ಗಾಜಾದ ಶೇ.70ರಷ್ಟು ಭಾಗ ವಶಪಡಿಸಿಕೊಳ್ಳಲು ಸೇನೆಗೆ ಇಸ್ರೇಲ್‌ ಪ್ರಧಾನಿ ಸೂಚನೆ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಇಡೀ ಗಾಜಾ ಪಟ್ಟಿಯನ್ನು ಸಂಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಳ್ಳಲು ಇಸ್ರೇಲ್ ಸಿದ್ಧತೆ ನಡೆಸಿದೆ. ಗಾಜಾ ಪಟ್ಟಿಯ ಒಟ್ಟು ಭೂಪ್ರದೇಶದ ಪೈಕಿ ಶೇಕಡಾ 70 ರಷ್ಟನ್ನು ತನ್ನ ಮಿಲಿಟರಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಯೋಜನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈಗಾಗಲೇ ಗಾಜಾದ ಬಹುತೇಕ ಜನಸಂಖ್ಯೆಯನ್ನು … Continued

ಗಾಜಾಕ್ಕೆ ಪಾಕ್ ಸೈನ್ಯ ; ಅಮೆರಿಕ ಅಧ್ಯಕ್ಷ ಟ್ರಂಪ್ ಒತ್ತಡಕ್ಕೆ ಇಕ್ಕಟ್ಟಿನಲ್ಲಿ ಸಿಲುಕಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ

ಇಸ್ಲಾಮಾಬಾದ್/ವಾಷಿಂಗ್ಟನ್ : ಪಾಕಿಸ್ತಾನದ ಅತ್ಯಂತ ಪ್ರಭಾವಿ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಪ್ಯಾಲೆಸ್ತೈನ್‌ನ ಯುದ್ಧ ಪೀಡಿತ ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪಿಸಲು ಪಾಕಿಸ್ತಾನಿ ಸೈನ್ಯವನ್ನು ಕಳುಹಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡ ಹೇರುತ್ತಿರುವುದು ಮುನೀರ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ … Continued

ವೀಡಿಯೊ | 7 ಕಿಮೀ ಉದ್ದ, 25 ಮೀಟರ್ ಆಳ, 80 ಕೊಠಡಿಗಳಿರುವ ಸುರಂಗ : ಗಾಝಾದಲ್ಲಿ ಹಮಾಸ್‌ ನ ಬೃಹತ್ ಸುರಂಗ ಪತ್ತೆಹಚ್ಚಿದ ಇಸ್ರೇಲ್

ಇಸ್ರೇಲ್ ರಕ್ಷಣಾ ಪಡೆಗಳು (IDF) ಗಾಝಾ ಪಟ್ಟಿಯಲ್ಲಿ ಹಮಾಸ್‌ನ ಬೃಹತ್ ಸುರಂಗ ಜಾಲವನ್ನು ಪತ್ತೆಹಚ್ಚಿದ್ದು, ಅಲ್ಲಿ ಲೆಫ್ಟಿನೆಂಟ್ ಹಾದರ್ ಗೋಲ್ಡಿನ್ ಅವರ ದೇಹವನ್ನು ಹಲವು ವರ್ಷಗಳ ಕಾಲ ರಹಸ್ಯವಾಗಿ ಇರಿಸಲಾಗಿತ್ತು. ಐಡಿಎಫ್‌ (IDF) ಅಧಿಕಾರಿಯಾಗಿದ್ದ ಗೋಲ್ಡಿನ್ ಅವರು 2014 ರ ಇಸ್ರೇಲ್-ಹಮಾಸ್ ಯುದ್ಧದ ವೇಳೆ ದಾಳಿಯಲ್ಲಿ ಮೃತಪಟ್ಟಿದ್ದರು. ರಹಸ್ಯ ಕಾರ್ಯಾಚರಣೆಗಳ ಬಳಿಕ ಈ ತಿಂಗಳ ಆರಂಭದಲ್ಲಿ … Continued

