2022ರಲ್ಲಿ ಚೀನಾದ ಮಿಲಿಟರಿ ಬಜೆಟ್‌ 7.1% ರಷ್ಟು ಹೆಚ್ಚಳ, ವಾರ್ಷಿಕ ಜಿಡಿಪಿ ಗುರಿ 5.5% ಕ್ಕೆ ಇಳಿಕೆ..!

ಬೀಜಿಂಗ್: ಅಮೆರಿಕದ ನಂತರ ನಂತರ ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಬಜೆಟ್‌ ಆಗಿರುವ ಚೀನಾದ ಮಿಲಿಟರಿ ಬಜೆಟ್ 2022ರಲ್ಲಿ ಶೇಕಡಾ 7.1 ರಷ್ಟು ಹೆಚ್ಚಳವಾಗಲಿದೆ ಎಂದು ಬೀಜಿಂಗ್ ಶನಿವಾರ ಪ್ರಕಟಿಸಿದೆ. ಸರ್ಕಾರದ ಬಜೆಟ್ ವರದಿಯ ಪ್ರಕಾರ ರಾಷ್ಟ್ರೀಯ ರಕ್ಷಣೆಗಾಗಿ ಸುಮಾರು 1.45 ಟ್ರಿಲಿಯನ್ ಯುವಾನ್ ($230 ಬಿಲಿಯನ್) ಮೀಸಲಿಡಲಾಗಿದೆ. ಹೆಚ್ಚಳವು ಕಳೆದ ವರ್ಷ 6.8 ರಷ್ಟು … Continued

ಕೋವಿಡ್-19 ನಕಾಶೆಯಲ್ಲಿ ಚೀನಾ-ಪಾಕಿಸ್ತಾನ ಸೇರಿದ ಕಾಶ್ಮೀರ!

ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್-19 ಡ್ಯಾಶ್ ಬೋರ್ಡ್ ನಲ್ಲಿ ಪ್ರಕಟಿಸಿದ ವಿಶ್ವ ನಕಾಶೆಯಲ್ಲಿ ಕಾಶ್ಮೀರವನ್ನು ಚೀನಾ, ಪಾಕಿಸ್ತಾನಕ್ಕೆ ಸೇರಿಸಲಾಗಿದೆ. ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಶಂತನು ಸೇನ್ ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ತಪ್ಪು ಮಾಹಿತಿ ನೀಡುವ ನಕಾಶೆ … Continued

ವಾಟ್ಸಪ್, ಜಿಮೇಲ್ ಬಳಸುತ್ತಿರುವ ಮುಸ್ಲಿಂ ಮಹಿಳೆಯರನ್ನು ವಶಕ್ಕೆ ಪಡೆಯುತ್ತಿರುವ ಚೀನಾ ಪೊಲೀಸರು

ಬೀಜಿಂಗ್: ಉಯ್ಗಿರ್ ಮುಸ್ಲಿಮರ (Uyghurs) ಮೇಲಿನ ದಾಳಿಯನ್ನು ಚೀನಾ ತೀವ್ರಗೊಳಿಸಿದೆ. ಮಾಧ್ಯಮಗಳ ವರದಿ ಪ್ರಕಾರ, ಚೀನಾದ ಸೈನಿಕರು ಮತ್ತು ಪೊಲೀಸರು ವಾಟ್ಸಪ್ ಮತ್ತು ಜಿಮೇಲ್ ಬಳಸುತ್ತಿರುವ ಮುಸ್ಲಿಂ ಮಹಿಳೆಯರನ್ನು ವಶಕ್ಕೆ ತೆಗೆಕೊಳ್ಳುತ್ತಿದ್ದಾರೆ. ಚೀನಾ ಸರ್ಕಾರ ಇವರನ್ನು ‘ಪ್ರಿ-ಕ್ರಿಮಿನಲ್ಸ್’ ಎಂದು ಹೇಳುತ್ತಿದೆ. ಅಂದ್ರೆ ವಾಟ್ಸಪ್ ಮತ್ತು ಜಿ ಮೇಲ್ ಬಳಸುತ್ತಿರುವ ಮಹಿಳೆಯರು ಭವಿಷ್ಯದಲ್ಲಿ ಗಂಭೀರ ಅಪರಾಧಗಳನ್ನು ಮಾಡುವ … Continued

