ಮೊದಲು ‘ವರ್ಕ್ ಫ್ರಮ್ ಹೋಮ್’ ಆದೇಶ ಮಾಡಿ ನಂತ್ರ ಮುಂಜಾನೆ 4ಕ್ಕೆ 8000 ಉದ್ಯೋಗಿಗಳನ್ನು ವಜಾಗೊಳಿಸಿದ ಮೆಟಾ

ನವದೆಹಲಿ: ಟೆಕ್ ದೈತ್ಯ ‘ಮೆಟಾ ಪ್ಲಾಟ್‌ಫಾರ್ಮ್ಸ್’ (Meta Platforms) ತನ್ನ ಒಟ್ಟು ಸಿಬ್ಬಂದಿಯ ಶೇಕಡಾ 10 ರಷ್ಟು, ಅಂದರೆ ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ಐಟಿ ವಲಯದಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿಸಿದೆ. ಈ ಪ್ರಕ್ರಿಯೆಯನ್ನು ಕಂಪನಿಯು ಅತ್ಯಂತ ರಹಸ್ಯವಾಗಿ ಮತ್ತು ವ್ಯವಸ್ಥಿತವಾಗಿ ಜಾರಿಗೆ ತಂದಿರುವುದು ಉದ್ಯೋಗಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ. ಈ ಉದ್ಯೋಗ ಕಡಿತದ … Continued

ಆಪಲ್ ಸಂಸ್ಥೆಯಲ್ಲಿ ನಾಯಕತ್ವ ಬದಲಾವಣೆ: ಕೆಳಗಿಳಿದ ಟಿಮ್ ಕುಕ್ ; ನೂತನ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ

ತಂತ್ರಜ್ಞಾನ ಲೋಕದ ದೈತ್ಯ ಸಂಸ್ಥೆ ‘ಆಪಲ್’ (Apple) ತನ್ನ ನಾಯಕತ್ವದಲ್ಲಿ ಐತಿಹಾಸಿಕ ಬದಲಾವಣೆಯನ್ನು ಪ್ರಕಟಿಸಿದೆ. ಕಳೆದ 15 ವರ್ಷಗಳಿಂದ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಟಿಮ್ ಕುಕ್ ಅವರು ಸಿಇಒ (CEO) ಸ್ಥಾನದಿಂದ ಕೆಳಗಿಳಿಯುತ್ತಿದ್ದು, ಅವರ ಜಾಗಕ್ಕೆ ಆಪಲ್‌ನ ಹಿರಿಯ ಅಧಿಕಾರಿ ಜಾನ್ ಟೆರ್ನಸ್ (John Ternus) ಅವರು ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO)ಯಾಗಿ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ … Continued

ಎಐ ಕ್ಷೇತ್ರದಲ್ಲಿ ಭಾರತದ ಅದ್ಭುತ ಸಾಧನೆ : ಗೂಗಲ್ ಜೆಮಿನಿ, ಚಾಟ್‌ಜಿಪಿಟಿ ಹಿಂದಿಕ್ಕಿದ ಬೆಂಗಳೂರು ಮೂಲದ ‘ಸರ್ವಂ ಎಐ’

ಬೆಂಗಳೂರು: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಕ್ಷೇತ್ರದಲ್ಲಿ ಈವರೆಗೆ ಅಮೆರಿಕ ಮತ್ತು ಚೀನಾ ದೇಶಗಳದ್ದೇ ಪ್ರಾಬಲ್ಯವಿತ್ತು. ಭಾರತವು ಪ್ರತಿಭಾವಂತರ ನೆಲೆಯಾಗಿದ್ದರೂ, ಮೂಲಭೂತ ಎಐ ಮಾದರಿಗಳ (Foundational AI models) ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ ಎಂಬ ಮಾತುಗಳಿದ್ದವು. ಆದರೆ, ಬೆಂಗಳೂರು ಮೂಲದ ಸ್ಟಾರ್ಟ್ಅಪ್ ‘ಸರ್ವಂ ಎಐ’ (Sarvam AI) ಈಗ ಈ ಚಿತ್ರಣವನ್ನು ಬದಲಿಸುತ್ತಿದೆ. ಕಂಪನಿಯು ಭಾರತದಲ್ಲೇ ಅಭಿವೃದ್ಧಿಪಡಿಸಿದ … Continued

ರಸ್ತೆ ಅಪಘಾತ ಕಡಿಮೆ ಮಾಡಲು ಭಾರತದಲ್ಲಿ ವೆಹಿಕಲ್-ಟು-ವೆಹಿಕಲ್’ (V2V) ತಂತ್ರಜ್ಞಾನ ಅಳವಡಿಕೆಗೆ ಸಿದ್ಧತೆ ; ಏನಿದು ತಂತ್ರಜ್ಞಾನ..?

ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ವಾಹನ ಸವಾರರ ಸುರಕ್ಷತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಅತ್ಯಾಧುನಿಕ ‘ವೆಹಿಕಲ್-ಟು-ವೆಹಿಕಲ್’ (V2V) ಸಂವಹನ ತಂತ್ರಜ್ಞಾನವನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಯೋಜನೆಯು 2026ರ   ಕೊನೆಯಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ. ಏನಿದು V2V ತಂತ್ರಜ್ಞಾನ? ಇದು ವಾಹನಗಳು ಪರಸ್ಪರ ನೇರವಾಗಿ ಸಂವಹನ ನಡೆಸಲು ಅನುವು ಮಾಡಿಕೊಡುವ ತಂತ್ರಜ್ಞಾನವಾಗಿದೆ. … Continued

ಮೈಕ್ರೋಸಾಫ್ಟ್‌ನಿಂದ ಭಾರತದಲ್ಲಿ ಅತ್ಯಧಿಕ ಹೂಡಿಕೆ: “ಎಐ ಫರ್ಸ್ಟ್‌ ಫ್ಯೂಚರ್”ಗಾಗಿ 1.5 ಲಕ್ಷ ಕೋಟಿ ರೂ. ವಿನಿಯೋಗ

ನವದೆಹಲಿ: ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸತ್ಯ ನಾದೆಲ್ಲಾ ಅವರು ಬುಧವಾರ ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಕೃತಕ ಬುದ್ಧಿಮತ್ತೆ (Artificial Intelligence – AI) ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು $17.5 ಬಿಲಿಯನ್ (ಸುಮಾರು ₹1.5 ಲಕ್ಷ ಕೋಟಿ) ಮೊತ್ತವನ್ನು ಹೂಡಿಕೆ ಮಾಡುವುದಾಗಿ ಬದ್ಧತೆ ನೀಡಿದ್ದಾರೆ. ಇದು ಅಮೆರಿಕ ಮೂಲದ ಈ … Continued

ಮುಂದಿನ ಸಿಲಿಕಾನ್ ಸೂಪರ್ ಪವರ್ ಆಗುವ ಹಾದಿಯಲ್ಲಿ ಭಾರತ ; ಚಿಪ್ಸ್, ಎಐ ಲ್ಯಾಪ್‌ಟಾಪ್‌ ತಯಾರಿಕೆಗೆ ಟಾಟಾ-ಇಂಟೆಲ್ ಒಪ್ಪಂದ

ನವದೆಹಲಿ: ಚಿಪ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತವನ್ನು ಮುನ್ನಡೆಸುವ ಒಂದು ಪ್ರಮುಖ ಬೆಳವಣಿಗೆಯಲ್ಲಿ, ಟಾಟಾ ಎಲೆಕ್ಟ್ರಾನಿಕ್ಸ್ (Tata Electronics) ಒಂದು ಮಹತ್ವದ ಪಾಲುದಾರಿಕೆಯನ್ನು (significant partnership) ಘೋಷಿಸಿದೆ. ಟಾಟಾ ಎಲೆಕ್ಟ್ರಾನಿಕ್ಸ್, ಇಂಟೆಲ್‌ನ (Intel) ಎರಡು ದೊಡ್ಡ ಚಿಪ್ ಘಟಕಗಳಿಗೆ ಮೊದಲ ಪ್ರಮುಖ ಗ್ರಾಹಕ ಆಗಲಿದೆ. ಈ ಸುದ್ದಿಯನ್ನು ಭಾರತದಲ್ಲಿ ಚಿಪ್ ತಯಾರಿಕೆಯ ಶುಭಾರಂಭ ಎಂದು ನೋಡಲಾಗುತ್ತಿದೆ. ಭಾರತೀಯ … Continued

ಇದು ಅಮೆರಿಕದ ನಿದ್ದೆಗೆಡಿಸುವ ಆಫರ್‌….! ಭಾರತಕ್ಕೆ ಮಹತ್ವದ ಸ್ಟೆಲ್ತ್ ಯುದ್ಧ ವಿಮಾನದ ತಂತ್ರಜ್ಞಾನ ನೀಡುವ ಆಫರ್‌ ನೀಡಿದ ರಷ್ಯಾ…!