ಗಾಜಾ ಮೇಲೆ ಇಸ್ರೇಲ್‌ ದಾಳಿಯಲ್ಲಿ 5 ಅಲ್ ಜಜೀರಾ ಪತ್ರಕರ್ತರು ಸಾವು, ಓರ್ವ ಪತ್ರಕರ್ತ “ಹಮಾಸ್ ಭಯೋತ್ಪಾದಕ” ಎಂದ ಇಸ್ರೇಲ್

ಗಾಜಾ: ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ ಬಳಿ ಇಸ್ರೇಲಿ ನಡೆಸಿದ ದಾಳಿಯಲ್ಲಿ ಕನಿಷ್ಠ ಐದು ಅಲ್ ಜಜೀರಾ ಪತ್ರಕರ್ತರು ಸಾವಿಗೀಡಾಗಿದ್ದಾರೆ. ಮೃತರಲ್ಲಿ ಅಲ್ ಜಜೀರಾ ವರದಿಗಾರರಾದ ಅನಾಸ್ ಅಲ್-ಶರೀಫ್ ಮತ್ತು ಮೊಹಮ್ಮದ್ ಕ್ರೈಖೆ, ಹಾಗೆಯೇ ಕ್ಯಾಮೆರಾಮೆನ್ ಇಬ್ರಾಹಿಂ ಜಹೀರ್, ಮೊವಾಮೆನ್ ಅಲಿವಾ ಮತ್ತು ಮೊಹಮ್ಮದ್ ನೌಫಲ್ ಸೇರಿದ್ದಾರೆ ಎಂದು ಅಲ್ ಜಜೀರಾ ತಿಳಿಸಿದೆ. ಅಲ್-ಶಿಫಾ ಆಸ್ಪತ್ರೆಯ … Continued

ವೀಡಿಯೊ ; ತನ್ನ ಸಮಾಧಿ ತಾನೇ ಅಗೆಯುತ್ತಿರುವ ಇಸ್ರೇಲಿ ಒತ್ತೆಯಾಳುವಿನ ಭಯಾನಕ ವೀಡಿಯೊ ಬಿಡುಗಡೆ ಮಾಡಿದ ಹಮಾಸ್ ಗುಂಪು

ಟೆಲ್ ಅವಿವ್: ಇಸ್ರೇಲಿ ಒತ್ತೆಯಾಳು ಎವ್ಯಾಟರ್ ಡೇವಿಡ್ ಗಾಜಾದಲ್ಲಿ ತನ್ನ ಸಮಾಧಿಯನ್ನು ತಾನೇ ಅಗೆಯುತ್ತಿರುವ ಭಯಾನಕ ವೀಡಿಯೊವನ್ನು ಹಮಾಸ್ ಬಿಡುಗಡೆ ಮಾಡಿದೆ. ಶನಿವಾರ ಪ್ಯಾಲೆಸ್ಟೀನಿಯನ್ ಉಗ್ರಗಾಮಿ ಗುಂಪು ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಹಸಿವಿನಿಂದ ದೈಹಿಕವಾಗಿ ದುರ್ಬಲವಾಗಿರುವ ಡೇವಿಡ್ ಭೂಗತ ಸುರಂಗದಲ್ಲಿ ತನ್ನ ಸಮಾಧಿಯನ್ನು ತಾನೇ ಅಗೆಯಲು ಸಲಿಕೆಯನ್ನು ಬಳಸುತ್ತಿರುವುದನ್ನು ಕಾಣಬಹುದು. ಅಕ್ಟೋಬರ್ 7 ರಂದು ದಕ್ಷಿಣ … Continued

5 ರೂಪಾಯಿ ಬೆಲೆಯ ಪಾರ್ಲೆ-ಜಿ ಬಿಸ್ಕತ್ತಿನ ಬೆಲೆ ಗಾಜಾದಲ್ಲಿ ಬರೋಬ್ಬರಿ 2,342 ರೂ.ಗಳು…!