ಚೀನಾ, ಆಗ್ನೇಯ ಏಷ್ಯಾ ಹೊಸ ಕೊರೊನಾ ವೈರಸ್‌ಗಳ ‘ಹಾಟ್‌ ಸ್ಪಾಟ್’: ಅಧ್ಯಯನ

ನ್ಯೂಯಾರ್ಕ್: ಚೀನಾ, ಜಪಾನ್, ಫಿಲಿಪೈನ್ಸ್ ಮತ್ತು ಥೈಲ್ಯಾಂಡ್ ಈ ಸ್ಥಳಗಳಲ್ಲಿ ಕೊರೊನಾ ವೈರಸ್ ಮತ್ತು ಕೊರೊನಾ ವೈರಸ್‌ ಹೊತ್ತ ಬಾವಲಿಗಳಿಗೆ ಅನುಕೂಲಕರವಾದ “ಹಾಟ್‌ಸ್ಪಾಟ್‌ಗಳಾಗಿ” ಬದಲಾಗಬಹುದು, ಈ ರೋಗವು ಬಾವಲಿಗಳಿಂದ ಮನುಷ್ಯರಿಗೆ ನೆಗೆಯುವುದಕ್ಕೆ ಕಾರಣವಾಗಬಹುದು ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ. ನೇಚರ್ ಫುಡ್ ಜರ್ನಲ್ಲಿನಲ್ಲಿ ಪ್ರಕಟವಾದ ಅಧ್ಯಯನವು ಅರಣ್ಯ ವಿಘಟನೆ, ಕೃಷಿ ವಿಸ್ತರಣೆ ಮತ್ತು ಕೇಂದ್ರೀಕೃತ ಜಾನುವಾರು … Continued

ಭಾರತದ ಆಕ್ಷೇಪದ ನಡುವೆಯೂ ಬ್ರಹ್ಮಪುತ್ರ ನದಿಗೆ ಅಣೆಕಟ್ಟುನಿರ್ಮಾಣಕ್ಕೆ ಚೀನಾ ಸಂಸತ್ತು ಒಪ್ಪಿಗೆ

ಟಿಬೆಟ್ ಪ್ರದೇಶದಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ಕಟ್ಟುವ ಯೋಜನೆಗೆ ಚೀನಾ ಸಂಸತ್ತು ಅನುಮೋದನೆ ನೀಡಿದೆ. ಕಳೆದ ವರ್ಷ ಕಮ್ಯುನಿಸ್ಟ್‌ ಪಕ್ಷದ ಸಭೆಯಲ್ಲಿ ಪ್ರಸ್ತಾಪವಾಗಿದ್ದ ಯೋಜನೆಗಳನ್ನು ಗುರುವಾರ (ಮಾ.೧೧) ಚೀನಾದ ಸಂಸತ್ತಿನಲ್ಲಿ ಮಂಡಿಸಲಾಯಿತು. ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಎಂದು ಹೇಳಲ್ಪಡುವ ಚೀನಾದ ಸಂಸತ್ ಗುರುವಾರ 14ನೇ ಪಂಚವಾರ್ಷಿಕ ಯೋಜನೆಗೆ ಅನುಮೋದನೆ ನೀಡಿದ್ದು, ಇದರಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟು … Continued

ಟಿಬೆಟ್ ಸಂಸ್ಕೃತಿ ನಾಶ ಮಾಡುತ್ತಿರುವ ಚೀನಾ: ಅಮೆರಿಕ

ವಾಷಿಂಗ್ಟನ್: ಟಿಬೆಟ್‍ ಸಂಸ್ಕೃತಿ-ಇತಿಹಾಸವನ್ನು ನಾಶಪಡಿಸುವಲ್ಲಿ ಚೀನಾನಿರತವಾಗಿದೆ ಎಂದು ಅಮೆರಿಕ ಹೇಳಿದೆ ತಮ್ಮ ಹಕ್ಕು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಟಿಬೆಟಿಯನ್ನರ ಪರ ಅಮೆರಿಕ ನಿಲ್ಲಬೇಕು ಎಂದು ಹೌಸ್ ಆಫ್ ರೆಪ್ರೆಸೆಂಟೀವ್‍ನ ಸ್ಪೀಕರ್ ನ್ಯಾನ್ಸಿ ಫೆಲೋಸಿ ಒತ್ತಾಯಿಸಿದ್ದಾರೆ. ಟಿಬೆಟ್‍ನ ಹಿಮಾಲಯ ಭೂಭಾಗ ಅತಿಕ್ರಮಿಸಿರುವ ಚೀನಾ ಧೋರಣೆ ಖಂಡಿಸಿ ಆಯೋಜಿಸಲಾಗಿದ್ದ 62ನೆ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, 62 ವರ್ಷಗಳ … Continued

