ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನಲ್ಲಿ ಭೀಕರ ದುರಂತ: ಎಂಟು ಕಾರ್ಮಿಕರ ಸಾವು, ಹಲವರಿಗೆ ಗಾಯ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನಲ್ಲಿ ಸೋಮವಾರ ಭೀಕರ ಅವಘಡ ಸಂಭವಿಸಿದೆ. ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಬೃಹತ್ ಪಾತ್ರೆ (ಲಾಡಲ್) ಸ್ಫೋಟಗೊಂಡ ಪರಿಣಾಮ ಎಂಟು ಕಾರ್ಮಿಕರು ಮೃತಪಟ್ಟಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಉಕ್ಕಿನ ಕಾರ್ಖಾನೆಯ ಎಸ್‌ಎಂಎಸ್-೨ (SMS-2) ಮತ್ತು ಎಸ್‌ಟಿಸಿ-೩ (STC-3) ಹೀಟ್ ಫೆಸಿಲಿಟಿ ವಿಭಾಗದಲ್ಲಿ ಈ ದುರಂತ ಸಂಭವಿಸಿದೆ. ಅತ್ಯಂತ ಹೆಚ್ಚಿನ ತಾಪಮಾನದಲ್ಲಿದ್ದ ಕರಗಿದ … Continued

ಚಂಡೀಗಢದ ಪಂಜಾಬ್ ಬಿಜೆಪಿ ಕಚೇರಿ ಬಳಿ ಸ್ಫೋಟ

ಚಂಡೀಗಢ: ಚಂಡೀಗಢದ ಸೆಕ್ಟರ್ 37ರಲ್ಲಿರುವ ಪಂಜಾಬಿನ ಬಿಜೆಪಿ ರಾಜ್ಯ ಕಚೇರಿಯ ಪಾರ್ಕಿಂಗ್ ಪ್ರದೇಶದಲ್ಲಿ ಬುಧವಾರ ಸಂಜೆ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾವು-ನೋವು ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ಇಬ್ಬರು ವ್ಯಕ್ತಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಒಬ್ಬ ವ್ಯಕ್ತಿ ಕೈಯಲ್ಲಿ ಹೆಲ್ಮೆಟ್ ಹಿಡಿದಿದ್ದರೆ, ಮತ್ತೊಬ್ಬ ವಿಡಿಯೋ … Continued

ದೆಹಲಿ ಕೆಂಪು ಕೋಟೆ ಸ್ಫೋಟದಲ್ಲಿ ಭಾಗಿಯಾಗಿರುವ ವೈದ್ಯನಿಂದ ಶಂಕಿತ ಆತ್ಮಹತ್ಯಾ ಬಾಂಬರ್ ಆಗಿ ಬದಲಾದ ಡಾ. ಉಮರ್ ನಬಿ ಯಾರು…?

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ವೈದ್ಯಕೀಯ ವೃತ್ತಿಯಿಂದ ಭಯೋತ್ಪಾದಕನಾಗಿ ಬದಲಾದ ಡಾ. ಉಮರ್ ಯು ನಬಿ ಎಂಬ ವ್ಯಕ್ತಿಯೇ ಸ್ಫೋಟಿಸಿರುವ ಸಾಧ್ಯತೆ ಇದೆ ಎಂದು ಸಂಕಿಸಲಾಗಿದೆ. ಮಂಗಳವಾರ ಬೆಳಗ್ಗೆ, ದೆಹಲಿ ಸ್ಫೋಟ ಪ್ರಕರಣದ ಆತ್ಮಹತ್ಯಾ ಬಾಂಬರ್ ಎಂದು ಶಂಕಿಸಲಾದ ಡಾ. ಉಮರ್ ಮೊದಲ ಫೋಟೋ ಹೊರಬಿದ್ದಿದೆ. ಸೋಮವಾರ ಸಂಜೆ … Continued

ದೆಹಲಿ ಕೆಂಪು ಕೋಟೆ ಕಾರು ಸ್ಫೋಟ : ಫರಿದಾಬಾದ್‌ ಬಂಧನದ ನಂತರ ಭಯಭೀತನಾದ ಶಂಕಿತ ಉಗ್ರ ಸ್ಫೋಟಿಸಿಕೊಂಡನೇ…?

