ್ಮುಜ್ ಜಲಸಂಧಿಯ ಪ್ರವೇಶದ್ವಾರದ ಬಳಿ ಅಮೆರಿಕ ಸೇನೆಯ ಅತ್ಯಾಧುನಿಕ ಹಾಗೂ ‘ಸ್ಮಾರ್ಟ್‌’ ಮಾನವರಹಿತ ಜಲಾಂತರ್ಗಾಮಿ ವಾಹನವನ್ನು ವಶಕ್ಕೆ ಪಡೆದಿರುವುದಾಗಿ ಇರಾನ್‌ನ ನೌಕಾಪಡೆ ಹೇಳಿಕೊಂಡಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನ ಅಧಿಕೃತ ಸುದ್ದಿವಾಹಿನಿ ಸೆಪಾಹ್ ನ್ಯೂಸ್ ಪ್ರಕಟಿಸಿರುವ ಹೇಳಿಕೆಯ ಪ್ರಕಾರ, ಸಂಕೀರ್ಣ ಗುಪ್ತಚರ ಕಾರ್ಯಾಚರಣೆ ನಡೆಸಿ ಈ ಮಾನವರಹಿತ ನೀರೊಳಗಿನ ಮಾನವರಹಿತ ಜಲಾಂತರ್ಗಾಮಿಯನ್ನು ವಶಕ್ಕೆ … Continued

ಹಾರ್ಮುಜ್ ಜಲಸಂಧಿ ‘ಅಮೆರಿಕದ ಹೊಸ ಭೂಪ್ರದೇಶ’ ಎಂದು ಘೋಷಿಸಿ ನಕ್ಷೆ ಹಂಚಿಕೊಂಡ ಟ್ರಂಪ್‌

ವಾಷಿಂಗ್ಟನ್: ಇರಾನ್‌ ಜೊತೆಗೆ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ (ಆಗಸ್ಟ್ 18) ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ನಕ್ಷೆಯೊಂದನ್ನು ಹಂಚಿಕೊಂಡಿದ್ದಾರೆ. ಆ ನಕ್ಷೆಯಲ್ಲಿ ಹಾರ್ಮುಜ್ ಜಲಸಂಧಿಯನ್ನು ‘ಅಮೆರಿಕದ ಹೊಸ ಭೂಪ್ರದೇಶ’ (New US Territory) ಎಂದು ಗುರುತಿಸಲಾಗಿದೆ. ಟ್ರಂಪ್ ಅವರು ತಮ್ಮ ‘ಟ್ರೂತ್ ಸೋಷಿಯಲ್’ ಖಾತೆಯಲ್ಲಿ ನಕ್ಷೆಯನ್ನು ಹಂಚಿಕೊಂಡಿದ್ದು, ಆದರೆ ಯಾವುದೇ … Continued

ಹಾರ್ಮುಜ್ ಜಲಸಂಧಿಯಲ್ಲಿ 20ಕ್ಕೂ ಹೆಚ್ಚು ಯುದ್ಧನೌಕೆ ನಿಯೋಜಿಸಿದ ಅಮೆರಿಕ ; ಇರಾನ್‌ ವಿರುದ್ಧ ನೌಕಾ ದಿಗ್ಬಂಧನ ಮತ್ತಷ್ಟು ಬಿಗಿ

ವಾಷಿಂಗ್ಟನ್: ಇರಾನ್ ವಿರುದ್ಧದ ತನ್ನ ನೌಕಾ ದಿಗ್ಬಂಧನವನ್ನು ಮತ್ತಷ್ಟು ಬಿಗಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಮೆರಿಕವು ಮಧ್ಯಪ್ರಾಚ್ಯಕ್ಕೆ 20ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ. ಈ ಬೆಳವಣಿಗೆಯಿಂದ ಹಾರ್ಮುಜ್ ಜಲಸಂಧಿಯ ಸುತ್ತಮುತ್ತಲಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಅಮೆರಿಕದ ನೌಕಾಪಡೆಯ ವಿನಾಶಕಾರಿ ಯುದ್ಧನೌಕೆ ʼಯುಎಸ್‌ಎಸ್ ರಾಸ್ (USS Ross)ʼನಲ್ಲಿರುವ ನಾವಿಕರೂ ಈ … Continued

