ʼಆಪರೇಷನ್ ಸಿಂಧೂರ’ ವೇಳೆ ಸಹಾಯ ಮಾಡಲು ಪಾಕ್ ವಾಯುನೆಲೆಗಳಲ್ಲಿದ್ದ ಚೀನಾ ತಜ್ಞರ ತಂಡ : ಮೊದಲ ಬಾರಿಗೆ ಒಪ್ಪಿಕೊಂಡ ಚೀನಾ !

ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ವರ್ಷ ನಡೆದ ಸೇನಾ ಸಂಘರ್ಷದ ವೇಳೆ ತಾನು ಪಾಕಿಸ್ತಾನಕ್ಕೆ ನೇರವಾಗಿ ‘ಆನ್-ಸೈಟ್’ ತಾಂತ್ರಿಕ ನೆರವು ನೀಡಿದ್ದಾಗಿ ಚೀನಾ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಭಾರತವು ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ನಡೆಸಿದ್ದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಚೀನಾದ ತಜ್ಞರ ತಂಡವು ಪಾಕಿಸ್ತಾನ ಸೇನೆಗೆ ಬೆಂಬಲವಾಗಿ … Continued

ಭಾರತ -ಪಾಕ್ ಯುದ್ಧ ಸೇರಿ 7 ತಿಂಗಳಲ್ಲಿ ನಾನು 7 ಯುದ್ಧಗಳನ್ನು ನಿಲ್ಲಿಸಿದ್ದೇನೆ : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಟ್ರಂಪ್ ಬಡಾಯಿ…

ವಿಶ್ವಸಂಸ್ಥೆ : ಇತರರು ಅಸಾಧ್ಯವೆಂದು ಕರೆದದ್ದನ್ನು ನಾನು ಕೇವಲ ಏಳು ತಿಂಗಳಲ್ಲಿ ಸಾಧಿಸಿದ್ದೇನೆ. ಏಳು “ಅಂತ್ಯವಿಲ್ಲದ” ಯುದ್ಧಗಳನ್ನು ಕೊನೆಗೊಳಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 80ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಮಾತನಾಡುವಾಗ ಹೇಳಿಕೊಂಡಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ತಲುಪುವುದರಲ್ಲಿ ತಮ್ಮ ಪಾತ್ರವಿದೆ ಎಂಬ … Continued

ಭಾರತ-ಪಾಕ್‌ ಕದನ ವಿರಾಮ ಮಾತುಕತೆಯಲ್ಲಿ 3ನೇ ದೇಶದ ಮಧ್ಯಸ್ಥಿಕೆ ಇರಲಿಲ್ಲ : ಟ್ರಂಪ್ ಬೊಗಳೆ ಠುಸ್‌ ಮಾಡಿದ ಪಾಕ್‌ ಸಚಿವ…!

ನವದೆಹಲಿ: ಅಪರೂಪದ ಮತ್ತು ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ, ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಉಭಯ ದೇಶಗಳ ನಡುವಿನ ವಿವಾದಗಳಲ್ಲಿ ಭಾರತ ಎಂದಿಗೂ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ವಹಿಸುವುದನ್ನು ಸ್ವೀಕರಿಸಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇದು ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ತಮ್ಮನ್ನು ಆಹ್ವಾನಿಸಲಾಗಿದೆ ಎಂಬ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ … Continued

ಪಾಕಿಸ್ತಾನ ಸೇನೆಯ ವಕ್ತಾರ ಅಹ್ಮದ್ ಶರೀಫ್ ಚೌಧರಿ ವಿಶ್ವಸಂಸ್ಥೆಯಿಂದ ಘೋಷಿತ ಭಯೋತ್ಪಾದಕನ ಮಗ…!

ಪಾಕಿಸ್ತಾನದ ಮಿಲಿಟರಿಯು ಜಿಹಾದಿ ಮತ್ತು ಭಯೋತ್ಪಾದಕ ಅಂಶಗಳಿಂದ ಬೇರ್ಪಡಿಸಲಾಗದಂತೆ ಹೆಣೆದುಕೊಂಡಿದೆ ಎಂಬುದಕ್ಕೆ ಒಂದು ಪ್ರಮುಖ ಉದಾಹರಣೆಯೆಂದರೆ, ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR)ನ ಮಹಾನಿರ್ದೇಶಕರಾದ ತ್ರಿ-ಸ್ಟಾರ್‌ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ. ಭಾರತ-ಪಾಕಿಸ್ತಾನ ಮಿಲಿಟರಿ ಬಿಕ್ಕಟ್ಟಿನ ಬಗ್ಗೆ ಜಗತ್ತಿಗೆ ಮಾಹಿತಿ ನೀಡುತ್ತಿರುವ ಚೌಧರಿ, ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅವರ ಸಹಾಯಕರಾಗಿದ್ದ ಘೋಷಿತ ಭಯೋತ್ಪಾದಕ … Continued

