ವೀಡಿಯೊ : ವಾಗ್ವಾದದ ನಂತರ ಬೆಂಗಳೂರಿನ ಟೋಲ್‌ ನಲ್ಲಿ ವ್ಯಕ್ತಿಯ ಶರ್ಟ್‌ ಹಿಡಿದು ಕಾರು ಚಲಾಯಿಸಿ ಎಳೆದೊಯ್ದ ಚಾಲಕ…!

ಬೆಂಗಳೂರು : ಬೆಂಗಳೂರಿನ ಟೋಲ್ ಬೂತ್‌ನಲ್ಲಿ ಓವರ್‌ಟೇಕ್ ಮಾಡುವ ವಿಚಾರದಲ್ಲಿ ತೀವ್ರ ಮಾತಿನ ಚಕಮಕಿ ನಡೆದ ನಂತರ ವ್ಯಕ್ತಿಯೊಬ್ಬನ ಶರ್ಟ್‌ ಹಿಡಿದುಕೊಂಡು ಕಾರಿನ ಚಾಲಕನೊಬ್ಬ ಸುಮಾರು 50 ಮೀಟರ್ ವರೆಗೆ ಆತನನ್ನು ಎಳೆದೊಯ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೆಲಮಂಗಲ ಹೆದ್ದಾರಿ ಟೋಲ್ ಬೂತ್ ನಲ್ಲಿ ನಡೆದಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಹನಗಳು ಟೋಲ್ ಬೂತ್ … Continued

ವೀಡಿಯೊ…| ಬೃಹತ್‌ ತಿಮಿಂಗಿಲ ತನ್ನ ಮಗನನ್ನು ನುಂಗಿದ ಭಯಾನಕ ಕ್ಷಣ ವೀಡಿಯೊ ಮಾಡುತ್ತಿದ್ದ ತಂದೆ…! ಮುಂದಾಗಿದ್ದು ಮಾತ್ರ…..ವೀಕ್ಷಿಸಿ

ಚಿಲಿಯ ಬಹಿಯಾ ಎಲ್ ಅಗುಯಿಲಾ ಎಂಬಲ್ಲಿ 24 ವರ್ಷದ ವ್ಯಕ್ತಿ ತನ್ನ ತಂದೆಯೊಂದಿಗೆ ಕಯಾಕಿಂಗ್ ಮಾಡುತ್ತಿದ್ದಾಗ ಬೃಹತ್‌ ಹಂಪ್‌ಬ್ಯಾಕ್ ತಿಮಿಂಗಿಲವು ಆತನನ್ನು ಹಳದಿ ಬಣ್ಣದ ದೋಣಿ ಸಮೇತವಾಗಿ ನುಂಗಿದ್ದು, ನಂತರ ಹೊರಕ್ಕೆ ಉಗುಳಿದ ಅಪರೂಪದ ಘಟನೆ ನಡೆದಿದೆ. ಚಿಲಿಯ ದಕ್ಷಿಣದ ಪ್ಯಾಟಗೋನಿಯಾ ಪ್ರದೇಶದ ಮೆಗೆಲ್ಲನ್ ಜಲಸಂಧಿಯ ಸ್ಯಾನ್ ಇಸಿಡ್ರೊ ಲೈಟ್‌ಹೌಸ್ ಬಳಿ ಶನಿವಾರ ಈ ಘಟನೆ … Continued

ವೀಡಿಯೊ…| ಮಹಿಳೆಯ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌‌ ಸ್ಫೋಟ; ಆಸ್ಪತ್ರೆಗೆ ದಾಖಲು ; ಆಘಾತಕಾರಿ ದೃಶ್ಯ ವೈರಲ್‌

ಆಘಾತಕಾರಿ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ಸ್ಥಳೀಯ ದಿನಸಿ ಅಂಗಡಿಯಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಪ್ಯಾಂಟಿನ ಹಿಂದಿನ ಜೇಬಿನಲ್ಲಿದ್ದ ಸ್ಮಾರ್ಟ್‌ಫೋನ್ ಸ್ಫೋಟಗೊಂಡಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರೆಜಿಲ್‌ನ ಅನಾಪೊಲಿಸ್‌ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಆಕೆ ತನ್ನ ಪತಿಯೊಂದಿಗೆ ದಿನಸಿ ಅಂಗಡಿಗೆ ಬಂದಿದ್ದರು. ಇದ್ದಕ್ಕಿದ್ದಂತೆ, ಅವರ ಪ್ಯಾಂಟ್‌ನಿಂದ ಹೊಗೆ ಹೊರಹೊಮ್ಮಲು ಪ್ರಾರಂಭಿಸಿತು, ನಂತರ ಅವರು ಬೆನ್ನಿನ ಕೆಳಭಾಗದಿಂದ ಜ್ವಾಲೆಯು … Continued

ವೀಡಿಯೊಗಳು…| ಮದುವೆ ಮಂಟಪಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ ಚಿರತೆ ; ಅರಣ್ಯ ಸಿಬ್ಬಂದಿ ಮೇಲೆ ದಾಳಿ-ಗಾಯ

