ಬಲೂಚಿಸ್ತಾನದಲ್ಲಿ ಭೀಕರ ಸ್ಫೋಟ : ಪಾಕ್ ಸೈನಿಕರಿದ್ದ ರೈಲಿಗೆ ಸ್ಫೋಟಕ ತುಂಬಿದ ಕಾರು ಡಿಕ್ಕಿ ; 24 ಮಂದಿ ಸಾವು

ಕ್ವೆಟ್ಟಾ: ಪಾಕಿಸ್ತಾನದ ಗಲಭೆ ಪೀಡಿತ ನೈಋತ್ಯ ಪ್ರಾಂತ್ಯವಾದ ಬಲೂಚಿಸ್ತಾನದಲ್ಲಿ ಭಾನುವಾರ (ಮೇ 24) ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ 24 ಜನರು ಸಾವಿಗೀಡಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ನಡೆದ ಈ ಭೀಕರ ದಾಳಿಯಲ್ಲಿ ಮೃತರ ಪೈಕಿ ಸೇನಾ ಸಿಬ್ಬಂದಿಯೂ ಸೇರಿದ್ದಾರೆ. … Continued

ಬಲೂಚಿಸ್ತಾನದಲ್ಲಿ ಚೀನಾ ಸೇನೆ ನಿಯೋಜನೆ ಆತಂಕ : ವಿದೇಶಾಂಗ ಸಚಿವ ಜೈಶಂಕರಗೆ ಪತ್ರ ಬರೆದ ಬಲೂಚ್ ನಾಯಕ

ನವದೆಹಲಿ/ಕ್ವೆಟ್ಟಾ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ ಚೀನಾ ತನ್ನ ಸೇನಾ ಪಡೆಗಳನ್ನು ನಿಯೋಜಿಸುವ ಸಾಧ್ಯತೆಯಿದೆ ಎಂದು ಬಲೂಚ್ ನಾಯಕ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಮಿರ್ ಯಾರ್ ಬಲೂಚ್ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಅವರಿಗೆ ಅವರು ಬಹಿರಂಗ ಪತ್ರ ಬರೆದಿದ್ದಾರೆ. ಚೀನಾ ಮತ್ತು … Continued

ಕ್ವೆಟ್ಟಾದಲ್ಲಿ ಪ್ರಬಲ ಸ್ಫೋಟ : 13 ಮಂದಿ ಸಾವು, 32 ಜನರಿಗೆ ಗಾಯ ; ಆ ಕ್ಷಣದ ವೀಡಿಯೊ ವೈರಲ್‌

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 13 ಜನರು ಸಾವಿಗೀಡಾಗಿದ್ದು, 32 ಜನರು ಗಾಯಗೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ ಕ್ವೆಟ್ಟಾದ ಜರ್ಘುನ್ ರಸ್ತೆಯಲ್ಲಿರುವ ಎಫ್‌ಸಿ (ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ) ಪ್ರಧಾನ ಕಚೇರಿಯ ಮೂಲೆಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಸ್ಫೋಟದ ಶಕ್ತಿ ಎಷ್ಟು ಪ್ರಬಲವಾಗಿತ್ತೆಂದರೆ ಮಾಡೆಲ್ ಟೌನ್ ಮತ್ತು ಪಕ್ಕದ ಪ್ರದೇಶಗಳಲ್ಲಿಯೂ … Continued

ವೀಡಿಯೊಗಳು | ಪಾಕಿಸ್ತಾನಕ್ಕೆ ಮತ್ತೊಂದು ಹಿನ್ನಡೆ ; ಪಾಕ್‌ ನ ಮತ್ತೊಂದು ಪ್ರಮುಖ ನಗರ ವಶಪಡಿಸಿಕೊಂಡ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ…!

ನವದೆಹಲಿ: ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಎಂಬ ಪ್ರತ್ಯೇಕತಾವಾದಿ ಗುಂಪು ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದ ಆಯಕಟ್ಟಿನ ನಗರವಾದ ಸುರಬ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಬಲೂಚಿಸ್ತಾನ್ ಪೋಸ್ಟ್ ಹಂಚಿಕೊಂಡ ವೀಡಿಯೊಗಳ ಪ್ರಕಾರ, ನಗರದಾದ್ಯಂತ ಹಲವಾರು ಸ್ಥಳಗಳಿಂದ ದಟ್ಟವಾದ ಕಪ್ಪು ಹೊಗೆ ಮತ್ತು ಜ್ವಾಲೆಗಳು ಹೊರಹೊಮ್ಮುತ್ತಿರುವುದು ಕಂಡುಬಂದಿದ್ದು, ಹಲವಾರು ಪೊಲೀಸ್ ಠಾಣೆಗಳು ಮತ್ತು … Continued

