ಸಿಂಧುದುರ್ಗದಲ್ಲಿ ದುರಂತ: ಪಿಕ್ನಿಕ್ ಗೆ ತೆರಳಿದ್ದ ಬೆಳಗಾವಿ ಜಿಲ್ಲೆ ಮೂವರ ದುರ್ಮರಣ, ನಾಲ್ವರು ನಾಪತ್ತೆ

 ಬೆಳಗಾವಿ : ಮಹಾರಾಷ್ಟ್ರದ ಸಿಂಧುದುರ್ಗಕ್ಕೆ ತೆರಳಿದ್ದ ಖಾನಾಪುರದ ಎಂಟು ಜನರ ತಂಡದಲ್ಲಿ ಮೂವರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಮಹಾರಾಷ್ಟ್ರದ ಶಿರೋಡಾ-ವೇಲಗರ್ ಬೀಚ್‌ನಲ್ಲಿ ಶುಕ್ರವಾರ ಘೋರ ದುರಂತ ಸಂಭವಿಸಿದೆ. ಎಂಟು ಜನರಿದ್ದ ಕುಟುಂಬ ಸದಸ್ಯರು ಅರಬ್ಬೀ ಸಮುದ್ರಕ್ಕೆ ಹೋದಾಗ ಪಿಕ್ನಿಕ್ ಮಾರಕವಾಗಿ ಪರಿಣಮಿಸಿದೆ. ಈ ಕುಟುಂಬದ ಮೂವರು ಸದಸ್ಯರು ನೀರಿನಲ್ಲಿ ಮುಳುಗಿ … Continued

ಖಾನಾಪುರ : ಮುಂಡವಾಡದಲ್ಲಿ ವ್ಯಕ್ತಿ ಮೇಲೆ ಕರಡಿ ದಾಳಿ

ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಮುಂಡವಾಡ ಗೌಳಿವಾಡದ ರೈತರೊಬ್ಬರ ಮೇಲೆ ಭಾನುವಾರ ಜಮೀನಿಗೆ ತೆರಳುತ್ತಿದ್ದ ವೇಳೆ ಎರಡು ಕರಡಿಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ. ವಿನೋದ ಜಾಧವ (46) ಎಂಬವರು ಭಾನುವಾರ ಬೆಳಗ್ಗಿನ ಹೊತ್ತು ಎಂದಿನಂತೆ ತಮ್ಮ ಜಮೀನಿಗೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಕರಡಿಗಳು ದಾಳಿ ಮಾಡಿವೆ ಎಂದು ಹೇಳಲಾಗಿದೆ. ಅವರು ಗಾಯಗೊಂಡ … Continued

ಖಾನಾಪುರ: ಕಾಡುಕೋಣ ತಿವಿದು ವೃದ್ದೆ ಸಾವು

ಬೆಳಗಾವಿ : ಕಾಡುಕೋಣ ತಿವಿದು ವೃದ್ದೆ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದೆ. ಖಾನಾಪುರ ತಾಲೂಕಿನ ಅಮಟೆ ಗ್ರಾಮದ ಹೊರವಲಯದ ಬಳಿ ಈ ದುರ್ಘಟನೆ ನಡೆದಿದ್ದು, ಕಾಡುಕೋಣದ ದಾಳಿಯಿಂದ ಸರಸ್ವತಿ ಅರ್ಜುನ ಗಾವಡೆ (80) ಎಂಬವರು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಅವರು ಮನೆಯಿಂದ ತಮ್ಮ ಹೊಲದ ಗೋಡಂಬಿ ಬೀಜಗಳನ್ನು ಕೀಳಲು ಹೋದಾಗ ಕಾಡುಕೋಣ … Continued

ಖಾನಾಪುರ : ಮರಕ್ಕೆ ಕಾರು ಡಿಕ್ಕಿ ; ಸ್ಥಳದಲ್ಲೇ ಆರು ಮಂದಿ ಸಾವು

ಬೆಳಗಾವಿ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ  ಬೀಡಿ-ಮಂಗ್ಯಾನಕೊಪ್ಪ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ ಎಂದು ವರದಿಯಾಗಿದೆ.  ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಕಾರು ಚಾಲಕ ಶಾರುಖ್ ಪೆಂಡಾರಿ (30), … Continued

ಹೊಸ ಮೊಬೈಲ್‌ ಕೊಡಿಸಲಿಲ್ಲವೆಂದು ತಂದೆಯ ಜನ್ಮದಿನದಂದೇ ಮಗ ಆತ್ಮಹತ್ಯೆ

ಖಾನಾಪುರ:ಹೊಸ ಮೊಬೈಲ್ ಬೇಕು ಎಂದು ಹಟ ಹಿಡಿದ ವಿದ್ಯಾರ್ಥಿಯೊಬ್ಬ ಮೊಬೈಲ್‌ ಕೊಡಿಸಲಿಲ್ಲವೆಂದು ತಂದೆಯ ಜನ್ಮದಿನದಂದೇ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕು ಹಲಕರ್ಣಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಆತ್ಮಹತ್ಯೆಗೆ ಶರಣಾದವನನ್ನು ಮರಾಠಾ ಮಂಡಳ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಥಮೇಶ ರಾಜು ಕೋಳಿ (17) ಎಂದು ಗುರುತಿಸಲಾಗಿದೆ. ಎರಡು ದಿನಗಳಿಂದ ಪ್ರಥಮೇಶ ಮೊಬೈಲ್ ಬೇಕು … Continued

ಬೆಳಗಾವಿ: ಹಲಸಿಯಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ, ಬಸವಣ್ಣನಿಗೆ ಕಪ್ಪು ಮಸಿ ಬಳಿದ ಮೂವರು ಆರೋಪಿಗಳ ಬಂಧನ

ಬೆಳಗಾವಿ: ನಗರದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ವಿರೂಪಗೊಳಿಸಿದ ಹಾಗೂ ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಕಪ್ಪು ಮಸಿ ಬಳಿದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ಬಳಿಕ ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ಕನ್ನಡ ಬಾವುಟ ಸುಟ್ಟು, ಬಸವಣ್ಣನ ಮೂರ್ತಿಗೆ ಮಸಿ ಬಳಿದ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿರೂಪಗೊಳಿಸಿದ … Continued