ಗ್ರಾಮೀಣ ಭಾಗದ ಎಲ್​ಪಿಜಿ ಸಿಲಿಂಡರ್‌ ರೀಫಿಲ್ ಬುಕಿಂಗ್ ಅವಧಿ ಕಡಿಮೆ ಮಾಡಿದ ಕೇಂದ್ರ

ನವದೆಹಲಿ: ಎಲ್‌ಪಿಜಿ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಗ್ಯಾಸ್ ಸಿಲಿಂಡರ್ ಮರುಬುಕ್ಕಿಂಗ್‌ ಅವಧಿಯನ್ನು 45 ದಿನಗಳಿಂದ 25 ದಿನಗಳಿಗೆ ಇಳಿಸಿದೆ. ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಸುರೇಶ ಗೋಪಿ ಸೋಮವಾರ ಈ ವಿಷಯವನ್ನು ಪ್ರಕಟಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಉಂಟಾದ ಸಂಘರ್ಷದ ಪರಿಣಾಮ ಎಲ್‌ಪಿಜಿ … Continued

ಇರಾನ್‌ ಯುದ್ಧ ಯಾರಿಗೆ ಲಾಭ ? ಎಲ್‌ಪಿಜಿ, ಎಲ್‌ಎನ್‌ಜಿ : ಗಲ್ಫ್‌ ಅಲ್ಲ, ಈಗ ಅಮೆರಿಕವೇ ಭಾರತಕ್ಕೆ ಅತಿದೊಡ್ಡ ಪೂರೈಕೆದಾರ !

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಪರಿಸ್ಥಿತಿಯಿಂದ ಸಾಂಪ್ರದಾಯಿಕ ಗಲ್ಫ್ ರಾಷ್ಟ್ರಗಳಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತವು ಅಮೆರಿಕದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಆಮದುಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದೆ. ಸಮುದ್ರ ಸಾರಿಗೆ ಮತ್ತು ಇಂಧನ ವ್ಯಾಪಾರ ಮಾಹಿತಿ ಸಂಸ್ಥೆ ಕ್ಲೆಪರ್ (Kpler) ಬಿಡುಗಡೆ ಮಾಡಿದ ಅಂಕಿ-ಅಂಶಗಳು … Continued

ವಾಣಿಜ್ಯ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ; ಇಂದಿನಿಂದಲೇ ಹೊಸ ದರ ಜಾರಿ

ನವದೆಹಲಿ: ಜುಲೈ 1ರಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಮತ್ತು ತೈಲ ಮಾರುಕಟ್ಟೆ ಕಂಪನಿಗಳಿಂದ ನೆಮ್ಮದಿ ಸುದ್ದಿ ಸಿಕ್ಕಿದೆ. ತೈಲ ಮಾರುಕಟ್ಟೆ ಕಂಪನಿಗಳು (OMCs) 19 ಕೆ.ಜಿ. ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹183.50 ಇಳಿಕೆ ಮಾಡಿವೆ. ಜುಲೈ 1ರಿಂದಲೇ ಈ ಹೊಸ ದರಗಳು ಜಾರಿಗೆ ಬಂದಿದೆ.  ಆದರೆ ಗೃಹ … Continued

ಕೇಂದ್ರದಿಂದ ಗುಡ್‌ನ್ಯೂಸ್ ; ವಾಣಿಜ್ಯ ಬಳಕೆ ಎಲ್‌ಪಿಜಿ ಮೇಲಿನ ನಿರ್ಬಂಧ ತೆಗೆದುಹಾಕಿದ ಸರ್ಕಾರ ; ಪೂರೈಕೆ ಸಹಜ ಸ್ಥಿತಿಗೆ

