ಯಲ್ಲಾಪುರ : ಸಾರಿಗೆ ಸಂಸ್ಥೆ ಬಸ್-ಮಿನಿ ಬಸ್ ಡಿಕ್ಕಿ : 10 ಮಂದಿಗೆ ಗಾಯ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟ ಪ್ರದೇಶದ ಕಡಿದಾದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಮಿನಿ ಬಸ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಮಾರು 10 ಮಂದಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ ಎಂದು ವರದಿಯಾಗಿದೆ. ಕಡಿದಾದ ತಿರುವಿನಲ್ಲಿ ಅತಿ ವೇಗವಾಗಿ ಬಂದ ಮಿನಿ ಬಸ್ ನಿಯಂತ್ರಣ … Continued

ಅಳ್ನಾವರ : ಶಾಲಾ ವಾಹನ ಗುದ್ದಿ 2 ವರ್ಷದ ಮಗು ಸಾವು

ಧಾರವಾಡ : ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದಿದ್ದ ವಾಹನ ಡಿಕ್ಕಿ ಹೊಡೆದು ಸುಮಾರು ಎರಡು ವರ್ಷದ ಮಗು ಮೃತಪಟ್ಟ ಹೃದಯವಿದ್ರಾವಕ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ ಎಂದುವರದಿಯಾಗಿದೆ. ಮೃತ ಮಗುವನ್ನು ಹುಲ್ಲಿಕೇರಿ ಗ್ರಾಮದ ಲುಕ್ಮಾನ್ ಬೋಗೂರ (2) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳನ್ನು ಕರೆದೊಯ್ಯಲು ಶಾಲಾ ವಾಹನ ಹುಲಿಕೇರಿ … Continued

ಮಗನ ಅಪಘಾತದಿಂದ ನೊಂದು ದಂಪತಿಯ ದುರಂತ ಅಂತ್ಯ ; ತಾಯಿ-ತಂದೆ ಕಳೆದುಕೊಂಡ 10 ವರ್ಷದ ಬಾಲಕ ಅನಾಥ

ಕಾರವಾರ: ಕುಟುಂಬದಲ್ಲಿ ಸಂಭವಿಸಿದ ಅಪಘಾತವೊಂದು ಇಡೀ ಕುಟುಂಬವನ್ನೇ ದುರಂತಕ್ಕೆ ದೂಡಿದ ಕರುಣಾಜನಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದ ಬಂಗಾರಪ್ಪ ನಗರದಲ್ಲಿ ನಡೆದಿದೆ. ಮಗನಿಗೆ ಸಂಭವಿಸಿದ ಅಪಘಾತದಿಂದ ಆತನ ಆರೋಗ್ಯದ ಬಗ್ಗೆ ಆತಂಕಗೊಂಡ ತಾಯಿ ಆತ್ಮಹತ್ಯೆಗೆ ಶರಣಾದರೆ, ಪತ್ನಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಪತಿಯೂ ಕಾಳಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ … Continued

ಬಂಟ್ವಾಳ | ಶಾಲಾ ಬಸ್ ಮೇಲೆ ಮರ ಬಿದ್ದು ಯುಕೆಜಿ ಬಾಲಕಿ ಸಾವು; ಕೆಲವರಿಗೆ ಗಾಯ

ಮಂಗಳೂರು: ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಆರು ವರ್ಷದ ಬಾಲಕಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬರಿಮಾರು ಸಮೀಪದ ಕಲ್ಲೆಟ್ಟಿ ಬಳಿ ಬುಧವಾರ ಸಂಜೆ ಸಂಭವಿಸಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ … Continued

ವಿಡಿಯೊ | ದಾಂಡೇಲಿಯ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ದುರಂತ: 40 ಅಡಿ ಎತ್ತರದಿಂದ ಬಿದ್ದು ಯುವಕನಿಗೆ ಗಂಭೀರ ಗಾಯ

ಕಾರವಾರ : ಮನರಂಜನೆ ಮತ್ತು ಸಾಹಸ ಅನುಭವಕ್ಕಾಗಿ ತೆರಳಿದ್ದ ವ್ಯಕ್ತಿಯೊಬ್ಬರಿಗೆ ಜಿಪ್‌ಲೈನ್ ಸವಾರಿ ದುಸ್ವಪ್ನವಾಗಿ ಪರಿಣಮಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ರೆಸಾರ್ಟ್‌ ಒಂದರಲ್ಲಿ ನಡೆದಿದೆ. ಜಿಪ್‌ಲೈನ್ ಸವಾರಿಯ ವೇಳೆ ಸುರಕ್ಷತಾ ವ್ಯವಸ್ಥೆ (ಸೇಫ್ಟಿ ಲಾಕ್) ಕೈಕೊಟ್ಟ ಪರಿಣಾಮ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. … Continued

ಶಿರಸಿ : ವಾಹನ ಡಿಕ್ಕಿ ; ಕಾನಕುರಿ ಸಾವು

ಶಿರಸಿ: ಶಿರಸಿ-ಕುಮಟಾ ರಸ್ತೆಯ ಸಿರ್ಸಿಮಕ್ಕಿ ಸಮೀಪ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕಾನಕುರಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಭಾನುವಾರ ನಡೆದಿದೆ. ಸಿರಸಿಮಕ್ಕಿಯ ಸಮೀಪದ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಈ ಸಂಭವಿಸಿದ್ದು, ಕಾಡಿನಿಂದ ಬಂದ ಕಾನಕುರಿ ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ವೇಗವಾಗಿ ಡಿಕ್ಕಿ ಹೊಡೆದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. … Continued

ವಿಡಿಯೊ | ಮೆರ್ಸಿಡಿಸ್ ಕಾರಿನಡಿಗೆ ಸಂಪೂರ್ಣವಾಗಿ ಸಿಲುಕಿದ ಕೆಲ ಕ್ಷಣಗಳಲ್ಲೇ ಎದ್ದು ನಡೆದು ಅಚ್ಚರಿ ಮೂಡಿಸಿದ ವ್ಯಕ್ತಿ…!

