ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ 49 ನೇ ವಯಸ್ಸಿನಲ್ಲಿ ನಿಧನ

ಜಿಂಬಾಬ್ವೆಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ( 49 ವರ್ಷ) ಭಾನುವಾರ, ಸೆಪ್ಟೆಂಬರ್ 3 ರಂದು ನಿಧನರಾಗಿದ್ದಾರೆ. ಅವರು ಕೊಲೊನ್ ಮತ್ತು ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಈ ಸುದ್ದಿಯನ್ನು ಹೀತ್ ಸ್ಟ್ರೀಕ್ ಪತ್ನಿ ನಡಿನ್ ಸ್ಟ್ರೀಕ್ ತಮ್ಮ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ, ಸ್ಟ್ರೀಕ್ ನಿಧನರಾದರು ಎಂಬ ವದಂತಿಗಳು … Continued

ಕಾಡಾನೆ ದಾಳಿ : ವನ್ಯಜೀವಿ ಶಾರ್ಪ್‌ ಶೂಟರ್‌ ವೆಂಕಟೇಶ ಸಾವು

ಹಾಸನ: ಚಿಕಿತ್ಸೆ ನೀಡಲು ಬಂದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅರಣ್ಯ ಸಿಬ್ಬಂದಿ ಅರವಳಿಕೆ ತಜ್ಞ ಮೃತಪಟ್ಟ ಘಟನೆ ನಡೆದಿದೆ. ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಬಳಿ ವೈದ್ಯನ ಜೊತೆ ಹೋದ ಅರಣ್ಯ ಸಿಬ್ಬಂದಿ ಮೇಲೆ ಕಾಡಾನೆ ಭೀಮ ದಾಳಿ ನಡೆಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿಬ್ಬಂದಿ ವೆಂಕಟೇಶ, ಹಾಸನ ಆಸ್ಪತ್ರೆಯಲ್ಲಿ … Continued

ಉಪ್ಪುಂದ: ಚಾಕಲೇಟ್ ಗಂಟಲಲ್ಲಿ ಸಿಲುಕಿ 6 ವರ್ಷದ ಬಾಲಕಿ ಸಾವು

ಬೈಂದೂರು: ಚಾಕೊಲೇಟ್​ ತಿನ್ನುವಾಗ ಪ್ಲಾಸ್ಟಿಕ್‌ ಕವರ್​ ಸಮೇತ ನುಂಗಿದ 1ನೇ ತರಗತಿ ವಿದ್ಯಾರ್ಥಿನಿ ಸ್ಥಳದಲ್ಲೇ ಉಸಿರುಗಟ್ಟಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಗ್ರಾಮದಲ್ಲಿ ಸಂಭವಿಸಿದೆ. ಮೃತ ಬಾಲಕಿಯನ್ನು ಬೈಂದೂರು ತಾಲೂಕು ಬವಳಾಡಿ ಮೂಲದ ಸಮನ್ವಿ (6) ಎಂದು ಗುರುತಿಸಲಾಗಿದೆ. ಬಾಲಕಿ ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಸ್ಕೂಲ್‌ನ 1ನೇ ತರಗತಿ … Continued

ಶಿರಸಿ: ಮುರೇಗಾರ ಜಲಪಾತದಲ್ಲಿ ಮುಳುಗಿ ವ್ಯಕ್ತಿ ಸಾವು

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮುರೇಗಾರ ಜಲಪಾತದಲ್ಲಿ ವ್ಯಕ್ತಿಯೊಬ್ಬ ಮುಳುಗಿ ವ್ಯಕ್ತಿ ಮೃತಪಟ್ಟ ಘಟನೆ ವರದಿಯಾಗಿದೆ. ತುಮಕೂರು ಮೂಲದ ನವೀನ ಕುಮಾರ್ (35) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಕೆಲವರೊಂದಿಗೆ ಪ್ರವಾಸಕ್ಕೆ ಬಂದಿದ್ದ ನವೀನ್ ಕುಮಾರ ಈಜಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ತುಮಕೂರು ನಗರದ ಆರೆಸ್ಸೆಸ್‌ ಜವಾಬ್ದಾರಿ ಇತ್ತು ಎನ್ನಲಾಗಿದೆ. … Continued

