ಗಾಜಾದ ಶೇ.70ರಷ್ಟು ಭಾಗ ವಶಪಡಿಸಿಕೊಳ್ಳಲು ಸೇನೆಗೆ ಇಸ್ರೇಲ್‌ ಪ್ರಧಾನಿ ಸೂಚನೆ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಇಡೀ ಗಾಜಾ ಪಟ್ಟಿಯನ್ನು ಸಂಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಳ್ಳಲು ಇಸ್ರೇಲ್ ಸಿದ್ಧತೆ ನಡೆಸಿದೆ. ಗಾಜಾ ಪಟ್ಟಿಯ ಒಟ್ಟು ಭೂಪ್ರದೇಶದ ಪೈಕಿ ಶೇಕಡಾ 70 ರಷ್ಟನ್ನು ತನ್ನ ಮಿಲಿಟರಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಯೋಜನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈಗಾಗಲೇ ಗಾಜಾದ ಬಹುತೇಕ ಜನಸಂಖ್ಯೆಯನ್ನು … Continued

ಹೊಸದಾಗಿ ನೇಮಕಗೊಂಡಿದ್ದ ಹಮಾಸ್‌ ಸೇನಾ ಮುಖ್ಯಸ್ಥನನ್ನು ಹೊಡೆದುರುಳಿಸಿದ ಇಸ್ರೇಲ್‌

ಟೆಲ್‌ ಅವೀವ್‌ : ಸೋಮವಾರ ಉತ್ತರ ಗಾಜಾದಲ್ಲಿ ನಡೆದ ದಾಳಿಯಲ್ಲಿ ಹಮಾಸ್ ಮಿಲಿಟರಿ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ಕಮಾಂಡರ್ ಮೊಹಮ್ಮದ್ ಒಡೆಹ್ ಅವರನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿದೆ. ಈ ಕುರಿತು ಇಸ್ರೇಲ್ ಸೇನೆ ಹಾಗೂ ಭದ್ರತಾ ಸಂಸ್ಥೆಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಸಿಎನ್‌ಎನ್ (CNN) ಸುದ್ದಿ ಸಂಸ್ಥೆ ಈ ವರದಿಯನ್ನು ಪ್ರಕಟಿಸಿದೆ. ಕೆಲ ದಿನಗಳ … Continued

ಗಾಜಾಕ್ಕೆ ಪಾಕ್ ಸೈನ್ಯ ; ಅಮೆರಿಕ ಅಧ್ಯಕ್ಷ ಟ್ರಂಪ್ ಒತ್ತಡಕ್ಕೆ ಇಕ್ಕಟ್ಟಿನಲ್ಲಿ ಸಿಲುಕಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ

ಇಸ್ಲಾಮಾಬಾದ್/ವಾಷಿಂಗ್ಟನ್ : ಪಾಕಿಸ್ತಾನದ ಅತ್ಯಂತ ಪ್ರಭಾವಿ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಪ್ಯಾಲೆಸ್ತೈನ್‌ನ ಯುದ್ಧ ಪೀಡಿತ ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪಿಸಲು ಪಾಕಿಸ್ತಾನಿ ಸೈನ್ಯವನ್ನು ಕಳುಹಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡ ಹೇರುತ್ತಿರುವುದು ಮುನೀರ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ … Continued

ವೀಡಿಯೊ | 7 ಕಿಮೀ ಉದ್ದ, 25 ಮೀಟರ್ ಆಳ, 80 ಕೊಠಡಿಗಳಿರುವ ಸುರಂಗ : ಗಾಝಾದಲ್ಲಿ ಹಮಾಸ್‌ ನ ಬೃಹತ್ ಸುರಂಗ ಪತ್ತೆಹಚ್ಚಿದ ಇಸ್ರೇಲ್

ಇಸ್ರೇಲ್ ರಕ್ಷಣಾ ಪಡೆಗಳು (IDF) ಗಾಝಾ ಪಟ್ಟಿಯಲ್ಲಿ ಹಮಾಸ್‌ನ ಬೃಹತ್ ಸುರಂಗ ಜಾಲವನ್ನು ಪತ್ತೆಹಚ್ಚಿದ್ದು, ಅಲ್ಲಿ ಲೆಫ್ಟಿನೆಂಟ್ ಹಾದರ್ ಗೋಲ್ಡಿನ್ ಅವರ ದೇಹವನ್ನು ಹಲವು ವರ್ಷಗಳ ಕಾಲ ರಹಸ್ಯವಾಗಿ ಇರಿಸಲಾಗಿತ್ತು. ಐಡಿಎಫ್‌ (IDF) ಅಧಿಕಾರಿಯಾಗಿದ್ದ ಗೋಲ್ಡಿನ್ ಅವರು 2014 ರ ಇಸ್ರೇಲ್-ಹಮಾಸ್ ಯುದ್ಧದ ವೇಳೆ ದಾಳಿಯಲ್ಲಿ ಮೃತಪಟ್ಟಿದ್ದರು. ರಹಸ್ಯ ಕಾರ್ಯಾಚರಣೆಗಳ ಬಳಿಕ ಈ ತಿಂಗಳ ಆರಂಭದಲ್ಲಿ … Continued