ನವದೆಹಲಿ: ಇರಾನ್‌-ಅಮೆರಿಕ ಸಂಘರ್ಷದ ಕಾರಣ ತಲೆದೋರಿದ್ದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ (ಅಡುಗೆ ಅನಿಲ) ಮೇಲೆ ಹೇರಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ಕೇಂದ್ರ ಸರ್ಕಾರವು ಗುರುವಾರ ತೆಗೆದುಹಾಕಿದೆ. ದೇಶೀಯ ಉತ್ಪಾದನೆಯಲ್ಲಿನ ಸುಧಾರಣೆ ಹಾಗೂ ಆಮದು ಮಾಡಿಕೊಳ್ಳಲಾದ ಎಲ್‌ಪಿಜಿ ಹೊತ್ತ ಹಡಗುಗಳು ಶೀಘ್ರದಲ್ಲೇ ಭಾರತಕ್ಕೆ ತಲುಪಲಿರುವ ಹಿನ್ನೆಲೆಯಲ್ಲಿ, ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ಇರಾನ್‌ ಯುದ್ಧದ ಮೊದಲಿಗೆ ಇದ್ದ … Continued

‘ಹಾರ್ಮುಜ್ ಜಲಸಂಧಿ’ ಬಿಕ್ಕಟ್ಟು : ಭಾರತ-ಒಮಾನ್ ಒಪ್ಪಂದದಿಂದ ಕೊಲ್ಲಿ ರಾಷ್ಟ್ರಗಳ ತೈಲ ಸಾಗಾಟಕ್ಕೆ ಭಾರತಕ್ಕೆ ಸಿಕ್ಕಿತು ಹೊಸ ದಾರಿ

 ನವದೆಹಲಿ: ಭಾರತದ ಶ್ರಮ-ಆಧಾರಿತ (ಲಾಭರ್-ಇಂಟೆನ್ಸಿವ್) ರಫ್ತು ಉತ್ಪನ್ನಗಳಿಗೆ ಶೂನ್ಯ-ಸುಂಕದ ಮುಕ್ತ ಪ್ರವೇಶವನ್ನು ಕಲ್ಪಿಸುವ ಭಾರತ ಮತ್ತು ಒಮಾನ್ ನಡುವಿನ ಐತಿಹಾಸಿಕ ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ (CEPA) ಸೋಮವಾರದಿಂದ (ಜೂನ್‌ ೧) ಜಾರಿಗೆ ಬಂದಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಸ್ಕತ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಮಹತ್ವದ ವ್ಯಾಪಾರ ಒಪ್ಪಂದಕ್ಕೆ … Continued

ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ, ಆದ್ರೆ ಸೃಷ್ಟಿಲಾಗುತ್ತಿದೆ : ಕಾಂಗ್ರೆಸ್‌ ನಿಲುವಿಗೆ ವಿರುದ್ಧದ ಹೇಳಿಕೆ ನೀಡಿದ ಹಿರಿಯ ನಾಯಕ ಕಮಲನಾಥ !

ಛಿಂದ್ವಾರ/ ನವದೆಹಲಿ : ದೇಶದಲ್ಲಿ ಎಲ್‌ಪಿಜಿ ಮತ್ತು ಅನಿಲ ಕೊರತೆಯ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ನಡುವೆಯೇ ಭಿನ್ನಾಭಿಪ್ರಾಯಗಳು ಮೂಡಿವೆ. ಒಂದೆಡೆ ಹಿರಿಯ ನಾಯಕ ಕಮಲನಾಥ ಅವರು ದೇಶದಲ್ಲಿ ಎಲ್‌ಪಿಜಿ ಮತ್ತು ಅನಿಲ ಕೊರತೆಯ ವರದಿಗಳನ್ನು ತಳ್ಳಿಹಾಕಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಸಂಸದರು ಸಂಸತ್ತಿನಲ್ಲಿ ಈ ವಿಷಯವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಧ್ಯಪ್ರದೇಶದ ಮಾಜಿ … Continued

ಇರಾನ್‌ ಯುದ್ಧದ ಮಧ್ಯೆ ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ಯುದ್ಧಪೂರ್ವ ಬೇಡಿಕೆಯ ಶೇ.70ರಷ್ಟಕ್ಕೆ ಹೆಚ್ಚಿಸಿದ ಕೇಂದ್ರ

ನವದೆಹಲಿ: ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯ ಭೀತಿಯ ನಡುವೆ ಕೇಂದ್ರ ಸರ್ಕಾರವು ದೇಶದ ಜನತೆಗೆ ಮತ್ತು ಕೈಗಾರಿಕಾ ವಲಯಕ್ಕೆ ಸಮಾಧಾನಕರ ಸುದ್ದಿ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು (Excise Duty) ಪ್ರತಿ ಲೀಟರ್‌ಗೆ 10 ರೂಪಾಯಿಗಳಷ್ಟು ಕಡಿತಗೊಳಿಸುವುದಾಗಿ ಶುಕ್ರವಾರ ಘೋಷಿಸಿದೆ. ಜೊತೆಗೆ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಪೂರೈಕೆಯನ್ನು ಶೇ. … Continued