ಇರಾನ್‌ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಇರಾನ್‌ನಲ್ಲಿ ಇಲ್ವಂತೆ?; ಇಸ್ರೇಲಿ ಮೂಲ ಉಲ್ಲೇಖಿಸಿ ಸೌದಿ ಮಾಧ್ಯಮದ ವರದಿ

ಇರಾನ್‌ನ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರು ಪ್ರಸ್ತುತ ಇರಾನ್‌ನಲ್ಲಿಲ್ಲ ಎಂದು ಇಸ್ರೇಲ್‌ನ ಭದ್ರತಾ ಮೂಲವೊಂದು ಹೇಳಿದೆ ಎಂದು ಸೌದಿ ಅರೇಬಿಯಾದ ಅಲ್-ಹದಾಥ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಅವರು ಈಗ ಎಲ್ಲಿದ್ದಾರೆ ಎಂಬುದರ ಕುರಿತು ಯಾವುದೇ ಮಾಹಿತಿ ನೀಡಲಾಗಿಲ್ಲ. ಅಲ್ಲದೆ, ಈ ಹೇಳಿಕೆಯನ್ನು ಸಮರ್ಥಿಸುವಂತಹ ಯಾವುದೇ ಸಾಕ್ಷ್ಯ ಅಥವಾ ಅಧಿಕೃತ ದೃಢೀಕರಣವೂ ಲಭ್ಯವಾಗಿಲ್ಲ. … Continued

ಇರಾನ್‌-ಅಮೆರಿಕ ಶಾಂತಿ ಒಪ್ಪಂದಕ್ಕೆ ಪೆಜೆಶ್ಕಿಯಾನ್-ಟ್ರಂಪ್ ಸಹಿ ; ತಕ್ಷಣದಿಂದ ಹಾರ್ಮುಜ್ ಜಲಸಂಧಿ ಓಪನ್‌ ; 14 ಅಂಶಗಳ ಒಪ್ಪಂದದಲ್ಲಿ ಏನಿದೆ?

ವಾಷಿಂಗ್ಟನ್/ ತೆಹ್ರಾನ್‌ : ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಾವಧಿಯ ಸಂಘರ್ಷಕ್ಕೆ ಕೊನೆಗೂ ತಾತ್ಕಾಲಿಕ ತೆರೆ ಬಿದ್ದಿದೆ. ವಾರಗಳ ಕಾಲ ನಡೆದ ರಾಜತಾಂತ್ರಿಕ ಚರ್ಚೆಗಳ ನಂತರ, ಎರಡೂ ದೇಶಗಳು ಐತಿಹಾಸಿಕ ಶಾಂತಿ ಒಪ್ಪಂದದ ಜ್ಞಾಪಕ ಪತ್ರಕ್ಕೆ (Peace Memorandum) ಅಧಿಕೃತವಾಗಿ ಸಹಿ ಹಾಕಿವೆ. ಫ್ರಾನ್ಸ್‌ನಲ್ಲಿ ನಡೆದ ಜಿ7 (G7) ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ … Continued

ಜಾಗತಿಕ ತೈಲ ಬಿಕ್ಕಟ್ಟಿಗೆ ಮುಕ್ತಿ ? ಶಾಂತಿ ಒಪ್ಪಂದವಾದ 30 ದಿನಗಳಲ್ಲಿ ಹಾರ್ಮುಜ್ ಜಲಸಂಧಿ ಹಡುಗು ಸಂಚಾರಕ್ಕೆ ಮುಕ್ತ ಎಂದ ಇರಾನ್ !

