ವೀಡಿಯೊಗಳು | ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರಿಗೆ ಶಾಕ್‌ ; ಸಫಾರಿ ಜೀಪನ್ನು ಎತ್ತಿ ಒಗೆಯಲು ಪ್ರಯತ್ನಿಸಿದ ಖಡ್ಗಮೃಗ-ವೀಕ್ಷಿಸಿ

ದಿಸ್ಪುರ್‌: ಇತ್ತೀಚೆಗೆ ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವಾಹನದ ಮೇಲೆ ಖಡ್ಗಮೃಗ (Rhinoceros) ದಾಳಿಗೆ ಮುಂದಾಗಿದ್ದು, ಅದು ಸಫಾರಿ ಜೀಪನ್ನೇ ಎತ್ತಿದೆ. ಈ ಘಟನೆಯಿಂದ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೊದಲ್ಲಿ ಖಡ್ಗಮೃಗವು ಜೀಪ್ ನಿಲ್ಲಿಸಿದ್ದ ರಸ್ತೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಅಲ್ಲದೆ, … Continued

ವೀಡಿಯೊ | ಬುದ್ಧಿವಂತಿಕೆಯಿಂದ ವಿದ್ಯುತ್ ತಂತಿ ಬೇಲಿ ದಾಟಿದ ಆನೆ : ‘ಇದು ಮುಂದಿನ ಹಂತದ ಬುದ್ಧಿಮತ್ತೆ’ ಎಂದ ಇಂಟರ್ನೆಟ್‌-ವೀಕ್ಷಿಸಿ

ಪ್ರಾಣಿಗಳು ತಮ್ಮ ಸಹಜ ಬುದ್ಧಿಮತ್ತೆಯಿಂದ ನಮ್ಮನ್ನು ವಿಸ್ಮಯಗೊಳಿಸುತ್ತಲೇ ಇವೆ, ಮತ್ತು ಅಂತಹ ಒಂದು ಬುದ್ಧಿವಂತಿಕೆಯ ಪ್ರಸ್ತುತಿಯಲ್ಲಿ ಆನೆಯೊಂದು ಸುರಕ್ಷಿತವಾಗಿ ವಿದ್ಯುತ್ ಬೇಲಿಯನ್ನು ಚತುರವಾಗಿ ದಾಟುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ಈ ಕ್ಲಿಪ್ ಅನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು X ನಲ್ಲಿ ಹಂಚಿಕೊಂಡಿದ್ದಾರೆ. ಈ ಆನೆ ಭೌತಶಾಸ್ತ್ರದಲ್ಲಿ ಪ್ರವೀಣ. … Continued

ವೀಡಿಯೊ..| ಮದುವೆ ಸಮಾರಂಭಕ್ಕೆ ಅನಿರೀಕ್ಷಿತವಾಗಿ ಬಂದ ಬೃಹತ್‌ ಖಡ್ಗಮೃಗ ; ಜನರಿಗೆ ಅಚ್ಚರಿ-ಗಾಬರಿ…!

ನೇಪಾಳದಲ್ಲಿ ನಡೆದ ಅಚ್ಚರಿಯ ವಿದ್ಯಮಾನವೊಂದರಲ್ಲಿ ಖಡ್ಗಮೃಗವೊಂದು ಮದುವೆ ಕಾರ್ಯಕ್ರಮಕ್ಕೆ ಅನಿರೀಕ್ಷಿತ ಅತಿಥಿಯಾಗಿ ಆಗಮಿಸುವ ಮೂಲಕ ಎಲ್ಲರಿಗೂ ಅಚ್ಚರಿ ಹಾಗೂ ಗಾಬರಿ ಎರಡನ್ನೂ ಉಂಟು ಮಾಡಿದೆ. ಈ ಘಟನೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಚಿಟ್ವಾನ್ ರಾಷ್ಟ್ರೀಯ ಉದ್ಯಾನವನದ ಹೊಂದಿಕೊಂಡಿರುವ ಹಳ್ಳಿಯಲ್ಲಿ ಸಂಭವಿಸಿದೆ, ಈ ವಿಶ್ವ ಪರಂಪರೆ ತಾಣವು ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ ಮತ್ತು 600 ಕ್ಕೂ … Continued

ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ ಗೆ ಪತ್ನಿ ಕಪಾಳಮೋಕ್ಷ ಮಾಡಿದರೆ ? ವೀಡಿಯೊ ವೈರಲ್‌