ಪಾಕಿಸ್ತಾನ ತುಂಡಾಗುತ್ತಾ..? ಪಾಕ್‌ ನಿಂದ ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚ್ ನಾಯಕರು…! ಮಾನ್ಯತೆ ನೀಡಲು ಭಾರತ, ವಿಶ್ವಸಂಸ್ಥೆಗೆ ಒತ್ತಾಯ

ಕ್ವೆಟ್ಟಾ: ದಶಕಗಳ ಕಾಲದ ಹಿಂಸಾಚಾರ, ಬಲವಂತದ ಕಣ್ಮರೆಗಳು ಮತ್ತು ಈ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಉಲ್ಲೇಖಿಸಿ, ಬಲೂಚಿಸ್ತಾನ ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದಿದೆ ಎಂದು ಬಲೂಚಿಸ್ತಾನ ನಾಯಕ ಮೀರ್ ಯಾರ್ ಬಲೂಚ್ ಘೋಷಿಸಿದ್ದಾರೆ. ಭಾರತೀಯ ನಾಗರಿಕರು, ವಿಶೇಷವಾಗಿ ಮಾಧ್ಯಮಗಳು, ಯೂಟ್ಯೂಬರ್‌ಗಳು ಮತ್ತು ಬುದ್ಧಿಜೀವಿಗಳು ಬಲೂಚಿಸ್ತಾನದವರನ್ನು “ಪಾಕಿಸ್ತಾನಿಗಳು” ಎಂದು ಕರೆಯುವುದು ಬೇಡ ಎಂದು ಒತ್ತಾಯಿಸಿದ್ದಾರೆ. ನಾವು ಪಾಕಿಸ್ತಾನದವರಲ್ಲ … Continued

ವೀಡಿಯೊ..| ಭಾರತದ ಜೊತೆ ಸಂಘರ್ಷದಿಂದ ಪಾಕಿಸ್ತಾನಕ್ಕೆ ದೊಡ್ಡ ಶಾಕ್‌ : ತಮ್ಮದು ಸ್ವತಂತ್ರ ದೇಶ ಎಂದು ಘೋಷಿಸಿಕೊಂಡ ಬಲೂಚಿಸ್ತಾನ ಪ್ರಾಂತ್ಯ…!

ಪಾಕಿಸ್ತಾನವು ತನ್ನ ಪೂರ್ವ ಭಾಗದಲ್ಲಿ ಭಾರತೀಯ ನಾಗರಿಕರು ಮತ್ತು ಮಿಲಿಟರಿ ನೆಲೆಗಳ ಮೇಲೆ ನಿರರ್ಥಕ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುವಲ್ಲಿ ನಿರತವಾಗಿದ್ದರೆ, ಅತ್ತ ಪಾಕಿಸ್ತಾನದಲ್ಲಿ ಬಲೂಚ್ ಬಂಡುಕೋರರು ಪಾಕ್‌ ಭದ್ರತಾ ಪಡೆಗಳ ವಿರುದ್ಧ ತಮ್ಮ ದಾಳಿಯನ್ನು ಹೆಚ್ಚಿಸಿದ್ದಾರೆ. ಬಲೂಚ್ ಹೋರಾಟಗಾರರ ಕನಿಷ್ಠ ಮೂರು ಗುಂಪುಗಳು ಅದರ ಪಶ್ಚಿಮ ಪ್ರಾಂತ್ಯವಾದ ಬಲೂಚಿಸ್ತಾನದ ಕೆಲವು ಭಾಗಗಳ ನಿಯಂತ್ರಣವನ್ನು … Continued

ವೀಡಿಯೊ..| ಭಾರತದ ಜೊತೆ ಯುದ್ಧ ಭೀತಿ ಮಧ್ಯೆ ಪಾಕಿಸ್ತಾನಕ್ಕೆ ಬಲೂಚಿಸ್ತಾನದಲ್ಲಿ ಆಘಾತ; ಮಂಗೋಚಾರ್ ನಗರ ಬಲೂಚ್ ಬಂಡುಕೋರರ ವಶಕ್ಕೆ..!?

ಕ್ವೆಟ್ಟಾ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಹೆಚ್ಚಾದ ಉದ್ವಿಗ್ನತೆಯ ನಡುವೆ, ಬಲೋಚ್‌ ಬಂಡುಕೋರರು ಬಲೂಚಿಸ್ತಾನದ ಕಲಾತ್ ಜಿಲ್ಲೆಯ ಮಂಗೋಚರ್ ನಗರವನ್ನು ವಶಪಡಿಸಿಕೊಂಡಿದ್ದಾರೆ ಎಂಬ ವರದಿಗಳು ಬಂದಿವೆ. ಬಲೂಚಿಸ್ತಾನದ ಕಲಾತ್ ಜಿಲ್ಲೆಯ ಮಂಗೋಚರ್ ನಗರವು ಪ್ರಾಂತೀಯ ರಾಜಧಾನಿ ಕ್ವೆಟ್ಟಾದಿಂದ 100 ಕಿ.ಮೀ ದೂರದಲ್ಲಿದೆ. ಹಾಗೂ ಬಲೂಚಿಸ್ತಾನದ ಪ್ರಮುಖ ನಗರವಾಗಿದೆ.ಬಲೂಚ್ ಬಂಡುಕೋರರು ಮಂಗೋಚರ್‌ನಲ್ಲಿರುವ … Continued

