ಜೀವ ಉಳಿಸಿಕೊಳ್ಳಲು ನಾಗರ ಹಾವಿನ ಹೆಡೆ ಮೇಲೆ ಕುಳಿತು ಪಾರಾದ ಇಲಿ ; ಬುದ್ಧಿವಂತಿಕೆಗೆ ಬೆರಗಾಗಲೇ ಬೇಕು | ವೀಕ್ಷಿಸಿ

ಸಾವು ಮುಂದೆ ನಿಂತಾಗ ಪ್ರಾಣಿಗಳು ಜೀವ ಉಳಿಸಿಕೊಳ್ಳಲು ಊಹಿಸಲಾಗದ ತಂತ್ರಗಾರಿಕೆ ಹಾಗೂ ಬುದ್ಧವಂತಿಕೆ ಉಪಯೋಗಿಸಿ ಪಾರಾಗುತ್ತವೆ. ಎಂದು ಹೇಳಲಾಗುತ್ತದೆ. ಇಲಿ ಚಾಣಾಕ್ಷತೆ ಮೂಲಕ ತನ್ನ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಹಾವಿನ ರೂಪದಲ್ಲಿ ಬಂದ ಸಾವಿನಿಂದ ಇಲಿ ಪಾರಾಗಿದ್ದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಇಲಿ ಮರಿಯೊಂದು ತನ್ನ ಜೀವ ಉಳಿಸಿಕೊಳ್ಳಲು … Continued

ವೀಡಿಯೊ…| ಪತ್ನಿಯಿಂದ ವಿಚ್ಛೇದನ ಪಡೆದ ನಂತರ 4 ಬಕೆಟ್‌ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ವ್ಯಕ್ತಿ…!

ಅಸ್ಸಾಂ ನಿವಾಸಿ ಮಾಣಿಕ್ ಅಲಿಗೆ ಇದು ಸಂಭ್ರಮದ ದಿನವಾಗಿತ್ತು. ಅವರು ಪತ್ನಿಯಿಂದ ವಿಚ್ಛೇದನ ಪಡೆದ ನಂತರ ಬಹುನಿರೀಕ್ಷಿತ “ಸ್ವಾತಂತ್ರ್ಯ”ವನ್ನು ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ ಮತ್ತು ಹಾಲಿನಲ್ಲಿ ಸ್ನಾನ ಮಾಡುವ ಮೂಲಕ ಅದನ್ನು ಅಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಕೆಳ ಅಸ್ಸಾಂನ ನಲ್ಬರಿ ಜಿಲ್ಲೆಯ ನಿವಾಸಿ ಮಾಣಿಕ್ ಅಲಿ, ತಮ್ಮ ಪತ್ನಿಯಿಂದ ಕಾನೂನುಬದ್ಧವಾಗಿ ಬೇರ್ಪಟ್ಟ ನಂತರ ಹಾಲಿನಲ್ಲಿ ಸ್ನಾನ ಮಾಡಿದರು. … Continued

ಮೈ ಜುಂ ಎನ್ನುವ ವೀಡಿಯೊ..| ದೈತ್ಯ ಕಾಳಿಂಗ ಸರ್ಪವನ್ನು ಬರಿ ಕೈಯಲ್ಲಿ ನಿರ್ಭಯವಾಗಿ- ಆರಾಮವಾಗಿ ಹಿಡಿದು ನಿಲ್ಲಿಸಿದ ವ್ಯಕ್ತಿ ; ವೀಕ್ಷಿಸಿ

ವ್ಯಕ್ತಿಯೊಬ್ಬರು ತನ್ನ ಬರಿ ಕೈಗಳಿಂದ ಬೃಹತ್ ಕಾಳಿಂಗ ಸರ್ಪವನ್ನು ಹಿಡಿದಿರುವ ಬೆರಗಾಗಿಸುವ ವೀಡಿಯೊ ವೈರಲ್ ಆಗಿದ್ದು, ಗಮನ ಸೆಳೆಯುತ್ತಿದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಎಂಬವರು ಹಂಚಿಕೊಂಡ ಈ ಕ್ಲಿಪ್, ಬೃಹತ್ ಕಾಳಿಂಗ ಸರ್ಪವನ್ನು ನಿರ್ವಹಿಸುವಾಗ ಆ ವ್ಯಕ್ತಿಯ ನಿರ್ಭೀತ ಹಾಗೂ ಶಾಂತವಾಗಿರುವುದನ್ನು ಪ್ರದರ್ಶಿಸುತ್ತದೆ. ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಬೃಹತ್ ಕಾಳಿಂಗ ಸರ್ಪವನ್ನು ಶಾಂತವಾಗಿ … Continued

ಭೂ ಕುಸಿತದಿಂದ ಗ್ರಾಮವೇ ನಾಶವಾದ್ರೂ ಅಪಾಯದ ಬಗ್ಗೆ ಮಧ್ಯರಾತ್ರಿ ಎಚ್ಚರಿಸಿ 67 ಜನರ ಜೀವ ಉಳಿಸಿದ ನಾಯಿ..!