ಕೊವಿಡ್‌-೧೯: ಸಾಂಪ್ರದಾಯಿಕ ಔಷಧ ಬಳಕೆಗೆ ಚೀನಾ ಅನುಮೋದನೆ

  ಚೀನಾ ದೇಶವು ಕೊರೊನಾ ವೈರಸ್ (ಕೋವಿಡ್ -19) ಚಿಕಿತ್ಸೆಗಾಗಿ ಮೂರು ಸಾಂಪ್ರದಾಯಿಕ ಚೀನೀ ಔಷಧಿ (ಟಿಸಿಎಂ) ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮೋದನೆ ನೀಡಿದೆ. ” ಕೋವಿಡ್ -19 ಚಿಕಿತ್ಸೆಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುವ” ಉತ್ಪನ್ನಗಳಿಗೆ ವಿಶೇಷ ಅನುಮೋದನೆ ವಿಧಾನ ಬಳಸಲಾಗಿದೆ ಎಂದು ದೇಶದ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನಗಳ ಆಡಳಿತವು ಘೋಷಿಸಿದೆ ಎಂದು ಸಿಎನ್‌ಎನ್‌ ಸುದ್ದಿ … Continued

ಮುಂಬೈಯಲ್ಲಿ ವಿದ್ಯುತ್‌ ಸ್ಥಗಿತದಲ್ಲಿ ಚೀನಾ ಸೈಬರ್‌ ಯುದ್ಧದ ಪಾತ್ರ: ಶೀಘ್ರವೇ ವರದಿ ಸಲ್ಲಿಕೆ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುಂಬೈನಲ್ಲಿ ವಿದ್ಯುತ್‌ ಸ್ಥಗಿತಗೊಳ್ಳಲು ಚೀನಾದ ಸೈಬರ್‌ ದಾಳಿಯ ಪಾತ್ರ ಕುರಿತು ತನಿಖೆ ನಡೆಸಿದ ಸೈಬರ್‌ ಸೆಲ್‌ ಸರಕಾರಕ್ಕೆ ವರದಿ ನೀಡಲಿದೆ. ಮಹಾರಾಷ್ಟ್ರ ಇಂಧನ ಸಚಿವ ನಿತಿನ್ ರೌತ್ ಮಾತನಾಡಿ, ಸೈಬರ್ ಸೆಲ್ ತನಿಖೆ ಪೂರ್ಣಗೊಳಿಸಿದ್ದು ಶೀಘ್ರದಲ್ಲೇ ವರದಿ ನೀಡಲಿದೆ ಎಂದು ತಿಳಿಸಿದರು. ಕಳೆದ ವರ್ಷ ಅಕ್ಟೋಬರ್ 13 ರಂದು ಮುಂಬೈಯನ್ನು ಗುರಿಯಾಗಿಸಿಕೊಂಡು … Continued

ಚೀನಾ ಈಗ ಬಡತನ ಮುಕ್ತ ದೇಶ: ಕ್ಸಿ ಜಿನ್‌‌ಪಿಂಗ್‌

ಚೀನಾ ಈಗ  ಬಡತನ ಮುಕ್ತ ದೇಶ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಘೋಷಿಸಿದ್ದಾರೆ. ಚೀನಾ ಸರಕಾರ ಅಂದುಕೊಂಡಿದ್ದಕ್ಕಿಂತ ಮೊದಲೇ ಬಡತನ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿದೆ. ಸತತ ೪೦ನೇ ವರ್ಷಗಳ ಪರಿಶ್ರಮದ ಫಲವಾಗಿ ಗ್ರಾಮೀಣ ಭಾಗದ ೭೭ ಕೋಟಿ ಜನರನ್ನು ಬಡತನದ ವಿಷ ವರ್ತುಲದಿಂದ ಹೊರಗೆ ತರಲಾಗಿದೆ. ಬಡತನ ನಿರ್ಮೂಲನೆಯಲ್ಲಿ ಚೀನಾ ಸಂಪೂರ್ಣ ಗೆಲುವು ಸಾಧಿಸಿದೆ … Continued

ಗಾಲ್ವಾನ್‌ ಕಣಿವೆ ಸಂಘರ್ಷದಲ್ಲಿ ತಮ್ಮ ಐವರು ಸೈನಿಕರ ಸಾವು: ಚೀನಾ

ಬೀಜಿಂಗ್: ಕಳೆದ ವರ್ಷ ಪೂರ್ವ ಲದಾಕ್‌ನ ಗಾಲ್ವಾನ್‌ ಕಣಿವೆಯಲ್ಲಿ ಭಾರತೀಯ ಸೇನೆಯೊಂದಿಗೆ ನಡೆದ ಘರ್ಷಣೆಯಲ್ಲಿ ಐವರು ಚೀನಾದ ಮಿಲಿಟರಿ ಅಧಿಕಾರಿಗಳು ಮತ್ತು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಶುಕ್ರವಾರ ಮೊದಲ ಬಾರಿಗೆ ಒಪ್ಪಿಕೊಂಡಿದೆ. 2020 ರ ಜೂನ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ತಮ್ಮ ದೇಶದ ಮಿಲಿಟರಿ ಅಧಿಕಾರಿಗಳು ಹಾಗೂ ಸೈನಿಕರು … Continued