ಬಲೂಚಿಸ್ತಾನದಲ್ಲಿ ಐಇಡಿ ಸ್ಫೋಟ: 10 ಪಾಕಿಸ್ತಾನಿ ಅರೆಸೈನಿಕ ಸಿಬ್ಬಂದಿ ಸಾವು

ಪಶ್ಚಿಮ ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ರಿಮೋಟ್ ಕಂಟ್ರೋಲ್ಡ್ ಐಇಡಿ ದಾಳಿಯಲ್ಲಿ ವಾಹನ ಸ್ಫೋಟಗೊಂಡು ಪಾಕಿಸ್ತಾನದ ಹತ್ತು ಅರೆಸೈನಿಕ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಶುಕ್ರವಾರ ತಿಳಿಸಿದೆ. ಸುದ್ದಿ ಸಂಸ್ಥೆ ಎಎಫ್‌ಪಿ ಪ್ರಕಾರ, ಕ್ವೆಟ್ಟಾದಿಂದ ಸುಮಾರು 30 ಕಿಮೀ (19 ಮೈಲುಗಳು) ದೂರದಲ್ಲಿರುವ ಮಾರ್ಗತ್ ಚೌಕಿಯಲ್ಲಿ ಭದ್ರತಾ ವಾಹನವು ರಸ್ತೆಬದಿಯ … Continued

ವೀಡಿಯೊ | ಬಲೂಚ್ ಬಂಡುಕೋರರಿಂದ ಪಾಕಿಸ್ತಾನ ಮಿಲಿಟರಿ ಬಸ್‌ ಸ್ಫೋಟಿಸಿದ ಮೊದಲ ದೃಶ್ಯ ಬಿಡುಗಡೆ ; 90 ಸೈನಿಕರು ಸತ್ತಿದ್ದಾರೆ ಎಂದ ಬಿಎಲ್‌ಎ

ಬಲೂಚ್ ಲಿಬರೇಶನ್ ಆರ್ಮಿ (BLA) ಬೆಂಗಾವಲು ಪಡೆಯ ಮೇಲಿನ ದಾಳಿಯಲ್ಲಿ 90 ಪಾಕಿಸ್ತಾನಿ ಸೈನ್ಯದ ಸಿಬ್ಬಂದಿಯನ್ನು ಕೊಂದಿರುವುದಾಗಿ ಹೇಳಿಕೊಂಡ ಕೆಲವೇ ಗಂಟೆಗಳ ನಂತರ, ಅದರ ವಿಶೇಷ ಪಡೆಗಳ ಘಟಕವಾದ ಮಜೀದ್ ಬ್ರಿಗೇಡ್ ನಡೆಸಿದ ದಾಳಿಯ ಮೊದಲ ದೃಶ್ಯಗಳನ್ನು ಬಿಡುಗಡೆ ಮಾಡಿದೆ. ಬಿಎಲ್‌ಎ (BLA) ಬಿಡುಗಡೆ ಮಾಡಿದ ವೀಡಿಯೊ ಬಸ್‌ ಸ್ಫೋಟಗೊಂಡಿದ್ದನ್ನು ಸೆರೆಹಿಡಿದಿದೆ, ಅದರ ನಂತರ ಬಸ್‌ನಿಂದ … Continued

ಪಾಕಿಸ್ತಾನ ರೈಲು ಅಪಹರಣ: ಎಲ್ಲ ಒತ್ತೆಯಾಳುಗಳ ಬಿಡುಗಡೆ ; 33 ಬಿಎಲ್‌ಎ ಬಂಡುಕೋರರ ಹತ್ಯೆ, ; 28 ಯೋಧರು ಸಾವು

ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶವಾದ ಬಲೂಚಿಸ್ತಾನದಲ್ಲಿ ರೈಲನ್ನು ಅಪಹರಿಸಿ 212 ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಎಲ್ಲಾ ಬಲೂಚ್ ದಂಗೆಕೋರರು ಕೊಲ್ಲಲ್ಪಟ್ಟಿದ್ದಾರೆ ಮತ್ತು ದಿನವಿಡೀ ತೀವ್ರವಾದ ಮಿಲಿಟರಿ ಕಾರ್ಯಾಚರಣೆಯ ನಂತರ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ, ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದು ಪಾಕಿಸ್ತಾನ ಸೇನೆ ಬುಧವಾರ ಸಂಜೆ ತಿಳಿಸಿದೆ. ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಯಿಂದ ಇಪ್ಪತ್ತೊಂದು ಪ್ರಯಾಣಿಕರು (ರಜೆ … Continued