ಇಂಧನ ಬಿಕ್ಕಟ್ಟಿನಲ್ಲಿರುವ ಭಾರತಕ್ಕೆ 20,000 ಕಿಮೀ ದೂರದ ಸ್ನೇಹಿತನಿಂದ ಸಹಾಯ ಹಸ್ತ…!

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಇರಾನ್‌ ಯುದ್ಧವು ಭಾರತದ ಇಂಧನ ವಲಯದ ಮೇಲೆ ಪರಿಣಾಮ ಬೀರಿದೆ. ದೇಶದಲ್ಲಿ ಅಡುಗೆ ಅನಿಲದ (LPG) ಸಮಸ್ಯೆ ಸೃಷ್ಟಿಯಾಗಿರುವ ಈ ಸಂಕಷ್ಟದ ಸಮಯದಲ್ಲಿ, ಸುಮಾರು 20,000 ಕಿಲೋಮೀಟರ್ ದೂರದಲ್ಲಿರುವ ದಕ್ಷಿಣ ಅಮೆರಿಕಾದ ರಾಷ್ಟ್ರ ಅರ್ಜೆಂಟೀನಾ ಭಾರತದ ನೆರವಿಗೆ ಧಾವಿಸಿದೆ. ಭಾರತವು ತನ್ನ ಒಟ್ಟು ಎಲ್‌ಪಿಜಿ ಆಮದಿನ ಸುಮಾರು ಶೇಕಡಾ 60 … Continued

ಬಿಕ್ಕಟ್ಟಿನ ನಡುವೆಯೇ ಮಂಗಳೂರು ಬಂದರಿಗೆ ಅಮೆರಿಕದಿಂದ ಎಲ್‌ಪಿಜಿ ಹೊತ್ತ ಹಡಗು ಆಗಮನ

ಮಂಗಳೂರು : ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೇ, ಅಮೆರಿಕದಿಂದ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಹೊತ್ತ ಬೃಹತ್ ಸರಕು ಸಾಗಣೆ ಹಡಗು ದೇಶದ ಮಂಗಳೂರು ಬಂದರಿಗೆ ಬಂದು ತಲುಪಿದೆ. ಅಮೆರಿಕದ ಟೆಕ್ಸಾಸ್ ರಾಜ್ಯದಿಂದ ಎಲ್‌ಪಿಜಿ ಹೊತ್ತು ತಂದ ‘ಪೈಕ್ಸಿಸ್ ಪಯೋನೀರ್’ (Pyxis Pioneer) ಎಂಬ ಸರಕು ನೌಕೆಯು ಬಂದರಿನಲ್ಲಿ ಯಶಸ್ವಿಯಾಗಿ ಲಂಗರು ಹಾಕಿದೆ. ಇದು ಭಾರತಕ್ಕೆ … Continued

ಹೊಟೇಲ್‌, ರೆಸ್ಟೋರೆಂಟ್​​ಗಳಿಗೆ ಗುಡ್ ನ್ಯೂಸ್: ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ಹೆಚ್ಚಳ ಮಾಡಿದ ಕೇಂದ್ರ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ದೇಶದ ಇಂಧನ ಭದ್ರತೆ ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಪೂರೈಕೆಯಲ್ಲಿ ರಾಜ್ಯಗಳಿಗೆ ಹೆಚ್ಚುವರಿ ಶೇ. 20ರಷ್ಟು ಸಿಲಿಂಡರ್‌ಗಳನ್ನು ನೀಡಲು ಸರ್ಕಾರ ಅನುಮೋದನೆ ನೀಡಿದೆ. ಇದರಿಂದಾಗಿ ಒಟ್ಟಾರೆ ಹಂಚಿಕೆಯು ಶೇ. 50ಕ್ಕೆ ಏರಿಕೆಯಾಗಲಿದೆ. … Continued