ವಿಯೆಟ್ನಾಂನಲ್ಲಿ ವಿಮಾನದಿಂದ ಇಳಿಯುವ ಮೊದಲು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಪತ್ನಿ ಬ್ರಿಗಿಟ್ ಅವರು ಮ್ಯಾಕ್ರನ್‌ ಕೆನ್ನೆಗೆ ಬಾರಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮ್ಯಾಕ್ರನ್ ತಮ್ಮ ಆಗ್ನೇಯ ಏಷ್ಯಾ ಪ್ರವಾಸವನ್ನು ಪ್ರಾರಂಭಿಸಲು ಭಾನುವಾರ ಸಂಜೆ ಹನೋಯ್‌ಗೆ ಬಂದಿಳಿದರು. ಆದಾಗ್ಯೂ, ಅವರು ಬಂದಿಳಿದಾಗ ದಂಪತಿ ನಡುವಿನ ‘ಜಗಳ’ದ ತರಹದ ವೀಡಿಯೊ ಹೊರಹೊಮ್ಮಿತು. ದಂಪತಿ … Continued

ವೀಡಿಯೊ…| ನಂಬಲಸಾಧ್ಯ : ಸ್ಕೂಟರ್ ತೆಗೆದುಕೊಂಡು ಜಾಲಿ ರೈಡ್ ಮಾಡಿದ ಬೃಹತ್‌ ಬೀದಿ ಗೂಳಿ…!

ಉತ್ತರಾಖಂಡದ ಋಷಿಕೇಶದಲ್ಲಿ ಬೀದಿ ಗೂಳಿಯೊಂದು ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್ ಅನ್ನು ರೈಡ್‌ ಮಾಡಿಕೊಂಡು (ಎಳೆದುಕೊಂಡು) ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಗಿದ್ದು, ನೋಡಿದವರಿಗೆ ನಗುವನ್ನು ತರಿಸಿತು. ಬಳಕೆದಾರರು ಆ ಪ್ರಾಣಿಯು ದ್ವಿಚಕ್ರ ವಾಹನವನ್ನು “ಟೆಸ್ಟ್‌ ರೈಡ್‌ʼ ಗೆ ಕೊಂಡೊಯ್ಯಲು ಬಯಸಿದೆ ಎಂದು ತಮಾಷೆ ಮಾಡಿದ್ದಾರೆ. ಗೂಳಿಯು ಸ್ಕೂಟರ್ … Continued

1947ರಲ್ಲಿ ಭಾರತ ತೊರೆದು ಪಾಕಿಸ್ತಾನಕ್ಕೆ ಹೋಗುವವರಿಗೆ ‘ಪಡಿತರ ಚೀಟಿ’ ಯ ಸೂಚನೆ ಈಗ ವೈರಲ್‌…!

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರವು ಅಲ್ಪಾವಧಿಯ ವೀಸಾಗಳನ್ನು ಹೊಂದಿರುವ ಪಾಕಿಸ್ತಾನಿ ಪ್ರಜೆಗಳು ದೇಶವನ್ನು ತೊರೆಯುವಂತೆ ಆದೇಶಿಸಿತು. ಆದಾಗ್ಯೂ, ಪಾಕಿಸ್ತಾನದ ಕೆಲವು ವ್ಯಕ್ತಿಗಳು ಭಾರತದಲ್ಲಿ ಹಲವು ವರ್ಷಗಳಿಂದ ಅಥವಾ ದಶಕಗಳಿಂದಲೂ ಇರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಗೊಂದಲದ ನಡುವೆಯೇ, ದೆಹಲಿ ಪಡಿತರ ಇಲಾಖೆಯಿಂದ 1947ರ ಸೂಚನೆಯು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ … Continued

ವೀಡಿಯೊ…| : 21 ಕಿಮೀ ಅರ್ಧ ಮ್ಯಾರಥಾನ್‌ನಲ್ಲಿ ಮಾನವರ ಜೊತೆ ಓಡಿದ ಚೀನಾದ ಮಾನವರೂಪಿ ರೋಬೋಟ್‌ಗಳು…!

ಚಲನಚಿತ್ರಗಳಲ್ಲಿ ನೀವು ಮಾನವ vs ರೋಬೋಟ್ ಓಟವನ್ನು ನೋಡಿರಬಹುದು, ಆದರೆ ಚೀನಾ ಇದನ್ನು ವಾಸ್ತವದಲ್ಲಿ ಸಾಧ್ಯವಾಗಿಸುತ್ತಿದೆ. ಬೀಜಿಂಗ್‌ನಲ್ಲಿ ಮೊದಲ ಬಾರಿಗೆ ನಡೆದ 21 ಕಿಲೋಮೀಟರ್ ಅರ್ಧ ಮ್ಯಾರಥಾನ್‌ ಓಟದಲ್ಲಿ ಇಪ್ಪತ್ತೊಂದು ಹುಮನಾಯ್ಡ್ ಯಂತ್ರಗಳು ಮಾನವ ಓಟಗಾರರೊಂದಿಗೆ ಸೇರಿಕೊಂಡವು. ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ತಂತ್ರಜ್ಞಾನ ಸಂಸ್ಥೆಗಳ ತಂಡಗಳು ಈ ಓಟಕ್ಕೆ ಸೇರಿಕೊಂಡವು. ಈ ತಂಡಗಳಲ್ಲಿ ಹಲವು … Continued

ವೀಡಿಯೊ…| ಮಾಲೀಕನ ಮೇಲೆ ಹಲ್ಲೆ ಮಾಡಿದ ಮೂವರು ದರೋಡೆಕೋರರ ಮೇಲೆ ಪ್ರತಿದಾಳಿ ನಡೆಸಿ ಓಡಿಸಿದ ನಾಯಿ…!