ಉಕ್ರೇನ್‌ನಲ್ಲಿ ಸಾವಿಗೀಡಾದ ನವೀನ್ ಮನೆಗೆ ಸಿಎಂ ಭೇಟಿ, ಸಾಂತ್ವನ: ಪರಿಹಾರ ಚೆಕ್‌ ವಿತರಣೆ

ಹಾವೇರಿ: ಯುದ್ಧಪೀಡಿತ ಉಕ್ರೇನ್​ನಲ್ಲಿ ರಷ್ಯಾ ಪಡೆ ನಡೆಸಿದ ಶೆಲ್​ ದಾಳಿಯಲ್ಲಿ ಮೃತಪಟ್ಟ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನವೀನಗೆ ಸಲ್ಲಿಸಿದ ಬೊಮ್ಮಾಯಿ, ಮೃತನ ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮೀ ಹಾಗೂ ಸಹೋದರನಿಗೆ ಸಾಂತ್ವನ ಹೇಳಿದರು. ರಾಜ್ಯ ಸರ್ಕಾರದಿಂದ … Continued

ಚಿನ್ನಾಭರಣ ಅಂಗಡಿಗೆ ಕದಿಯಲು ಬಂದ ಕಳ್ಳರಿಂದ ಫೈರಿಂಗ್​; ಯುವಕ ಸಾವು

ಮೈಸೂರು: ಹಾಡಹಗಲೇ ಚಿನ್ನಾಭರಣದ ಅಂಗಡಿಗೆ ನುಗ್ಗಿದ ಕಳ್ಳರು, ಆಭರಣಗಳನ್ನು ಕದಿಯಲು ಯತ್ನಿಸಿದ್ದಾರೆ ಹಾಗೂ ಇದಕ್ಕೆ ಪ್ರತಿರೋಧ ಒಡ್ಡಿದ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿದ್ದಾರೆ. ನಾಲ್ಕು ಜನರ ತಂಡ ಮೈಸೂರಿನ ವಿದ್ಯಾರಣ್ಯಪುರಂ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಚಿನ್ನಾಭರಣ ಅಂಗಡಿಗೆ ಅಭರಣ ಕದಿಯಲು ಆಗಮಿಸಿದೆ. ಕಳ್ಳತನಕ್ಕೆ ಬಂದಿರುವ ಬಗ್ಗೆ ಸುಳಿವು ಗೊತ್ತಾದ ಕೂಡಲೇ ಅಂಗಡಿಯಲ್ಲಿದ್ದ ಮಾಲೀಕ … Continued

ಧಾರವಾಡ: ಮಾಜಿ ಪೈಲ್ವಾನರಿಗೆ ಶ್ರದ್ಧಾಂಜಲಿ

ಧಾರವಾಡ : ರಾಜ್ಯದ ಹಾಗೂ ಜಿಲ್ಲೆಯ ಅನೇಕ ಮಾಜಿ ಪೈಲ್ವಾನರು ಕೋವಿಡ್ ಮಹಾಮಾರಿಯಿಂದ ಮೃತರಾಗಿದ್ದು, ಅವರ ಸ್ಮರಣಾರ್ಥ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅವರೆಲ್ಲರ ಸಾಧನೆ ಹಾಗೂ ಸೇವೆಯನ್ನು ಈ ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಅಮೃತ್ ದೇಸಾಯಿ ಮಾತನಾಡಿ ಕಳೆದ ವರ್ಷ ಕುಸ್ತಿ ಹಬ್ಬಕ್ಕೆ ಅವಿರತ ಸೇವೆ ಮಾಡಿದ ಹಿರಿಯ ಪೈಲ್ವಾರನ್ನು ನೆನಪಿಸಿಕೊಂಡರು. ಮೃತರಾದ … Continued

ವಿವಿಧ ತೆರಿಗೆ ಅನುಸರಣೆ ಗಡುವು ವಿಸ್ತರಿಸಿ ಆದೇಶ: ಕೋವಿಡ್ ಚಿಕಿತ್ಸೆಯಲ್ಲಿ ನೌಕರರಿಗೆ ತೆರಿಗೆ ವಿನಾಯ್ತಿ ಘೋಷಣೆ