ವಾಷಿಂಗ್ಟನ್/ತೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೀಕರ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಮತ್ತು ಇರಾನ್ ಐತಿಹಾಸಿಕ ಒಪ್ಪಂದವೊಂದಕ್ಕೆ ಅತ್ಯಂತ ಹತ್ತಿರವಾಗಿದ್ದು, ಜಾಗತಿಕ ಮಟ್ಟದಲ್ಲಿ ಶಾಂತಿಯ ಭರವಸೆ ಮೂಡಿದೆ. ಈ ಮಹತ್ವದ ಒಪ್ಪಂದ ಜಾರಿಯಾದ 30 ದಿನಗಳ ಒಳಗಾಗಿ ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ (Strait of Hormuz) ವಾಣಿಜ್ಯ ಹಡಗುಗಳ ಸಂಚಾರವು … Continued

“ಪೆಟ್ರೋಲ್‌-ಡೀಸೆಲ್‌ ಉಳಿಸಿ, ವರ್ಕ್ ಫ್ರಮ್ ಹೋಮ್‌ಗೆ ಆದ್ಯತೆ ನೀಡಿ, 1 ವರ್ಷ ಚಿನ್ನ ಖರೀದಿಸಬೇಡಿ”: ಇರಾನ್‌-ಅಮೆರಿಕ ಯುದ್ಧದ ನಡುವೆ ಪ್ರಧಾನಿ ಮೋದಿ ಕರೆ

ಹೈದರಾಬಾದ್‌: ಇರಾನ್‌-ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿದ್ದು, ದೇಶದ ವಿದೇಶಿ ವಿನಿಮಯವನ್ನು ಉಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ವಿಶೇಷ ಮನವಿ ಮಾಡಿದ್ದಾರೆ. ಭಾನುವಾರ ನಗರದಲ್ಲಿ ಆಯೋಜಿಸಿದ್ದ ಬೃಹತ್‌ ರ್ಯಾಲಿಯಲ್ಲಿ ಮಾತನಾಡಿದ ಅವರು, ಇಂಧನ ಬಳಕೆ ಕಡಿಮೆ ಮಾಡಲು ಮತ್ತೆ ‘ವರ್ಕ್ ಫ್ರಮ್ ಹೋಮ್’ ಅನ್ನು ಜಾರಿಗೆ … Continued

ಅಮೆರಿಕ ಜೊತೆ ಶಾಂತಿ ಮಾತುಕತೆ ವ್ಯತ್ಯಯವಾದ ಬೆನ್ನಲ್ಲೇ ʼಹಾರ್ಮುಜ್ʼ ಬಗ್ಗೆ ಓಮನ್ ಜೊತೆ ಮಹತ್ವದ ಒಪ್ಪಂದಕ್ಕೆ ಬಂದ ಇರಾನ್

ಮಸ್ಕತ್ : ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಉನ್ನತ ಮಟ್ಟದ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಓಮನ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ “ಕೆಲವು ಒಪ್ಪಂದಗಳಿಗೆ ಬರಲಾಗಿದೆ” ಎಂದು ಸೋಮವಾರ ತಿಳಿಸಿದ್ದಾರೆ. ವಾರದ ಕೊನೆಯಲ್ಲಿ ಪಾಕಿಸ್ತಾನ ಮತ್ತು ಓಮನ್‌ನಂತಹ ಪ್ರಮುಖ ಮಧ್ಯಸ್ಥಿಕೆ … Continued

ಅಮೆರಿಕದ ದಿಗ್ಬಂಧನ ಅಸ್ತ್ರ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡ ಭಾರತದ 15 ಹಡಗುಗಳು

ದುಬೈ/ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಮಾತುಕತೆಗಳು ವಿಫಲವಾದ ಬೆನ್ನಲ್ಲೇ, ಅಮೆರಿಕವು ಇರಾನ್ ಬಂದರುಗಳ ಮೇಲೆ ದಿಗ್ಬಂಧನ ವಿಧಿಸಿದೆ. ಈ ಹಠಾತ್ ಬೆಳವಣಿಗೆಯಿಂದಾಗಿ ಭಾರತದ ಧ್ವಜವಿರುವ ಕನಿಷ್ಠ 15 ವಾಣಿಜ್ಯ ಹಡಗುಗಳು ಜಾಗತಿಕ ಇಂಧನ ಸಾಗಣೆಯ ಪ್ರಮುಖ ಕೇಂದ್ರವಾದ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಎಚ್ಚೆತ್ತಿರುವ ಭಾರತೀಯ ನೌಕಾಸೇನೆಯು ತನ್ನ … Continued