ಮದುವೆ ಮನೆಗೆ ಚಿರತೆಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ಲಕ್ನೋದ ಪಾರಾ ಪ್ರದೇಶದಲ್ಲಿ ನಡೆದಿದೆ. ಲಕ್ನೋ ನಗರದ ಬುದ್ಧೇಶ್ವರ ರಿಂಗ್ ರಸ್ತೆಯ ಎಂಎಂ ಲಾನ್‌ನಲ್ಲಿ ಬುಧವಾರ ರಾತ್ರಿ 11: 40 ರ ಸುಮಾರಿಗೆ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಮದುವೆಗೆ ಬಂದ ನೂರಾರು ಅತಿಥಿಗಳು ಗಾಬರಿಗೊಂಡು ಪಾರಾಗಲು ಸುರಕ್ಷಿತ ಸ್ಥಳಕ್ಕೆ ಓಡಿಹೋಗಿದ್ದಾರೆ. ಚಿರತೆ ದಾಳಿಯಿಂದ … Continued

ಸ್ಮರಣೆ ಶಕ್ತಿ ಕಳೆದುಕೊಂಡು 15 ವರ್ಷದಿಂದ ಕಾಣೆಯಾಗಿದ್ದ ವ್ಯಕ್ತಿಗೆ ಮತ್ತೆ ನೆನಪಿನ ಶಕ್ತಿ ಬರುವಂತೆ ಮಾಡಿದ ‘ಮಹಾ ಕುಂಭ’ ಪದ…!! ಮನೆ ಸೇರಿದ ವ್ಯಕ್ತಿ

ಜಾರ್ಖಂಡ್‌ನ ಕೊಡರ್ಮಾದಲ್ಲಿ ನಡೆದ ಅಸಾಧಾರಣ ವಿದ್ಯಮಾನವೊಂದರಲ್ಲಿ, 15 ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಯೊಬ್ಬರು ಅವರ ಕುಟುಂಬದವರು ಇತ್ತೀಚೆಗೆ ಮರಣ ಪ್ರಮಾಣಪತ್ರ (death certificate) ಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಪತ್ತೆಯಾಗಿದ್ದಾರೆ…! ಆಶ್ಚರ್ಯಕರ ಎಂಬಂತೆ, ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವ್ಯಕ್ತಿಗೆ “ಮಹಾ ಕುಂಭ” ಪದ ಕೇಳಿದ ನಂತರ ಅವರ ನೆನಪಿನ ಶಕ್ತಿ ಮರಳಿದೆ. ಇದು ಅಧಿಕಾರಿಗಳಿಗೆ ಅವರ … Continued

ಮೈ ಜುಂ ಎನ್ನುವ ವೀಡಿಯೊ | ರೈತನಿಗೆ ದಾರಿಯಲ್ಲಿ ಎದುರಾದ ದೈತ್ಯ ಹುಲಿ; ಮುಂದಾಗಿದ್ದು….?

ಉತ್ತರ ಪ್ರದೇಶದ ಪಿಲಿಭಿತ್‌ನ ಹೊಲವೊಂದರಲ್ಲಿ ರೈತನೊಬ್ಬನಿಗೆ ಹುಲಿ ಎದುರಾಗಿದ್ದು, ಆತ ಕ್ಷಣಕಾಲ ಸ್ತಂಭಿಭೂತನಾಗಿದ್ದಾನೆ. ಈ ವಿಸ್ಮಯಕಾರಿಯಾಗಿ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊ ಕ್ಲಿಪ್‌ನಲ್ಲಿ ರೈತ ತನ್ನ ಬೈಕ್‌ನಲ್ಲಿ ಬರುತ್ತಿದ್ದಾಗ ಹುಲಿ ಎದುರಾಗಿರುವುದನ್ನು ನೋಡಬಹುದು. ರೈತ ಬೈಕ್‌ನಲ್ಲಿ ಕುಳಿತಿದ್ದಾರೆಹಾಗೂ ಇನ್ನೊಬ್ಬ ವ್ಯಕ್ತಿ ಅವರ ಪಕ್ಕದಲ್ಲಿ ನಿಂತಿದ್ದಾರೆ. … Continued

ವೀಡಿಯೊ..| ಹಿಮ ತುಂಬಿದ ಕಾಡಿನಲ್ಲಿ ಕಾಣಿಸಿಕೊಂಡ ಅಪರೂಪದ ಬಿಳಿ ಬಣ್ಣದ ಜಿಂಕೆ ; ದೃಶ್ಯ ಕ್ಯಾಮರಾದಲ್ಲಿ ಸೆರೆ