ನವದೆಹಲಿ: ಭಾರತೀಯ ಮನೆಗಳಲ್ಲಿ ಪ್ರಧಾನವಾಗಿ ಇರುವ ಪಾರ್ಲೆ-ಜಿ ಬಿಸ್ಕತ್ತುಗಳು, ಬಾಲ್ಯ, ಚಹಾ ಮತ್ತು ಕಡಿಮೆ ಬೆಲೆಯ ಪೌಷ್ಟಿಕಾಂಶದೊಂದಿಗೆ ಸಂಬಂಧ ಹೊಂದಿವೆ.ಭಾರತದಲ್ಲಿ ಪಾರ್ಲೆ-ಜಿ ಬಿಸ್ಕತ್ತು ಮಧ್ಯಮ ವರ್ಗದ ದಿನ ನಿತ್ಯದ ಆಹಾರವಾಗಿದೆ. ಎಲ್ಲಾ ಭಾರತೀಯ ಕುಟುಂಬಗಳಿಗೆ ಇದು ಚಿರಪರಿಚಿತ. ಇವುಗಳನ್ನು ಎಂದಿಗೂ ಐಷಾರಾಮಿ ಎಂದು ಯಾರೂ ಭಾವಿಸಿಲ್ಲ. ಆದರೆ ಯುದ್ಧಪೀಡಿತ ಗಾಜಾದಲ್ಲಿ, ಆಹಾರದ ಕೊರತೆಯು ತೀವ್ರ ಕ್ಷಾಮವಾಗಿ … Continued

ಇಸ್ರೇಲಿ ದಾಳಿಯಲ್ಲಿ ಗಾಜಾದ ಹಮಾಸ್ ಸರ್ಕಾರದ ಮುಖ್ಯಸ್ಥ, ಇತರ ಉನ್ನತ ಅಧಿಕಾರಿಗಳು ಸಾವು

ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಗಾಜಾದ ಸರ್ಕಾರದ ಮುಖ್ಯಸ್ಥ ಇಸಾಮ್ ಅಲ್-ದಾಲಿಸ್ ಸೇರಿದಂತೆ ಹಲವಾರು ಉನ್ನತ ಅಧಿಕಾರಿಗಳು ಸತ್ತಿದ್ದಾರೆ ಎಂದು ಹಮಾಸ್ ದೃಢಪಡಿಸಿದೆ. ಈ ದಾಳಿಯಲ್ಲಿ ಆಂತರಿಕ ಸಚಿವಾಲಯದ ಮುಖ್ಯಸ್ಥ ಮಹ್ಮದ್ ಅಬು ವತ್ಫಾ ಮತ್ತು ಆಂತರಿಕ ಭದ್ರತಾ ಸೇವೆಯ ಮಹಾನಿರ್ದೇಶಕ ಬಹ್ಜತ್ ಅಬು ಸುಲ್ತಾನ್ ಸಹ ಸಾವಿಗೀಡಾಗಿದ್ದಾರೆ ಎಂದು ಹಮಾಸ್‌ ಹೇಳಿದೆ. ಎಎಫ್‌ಪಿ (AFP) ವರದಿಯ … Continued

ಕದನ ವಿರಾಮದ ನಂತರ ಹಮಾಸ್‌ ಮೇಲೆ ಇಸ್ರೇಲ್‌ನ ಅತಿದೊಡ್ಡ ದಾಳಿ ; 200 ಕ್ಕೂ ಹೆಚ್ಚು ಜನರು ಸಾವು

ನವದೆಹಲಿ: ವಾರಗಳ ಕದನ ವಿರಾಮ ಮಾತುಕತೆಗಳು ಸ್ಥಗಿತಗೊಂಡ ನಂತರ ಇಸ್ರೇಲಿ ಮಿಲಿಟರಿಯು ಹಮಾಸ್ ಮೇಲೆ “ವಿಸ್ತೃತ ದಾಳಿ” ನಡೆಸಿದ್ದರಿಂದ ಮಂಗಳವಾರ ಗಾಜಾದಲ್ಲಿ ಕನಿಷ್ಠ 220 ಜನರು ಸಾವಿಗೀಡಾಗಿದ್ದಾರೆ. ಇದು ಜನವರಿ 19 ರಂದು ಕದನ ವಿರಾಮ ಪ್ರಾರಂಭವಾದ ನಂತರದಲ್ಲಿ ಯುದ್ಧ ಪೀಡಿತ ಗಾಜಾದಲ್ಲಿ ನಡೆದ ಅತಿದೊಡ್ಡ ದಾಳಿಯಾಗಿದೆ. ರಂಜಾನ್ ತಿಂಗಳಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ “ಹೆಚ್ಚಾಗಿ … Continued

