15 ತಿಂಗಳ ಗಾಜಾ ಯುದ್ಧ ಕೊನೆಗೊಳಿಸುವ ಒಪ್ಪಂದಕ್ಕೆ ಇಸ್ರೇಲ್-ಹಮಾಸ್ ಒಪ್ಪಿಗೆ: ವರದಿ

ಗಾಜಾದಲ್ಲಿ ಈವರೆಗೆ 46,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ 15 ತಿಂಗಳ ಸುದೀರ್ಘ ಯುದ್ಧವನ್ನು ಕೊನೆಗೊಳಿಸಲು ಇಸ್ರೇಲ್ ಮತ್ತು ಹಮಾಸ್ ಗುಂಪು ಕದನ ವಿರಾಮ ಒಪ್ಪಂದಕ್ಕೆ ಬಂದಿವೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ. ಅಕ್ಟೋಬರ್ 7, 2023 ರಂದು ಹಮಾಸ್ ಉಗ್ರಗಾಮಿಗಳು ಇಸ್ರೇಲ್‌ನ ಮೇಲೆ ರಾಕೆಟ್‌ಗಳಿಂದ … Continued

ವೀಡಿಯೊಗಳು..| ಸಿರಿಯಾದೊಳಗೆ ನುಗ್ಗಿ 3 ತಾಸಿನಲ್ಲೇ ನೆಲದೊಳಗಿದ್ದ ಕ್ಷಿಪಣಿ ಸ್ಥಾವರ ನಾಶ ಮಾಡಿದ 120 ಇಸ್ರೇಲಿ ಕಮಾಂಡೊಗಳು..! ಇದು ಸಾಧ್ಯವಾಗಿದ್ದು ಹೇಗೆ..?

ನವದೆಹಲಿ: 120 ಇಸ್ರೇಲಿ ಕಮಾಂಡೋಗಳು ಸಿರಿಯಾದಲ್ಲಿ ಭೂಗತವಾಗಿದ್ದ ಇರಾನ್ ಅನುದಾನಿತ ಕ್ಷಿಪಣಿ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ ಅತ್ಯಂತ ಉನ್ನತ ಕಾರ್ಯಾಚರಣೆಯ ವಿವರಗಳನ್ನು ಇಸ್ರೇಲಿ ಏರ್ ಫೋರ್ಸ್ (IAF) ಗುರುವಾರ ಬಹಿರಂಗಪಡಿಸಿದೆ. “ಆಪರೇಷನ್ ಮೆನಿ ವೇಸ್” ಎಂಬ ಕೋಡ್‌ವರ್ಡ್‌ಹೆಸರಿನ ಕಾರ್ಯಾಚರಣೆಯನ್ನು 2024 ರ ಸೆಪ್ಟೆಂಬರ್ 8 ರಂದು ನಡೆಸಲಾಯಿತು ಎಂದು ಅದು ಹೇಳಿದೆ. … Continued

ಇಸ್ರೇಲಿ ವಾಯು ದಾಳಿಯಲ್ಲಿ ಹೆಜ್ಬೊಲ್ಲಾ ಮುಖ್ಯ ವಕ್ತಾರ ಸಾವು

ಲೆಬನಾನಿನ ಹೆಜ್ಬೊಲ್ಲಾ ಗುಂಪಿನ ಮುಖ್ಯ ವಕ್ತಾರ ಭಾನುವಾರ ಮಧ್ಯ ಬೈರುತ್‌ನಲ್ಲಿ ನಡೆದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅವರ ಸಾವಿನ ಕುರಿತು ಹೆಜ್ಬೊಲ್ಲಾಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್‌ ವರದಿ ಮಾಡಿದೆ. ಲೆಬನಾನಿನ ಮಧ್ಯ ಬೈರುತ್‌ ಮೇಲೆ ನಡೆದ ಇಸ್ರೇಲಿ ದಾಳಿಯಲ್ಲಿ ಹೆಜ್ಬೊಲ್ಲಾದ ಮುಖ್ಯ ವಕ್ತಾರ ಮೊಹಮ್ಮದ್ ಅಫೀಫ್ ಸಾವಿಗೀಡಾಗಿದ್ದಾರೆ … Continued