ನವದೆಹಲಿ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ, ಭಾರತದ ವಿವಿಧ ಭಾಗಗಳಲ್ಲಿ ಭೂ ಕುಸಿತ, ಹಠಾತ್ ಪ್ರವಾಹ ಮತ್ತು ಮೇಘಸ್ಫೋಟಗಳು ಸಂಭವಿಸುತ್ತಿವೆ. ಇದರ ಮಧ್ಯೆ ಹಿಮಾಚಲ ಪ್ರದೇಶದ ನಾಯಿಯೊಂದು ಅನೇಕರ ಜೀವ ಉಳಿಸುವ ಕೆಲಸ ಮಾಡುವ ಮೂಲಕ ಸುದ್ದಿಯಲ್ಲಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಿಯಾಥಿ ಗ್ರಾಮದಲ್ಲಿ ಭೀಕರ ಭೂಕುಸಿತ ಸಂಭವಿಸುವ ಕೆಲವೇ ಕ್ಷಣಗಳ ಮೊದಲು, ಹಳ್ಳಿಯ ನಾಯಿಯೊಂದು … Continued

ಇದೆಂಥ ವಿಚಿತ್ರ | ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಜೀವಂತ-ಓಡಾಡುತ್ತಿದ್ದ 1 ಅಡಿ ಉದ್ದದ ಹಾವುಮೀನು..!

ವಿಚಿತ್ರ ಮತ್ತು ಆಘಾತಕಾರಿ ಘಟನೆಗಳು ಪ್ರತಿದಿನ ವಿಶ್ವದಾದ್ಯಂತ ಸುದ್ದಿಯಾಗುತ್ತವೆ, ಆದರೆ ಇತ್ತೀಚೆಗೆ ಚೀನಾದಲ್ಲಿ ನಡೆದ ವಿದ್ಯಮಾನವೊಂದು ಮಾತ್ರ ವೈದ್ಯಕೀಯ ತಜ್ಞರನ್ನೂ ದಿಗ್ಭ್ರಮೆಗೊಳಿಸಿದೆ. ಜನಸಾಮಾನ್ಯರು ಇದನ್ನು ಕೇಳಿ ನಿಬ್ಬೆರಗಾಗಿದ್ದಾರೆ. ಚೀನಾದ ಹುನಾನ್ ಪ್ರಾಂತ್ಯದಲ್ಲಿ ಅತ್ಯಂತ ಅಪರೂಪದ ಮತ್ತು ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬನ ಹೊಟ್ಟೆಯೊಳಗೆ ಒಂದು ಅಡಿ ಉದ್ದದ ಈಲ್ ತರಹದ ಜೀವಿ ಜೀವಂತವಾಗಿ ಪತ್ತೆಯಾಗಿದೆ…! … Continued

ವೀಡಿಯೊ | ಹತ್ತಿರ ಬಂದು, ಕಾರಿನ ಕೆಳಕ್ಕೆ ತೂರಿ ಕಾರನ್ನು ಸ್ವಯಂ ಎತ್ತಿ-ಒಯ್ದು, ಪರ್ಫೆಕ್ಟ್‌ ಪಾರ್ಕ್ ಮಾಡುವ ರೋಬೋಟ್ ವ್ಯಾಲೆಟ್ | ವೀಕ್ಷಿಸಿ

ಕಾರುಗಳನ್ನು ಮೇಲಕ್ಕೆತ್ತಿ ನಂತರ ಒಯ್ದು ಪಾರ್ಕಿಂಗ್ ಸ್ಥಳಗಳ ಕ್ಲಿಷ್ಟಕರ ಜಾಗದಲ್ಲಿ ಅಚ್ಚುಕಟ್ಟಾಗಿ ಹಾಗೂ ಕರಾರುವಕ್ಕಾಗಿ ಇರಿಸುವ ಸಂಪೂರ್ಣ ತಾನೇ ಸ್ವಯಂ ಕಾರ್ಯನಿರ್ವಹಿಸುವ ರೋಬೋಟ್ ವ್ಯಾಲೆಟ್ ತಂತ್ರಜ್ಞಾನದ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಬೆರಗುಗೊಳಿಸಿದೆ. ತಾನೇ ಸ್ವಯಂ ಆಗಿ ಕಾರ್ಯನಿರ್ವಹಿಸುವ ರೋಬೋಟ್ ವ್ಯಾಲೆಟ್‌ ವಾಹನಗಳ ಕೆಳಗೆ ತೂರಿಕೊಳ್ಳುತ್ತದೆ, ಚಕ್ರಗಳ ಮೂಲಕ ವಾಹನವನ್ನು ಮೇಲಕ್ಕೆ ಎತ್ತುತ್ತದೆ ಮತ್ತು ನಿಗದಿತ ಸ್ಥಳಕ್ಕೆ … Continued

ಇದೆಂಥ ಪವಾಡ…| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ…! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