ಗಾಜಾ ಮೇಲೆ ಇಸ್ರೇಲ್‌ ದಾಳಿಯಲ್ಲಿ 5 ಅಲ್ ಜಜೀರಾ ಪತ್ರಕರ್ತರು ಸಾವು, ಓರ್ವ ಪತ್ರಕರ್ತ “ಹಮಾಸ್ ಭಯೋತ್ಪಾದಕ” ಎಂದ ಇಸ್ರೇಲ್

ಗಾಜಾ: ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ ಬಳಿ ಇಸ್ರೇಲಿ ನಡೆಸಿದ ದಾಳಿಯಲ್ಲಿ ಕನಿಷ್ಠ ಐದು ಅಲ್ ಜಜೀರಾ ಪತ್ರಕರ್ತರು ಸಾವಿಗೀಡಾಗಿದ್ದಾರೆ. ಮೃತರಲ್ಲಿ ಅಲ್ ಜಜೀರಾ ವರದಿಗಾರರಾದ ಅನಾಸ್ ಅಲ್-ಶರೀಫ್ ಮತ್ತು ಮೊಹಮ್ಮದ್ ಕ್ರೈಖೆ, ಹಾಗೆಯೇ ಕ್ಯಾಮೆರಾಮೆನ್ ಇಬ್ರಾಹಿಂ ಜಹೀರ್, ಮೊವಾಮೆನ್ ಅಲಿವಾ ಮತ್ತು ಮೊಹಮ್ಮದ್ ನೌಫಲ್ ಸೇರಿದ್ದಾರೆ ಎಂದು ಅಲ್ ಜಜೀರಾ ತಿಳಿಸಿದೆ. ಅಲ್-ಶಿಫಾ ಆಸ್ಪತ್ರೆಯ … Continued

ವೀಡಿಯೊ ; ತನ್ನ ಸಮಾಧಿ ತಾನೇ ಅಗೆಯುತ್ತಿರುವ ಇಸ್ರೇಲಿ ಒತ್ತೆಯಾಳುವಿನ ಭಯಾನಕ ವೀಡಿಯೊ ಬಿಡುಗಡೆ ಮಾಡಿದ ಹಮಾಸ್ ಗುಂಪು

ಟೆಲ್ ಅವಿವ್: ಇಸ್ರೇಲಿ ಒತ್ತೆಯಾಳು ಎವ್ಯಾಟರ್ ಡೇವಿಡ್ ಗಾಜಾದಲ್ಲಿ ತನ್ನ ಸಮಾಧಿಯನ್ನು ತಾನೇ ಅಗೆಯುತ್ತಿರುವ ಭಯಾನಕ ವೀಡಿಯೊವನ್ನು ಹಮಾಸ್ ಬಿಡುಗಡೆ ಮಾಡಿದೆ. ಶನಿವಾರ ಪ್ಯಾಲೆಸ್ಟೀನಿಯನ್ ಉಗ್ರಗಾಮಿ ಗುಂಪು ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಹಸಿವಿನಿಂದ ದೈಹಿಕವಾಗಿ ದುರ್ಬಲವಾಗಿರುವ ಡೇವಿಡ್ ಭೂಗತ ಸುರಂಗದಲ್ಲಿ ತನ್ನ ಸಮಾಧಿಯನ್ನು ತಾನೇ ಅಗೆಯಲು ಸಲಿಕೆಯನ್ನು ಬಳಸುತ್ತಿರುವುದನ್ನು ಕಾಣಬಹುದು. ಅಕ್ಟೋಬರ್ 7 ರಂದು ದಕ್ಷಿಣ … Continued

ವೀಡಿಯೊ..| 1000 ಕಿಮೀ ದೂರದಿಂದ ನಿಖರ ಡ್ರೋನ್‌ ದಾಳಿ ; ಕಾರಿನಲ್ಲಿ ಹೋಗುತ್ತಿದ್ದಾಗ ಇರಾನ್‌ ಸೇನಾ ನಾಯಕನ ಹತ್ಯೆ ಮಾಡಿದ ಇಸ್ರೇಲ್‌…!