ವೀಡಿಯೊ…| ಇಸ್ರೇಲಿ ಪ್ರಧಾನಿ ನೆತನ್ಯಾಹು ಮನೆ ಮೇಲೆ ಫ್ಲ್ಯಾಶ್ ಬಾಂಬ್‌ ದಾಳಿ

ಶನಿವಾರ ಇಸ್ರೇಲಿನ ಉತ್ತರ ಪಟ್ಟಣವಾದ ಸಿಸೇರಿಯಾದಲ್ಲಿರುವ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆಯ ಕಡೆಗೆ ಎರಡು ಫ್ಲಾಶ್ ಬಾಂಬ್‌ ದಾಳಿ ನಡೆದಿದೆ ಎಂದು ವರದಿಯಾಗಿದೆ. ಈ ವೇಳೆ ಪ್ರಧಾನಿ ನೆತನ್ಯಾಹು ಮತ್ತು ಅವರ ಕುಟುಂಬವು ಮನೆಯಲ್ಲಿ ಇರಲಿಲ್ಲ ಮತ್ತು ಫ್ಲ್ಯಾಷ್ ಬಾಂಬ್ ನೆತನ್ಯಾಹು ಅವರ ಮನೆಯ ಉದ್ಯಾನಕ್ಕೆ ಬಿದ್ದ ನಂತರ ಬೆಂಕಿ ಹೊತ್ತಿ ಉರಿದಿದೆ. … Continued

ವೀಡಿಯೊ..| ಸ್ಮಶಾನದ ಅಡಿಯಲ್ಲಿ ಹೆಜ್ಬೊಲ್ಲಾಗಳ ಬೃಹತ್‌ ಭೂಗತ ಸುರಂಗ ಪತ್ತೆ ; ಅದರಲ್ಲಿದ್ದವು ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರಗಳು, ರಾಕೆಟ್‌ಗಳು, ದ್ವಿಚಕ್ರವಾಹನಗಳು

ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಸದಸ್ಯರು ಬಳಸುತ್ತಿದ್ದ ಅನೇಕ ಭೂಗತ ಸುರಂಗಗಳನ್ನು “ಕಿತ್ತುಹಾಕಲಾಗಿದೆ” ಎಂದು ಇಸ್ರೇಲಿ ಮಿಲಿಟರಿ ಭಾನುವಾರ ಹೇಳಿದೆ. ಇದರಲ್ಲಿ ಸ್ಮಶಾನದ ಅಡಿಯಲ್ಲಿ ಇರುವ ಭೂಗತ ಸುರಂಗವೂ ಸೇರಿದೆ ಎಂದು ಹೇಳಲಾಗಿದೆ. X ನಲ್ಲಿನ ಪೋಸ್ಟ್‌ನಲ್ಲಿ, ಇಸ್ರೇಲಿ ರಕ್ಷಣಾ ಪಡೆಗಳು (IDF) ಹಂಚಿಕೊಂಡ ವೀಡಿಯೊದಲ್ಲಿ ಕಿಲೋಮೀಟರ್ ಗಟ್ಟಲೆ ಉದ್ದದ ಸುರಂಗವು ಕಮಾಂಡ್ ಮತ್ತು ಕಂಟ್ರೋಲ್ ರೂಂಗಳು, ಮಲಗುವ … Continued

ವೀಡಿಯೊ…| ಇಸ್ರೇಲ್‌ ವೈಮಾನಿಕ ದಾಳಿಯಲ್ಲಿ ಹಮಾಸ್ ಉನ್ನತ ನಾಯಕ ಸಾವು ; ಇಸ್ರೇಲ್‌ ಸೇನೆಯಿಂದ ಆ ಕ್ಷಣದ ವೀಡಿಯೊ ಬಿಡುಗಡೆ..