ಜಿಂಕೆ ಎಂದರೆ ಮೈ ತುಂಬಾ ಚುಕ್ಕಿ ಇರುವ ಮುದ್ದಾದ ಪ್ರಾಣಿ ಎಂದೇ ಹೆಚ್ಚಾಗಿ ಭಾವಿಸುತ್ತಾರೆ. ಆದರೆ ಅಪರೂಪದ ಬಳಿ ಬಣ್ಣದ ಅಲ್ಬಿನೋ ಜಿಂಕೆ ಹಿಮಭರಿತ ಕಾಡಿನಲ್ಲಿ ಕಾಣಿಸಿಕೊಂಡಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೈರಲ್ ಆಗಿರುವ ವೀಡಿಯೊದಲ್ಲಿ ಹಿಮ ತುಂಬಿದ ಕಾಡಿನಲ್ಲಿ ರಸ್ತೆ ಬದಿಯಲ್ಲಿ ಕಾಣಿಸಿಕೊಂಡ ಸಂಪೂರ್ಣವಾಗಿ ಬಿಳಿ ಬಣ್ಣದ ಜಿಂಕೆ ನಿಂತುಕೊಂಡಿತ್ತು. ನಂತರ ಸ್ವಲ್ಪ ಸಮಯದ … Continued

ʼಹೈ ಹೀಲ್ಸ್‌ʼ ಚಪ್ಪಲಿ ಕೊಡಿಸಿಲ್ಲವೆಂದು ಗಂಡನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ಹೆಂಡತಿ…!

ಆಗ್ರಾ : ಉತ್ತರ ಪ್ರದೇಶದ ಆಗ್ರಾದಲ್ಲಿ ಅಸಮಾಮಾನ್ಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಗಂಡ ಎತ್ತರದ ಹಿಮ್ಮಡಿಯ (ಹೈ ಹೀಲ್ಸ್‌) ಚಪ್ಪಲಿ ಕೊಡಿಸಿಲ್ಲವೆಂದು ಮಹಿಳೆಯೊಬ್ಬಳು ಗಂಡನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ…! ಹೈ ಹೀಲ್ಸ್‌ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ಹೋಗಿ ವಿಚ್ಛೇದನ ಹಂತಕ್ಕೆ ತಲುಪಿದ್ದು, ಇಲ್ಲಿ ಪತಿ ಪತ್ನಿಯರ ಮಧ್ಯೆ ಸಂಧಾನ ನಡೆಸಿ ಮನೆಗೆ … Continued

ಇದು ವಿಚಿತ್ರವಾದರೂ ಸತ್ಯ ; ಈ ವ್ಯಕ್ತಿ 63 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲ…!

ಒಬ್ಬ ವ್ಯಕ್ತಿಗೆ ಪ್ರತಿದಿನ ಸುಮಾರು 6-8 ಗಂಟೆಗಳ ನಿದ್ರೆಯ ಅಗತ್ಯವಿರುತ್ತದೆ. ಚೆನ್ನಾಗಿ ನಿದ್ರೆ ಮಾಡದಿದ್ದರೆ ಕೆಲಸ ಮಾಡುವುದು ತುಂಬಾ ಕಷ್ಟವಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ 60 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲವಂತೆ…! ಈ ವ್ಯಕ್ತಿ 1962 ರಿಂದ ನಿದ್ದೆ ಮಾಡಿಲ್ಲ ಎಂದು ಹೇಳಿಕೊಳ್ಳುವ ವಿಯೆಟ್ನಾಂ ವ್ಯಕ್ತಿಯ ಕುರಿತಾದ ವೀಡಿಯೊವೊಂದು ಇಂಟರ್ನೆಟ್ ಅನ್ನು ಬಿರುಗಾಳಿ ಎಬ್ಬಿಸಿದೆ. 80 ವರ್ಷದ … Continued

ವೀಡಿಯೊ..| ನೀರಿನ ತೊರೆಯಿಂದ ಒಂದೇ ಕೈಯಲ್ಲಿ ಹೆಬ್ಬಾವನ್ನು ಹೊರಗೆಳೆದ ಭೂಪ…!

ಹಾವುಗಳು, ವಿಶೇಷವಾಗಿ ಹೆಬ್ಬಾವುಗಳು, ಭಯಾನಕ ಮತ್ತು ಕುತೂಹಲಕಾರಿ ಜೀವಿಗಳು. ಆದರೆ ಹೆಚ್ಚಿನ ಜನರು ಹೆಬ್ಬಾವನ್ನು ಕಂಡರೆ ಬೆದರುತ್ತಾರೆ. ಆದರೆ ಇತ್ತೀಚಿನ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ಗಮನ ಸೆಳೆದಿದ್ದು ಅದರಲ್ಲಿ ವ್ಯಕ್ತಿಯೊಬ್ಬರು ದೈತ್ಯ ಹೆಬ್ಬಾವನ್ನು ಕಾಲುವೆಯಿಂದ ಒಂದೇ ಕೈಯೊಂದ ಹಿಡಿದು ಮೇಲಕ್ಕೆತ್ತುತ್ತಿರುವುದು ಕಂಡುಬಂದಿದೆ. ವೀಡಿಯೊ ತುಣುಕಿನಲ್ಲಿ, ಬೃಹತ್‌ ಹೆಬ್ಬಾವು ನೀರಿನಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು, ಆಗ ವ್ಯಕ್ತಿಯೊಬ್ಬ ಶಾಂತವಾಗಿ … Continued