ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ಚೀನಾ ಯತ್ನ : ಎಚ್ಚರಿಸಿದ ಮೈಕ್ರೋಸಾಫ್ಟ್

ನವದೆಹಲಿ : ಕೃತಕ ಬುದ್ಧಿಮತ್ತೆ ಸೃಷ್ಟಿಸಿದ ವಿಷಯಗಳನ್ನು ಬಳಸಿಕೊಂಡು ಭಾರತ, ಅಮೆರಿಕ ಮತ್ತು ದಕ್ಷಿಣ ಕೊರಿಯಾದಲ್ಲಿನ ಮುಂಬರುವ ರಾಷ್ಟ್ರೀಯ ಚುನಾವಣೆಗಳಿಗೆ ಅಡ್ಡಿಪಡಿಸಲು ಚೀನಾ ಸಜ್ಜಾಗುತ್ತಿದೆ ಎಂದು ಮೈಕ್ರೋಸಾಫ್ಟ್ ಎಚ್ಚರಿಕೆ ನೀಡಿದೆ. ತೈವಾನ್‌ನ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಚೀನಾವು ಪ್ರಾಯೋಗಿಕವಾಗಿ ಈ ಆಟ ನಡೆಸಿದ ನಂತರ, ಫಲಿತಾಂಶದ ಮೇಲೆ ಪ್ರಭಾವ ಬೀರಲು ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡ … Continued

ವೀಡಿಯೊ..| ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌(AI) ಸೃಷ್ಟಿಸಿದ ಹೊಲೊಗ್ರಾಮ್‌ ಅನ್ನು ಮದುವೆಯಾಗ್ತಿದ್ದಾರೆ ಈ ಸ್ಪ್ಯಾನಿಷ್ ಕಲಾವಿದೆ…!!

ಸ್ಪೇನ್ ಮೂಲದ ಪ್ರದರ್ಶನ ಕಲಾವಿದೆಯಾದ ಅಲಿಸಿಯಾ ಫ್ರಾಮಿಸ್ ಎಂಬವರು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ರಚಿತ ಹೊಲೊಗ್ರಾಮ್  (ಲೇಸರ್ ಅಥವಾ ಇತರ ಬೆಳಕಿನ ಕಿರಣಗಳಿಂದ ರೂಪುಗೊಂಡ ಮೂರು ಆಯಾಮದ ಚಿತ್ರ) ಅನ್ನು ಮದುವೆಯಾಗುತ್ತಿದ್ದಾರೆ, ಎಲ್ಲಾ ವೈಜ್ಞಾನಿಕ-ಕಾಲ್ಪನಿಕ ಡಿಸ್ಟೋಪಿಯನ್ ಚಲನಚಿತ್ರಗಳನ್ನು ವಾಸ್ತವವಾಗಿ ಪರಿವರ್ತಿಸುತ್ತಿದ್ದಾರೆ. ಫ್ರಾಮಿಸ್ ಅವರ ಭಾವಿ ಪತಿ ಹೊಲೊಗ್ರಾಫಿಕ್ ತಂತ್ರಜ್ಞಾನದಿಂದ ರಚಿತವಾದ ಡಿಜಿಟಲ್ ಘಟಕವಾಗಿದೆ. ಫ್ರಾಮಿಸ್ ಅವರು … Continued

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ನಿಂದ ವಿಶ್ವದಾದ್ಯಂತ 40%ರಷ್ಟು ಉದ್ಯೋಗಗಳು ಕಡಿತ : ಐಎಂಎಫ್‌

ಐಎಂಎಫ್‌ (IMF) ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಲಿನಾ ಜಾರ್ಜಿವಾ ಅವರು ಕೃತಕಬುದ್ಧಿಮತ್ತೆ (AI) ಪ್ರಪಂಚದಾದ್ಯಂತ ಸುಮಾರು 40%ರಷ್ಟು ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಿಗೆ ಹೋಲಿಸಿದರೆ ಸುಧಾರಿತ ಆರ್ಥಿಕತೆಗಳು ಎಐ(AI)ನಿಂದ ಹೆಚ್ಚಿನ ಅಪಾಯಗಳನ್ನು ಎದುರಿಸುತ್ತವೆ. ಜೊತೆಗೆ ಅದರ ಪ್ರಯೋಜನಗಳಿಂದ ಹೆಚ್ಚಿನ ಅವಕಾಶಗಳನ್ನೂ ಪಡೆಯುತ್ತವೆ ಎಂದು ಜಾರ್ಜೀವಾ … Continued

”ಇದು ನಾನಲ್ಲ…”: ಡೀಪ್‌ಫೇಕ್ ಅಪಾಯದ ಬಗ್ಗೆ ಹೇಳಲು ತಮ್ಮದೇ ಡೀಪ್‌ಫೇಕ್ ವೀಡಿಯೊ ಹಂಚಿಕೊಂಡ ಜೆರೋಧಾ ಕಂಪನಿಯ ನಿತಿನ್ ಕಾಮತ್ | ವೀಕ್ಷಿಸಿ

ಜೆರೋಧಾ ಕಂಪನಿ ಸಹ-ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ಹಣಕಾಸು ಸೇವಾ ಉದ್ಯಮದಲ್ಲಿ ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಹೆಚ್ಚುತ್ತಿರುವ ಬೆದರಿಕೆ ಮತ್ತು ಡೀಪ್‌ಫೇಕ್‌ಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. X ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಡಿಜಿಟಲೀಕರಣವು ಸಾಮಾನ್ಯವಾಗುತ್ತಿದ್ದಂತೆ ಗ್ರಾಹಕರ ಗುರುತನ್ನು ಪರಿಶೀಲಿಸಲು ಸಾಧ್ಯವಾಗದ ತೊಂದರೆಯ ಬಗ್ಗೆ ಅವರು ಮಾತನಾಡಿದ್ದಾರೆ. ”ಆದರೆ ಡೀಪ್‌ಫೇಕ್‌ಗಳು … Continued