ಗಾಜಾದ ಹಮಾಸ್‌ ಮೂಲಭೂತವಾದಿ ಗುಂಪಿನಲ್ಲಿ ಉಳಿದಿರುವ ಕೊನೆಯ ಹಿರಿಯ ಅಧಿಕಾರಿಗಳಲ್ಲಿ ಒಬ್ಬರು ಎನ್ನಲಾದ ಪ್ರಮುಖ ನಾಯಕನನ್ನು ಕೊಂದಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ. ಸಾಮಾಜಿಕ ಮಾಧ್ಯಮಕ್ಕೆ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ಇಸ್ರೇಲಿ ಮಿಲಿಟರಿ ಹಮಾಸ್‌ನ ರಾಜಕೀಯ ಬ್ಯೂರೋದ ರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥ ಇಜ್ ಅಲ್-ದಿನ್ ಕಸಾಬ್ ದಕ್ಷಿಣ ಗಾಜಾ ಪಟ್ಟಣವಾದ ಖಾನ್ ಯೂನಿಸ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ … Continued

ವೀಡಿಯೊಗಳು..| ಪ್ರತೀಕಾರದ ದಾಳಿಯಲ್ಲಿ ಇರಾನ್‌ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದ ಇಸ್ರೇಲ್ ; ಟೆಹ್ರಾನ್ ಸುತ್ತಮುತ್ತ ದೊಡ್ಡ ಸ್ಫೋಟಗಳು

ದುಬೈ: ಭಾರೀ ಶಸ್ತ್ರಸಜ್ಜಿತ ಪ್ರತಿಸ್ಪರ್ಧಿಗಳ ನಡುವೆ ಹೆಚ್ಚುತ್ತಿರುವ ಸಂಘರ್ಷದ ಇತ್ತೀಚಿನ ಬೆಳವಣಿಗೆಯಲ್ಲಿ ಕಳೆದ ಅಕ್ಟೋಬರ್ 1 ರಂದು ಇರಾನ್‌ ನಡೆಸಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇರಾನ್‌ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ಶನಿವಾರ ಮುಂಜಾನೆ ವೈಮಾನಿಕ ದಾಳಿ ನಡೆಸಿದೆ. ದಾಳಿಯಿಂದಾದ ಸಾವು ನೋವಿನ ಬಗ್ಗೆ ತಕ್ಷಣದ ಮಾಹಿತಿ ಇಲ್ಲ. ಇರಾನ್‌ನಲ್ಲಿನ ಮಿಲಿಟರಿ ನೆಲೆಗಳ ಮೇಲೆ … Continued

ಶಾಕಿಂಗ್‌ ವೀಡಿಯೊ..| ಬೈರುತ್‌ ನಲ್ಲಿ ಬೃಹತ್‌ ಅಪಾರ್ಟ್‌ಮೆಂಟ್‌ ಅನ್ನು ಧೂಳಾಗಿ ಪರಿವರ್ತಿಸಿದ ಭಯಾನಕ ಇಸ್ರೇಲಿ ಕ್ಷಿಪಣಿ ದಾಳಿ…!

ಬೈರುತ್ (ಲೆಬನಾನ್) : ಲೆಬನಾನ್‌ನಲ್ಲಿ ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವೆ ನಡೆಯುತ್ತಿರುವ ಘರ್ಷಣೆಗಳ ನಡುವೆ ಲೆಬನಾನಿನ ಬೈರುತ್‌ನಲ್ಲಿ ಮಂಗಳವಾರ ಇಸ್ರೇಲಿ ಕ್ಷಿಪಣಿಯೊಂದು ವಸತಿ ಕಟ್ಟಡಕ್ಕೆ ಅಪ್ಪಳಿಸಿದ ವೀಡಿಯೊ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ದಿ ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಬಹುಮಹಡಿ ಕಟ್ಟಡವು ನಗರದ ಉದ್ಯಾನವನವಾದ ಹೋರ್ಶ್ ಬೈರುತ್‌ನ ಪಕ್ಕದಲ್ಲಿ ತಯೂನೆ ಪ್ರದೇಶದಲ್ಲಿತ್ತು ಎಂದು … Continued