ನವದೆಹಲಿ: ವಿವಿಧ ಆದಾಯ ತೆರಿಗೆ ಪವತಿ ಅನುಸರಣೆಗಳ ಗಡುವನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಶುಕ್ರವಾರ ಆದೇಶಿಸಿದೆ. ಕೋವಿಡ್ 19 ಚಿಕಿತ್ಸೆಗಾಗಿ ಉದ್ಯೋಗದಾತರು ಉದ್ಯೋಗಿಗಳಿಗೆ ನೀಡಿದ ಮೊತ್ತಕ್ಕೆ ತೆರಿಗೆಯಿಂದ ವಿನಾಯಿತಿ ನೀಡಿದೆ. ಅಲ್ಲದೆ ಕೋವಿಡ್ ನಿಂದಾಗಿ ನೌಕರರು ಮೃತಪಟ್ಟಲ್ಲಿ ಕುಟುಂಬ ಸದಸ್ಯರು ಉದ್ಯೋಗದಾತರಿಂದ ಪಡೆದ ಪರಿಹಾರ ಪಾವತಿಗಳನ್ನು 2019-20ರ ಹಣಕಾಸು ಮತ್ತು ನಂತರದ ವರ್ಷಗಳಲ್ಲಿ ಆದಾಯ ತೆರಿಗೆಯಿಂದ … Continued

‘ಸಂಘಕಾರ್ಯ’ವನ್ನು ‘ಜೀವನಕಾರ್ಯ’ವನ್ನಾಗಿ ಸ್ವೀಕರಿಸಿದ್ದ ಸಿದ್ದಣ್ಣಗೌಡ ಗಡಿಗುಡಾಳರು

ಕರ್ನಾಟಕ ಉತ್ತರ ಪ್ರಾಂತದ ಹಿಂದಿನ ಪ್ರಾಂತ ಸಂಘಚಾಲಕರಾಗಿದ್ದ ಸಿದ್ದಣ್ಣಗೌಡ ಗಡಿಗುಡಾಳರು ಏಪ್ರಿಲ್‌ ೧ರಂದು ಗುರುವಾರ ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ೨ಕ್ಕೆ ಬಳ್ಳಾರಿ ಜಿಲ್ಲೆಯ ಅವರ ಸ್ವಗ್ರಾಮ ಗಡಿಗುಡಾಳದಲ್ಲಿ ನಡೆಯಿತು. ಮಾ.ಶ್ರೀ ಸಿದ್ದಣ್ಣಗೌಡ ಗಡಿಗುಡಾಳ್ ರವರು ಇಂದು(1.4.2021) ಬೆಳಗ್ಗೆ 6.15 ಕ್ಕೆ ಗಡಿಗುಡಾಳದ ತಮ್ಮ ಸ್ವಗೃಹದಲ್ಲಿ ದೈವಾಧೀನರಾದ ಸುದ್ದಿ ತಲುಪಿತು. ಸಹಜವಾಗಿ ಮನಸ್ಸಿನಲ್ಲಿ … Continued

ನೀನಾಸಂ ಕೆ.ವಿ.ಸುಬ್ಬಣ್ಣ ಪತ್ನಿ ಶೈಲಜಾ ನಿಧನ

ಸಾಗರ: ಸಾಗರ ತಾಲೂಕಿನ ಹೆಗ್ಗೋಡು ನೀನಾಸಂ ಸಂಸ್ಥೆಯ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಅವರ ಪತ್ನಿ ಶೈಲಜಾ (೮೫) ಭಾನುವಾರ ಮುಂಡಿಗೇಸರ ಗ್ರಾಮದ ನಿವಾಸದಲ್ಲಿ ನಿಧನರಾದರು. ಮೃತರು ಪುತ್ರ ಕೆ.ವಿ. ಅಕ್ಷರ ಹಾಗೂ ಕುಟುಂಬದ ಸದಸ್ಯರನ್ನು ಅಗಲಿದ್ದಾರೆ. ಕೆ.ವಿ.ಸುಬ್ಬಣ್ಣ ನೀನಾಸಂ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾಗ ಮನೆ ಹಾಗೂ ತೋಟದ ಜವಾಬ್ದಾರಿಯನ್ನು ಶೈಲಜಾ ಅವರೇ ನೋಡಿಕೊಳ್ಳುತ್ತಿದ್ದರು. ಅಲ್ಲದೇ ನೀನಾಸಂ ಸಂಸ್ಥೆಯ ಬೆಳವಣಿಗೆಯಲ್ಲಿ … Continued