ಚಾಕುವಿನಿಂದ ಇರಿದು ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣ ಪಂಚಾಯತ ವ್ಯಾಪ್ತಿಯ ಫರೀದಖಾನ ವಾಡಿಯ ತೋಟದ ಪ್ರದೇಶದಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಎರಡು ವರ್ಷ 9 ತಿಂಗಳಿನ ಸಾತ್ವಿಕ್ ರಾಹುಲ್ ಕಟಗೇರಿ ಎಂಬಾತ ಕೊಲೆಯಾದ ಮಗು. … Continued

ಬೆಳಗಾವಿ | ಗ್ರಾಮ ಪಂಚಾಯತ ಕಟ್ಟಡಕ್ಕೆ ಪೆಟ್ರೋಲ್ ಬಾಂಬ್ ಎಸೆದ ಕಿಡಿಗೇಡಿಗಳು

ಬೆಳಗಾವಿ : ಬೆಳಗಾವಿ ತಾಲೂಕು ಕಲಕಾಂಬ ಗ್ರಾಮ ಪಂಚಾಯತ ಕಟ್ಟಡಕ್ಕೆ ಶುಕ್ರವಾರ ತಡರಾತ್ರಿ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಪ್ರಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಕಚೇರಿಯ ಪೀಠೋಪಕರಣಕ್ಕೆ ಹಾನಿಯಾಗಿದೆ. ಸಿಸಿಟಿವಿ ಕ್ಯಾಮರಾ ಕಿತ್ತು ಬಂದಿದೆ. ಈ ವಿಷಯ ಶನಿವಾರ ಸ್ಥಳೀಯರಿಗೆ ಗೊತ್ತಾಯಿತು. ಪೆಟ್ರೋಲ್ ತುಂಬಿ ಅದಕ್ಕೆ ಬೆಂಕಿ ಹಚ್ಚಿ ಗ್ರಾಮ ಪಂಚಾಯತ … Continued

“ನಾ ಡ್ರೈವರ್ ” ಹಾಡಿನ ಗಾಯಕನಿಂದ ಇಬ್ಬರ ಮೇಲೆ ಹಲ್ಲೆ ; ಆರೋಪ

ಬೆಳಗಾವಿ : ನೋಡಿಕೊಂಡು ಕಾರು ಚಲಾಯಿಸಿ ಎಂದಿದ್ದಕ್ಕೆ “ನಾ ಡ್ರೈವರ್” ಎಂಬ ಹಾಡಿನ ಗಾಯಕ ಮಾಳು ನಿಪನಾಳ ಓರ್ವ ವ್ಯಕ್ತಿ ಮತ್ತು ಆತನ ಸಹೋದರಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಶೇಖಪ್ಪ ಹಕ್ಯಾಗೋಳ ಮತ್ತು ಅವರ ಸಹೋದರಿ ಚಿಕ್ಕೋಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ರಾಯಬಾಗ ತಾಲೂಕು ನಿಪನಾಳ ಗ್ರಾಮದ ಹೊರ ವಲಯದಲ್ಲಿ ಬೈಕ್ … Continued

ಕರ್ನಾಟಕ ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸಿದ ಎಂಇಎಸ್ ನಾಯಕರ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನ ಆಚರಣೆ ಮಾಡಿದ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ವಿರುದ್ಧ ಪೊಲೀಸರು ಕ್ರಮ ಜರುಗಿಸಲು ಮುಂದಾಗಿದ್ದಾರೆ. ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಡಳಿತ ಕರಾಳ ದಿನಾಚರಣೆಗೆ ಅನುಮತಿ ನೀಡದೇ ಇದ್ದರೂ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಬೀದಿಗಿಳಿದುಕರಾಳ ದಿನ ಆಚರಣೆ ಮಾಡಿದ್ದರು. … Continued

ಬೆಳಗಾವಿ : ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಹಿಂಡಲಗಾ ಗಣಪತಿ ದೇವಸ್ಥಾನದ ಬಳಿ ಮಹಿಳೆಯೊಬ್ಬರು ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೌಟುಂಬಿಕ ಕಲಹದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಗಂಡ ಹಾಗೂ ಅತ್ತೆ ಕಾಟದಿದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮಹಿಳೆ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವುದು ಕಂಡುಬಂದಿದೆ. ಮೃತರನ್ನು ಕಲಕಾಂಬ ಗ್ರಾಮದ ಕವಿತಾ ಬಸವಂತ ಜುನೆ  (40) ಮತ್ತು ಸಮರ್ಥ … Continued

ಭಜನೆ ಸ್ಪರ್ಧೆ ವೇಳೆ ಹಾರಿ ಹೋದ ಪ್ರಾಣಪಕ್ಷಿ

ಬೆಳಗಾವಿ: ಕಿತ್ತೂರು ಉತ್ಸವದ ಅಂಗವಾಗಿ ಜಿಲ್ಲೆಯ ಕಿತ್ತೂರು ಪಟ್ಟಣದ ಕೋಟೆ ಆವರಣದಲ್ಲಿ ಭಾನುವಾರ ನಡೆದ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ವೇದಿಕೆಯಿಂದ ನಿರ್ಗಮಿಸುತ್ತಿದ್ದ ವೇಳೆ ಕಲಾವಿದರೊಬ್ಬರು ಹೃದಯಾಘಾತವಾಗಿ ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಸಾಪುರ ಗ್ರಾಮದ ಈರಪ್ಪ ಫಕ್ಕೀರಪ್ಪ ಬಬಲಿ (48) ಎಂಬವರೇ ಮೃತಪಟ್ಟ ಕಲಾವಿದರಾಗಿದ್ದಾರೆ. ಅವರು ವೇದಿಕೆಯಿಂದ ಇಳಿಯುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಅಸುನೀಗಿದರು. … Continued

ಬಸ್ಸಿನಲ್ಲಿ ಸೀಟಿಗಾಗಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಮಹಿಳೆಯರು…!

ಬೆಳಗಾವಿ : ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಮಹಿಳೆಯರಿಬ್ಬರು ಸೀಟಿಗಾಗಿ ಹೊಡೆದಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮಹಿಳೆಯರು ಸವದತ್ತಿ ರೇಣುಕಾ ಯಲ್ಲಮ್ಮದೇವಿ ದರ್ಶನ ಪಡೆಯಲು ಸವದತ್ತಿಗೆ ಹೋಗುವ ಬಸ್ಸನ್ನು ಏರಿದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಸ್‌ ಸೀಟ್ ಬಗ್ಗೆ ಪರಸ್ಪರರು ತಾವು ಹಿಡಿದಿದ್ದೇವೆ ಎಂದು ಮಹಿಳೆಯರ ಮಧ್ಯೆ ಜಗಳ ಆರಂಭವಾಗಿದೆ. ಆರಂಭದಲ್ಲಿ … Continued

ವೀಡಿಯೊ…| ಅಥಣಿಯಲ್ಲಿ ಪುಟ್ಟ ಮಕ್ಕಳ ಅಪಹರಣಕ್ಕೆ ಯತ್ನ : ದುಷ್ಕರ್ಮಿಯ ಕಾಲಿಗೆ ಗುಂಡು ಹೊಡೆದು ಪುಟಾಣಿಗಳ ರಕ್ಷಿಸಿದ ಪೊಲೀಸರು

ಬೆಳಗಾವಿ : ಮನೆಗೆ ನುಗ್ಗಿ ಮಕ್ಕಳನ್ನು ಅಪಹರಿಸಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳ ಮೇಲೆ ಅಥಣಿ ಪೊಲೀಸರು ಫೈರಿಂಗ್ ಮಾಡಿ ಇಬ್ಬರು ಬಾಲಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಘಟನೆ ಅಥಣಿ ತಾಲೂಕಿನ ಮಹಾರಾಷ್ಟ್ರ ಗಡಿಯಲ್ಲಿ ಗುರುವಾರ ನಡೆದಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ರವಿಕಿರಣ ಕಮ್ಲಾಕರ್, ಬಿಹಾರದ ಮೂಲದ ಸದ್ಯ ಮುಂಬೈ ನಿವಾಸಿ ಶಾರುಖ್ ಶೇಖ್ … Continued

ಬೆಳಗಾವಿ : ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

ಬೆಳಗಾವಿ : ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿದೆ. ಇ ಮೇಲ್ ಮೂಲಕ ಅಪರಿಚಿತರು ವಿಮಾನ ನಿಲ್ದಾಣ ಸ್ಪೋಟಿಸುವ ಬೆದರಿಕೆ ಹಾಕಿದ್ದಾರೆ. ಸಾಂಬ್ರಾ ‌ವಿಮಾನ ನಿಲ್ದಾಣದ‌ ನಿರ್ದೇಶಕ ತ್ಯಾಗರಾಜ್ ಅವರ ಇಮೇಲ್‌ಗೆ ಈ ಬೆದರಿಕೆ ಪತ್ರ ಬಂದಿದೆ. ಚೆನ್ನೈನಿಂದ ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಬಗ್ಗೆ ಮಾಹಿತಿ ಲಭಿಸಿದೆ. ಬಾಂಬ್ ಬೆದರಿಕೆ ಪತ್ರದ … Continued

ಬೆಳಗಾವಿ: ವಾಹನದ ಕ್ಯಾಬಿನ್ ಮಾರ್ಪಾಟು ಮಾಡಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 2.73 ಕೋಟಿ ಹಣ ಜಪ್ತಿ…!

ಬೆಳಗಾವಿ: ಅಕ್ರಮವಾಗಿ ಹಣ ಸಾಗಾಟ ಮಾಡಲು ವಾಹನದ ಕ್ಯಾಬಿನ್ ಮಾರ್ಪಾಡು ಮಾಡಿ ಹಣ ಸಾಗಿಸುತ್ತಿದ್ದ ಇಬ್ಬರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದು, ಅವರಿಂದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.73 ಕೋಟಿ ಹಣವನ್ನ ಜಪ್ತಿ ಮಾಡಿಕೊಂಡಿದ್ದಾರೆ. ಶುಕ್ರವಾರ ಸಂಜೆ ಮಹಾರಾಷ್ಟ್ರದ ಸಾಂಗ್ಲಿಯಿಂದ ಹುಬ್ಬಳ್ಳಿ ಕಡೆ ಗೂಡ್ಸ್ ವಾಹನದಲ್ಲಿ ಸೂಕ್ತ ದಾಖಲೆ ಇಲ್ಲದೆ ಹಣ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ … Continued