ವೀಡಿಯೊ..| ದಣಿದಿದ್ದರೂ ಚಿಕಿತ್ಸೆ ಕೊಡಿಸಲು ಗಾಯಗೊಂಡ ತಂಗಿಯನ್ನು ಹೆಗಲ ಮೇಲೆ 2 ಕಿಮೀ ಹೊತ್ತೊಯ್ದ ಪುಟ್ಟ ಪ್ಯಾಲೇಸ್ತಿನಿಯನ್ ಹುಡುಗಿ..

ದಣಿದ ಪ್ಯಾಲೇಸ್ತಿನಿಯನ್ ಪುಟ್ಟ ಹುಡುಗಿಯೊಬ್ಬಳು ಗಾಯಗೊಂಡಿರುವ ತನ್ನ ಸಹೋದರಿಗೆ ಅಗತ್ಯ ಚಿಕಿತ್ಸೆ ಕೊಡಿಸಲು ತನ್ನ ಭುಜದ ಮೇಲೆ ಹೊತ್ತುಕೊಂಡು ಗಾಜಾ ಪಟ್ಟಿಯ ಬೀದಿಗಳಲ್ಲಿ ಹೋಗುತ್ತಿರುವ ವೀಡಿಯೊ ಸೋಮವಾರ ಹೊರಹೊಮ್ಮಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ತುಣುಕಿನ ಪ್ರಕಾರ, ಹುಡುಗಿ ತನ್ನ ಸಹೋದರಿಯನ್ನು ಹೊತ್ತೊಯ್ಯುವಾಗ ದಣಿದಿದ್ದಾಳೆ. ಪುಟ್ಟ ಮಗುವಿನ ಭುಜದ ಮೇಲಿದ್ದ ಮತ್ತೊಂದು ಮಗುವಿನ ಒಂದು ಕಾಲಿಗೆ ಪೆಟ್ಟಾದಂತೆ … Continued

ವೀಡಿಯೊ..| ಕಳೆದ ವರ್ಷ ಅಕ್ಟೋಬರ್ 7ರ ದಾಳಿ ಮೊದಲು ಹಮಾಸ್ ಮುಖ್ಯಸ್ಥ ಸಿನ್ವಾರ್ ಗಾಜಾದ ಭೂಗತ ಸುರಂಗಕ್ಕೆ ಹೋದ ವೀಡಿಯೊ ಹಂಚಿಕೊಂಡ ಇಸ್ರೇಲ್

ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ಸಾಮೂಹಿಕವಾಗಿ ಜನರನ್ನು ಹತ್ಯೆ ನಡೆಸಿದ ಹಮಾಸ್‌ ಗುಂಪಿನ ದಾಳಿಯ ಸಂಚಿನ ರೂವಾರಿ ಎಂದೇ ಇಸ್ರೇಲಿನಿಂದ ಬಿಂಬಿತವಾಗಿರುವ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಈ ದಾಳಿ ನಡೆಸುವ ಕೆಲವೇ ಗಂಟೆಗಳ ಮುನ್ನ ಗಾಜಾದ ಭೂಗತ ಸುರಂಗಕ್ಕೆ ತನ್ನ ಕುಟುಂಬ ಹಾಗೂ ವಸ್ತುಗಳನ್ನು ಸಾಗಿಸುತ್ತಿರುವ ದೃಶ್ಯವನ್ನು ಇಸ್ರೇಲ್ ಶನಿವಾರ ಬಿಡುಗಡೆ ಮಾಡಿದೆ. … Continued