ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ಅಮೆರಿಕ ಸೇನೆ ದಾಳಿ: 3 ಭಾರತೀಯರು ನಾಪತ್ತೆ ; ಅಮೆರಿಕ ರಾಯಭಾರಿಗೆ ಭಾರತ ಸಮನ್ಸ್; ತೀವ್ರ

ಮಸ್ಕತ್/ನವದೆಹಲಿ: ಒಮಾನ್ ಕರಾವಳಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ ಮತ್ತೊಂದು ವಾಣಿಜ್ಯ ನೌಕೆಗಳ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದೆ. ಈ ಘಟನೆ ಈಗ ಭಾರತ ಮತ್ತು ಅಮೆರಿಕ ನಡುವೆ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿದೆ. ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಭಾರತ, ಅಮೆರಿಕದ ಹಿರಿಯ ರಾಜತಾಂತ್ರಿಕನಿಗೆ ಸಮನ್ಸ್ ಜಾರಿ ಮಾಡಿ ಭಾರಿ ಪ್ರತಿಭಟನೆ ದಾಖಲಿಸಿದೆ. ಬುಧವಾರ ಒಮಾನ್ ಕರಾವಳಿಯಲ್ಲಿ … Continued

ವಿಡಿಯೋ | ಕಾರವಾರದಿಂದ ಹೊರಟಿದ್ದ ತೈಲ ಸಾಗಣೆ ಹಡಗಿಗೆ ಒಮಾನ್‌ ಕರಾವಳಿಯಲ್ಲಿ ಹೊತ್ತಿಕೊಂಡ ಬೆಂಕಿ

ಮಸ್ಕತ್ (ಓಮನ್): ಕಾರವಾರದಿಂದ ಹೊರಟಿದ್ದ ಓಮನ್ ಕರಾವಳಿಯ ಸಮುದ್ರ ಪ್ರದೇಶದಲ್ಲಿ ಹೋಗುತ್ತಿದ್ದ  ‘ಮಾರಿವೆಕ್ಸ್’ (Marivex) ಎಂಬ ತೈಲ ಸಾಗಣೆ ಹಡಗಿನಲ್ಲಿ (ಆಯಿಲ್ ಟ್ಯಾಂಕರ್) ಸೋಮವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ ಎಂದುವರದಿಯಾಗಿದೆ.  ಅದೃಷ್ಟವಶಾತ್, ಹಡಗಿನಲ್ಲಿದ್ದ ಎಲ್ಲಾ 24 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ಇರಾನ್ ಮತ್ತು ಇಸ್ರೇಲ್ ಗಳು ಕದನ ವಿರಾಮವನ್ನು ಉಲ್ಲಂಘಿಸಿ ಮತ್ತೆ … Continued

‘ಹಾರ್ಮುಜ್ ಜಲಸಂಧಿ’ ಬಿಕ್ಕಟ್ಟು : ಭಾರತ-ಒಮಾನ್ ಒಪ್ಪಂದದಿಂದ ಕೊಲ್ಲಿ ರಾಷ್ಟ್ರಗಳ ತೈಲ ಸಾಗಾಟಕ್ಕೆ ಭಾರತಕ್ಕೆ ಸಿಕ್ಕಿತು ಹೊಸ ದಾರಿ

 ನವದೆಹಲಿ: ಭಾರತದ ಶ್ರಮ-ಆಧಾರಿತ (ಲಾಭರ್-ಇಂಟೆನ್ಸಿವ್) ರಫ್ತು ಉತ್ಪನ್ನಗಳಿಗೆ ಶೂನ್ಯ-ಸುಂಕದ ಮುಕ್ತ ಪ್ರವೇಶವನ್ನು ಕಲ್ಪಿಸುವ ಭಾರತ ಮತ್ತು ಒಮಾನ್ ನಡುವಿನ ಐತಿಹಾಸಿಕ ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ (CEPA) ಸೋಮವಾರದಿಂದ (ಜೂನ್‌ ೧) ಜಾರಿಗೆ ಬಂದಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಸ್ಕತ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಮಹತ್ವದ ವ್ಯಾಪಾರ ಒಪ್ಪಂದಕ್ಕೆ … Continued

ಅಮೆರಿಕ ಜೊತೆ ಶಾಂತಿ ಮಾತುಕತೆ ವ್ಯತ್ಯಯವಾದ ಬೆನ್ನಲ್ಲೇ ʼಹಾರ್ಮುಜ್ʼ ಬಗ್ಗೆ ಓಮನ್ ಜೊತೆ ಮಹತ್ವದ ಒಪ್ಪಂದಕ್ಕೆ ಬಂದ ಇರಾನ್

ಮಸ್ಕತ್ : ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಉನ್ನತ ಮಟ್ಟದ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಓಮನ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ “ಕೆಲವು ಒಪ್ಪಂದಗಳಿಗೆ ಬರಲಾಗಿದೆ” ಎಂದು ಸೋಮವಾರ ತಿಳಿಸಿದ್ದಾರೆ. ವಾರದ ಕೊನೆಯಲ್ಲಿ ಪಾಕಿಸ್ತಾನ ಮತ್ತು ಓಮನ್‌ನಂತಹ ಪ್ರಮುಖ ಮಧ್ಯಸ್ಥಿಕೆ … Continued

ಒಮಾನ್ ಕೊಲ್ಲಿಯಲ್ಲಿ ತೈಲ ನೌಕೆ ಮೇಲೆ ಡ್ರೋನ್ ದಾಳಿ: ಭಾರತೀಯ ಸಿಬ್ಬಂದಿ ಸಾವು

ಮಸ್ಕತ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಒಮಾನ್ ಕೊಲ್ಲಿಯಲ್ಲಿ ಸ್ಫೋಟಕ ತುಂಬಿದ ಡ್ರೋನ್ ಬೋಟ್ ತೈಲ ನೌಕೆಯೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ಭೀಕರ ದಾಳಿಯಲ್ಲಿ ಭಾರತೀಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಪ್ರಚಲಿತ ಸಂಘರ್ಷದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಇದೇ ಮೊದಲು. ಒಮಾನ್‌ನ ಅಧಿಕೃತ ಸುದ್ದಿ ಸಂಸ್ಥೆಯ ಪ್ರಕಾರ, … Continued

ಕೋವಿಡ್ -19 ಉಲ್ಬಣದ ಮಧ್ಯೆ ಭಾರತದ ಮೇಲೆ ಪ್ರಯಾಣದ ನಿರ್ಬಂಧ ವಿಧಿಸಿದ ಯುಎಇ, ಒಮಾನ್, ಆಸ್ಟ್ರೇಲಿಯಾ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಆಸ್ಟ್ರೇಲಿಯಾ ಮತ್ತು ಓಮನ್ ದೇಶಗಳು ಕೊರೊನಾ ಸೋಂಕಿನಲ್ಲಿ ಭಾರಿ ಏರಿಕೆಯ ಹಿನ್ನೆಲೆಯಲ್ಲಿ ಭಾರತದ ಮೇಲೆ ಪ್ರಯಾಣ ನಿರ್ಬಂಧಗಳನ್ನು ವಿಧಿಸಿರುವ ದೇಶಗಳ ಪಟ್ಟಿಗೆ ಸೇರ್ಪಡೆಗೊಂಡಿವೆ, ಇದು ದೇಶದಿಂದ ವಿಮಾನಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತದೆ. ಗುರುವಾರ, ಸಿಂಗಾಪುರವು ಭಾರತದಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಈ ಕ್ರಮವು ಭಾರತ ಮತ್ತು ದಕ್ಷಿಣ ಏಷ್ಯಾದ … Continued