ಪಶ್ಚಿಮ ಇರಾನ್‌ನಲ್ಲಿ ನಡೆದ ವಾಯುದಾಳಿಯಲ್ಲಿ, ಐಆರ್‌ಜಿಸಿ ಕುಡ್ಸ್ ಪಡೆಯ ಹಿರಿಯ ಅಧಿಕಾರಿ ಬೆಹ್ನಮ್ ಶಹ್ರಿಯಾರಿ ಕೊಲ್ಲಲ್ಪಟ್ಟರು ಎಂದು ಇಸ್ರೇಲ್‌ ಸೇನೆ ಶನಿವಾರ ತಿಳಿಸಿದೆ, ಇಸ್ರೇಲ್‌ನಿಂದ 1,000 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದ ಪ್ರದೇಶದಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಇಸ್ರೇಲ್‌ ನಡೆಸಿದ ನಿಖರ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಿದೆ. ಬೆಹ್ನಮ್ ಶಹರಿಯಾರಿ ಪಶ್ಚಿಮ ಇರಾನ್‌ನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲೇ … Continued

ಇಸ್ರೇಲ್ ಸೇನೆಯಿಂದ ಹಮಾಸ್ ಗುಂಪಿನ ಗಾಜಾ ಮುಖ್ಯಸ್ಥ ಮುಹಮ್ಮದ್ ಸಿನ್ವಾರ್ ಹತ್ಯೆ : ಇಸ್ರೇಲ್ ಪ್ರಧಾನಿ ನೆತನ್ಯಾಹು

ಟೆಲ್ ಅವಿವ್ (ಇಸ್ರೇಲ್) : ಹಮಾಸ್‌ನ ಗಾಜಾ ಮುಖ್ಯಸ್ಥ ಮುಹಮ್ಮದ್ ಸಿನ್ವಾರ್ ಅವರನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಪ್ರಕಟಿಸಿದ್ದಾರೆ. ಮೇ 14 ರಂದು ಇಸ್ರೇಲ್ ನಡೆಸಿದ ಬೃಹತ್ ವಾಯು ದಾಳಿಯಲ್ಲಿ ಹಮಾಸ್ ಮುಖ್ಯಸ್ಥ ಮುಹಮ್ಮದ್ ಸಿನ್ವಾರ್ ತೀವ್ರವಾಗಿ ಗಾಯಗೊಂಡಿದ್ದಾರೆ ಎಂಬ ವರದಿಗಳು ಬಂದವು. ಆ ಸಮಯದಲ್ಲಿ … Continued

ಹಮಾಸ್‌ ಜೊತೆ ನಂಟು ; ಅಮೆರಿಕದಲ್ಲಿ ಭಾರತದ ಸಂಶೋಧನಾ ವಿದ್ಯಾರ್ಥಿಯ ಬಂಧನ : ಶೀಘ್ರವೇ ಗಡೀಪಾರು

ನವದೆಹಲಿ : ಅಮೆರಿಕದ ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ಸಂಶೋಧನಾ ವಿದ್ಯಾರ್ಥಿಯನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ ಮತ್ತು ಅವರನ್ನು ಗಡೀಪಾರು ಮಾಡಲಾಗುತ್ತದೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಪೋಸ್ಟ್-ಡಾಕ್ಟರಲ್ ಫೆಲೋ ಆಗಿರುವ ಬಾದರ್ ಖಾನ್ ಸೂರಿ ಅವರನ್ನು ಸೋಮವಾರ ರಾತ್ರಿ ವರ್ಜೀನಿಯಾದ ಅವರ ಮನೆಯ ಹೊರಗೆ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಬಂಧಿಸಿದೆ. ಅಮೆರಿ ಸರ್ಕಾರವು ಅವರ … Continued

ಇಸ್ರೇಲಿ ದಾಳಿಯಲ್ಲಿ ಗಾಜಾದ ಹಮಾಸ್ ಸರ್ಕಾರದ ಮುಖ್ಯಸ್ಥ, ಇತರ ಉನ್ನತ ಅಧಿಕಾರಿಗಳು ಸಾವು

ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಗಾಜಾದ ಸರ್ಕಾರದ ಮುಖ್ಯಸ್ಥ ಇಸಾಮ್ ಅಲ್-ದಾಲಿಸ್ ಸೇರಿದಂತೆ ಹಲವಾರು ಉನ್ನತ ಅಧಿಕಾರಿಗಳು ಸತ್ತಿದ್ದಾರೆ ಎಂದು ಹಮಾಸ್ ದೃಢಪಡಿಸಿದೆ. ಈ ದಾಳಿಯಲ್ಲಿ ಆಂತರಿಕ ಸಚಿವಾಲಯದ ಮುಖ್ಯಸ್ಥ ಮಹ್ಮದ್ ಅಬು ವತ್ಫಾ ಮತ್ತು ಆಂತರಿಕ ಭದ್ರತಾ ಸೇವೆಯ ಮಹಾನಿರ್ದೇಶಕ ಬಹ್ಜತ್ ಅಬು ಸುಲ್ತಾನ್ ಸಹ ಸಾವಿಗೀಡಾಗಿದ್ದಾರೆ ಎಂದು ಹಮಾಸ್‌ ಹೇಳಿದೆ. ಎಎಫ್‌ಪಿ (AFP) ವರದಿಯ … Continued