ನವದೆಹಲಿ : ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಮೊದಲು, ರಷ್ಯಾವು ಮಹತ್ವದ ಮಿಲಿಟರಿ ತಂತ್ರಜ್ಞಾನದ ಆಫರ್‌ ಅನ್ನು ಭಾರತಕ್ಕೆ ನೀಡಿದೆ. ಭಾರತದ ಬಹುಕಾಲದ ಮಿತ್ರರಾಷ್ಟ್ರವಾದ ರಷ್ಯಾ, ದೇಶದ ಭವಿಷ್ಯದ ಯುದ್ಧ ವಿಮಾನಗಳ ಅಗತ್ಯಗಳನ್ನು ಪೂರೈಸಲು, ಹೊಸ ಪೀಳಿಗೆಯ ಐದನೇ ತಲೆಮಾರಿನ (Fifth-Generation) ಎಸ್‌ಯು-57 (Su-57) ಸ್ಟೆಲ್ತ್ ಫೈಟರ್ … Continued

16 ವರ್ಷದೊಳಗಿನ ಮಕ್ಕಳಿಗಾಗಿ ಇನ್​ಸ್ಟಾಗ್ರಾಂ​ನಲ್ಲಿ ಹೊಸ ನಿಯಮ….

ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಮುಂದೆ 16 ವರ್ಷದೊಳಗಿನ ಮಕ್ಕಳಿಗೆ ಲೈವ್ ಮಾಡಲು ಇದರಲ್ಲಿ ಅವಕಾಶ ಇರುವುದಿಲ್ಲ. ಮೆಟಾ ಶೀಘ್ರದಲ್ಲೇ 16 ವರ್ಷದೊಳಗಿನ ಮಕ್ಕಳು ಇನ್‌ಸ್ಟಾಗ್ರಾಮ್‌(Instagram)ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವುದನ್ನು ತಡೆಯಲಿದೆ. ಇದಕ್ಕೆ ಅವರ ತಂದೆ-ತಾಯಿಗಳು ಅನುಮತಿ ಬೇಕಾಗುತ್ತದೆ. ಹೊಸ ಸುರಕ್ಷತಾ ನಿಯಮವು ಆನ್‌ಲೈನ್‌ನಲ್ಲಿ 16 ವರ್ಷದೊಳಗಿನ ಬಳಕೆದಾರರಿಗೆ ಸುರಕ್ಷತಾ ಕ್ರಮಗಳನ್ನು … Continued

ಫೆ.17 ರಿಂದ ಫಾಸ್ಟ್ ಟ್ಯಾಗ್ ಹೊಸ ನಿಯಮಗಳು ಜಾರಿ : ಶುಲ್ಕಗಳು, ದಂಡಗಳು ಇತ್ಯಾದಿ ಬದಲಾವಣೆ ಬಗ್ಗೆ ಮಾಹಿತಿ ಇಲ್ಲಿದೆ..

ಬೆಂಗಳೂರು: ಫಾಸ್ಟ್‌ಟ್ಯಾಗ್‌ನ ಹೊಸ ನಿಯಮಾವಳಿಗಳು (FASTag New Rules) ಫೆಬ್ರವರಿ 17ರಿಂದ ಜಾರಿಗೆ ಬಂದಿವೆ. ಇದರ ಅಡಿಯಲ್ಲಿ, ಕಡಿಮೆ ಬ್ಯಾಲೆನ್ಸ್, ಪಾವತಿ ವಿಳಂಬ ಅಥವಾ ಫಾಸ್ಟ್‌ಟ್ಯಾಗ್ ಅನ್ನು ಕಪ್ಪುಪಟ್ಟಿಗೆ (black list) ಸೇರಿಸಿದರೆ ಹೆಚ್ಚುವರಿ ದಂಡ ತೆರಬೇಕಾಗುತ್ತದೆ. ಫಾಸ್ಟ್‌ಟ್ಯಾಗ್‌ನಲ್ಲಿನ ಸಮಸ್ಯೆಗಳ ಕಾರಣಕ್ಕೆ ಟೋಲ್ ಪ್ಲಾಜಾಗಳಲ್ಲಿ (toll plaza) ವಾಹನಗಳ ಉದ್ದದ ಸರತಿ ಸಾಲುಗಳನ್ನು ಕಡಿಮೆ ಮಾಡುವುದು … Continued