ವೀಡಿಯೊ ; ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ; ಕಾಶ್ಮೀರದ ಹಲವೆಡೆ ಡ್ರೋಣ್‌ ದಾಳಿ ; ತಿರುಗೇಟು ನೀಡಲು ಸೇನೆಗೆ ಮುಕ್ತ ಅಧಿಕಾರ ನೀಡಿದ ಭಾರತ

ನವದೆಹಲಿ: ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನ ಮಾಡಿಕೊಂಡ ಕದನ ವಿರಾಮ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಶನಿವಾರ ರಾತ್ರಿ ಭಾರತ ಹೇಳಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಶ್ರಿ ಅವರು ತಡರಾತ್ರಿ ಪತ್ರಿಕಾಗೋಷ್ಠಿಯಲ್ಲಿ, ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಮಾತನಾಡಿ ಕದನ ವಿರಾಮ ಒಪ್ಪಂದಕ್ಕೆ ಬಂದ ಗಂಟೆಗಳ ನಂತರ ಪಾಕಿಸ್ತಾನ ಆ … Continued

ಪಾಕಿಸ್ತಾನಕ್ಕೆ ಐಎಂಎಫ್‌ನ ಬೇಲ್‌ಔಟ್ ಪ್ಯಾಕೇಜ್ ಮೇಲಿನ ಮತದಾನದಿಂದ ದೂರ ಉಳಿದ ಭಾರತ ; ಪಾಕಿಸ್ತಾನದ ‘ಕಳಪೆ ದಾಖಲೆ’ಯ ಉಲ್ಲೇಖ

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಪಾಕಿಸ್ತಾನಕ್ಕೆ ಪ್ರಸ್ತಾಪಿಸಿದ 1.3 ಶತಕೋಟಿ ಡಾಲರ್ ಬೇಲ್‌ಔಟ್ ಪ್ಯಾಕೇಜ್‌ನ ಮೇಲಿನ ಮತದಾನದಿಂದ ಭಾರತ ಶುಕ್ರವಾರ ದೂರ ಉಳಿದಿದೆ. ಭಾರತವು ಇಪಾಕಿಸ್ತಾನದ ‘ಕಳಪೆ ದಾಖಲೆ’ಯನ್ನು ಉಲ್ಲೇಖಿಸಿ, ಪಾಕಿಸ್ತಾನದ ವಿಷಯದಲ್ಲಿ ಐಎಂಎಫ್‌ (IMF) ಕಾರ್ಯಕ್ರಮಗಳ ಪರಿಣಾಮಕಾರಿತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿತು. ಪಾಕಿಸ್ತಾನದ ಕಡೆಯಿಂದ ಸರ್ಕಾರಿ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ಸಾಲ ಹಣಕಾಸು … Continued

ಟರ್ಕಿಶ್ ಡ್ರೋನ್‌ ಸೇರಿದಂತೆ ಪಾಕಿಸ್ತಾನದ 400 ಡ್ರೋನ್ ಗಳನ್ನು ಉಡೀಸ್ ಮಾಡಿದ ಭಾರತದ ಸೇನೆ…!

ನವದೆಹಲಿ: ಪಾಕಿಸ್ತಾನವು ಗುರುವಾರ ಸಂಜೆ ಭಾರತೀಯ ಮಿಲಿಟರಿ ನೆಲೆಗಳ ಮೇಲೆ ಅಪ್ರಚೋದಿತ ದಾಳಿ ನಡೆಸಲು ಟರ್ಕಿಶ್ ಡ್ರೋನ್‌ಗಳನ್ನು ಬಳಸಿದೆ ಮತ್ತು ಭಾರತೀಯ ವಾಯುಪಡೆಯು ಗಣನೀಯ ಸಂಯಮವನ್ನು ತೋರಿಸಿದೆ ಮತ್ತು ತನ್ನ ನಾಗರಿಕ ವಾಯುಪ್ರದೇಶವನ್ನು ರಕ್ಷಿಸಿದೆ ಎಂದು ವಿದೇಶಾಂಗ ಸಚಿವಾಲಯ (MEA) ಬಹಿರಂಗಪಡಿಸಿದೆ. ಸತತ ಮೂರನೇ ದಿನವೂ ವಿದೇಶಾಂಗ ಸಚಿವಾಲಯ (MEA)ದ ಬ್ರೀಫಿಂಗ್‌ನಲ್ಲಿ, ಕರ್ನಲ್ ಸೋಫಿಯಾ ಖುರೇಷಿ … Continued