ನವದೆಹಲಿ: ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆಯ ಹೊರಗೆ ನಡೆದ ಕಾರು ಸ್ಫೋಟವು ಬಹುಶಃ ಫಿದಾಯಿನ್ ಶೈಲಿಯ ಭಯೋತ್ಪಾದಕ ದಾಳಿಯಾಗಿರಬಹುದು, ಇದನ್ನು ಫರಿದಾಬಾದ್ ಮೂಲದ ಭಯೋತ್ಪಾದಕ ಘಟಕದ ಪ್ರಮುಖ ಸದಸ್ಯ ಡಾ. ಮೊಹಮ್ಮದ್ ಉಮರ್ ನಡೆಸಿದ್ದಾನೆ ಎಂದು ಉನ್ನತ ಗುಪ್ತಚರ ಮೂಲಗಳು ಭಾವಿಸಿವೆ. ಫರಿದಾಬಾದ್ ಘಟಕದ ಪ್ರಮುಖ ಆರೋಪಿ ಡಾ. ಮುಜಮ್ಮಿಲ್ ಶಕೀಲ್ ಬಂಧನದ ನಂತರ … Continued

ಬಲೂಚಿಸ್ತಾನದಲ್ಲಿ ಐಇಡಿ ಸ್ಫೋಟ: 10 ಪಾಕಿಸ್ತಾನಿ ಅರೆಸೈನಿಕ ಸಿಬ್ಬಂದಿ ಸಾವು

ಪಶ್ಚಿಮ ಪಾಕಿಸ್ತಾನದ ಪ್ರಕ್ಷುಬ್ಧ ಪ್ರದೇಶ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ರಿಮೋಟ್ ಕಂಟ್ರೋಲ್ಡ್ ಐಇಡಿ ದಾಳಿಯಲ್ಲಿ ವಾಹನ ಸ್ಫೋಟಗೊಂಡು ಪಾಕಿಸ್ತಾನದ ಹತ್ತು ಅರೆಸೈನಿಕ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಶುಕ್ರವಾರ ತಿಳಿಸಿದೆ. ಸುದ್ದಿ ಸಂಸ್ಥೆ ಎಎಫ್‌ಪಿ ಪ್ರಕಾರ, ಕ್ವೆಟ್ಟಾದಿಂದ ಸುಮಾರು 30 ಕಿಮೀ (19 ಮೈಲುಗಳು) ದೂರದಲ್ಲಿರುವ ಮಾರ್ಗತ್ ಚೌಕಿಯಲ್ಲಿ ಭದ್ರತಾ ವಾಹನವು ರಸ್ತೆಬದಿಯ … Continued

ಇಳಕಲ್ಲ | ಹೇರ್ ಡ್ರೈಯರ್ ಸ್ಫೋಟ ; ಮಹಿಳೆಯ ಎರಡೂ ಹಸ್ತಗಳು ಛಿದ್ರ…!

ಬಾಗಲಕೋಟೆ: ಆಘಾತಕಾರಿ ಘಟನೆಯಲ್ಲಿ ಹೇರ್​ ಡ್ರೈಯರ್​​ ಮೆಷಿನ್​​ ಸ್ಫೋಟಗೊಂಡು ಮಹಿಳೆಯೊಬ್ಬರ ಎರಡು ಕೈಗಳು ಛಿದ್ರಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆ ಈ ಘಟನೆ ಇಳಕಲ್ಲ ಪಟ್ಟಣದ ಬಸವನಗರದಲ್ಲಿ ನಡೆದಿದ್ದು, ಗಾಯಗೊಂಡ ಮಹಿಳೆಯನ್ನು ಬಸಮ್ಮ ಯರನಾಳ ಎಂದು ಗುರುತಿಸಲಾಗಿದೆ. ಗಾಯಾಳು ಸದ್ಯ ಆಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಮೃತ ಯೋಧನ … Continued