ಸಕಂಡಿ: ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಗಣಿತ ಮತ್ತು ಮಾನವಶಕ್ತಿಯ ಪವಾಡವೇ ನಡೆದಿದೆ ಎಂದು ವರದಿಯಾಗಿದೆ. ಸಕಂಡಿ ಗ್ರಾಮದ ಸರ್ಕಾರಿ ಶಾಲೆಯ ಒಂದು ಗೋಡೆಗೆ ನಾಲ್ಕು ಲೀಟರ್ ಬಣ್ಣವನ್ನು ಹಚ್ಚಲು 168 ಕಾರ್ಮಿಕರು ಮತ್ತು 65 ಮೇಸ್ತ್ರಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ. ಇದರ ಬಿಲ್‌ ಈಗ ಆನ್ಲೈನ್‌ನಲ್ಲಿ ವೈರಲ್‌ ಆದ ನಂತರ ವ್ಯಾಪಕ ಟೀಕೆಗೆ ಗುರಿಯಾಗಿದೆ. … Continued

ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

ಗುಜರಾತ್‌ನ ಗಿರ್ ಪ್ರದೇಶದ ಗಿರ್‌ ಸೋಮನಾಥ ಜಿಲ್ಲೆಯ ಹೆದ್ದಾರಿಯ ಮೇಲೆ ಸಿಂಹಗಳ ಗುಂಪೊಂದು ಓಡಾಡುತ್ತಿದ್ದುದರಿಂದ ಕೆಲಕಾಲ ವಾಹನಗಳು  ನಿಲ್ಲಬೇಕಾಯಿತು. ಕೋಡಿನಾರ್ ಬಳಿಯ ರೋಂಜ್ ರಾಜ್ಯ ಹೆದ್ದಾರಿಯಲ್ಲಿ ಎರಡು ಸಿಂಹಗಳು ಮತ್ತು ಎಂಟು ಮರಿಗಳನ್ನು ಒಳಗೊಂಡ ಸಿಂಹಗಳ ಕುಟುಂಬ ಕಾಣಿಸಿಕೊಂಡಿತು. ಇವು ಕಾಡುಗಳಿಂದ ಹೊರಬಂದು ರಸ್ತೆ ಮೇಲೆ ಓಡಾಡುತ್ತಿದ್ದವು. ಇದು ವಿಶ್ವದ ಏಕೈಕ ಏಷ್ಯನ್ ಸಿಂಹಗಳ ಆವಾಸಸ್ಥಾನವಾದ … Continued

ವೀಡಿಯೊ..| ಭಾಷಣ ಮಾಡುತ್ತಿದ್ದಾಗ ಪೋಡಿಯಂಗೆ ಅಪ್ಪಳಿಸಿದ ಡ್ರೋನ್ ; ಸ್ವಲ್ಪದರಲ್ಲೇ ಪಾರಾದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್

ಪಾಟ್ನಾ : ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ರ್ಯಾಲಿಯ ಸಂದರ್ಭದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ವೇದಿಕೆಯ ಮೇಲೆ ಡ್ರೋನ್ ಅಪ್ಪಳಿಸಿದ ಪರಿಣಾಮ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ‘ವಕ್ಫ್ ಬಚಾವೋ, ಸಂವಿಧಾನ್ ಬಚಾವೋ ಸಮ್ಮೇಳನ’ (ವಕ್ಫ್ ಉಳಿಸಿ, ಸಂವಿಧಾನವನ್ನು ಉಳಿಸಿ) ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. … Continued

ರಾಜಸ್ಥಾನದಲ್ಲಿ 4500 ವರ್ಷಗಳಷ್ಟು ಹಳೆಯ ನಾಗರಿಕತೆ ಪತ್ತೆ..! ಇದಕ್ಕಿತ್ತು ಪೌರಾಣಿಕ ಸರಸ್ವತಿ ನದಿಯ ಸಂಪರ್ಕ…!!

ದೀಗ್ (ರಾಜಸ್ಥಾನ) : ರಾಜಸ್ಥಾನದ ದೀಗ್ ಜಿಲ್ಲೆಯ ಬಹಜ್ ಗ್ರಾಮದಲ್ಲಿ 4,500 ವರ್ಷಗಳ ಹಿಂದಿನ ನಾಗರಿಕತೆಯ ಪುರಾವೆಗಳನ್ನು ಭಾರತೀಯ ಪುರಾತತ್ವ ಸಮೀಕ್ಷೆ (ASI) ಪತ್ತೆಹಚ್ಚಿದೆ. ಜನವರಿ 10, 2024 ರಂದು ಪ್ರಾರಂಭವಾದ ಉತ್ಖನನವು ಹಲವಾರು ಮಹತ್ವದ ಸಂಶೋಧನೆಗಳಿಗೆ ಕಾರಣವಾಗಿದೆ, ಇದರಲ್ಲಿ ಪುರಾತತ್ತ್ವಜ್ಞರು ಋಗ್ವೇದದಲ್ಲಿ ಉಲ್ಲೇಖಿಸಲಾದ ಪೌರಾಣಿಕ ಸರಸ್ವತಿ ನದಿಗೆ ಸಂಪರ್ಕಿಸುವ 23-ಮೀಟರ್ ಆಳದ ಪ್ಯಾಲಿಯೊ-ಚಾನಲ್ ಕಂಡುಬಂದಿದೆ. … Continued