ಮೋರ್ಬಿ (ಗುಜರಾತ್) : ನಿಷ್ಠೆ ಮತ್ತು ಅಸಾಧಾರಣ ಧೈರ್ಯ ತೋರಿದ ಘಟನೆಯೊಂದರಲ್ಲಿ , ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ಜರ್ಮನ್ ಶೆಫರ್ಡ್ ನಾಯಿ ತನ್ನ ಮಾಲೀಕನನ್ನು ಮೂವರು ಆಕ್ರಮಣಕಾರರು ನಡೆಸಿದ ಹಿಂಸಾತ್ಮಕ ದರೋಡೆ ಪ್ರಯತ್ನದಿಂದ ರಕ್ಷಿಸಿದೆ. ಬೆಳಗಿನ ಜಾವ ನಡೆದ ಇಡೀ ಘಟನೆಯು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ ಮತ್ತು ನಾಯಿ ದಾಳಿಕೋರರ ಮೇಲೆ ದಾಳಿ ಮಾಡಿದ ನಂತರ … Continued

ಮನೆ ಸ್ವಚ್ಛಗೊಳಿಸುವಾಗ ಕಸದ ರಾಶಿಯಲ್ಲಿ ಸಿಕ್ಕ 62 ವರ್ಷಗಳ ಹಿಂದಿನ ಹರಿದ ಪಾಸ್‌ ಪುಸ್ತಕ ; ರಾತ್ರೋರಾತ್ರಿ ಕೋಟ್ಯಧಿಪತಿಯಾದ ವ್ಯಕ್ತಿ…!

ಕೆಲವು ಘಟನೆಗಳು ಪವಾಡವೇನೋ ಎಂದು ಅನಿಸುವ ರೀತಿಯಲ್ಲಿ ಸಂಭವಿಸುತ್ತವೆ. ಇಂಥದ್ದೇ ಒಂದು ವಿದ್ಯಮಾನದಲ್ಲಿ ಹಳೆಯ ಕಾಗದ ವ್ಯಕ್ತಿಯೊಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಲು ಕಾರಣವಾಗಿದೆ…!! ಈ ಹಳೆಯ ಕಾಗದ ತುಂಡಿನಿಂದ ಹೀಗಾಗುತ್ತದೆ ಎಂದು ಆ ವ್ಯಕ್ತಿಯೂ ಊಹಿಸಿರಲಿಲ್ಲ. ಬಹುತೇಕ ಎಲ್ಲರ ತಮ್ಮ ಮನೆಗಳ ಸುತ್ತಲೂ ಸಣ್ಣ ಸಣ್ಣ ಕಾಗದದ ಚೂರುಗಳು ಅಥವಾ ಹರಿದ ಕಾಗದಗಳು ಅಲ್ಲಿಲ್ಲಿ ಬಿದ್ದಿರುತ್ತದೆ, ಕೆಲವೊಮ್ಮೆ … Continued

ವೀಡಿಯೊ…| ಮಗ ಅಗ್ನಿ ಅವಘಡದಿಂದ ಪಾರಾಗಿದ್ದಕ್ಕೆ ತಿರುಪತಿಯಲ್ಲಿ ಮುಡಿಕೊಟ್ಟ ಆಂಧ್ರ ಡಿಸಿಎಂ ಪವನಕಲ್ಯಾಣ ಪತ್ನಿ ಅನ್ನಾ ಲೆಜ್ನೆವಾ ..

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನಕಲ್ಯಾಣ ಅವರ ಪತ್ನಿ ಅನ್ನಾ ಲೆಜ್ನೆವಾ ಭಾನುವಾರ ಸಂಜೆ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಉಪವಾಸವನ್ನು ಪೂರ್ಣಗೊಳಿಸಿದರು. ಸಿಂಗಾಪುರದ ಶಾಲೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತಮ್ಮ ಮಗ ಮಾರ್ಕ್ ಶಂಕರ್ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆಯ ನಂತರ ತಿರುಪತಿಗೆ ಭೇಟಿ ನೀಡಿದ್ದಾರೆ. … Continued