ಪಾಕಿಸ್ತಾನ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟ : 20 ಮಂದಿ ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ

ಪೇಶಾವರ : ಪಾಕಿಸ್ತಾನದ ಬಲೂಚಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ ಮತ್ತು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಫೋಟದ ಸಮಯದಲ್ಲಿ, ಪೇಶಾವರಕ್ಕೆ ಹೊರಡಲು ರೈಲು ಸಿದ್ಧವಾಗಿತ್ತು ಎಂದು ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಮಾಡಿದೆ. ಕ್ವೆಟ್ಟಾ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಕಾರ್ಯಾಚರಣೆಗಳ ಮೊಹಮ್ಮದ್ ಬಲೋಚ್ … Continued

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಇಬ್ಬರು ಪ್ರಮುಖ ಆರೋಪಿಗಳಿಗೆ ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್ ನೀಡಿದ ನ್ಯಾಯಾಲಯ

ಕೋಲ್ಕತ್ತಾ: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಇಬ್ಬರು ಪ್ರಮುಖ ಶಂಕಿತ ಆರೋಪಿಗಳಾದ ಅದ್ಬುಲ್ ಮಥೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜೇಬ್‌ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್ ನೀಡಲಾಗಿದೆ ಎಂದು ಕೋಲ್ಕತ್ತಾದ ಎನ್‌ಐಎ ನ್ಯಾಯಾಲಯ ಶುಕ್ರವಾರ ತಿಳಿಸಿದೆ. ಬಂಧಿತ ಆರೋಪಿಗಳನ್ನು ಟ್ರಾನ್ಸಿಟ್ ರಿಮಾಂಡ್ ಮೇಲೆ ಬೆಂಗಳೂರಿಗೆ ಕರೆದೊಯ್ಯಲು ಅದು ಅನುಮತಿ … Continued

ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಮತ್ತಿಬ್ಬರು ಎನ್ ​​​ಐಎ ವಶಕ್ಕೆ

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಇಬ್ಬರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಇಬ್ಬರು ವ್ಯಕ್ತಿಗಳು ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟ ವ್ಯಕ್ತಿಯ ಜೊತೆಗೆ ಸಂಪರ್ಕದಲ್ಲಿದ್ದರು ಎಂದು ವರದಿಯಾಗಿದ್ದು, ಶನಿವಾರ ಸಂಜೆ ಅವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಬಾಂಬರ್ ಸುಳಿವು ಪತ್ತೆ ಹಚ್ಚಿದ ನಂತರ ಆತನ … Continued

ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಎನ್ಐಎಯಿಂದ ಶಂಕಿತನ ಮತ್ತೆರಡು ವೀಡಿಯೊ ಬಿಡುಗಡೆ

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಘಟನೆ ನಡೆದು 7 ದಿನಗಳಾದರೂ ಬಾಂಬ್‌ ಇರಿಸಿದ್ದ ಶಂಕಿತ ಇನ್ನೂ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿರುವ ಎನ್ಐಎ ಅಧಿಕಾರಿಗಳು ಶಂಕಿತನ ಮತ್ತೆರಡು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಒಂದರಲ್ಲಿ ಶಂಕಿತ ಬಾಂಬರ್ ಬಿಎಂಟಿಸಿ ಬಸ್ ಹತ್ತಿ, ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವುದು ಕಂಡುಬರುತ್ತದೆ. ಮೊದಲ ವೀಡಿಯೊದಲ್ಲಿ ಈತ ಬಸ್‌ ಏರಿದ … Continued