ವೀಡಿಯೊ..| ಭಾರತದ ಜೊತೆ ಯುದ್ಧ ಭೀತಿ ಮಧ್ಯೆ ಪಾಕಿಸ್ತಾನಕ್ಕೆ ಬಲೂಚಿಸ್ತಾನದಲ್ಲಿ ಆಘಾತ; ಮಂಗೋಚಾರ್ ನಗರ ಬಲೂಚ್ ಬಂಡುಕೋರರ ವಶಕ್ಕೆ..!?

ಕ್ವೆಟ್ಟಾ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಹೆಚ್ಚಾದ ಉದ್ವಿಗ್ನತೆಯ ನಡುವೆ, ಬಲೋಚ್‌ ಬಂಡುಕೋರರು ಬಲೂಚಿಸ್ತಾನದ ಕಲಾತ್ ಜಿಲ್ಲೆಯ ಮಂಗೋಚರ್ ನಗರವನ್ನು ವಶಪಡಿಸಿಕೊಂಡಿದ್ದಾರೆ ಎಂಬ ವರದಿಗಳು ಬಂದಿವೆ. ಬಲೂಚಿಸ್ತಾನದ ಕಲಾತ್ ಜಿಲ್ಲೆಯ ಮಂಗೋಚರ್ ನಗರವು ಪ್ರಾಂತೀಯ ರಾಜಧಾನಿ ಕ್ವೆಟ್ಟಾದಿಂದ 100 ಕಿ.ಮೀ ದೂರದಲ್ಲಿದೆ. ಹಾಗೂ ಬಲೂಚಿಸ್ತಾನದ ಪ್ರಮುಖ ನಗರವಾಗಿದೆ.ಬಲೂಚ್ ಬಂಡುಕೋರರು ಮಂಗೋಚರ್‌ನಲ್ಲಿರುವ … Continued

ಪಾಕಿಸ್ತಾನದಲ್ಲಿ ಕೆಜಿ ಅಕ್ಕಿಗೆ 340 ರೂ., ಲೀಟರ್ ಹಾಲಿಗೆ 224 ರೂ., 1 ಮೊಟ್ಟೆಗೆ…..: ಆರ್ಥಿವಾಗಿ ಜರ್ಜರಿತ ಪಾಕಿಸ್ತಾನಕ್ಕೆ ಮೋದಿ ಕ್ರಮದ ಶಾಕ್…!

ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಯುದ್ಧದ ಬೆದರಿಕೆಯ ನಡುವೆ, ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದ ಹಣದುಬ್ಬರವು ನಿರ್ಣಾಯಕ ಮಟ್ಟವನ್ನು ತಲುಪಿದೆ. ಆಹಾರದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದು, ಮಾಧ್ಯಮ ವರದಿಗಳ ಪ್ರಕಾರ, ಅಕ್ಕಿ, ಹಿಟ್ಟು, ತರಕಾರಿಗಳು, ಹಣ್ಣುಗಳು ಮತ್ತು ಕೋಳಿಮಾಂಸದಂತಹ ಅಗತ್ಯ ಆಹಾರ-ವಸ್ತುಗಳ ಬೆಲೆಗಳು ತೀವ್ರವಾಗಿ ಏರಿವೆ. ಪಹಲ್ಗಾಮ್ ದಾಳಿಯ ನಂತರ ಪ್ರಧಾನಿ ನರೇಂದ್ರ … Continued

ವೀಡಿಯೊ…| ಯುದ್ಧ ನಡೆದು 25 ವರ್ಷಗಳ ನಂತರ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರವಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ ಸೇನೆ…!

ರಾವಲ್ಪಿಂಡಿ : 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೇನೆ ತಾನು ಭಾಗಿಯಾಗಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರು, ಪಾಕಿಸ್ತಾನದ ರಕ್ಷಣಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ 1965, 1971 ಮತ್ತು 1999 ರಲ್ಲಿ ಕಾರ್ಗಿಲ್‌ನಲ್ಲಿ ಯುದ್ಧಗಳನ್ನು ನಡೆಸುವಾಗಹಲವಾರು ಸೈನಿಕರು ಪ್ರಾಣ ತ್ಯಾಗ … Continued