ವೀಡಿಯೊ..| ನಾಲ್ವರು ಇಸ್ರೇಲಿ ಮಹಿಳಾ ಒತ್ತೆಯಾಳುಗಳ ಹಸ್ತಾಂತರಕ್ಕೆ ಜನಸಮೂಹದ ಮಧ್ಯೆ ಎಚ್ಚರಿಕೆಯಿಂದ ಕರೆತಂದ ಹಮಾಸ್‌ ಮುಸುಕುಧಾರಿಗಳು-ವೀಕ್ಷಿಸಿ

200 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುವುದಕ್ಕೆ ಬದಲಾಗಿ ಗಾಜಾ ಕದನ ವಿರಾಮ ಒಪ್ಪಂದದ 2 ನೇ ಹಂತದಲ್ಲಿ ನಾಲ್ವರು ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಶನಿವಾರ ಬಿಡುಗಡೆ ಮಾಡಿದೆ. 20 ವರ್ಷ ವಯಸ್ಸಿನವರಾದ ಕರೀನಾ ಅರಿಯೆವ್, ಡೇನಿಯೆಲ್ಲಾ ಗಿಲ್ಬೋವಾ ಮತ್ತು ನಾಮಾ ಲೆವಿ ಹಾಗೂ 19 ವರ್ಷದ ಲಿರಿ ಅಲ್ಬಾಗ್ ಎಂಬ ನಾಲ್ವರು ಮಹಿಳೆಯರನ್ನು ಶಸ್ತ್ರಸಜ್ಜಿತ ಮುಖ ಮರೆಮಾಚಿಕೊಂಡ … Continued

ಇಸ್ರೇಲ್‌ ದಾಳಿಯಲ್ಲಿ ಹತನಾದ 4 ತಿಂಗಳ ನಂತರ ಹೊರಹೊಮ್ಮಿದ ಹಮಾಸ್‌ ಮುಖ್ಯಸ್ಥ ಯುದ್ಧ ಭೂಮಿಯಲ್ಲಿ ಮರೆಮಾಚಿಕೊಂಡು ಓಡಾಡುತ್ತಿದ್ದ ವೀಡಿಯೊ…

ಹತ್ಯೆಗೀಡಾದ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರನ ನೋಡಿದ ವೀಡಿಯೊ ತುಣುಕನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಇಸ್ರೇಲ್ ಮತ್ತು ಗಾಜಾಪಟ್ಟಿಯಲ್ಲಿ ಉಗ್ರಗಾಮಿ ಗುಂಪಿನ ನಡುವಿನ ಯುದ್ಧದ ಸಮಯದಲ್ಲಿ ಆತ ಯುದ್ಧಭೂಮಿಯಲ್ಲಿ ನಡೆದಾಡುತ್ತಿರುವುದನ್ನು ಮತ್ತು ಗೊತ್ತಾಗದಂತೆ ಮರೆಮಾಚಿಕೊಂಡಿದ್ದನ್ನು ಇದು ತೋರಿಸುತ್ತದೆ. ಅಲ್ ಜಜೀರಾ ಬಿಡುಗಡೆ ಮಾಡಿದ ದೃಶ್ಯಾವಳಿಗಳು ಸಿನ್ವಾರ್, ಗಾಜಾದ ರಫಾದಲ್ಲಿ ಕೊಲ್ಲಲ್ಪಟ್ಟ ನಾಲ್ಕು ತಿಂಗಳ ನಂತರ ಬೆಳಕಿಗೆ ಬಂದಿವೆ. … Continued