ಮೊದಲು ‘ವರ್ಕ್ ಫ್ರಮ್ ಹೋಮ್’ ಆದೇಶ ಮಾಡಿ ನಂತ್ರ ಮುಂಜಾನೆ 4ಕ್ಕೆ 8000 ಉದ್ಯೋಗಿಗಳನ್ನು ವಜಾಗೊಳಿಸಿದ ಮೆಟಾ

ನವದೆಹಲಿ: ಟೆಕ್ ದೈತ್ಯ ‘ಮೆಟಾ ಪ್ಲಾಟ್‌ಫಾರ್ಮ್ಸ್’ (Meta Platforms) ತನ್ನ ಒಟ್ಟು ಸಿಬ್ಬಂದಿಯ ಶೇಕಡಾ 10 ರಷ್ಟು, ಅಂದರೆ ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ಐಟಿ ವಲಯದಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿಸಿದೆ. ಈ ಪ್ರಕ್ರಿಯೆಯನ್ನು ಕಂಪನಿಯು ಅತ್ಯಂತ ರಹಸ್ಯವಾಗಿ ಮತ್ತು ವ್ಯವಸ್ಥಿತವಾಗಿ ಜಾರಿಗೆ ತಂದಿರುವುದು ಉದ್ಯೋಗಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ. ಈ ಉದ್ಯೋಗ ಕಡಿತದ … Continued

ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿ ಎಐ (AI) ತಂತ್ರಜ್ಞಾನ ಅಳವಡಿಸುವುದು ಕಾನೂನುಬಾಹಿರ : ಚೀನಾ ಕೋರ್ಟ್ ತೀರ್ಪು

ಕೇವಲ ಖರ್ಚು ಉಳಿತಾಯದ ಉದ್ದೇಶಕ್ಕಾಗಿ ಉದ್ಯೋಗಿಗಳನ್ನು ತೆಗೆದುಹಾಕಿ ಅವರ ಜಾಗಕ್ಕೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಕಾನೂನುಬಾಹಿರ ಎಂದು ಚೀನಾದ ನ್ಯಾಯಾಲಯವೊಂದು ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ಉದ್ಯೋಗ ಸುರಕ್ಷತೆಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ಚೀನಾದ ಹ್ಯಾಂಗ್‌ಝೌ ಇಂಟರ್ಮೀಡಿಯೆಟ್ ಪೀಪಲ್ಸ್ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ … Continued

ಒರಾಕಲ್‌ನಲ್ಲಿ ಭಾರೀ ಉದ್ಯೋಗ ಕಡಿತ: ಭಾರತದಲ್ಲಿ 12,000 ಉದ್ಯೋಗಿಗಳನ್ನು ವಜಾಗೊಳಿಸಿದ ಕಂಪನಿ

ಬೆಂಗಳೂರು/ನ್ಯೂಯಾರ್ಕ್: ಅಮೆರಿಕ ಮೂಲದ ಪ್ರಖ್ಯಾತ ಸಾಫ್ಟ್‌ವೇರ್ ಕಂಪನಿ ಒರಾಕಲ್ (Oracle) ಜಾಗತಿಕವಾಗಿ ಅಂದಾಜು 30,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ವರದಿಯಾಗಿದೆ. ಈ ಪೈಕಿ ಭಾರತವೊಂದರಲ್ಲೇ ಸುಮಾರು 12,000 ಮಂದಿ ಉದ್ಯೋಗ ಕಳೆದುಕೊಂಡಿದ್ದು, ಮುಂದಿನ ಒಂದು ತಿಂಗಳೊಳಗೆ ಮತ್ತೊಂದು ಹಂತದ ವಜಾ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒರಾಕಲ್ ಸಂಸ್ಥೆಯು ವಿಶ್ವಾದ್ಯಂತ ಸುಮಾರು 30,000 … Continued

ಜಾಗತಿಕವಾಗಿ 16,000 ಸಿಬ್ಬಂದಿ ವಜಾಗೊಳಿಸಲಿರುವ ಅಮೆಜಾನ್‌

ನವದೆಹಲಿ: ವಿಶ್ವದ ಪ್ರಮುಖ ಇ-ಕಾಮರ್ಸ್ ಮತ್ತು ತಂತ್ರಜ್ಞಾನ ಸಂಸ್ಥೆಯಾದ ಅಮೆಜಾನ್ ಜಾಗತಿಕವಾಗಿ ಸುಮಾರು 16,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ವರದಿಯಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಕಂಪನಿಯು ಕೈಗೊಂಡ ಎರಡನೇ ಅತಿದೊಡ್ಡ ಉದ್ಯೋಗ ಕಡಿತ ಪ್ರಕ್ರಿಯೆ ಇದಾಗಿದೆ. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಮಾಡಿಕೊಂಡಿದ್ದ ಅತಿಯಾದ ನೇಮಕಾತಿ ಮತ್ತು ಪ್ರಸ್ತುತ ಸಂಸ್ಥೆಯ ಕಾರ್ಯಾಚರಣೆಯಲ್ಲಿ ಕೃತಕ ಬುದ್ಧಿಮತ್ತೆ (AI) … Continued