ಚಂಡೀಗಢ: ನಗರದ ಸೆಕ್ಟರ್–26 ಪ್ರದೇಶದಲ್ಲಿ ಮೆರ್ಸಿಡಿಸ್ ಕಾರೊಂದು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸಿ ಇಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಶನಿವಾರ ಸಂಜೆ ನಡೆದಿದೆ. ಈ ಹಿಟ್-ಅಂಡ್-ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್‌ನಲ್ಲಿ ಸೆರೆಹಿಡಿದ ದೃಶ್ಯಗಳು ಇದೀಗ ಹೊರಬಿದ್ದಿದ್ದು, ಕಾರು ವ್ಯಕ್ತಿಯ ಮೇಲೆ ಚಲಿಸಿದರೂ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಏನೂ ಆಗದವನಂತೆ ಎದ್ದು ನಡೆಯುತ್ತಿರುವ ದೃಶ್ಯವೂ ಕಂಡುಬಂದಿದೆ. … Continued

ಯಲ್ಲಾಪುರ : ಕ್ರೂಸರ್-ಲಾರಿ ಮುಖಾಮುಖಿ ಡಿಕ್ಕಿ, 6 ಮಂದಿ ಸಾವು

ಕಾರವಾರ : ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಆರು ಮಂದಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಬಳಗಾರ ಸಮೀಪ ಅಂಕೋಲಾ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ ಎಂದು ವರದಿಯಾಗಿದೆ. ಪ್ರವಾಸಿಗರಿದ್ದ ತೂಫಾನ್ ಕ್ರೂಸರ್ ಮತ್ತು ಲಾರಿಯ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಆರು ಮಂದಿ … Continued

ಮೈ ಜುಂ ಎನ್ನುವ ವಿಡಿಯೋ | ಆಕಾಶದಲ್ಲಿ ಪ್ಯಾರಾಗ್ಲೈಡರ್‌ಗೆ ಡಿಕ್ಕಿ ಹೊಡೆದ ವಿಮಾನ ; ಪವಾಡಸದೃಶವಾಗಿ ಪಾರಾದ ಮಹಿಳೆ !

ವಿಯೆನ್ನಾ: ಆಸ್ಟ್ರಿಯಾದ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ ಹಾರಾಟ ನಡೆಸುತ್ತಿದ್ದ ಪ್ಯಾರಾಗ್ಲೈಡರ್‌ಗೆ ಸಣ್ಣ ಪ್ರವಾಸಿ ವಿಮಾನವೊಂದು ನೇರವಾಗಿ ಢಿಕ್ಕಿ ಹೊಡೆದ ಅತ್ಯಂತ ಭಯಾನಕ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ವಿಮಾನದ ರೆಕ್ಕೆ ಬಡಿದ ರಭಸಕ್ಕೆ ಪ್ಯಾರಾಗ್ಲೈಡರ್‌ನ ಕ್ಯಾನೋಪಿ (ಮೇಲ್ಛಾವಣಿ) ಎರಡು ಭಾಗಗಳಾಗಿ ಸೀಳಿದ್ದು, ಪ್ಯಾರಾಗ್ಲೈಡರ್ ಸವಾರಿ ಮಾಡುತ್ತಿದ್ದ ಮಹಿಳೆ ಕಿರುಚುತ್ತಾ ಆಕಾಶದಿಂದ ಕೆಳಗೆ ಬಂದು ಭೂಮಿ ಮೇಲೆ … Continued

ಅಮೆರಿಕ ವಿಮಾನ ದುರಂತ: ಟೇಕ್‌ಆಫ್ ವೇಳೆ ಯುಪಿಎಸ್ ವಿಮಾನದ ಇಂಜಿನ್ ಕಳಚಿ ಬಿದ್ದ ವಿಡಿಯೋ ಬಿಡುಗಡೆ ಮಾಡಿದ ಎನ್‌ಟಿಎಸ್‌ಬಿ

ಲೂಯಿಸ್‌ವಿಲ್ಲೆ (ಕೆಂಟಕಿ): ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಯುಪಿಎಸ್ (UPS) ಸರಕು ಸಾಗಣೆ ವಿಮಾನವೊಂದು ಭೀಕರ ಅಪಘಾತಕ್ಕೀಡಾದ ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಬಿಡುಗಡೆ ಮಾಡಿದೆ. ವಿಮಾನದ ರೆಕ್ಕೆಯಿಂದ ಎಡ ಇಂಜಿನ್ ಕಳಚಿಕೊಂಡು ಬಿದ್ದ ಭೀಕರ ಕ್ಷಣಗಳು ಈ ವಿಡಿಯೋದಲ್ಲಿ ಸೆರೆಯಾಗಿವೆ. ನವೆಂಬರ್ 4, 2025 ರಂದು  ನಡೆದ … Continued